ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಕ್ವಿಕ್ ಸೇವೆ ಪ್ರಾರಂಭಿಸಿದ ಫ್ಲಿಪ್‌ಕಾರ್ಟ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್‌ ತನ್ನ ಹೈಪರ್‌-ಲೋಕಲ್‌ ಡೆಲಿವರಿ ಸರ್ವಿಸ್ ಫ್ಲಿಪ್‌ಕಾರ್ಟ್ ಕ್ವಿಕ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ಸೇವೆಯನ್ನು ಚಾಲನೆ ಮಾಡಿದೆ. ಸದ್ಯ ವೈಟ್‌ಫೀಲ್ಡ್, ಪನಾಥೂರ್, ಎಚ್‌ಎಸ್‌ಆರ್ Layout, ಬಿಟಿಎಂ Layout, ಬನಶಂಕರಿ, ಕೆ.ಆರ್.ಪುರಂ ಮತ್ತು ಇಂದಿರಾನಗರ ದಲ್ಲಿ ಈ ಸೇವೆಯನ್ನ ಆರಂಭಿಸಿದೆ. ಇನ್ನು ಸೇವೆಯ ಪ್ರಾರಂಭಿಕ ಹಂತವಾಗಿ ಭಾರತೀಯ ಇ-ಚಿಲ್ಲರೆ ವ್ಯಾಪಾರಿ ದಿನಸಿ, ಡೈರಿ, ಮಾಂಸ, ಮೊಬೈಲ್, ಎಲೆಕ್ಟ್ರಾನಿಕ್ಸ್ ಪರಿಕರಗಳು, ಲೇಖನ ಸಾಮಗ್ರಿಗಳು ಮತ್ತು ಗೃಹೋಪಯೋಗಿ ಘಟಕಗಳಿಂದ 2,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಲುಪಿಸಲಿದೆ ಎಂದು ಹೇಳಲಾಗ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ಕ್ವಿಕ್‌ ಆಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಫ್ಲಿಪ್‌ಕಾರ್ಟ್‌ ಕ್ವಿಕ್‌ ಅನ್ನು ಪ್ರಾರಂಭಿಸಿದೆ. ಸದ್ಯ ಇದಕ್ಕಾಗಿ ಹಲವು ಏರಿಯಾಗಳನ್ನ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ 2,000 ಕ್ಕೂ ಹೆಚ್ಚು ಉತ್ಪನ್ನಗಳನ್ನ ಗ್ರಾಹಕರಿಗೆ ಕ್ವಿಕ್‌ ಆಗಿ ತಲುಪಿಸಲಿದೆ. ಈ ಸೇವೆಯ ಮೂಲಕ ಗ್ರಾಹಕರು ಕೇವಲ 90 ನಿಮಿಷಗಳಲ್ಲಿ ಆರ್ಡರ್‌ ಮಾಡಬಹುದಾಗಿದೆ. ಜೊತೆಗೆ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಎರಡು ಗಂಟೆಗಳ ಸಮಯ ಸ್ಲಾಟ್ ಅನ್ನು ಕಾಯ್ದಿರಿಸಬಹುದು. ಗ್ರಾಹಕರು ದಿನದ ಯಾವುದೇ ಸಮಯದಲ್ಲಿ ತಮ್ಮ ಆದೇಶಗಳನ್ನು ನೀಡಬಹುದು ಮತ್ತು ಅವರ ಆದೇಶಗಳನ್ನು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ತಲುಪಿಸಬಹುದು ಎಂದು ಕಂಪನಿ ತಿಳಿಸಿದೆ.

ಫ್ಲಿಪ್‌ಕಾರ್ಟ್‌

ಇನ್ನು ಫ್ಲಿಪ್‌ಕಾರ್ಟ್‌ ಪರಿಚಯಿಸಿರುವ ಫ್ಲಿಪ್‌ಕಾರ್ಟ್‌ ಕ್ವಿಕ್‌ ಸೇವೆಯು ಕೇವಲ 90 ನಿಮಿಷಗಳಲ್ಲಿ ಲಭ್ಯವಾಗಲಿದೆ. ಇನ್ನು ಗ್ರಾಹಕರು ಒಮ್ಮೆ ಆರ್ಡರ್‌ ಮಾಡಬೇಕಾದರೆ ಕನಿಷ್ಠ ವಿತರಣಾ ಶುಲ್ಕ 29ರೂ,ಗಳನ್ನ ಪಾವತಿಸಬೇಕಾಗುತ್ತದೆ. ಇದಲ್ಲದೆ ಲೊಕೇಶನ್ ಮ್ಯಾಪಿಂಗ್‌ಗಾಗಿ ಫ್ಲಿಪ್ಕಾರ್ಟ್ ಕ್ವಿಕ್ ನವೀನ ಮತ್ತು ಸುಧಾರಿತ ಟೆಕ್ನಾಲಜಿಯನ್ನು ಬಳಸುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಈ ತಂತ್ರಜ್ಞಾನವು ಕೊನೆಯ ಮೈಲಿ ಪ್ರಕ್ರಿಯೆಯನ್ನು ವೇಗಗೊಳಿಸಲು ಮಾತ್ರವಲ್ಲದೆ ವಿಳಾಸ ಮ್ಯಾಪಿಂಗ್ ವ್ಯವಸ್ಥೆಗೆ ಹೆಚ್ಚಿನ ನಿಖರತೆಯನ್ನು ತರುತ್ತದೆ ಎಂದು ಕಂಪೆನಿ ಭರವಸೆ ನೀಡಿದೆ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ನ ಈ ಸೇವೆಯಿಂದ ತಪ್ಪಾಗಿ ಹೊಂದಾಣಿಕೆ ಅಥವಾ ಮರು-ಪ್ರಯತ್ನಗಳ ಸಾಧ್ಯತೆಗಳನ್ನು ತಪ್ಪಿಸಬಹುದಾಗಿದೆ. ಹಾಗಂತ ಈ ರೀತಿಯ ಕ್ವಿಕ್‌ ಸೇವೆ ಆರಂಭಿಸಿರೋದು ಪ್ಲಿಪ್‌ಕಾರ್ಟ್‌ ಮಾತ್ರವಲ್ಲ ಈಗಾಗಲೇ ಅಮೆಜಾನ್‌ನ ಪ್ರೈಮ್ ನೌ ಸೇವೆ ಕೂಡ ಲಭ್ಯವಿದೆ. 2016 ರಲ್ಲಿ ಅಮೆಜಾನ್ ನೌ ಎಂದು ಪ್ರಾರಂಭಿಸಿದ್ದು, ಅಮೆಜಾನ್ ತನ್ನ ಸೇವೆಗಳನ್ನು ದೇಶಾದ್ಯಂತ ಹೆಚ್ಚಿನ ನಗರಗಳಲ್ಲಿ ಲಭ್ಯಗೊಳಿಸುವ ಮೂಲಕ ಅಮೆಜಾನ್ ಪ್ಯಾಂಟ್ರಿಯ ಉಪಸ್ಥಿತಿಯನ್ನು ಬಲಪಡಿಸುತ್ತಿದೆ.

ಇ-ಕಾಮರ್ಸ್‌

ಈಗಾಗಲೇ ಇ-ಕಾಮರ್ಸ್‌ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಹೊಸ ಮಾದರಿಯ ಸೇವೆಗಳನ್ನ ಪರಿಚಯಿಸುವ ಮೂಲಕ ಪೈಫೋಟಿಯುತ ಮಾರುಕಟ್ಟೆಯ ಲಕ್ಷಣಗಳು ಎಲ್ಲಾ ಕಡೆ ಗೊಚರಿಸುತ್ತಿವೆ. ಮತ್ತೊಂದೆಡೆ, ರಿಲಯನ್ಸ್ ಜಿಯೋ ಫೇಸ್‌ಬುಕ್‌ನ ಸಹಭಾಗಿತ್ವದಿಂದ ನಡೆಸಲ್ಪಡುವ ಜಿಯೋಮಾರ್ಟ್ ದೇಶದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿ ಮಾಡುತ್ತಿದೆ. ಕಳೆದ ವಾರ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಜಿಯೋಮಾರ್ಟ್ ಆಪ್ ಅನ್ನು ಬಿಡುಗಡೆ ಮಾಡಿದ್ದು,ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಈಗಾಗಲೇ 10 ಲಕ್ಷ ಡೌನ್‌ಲೋಡ್‌ಗಳನ್ನು ದಾಟಿದೆ. ಇದೆಲ್ಲವೂ ಪೈಪೋಟಿಯುತ ಮಾರುಕಟ್ಟೆಗೆ ವೇದಿಕೆ ಆಗಿದ್ದು, ಗ್ರಾಹಕರ ಸ್ನೇಹಿಯಾಗುವತ್ತ ಎಲ್ಲಾ ಇ-ಕಾಮರ್ಸ್‌ ತಾಣಗಳು ಯತ್ನಿಸುತ್ತಿವೆ. ಇದೇ ಕಾರಣಕ್ಕೆ ಫ್ಲಿಪ್‌ಕಾರ್ಟ್‌ ತನ್ನ ಹೊಸ ಫ್ಲಿಪ್‌ಕಾರ್ಟ್‌ ಕ್ವಿಕ್‌ ಸೇವೆಯನ್ನು ಪ್ರಾರಂಭಿಸಿದೆ.

Best Mobiles in India

English summary
Flipkart Quick is piloting in select localities in Bengaluru starting today. The list includes Whitefield, Panathur, HSR Layout, BTM Layout, Banashankari, KR Puram and Indiranagar.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X