ಭಾರತದಲ್ಲಿ ಫ್ಲಿಪ್‌ಕಾರ್ಟ್ ಹೆಲ್ತ್+ ಸೇವೆ ಪರಿಚಯಿಸಿದ ಫ್ಲಿಪ್‌ಕಾರ್ಟ್‌!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ನಿಮ್ಮ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಸೇವೆಯನ್ನು ಹೊತ್ತು ತಂದಿದೆ. ಇದಕ್ಕಾಗಿ ಹೊಸ ಫ್ಲಿಪ್‌ಕಾರ್ಟ್ ಹೆಲ್ತ್+ ಸೇವೆಯನ್ನು ಆರಂಭಿಸಿದೆ. ಈ ಸೇವೆ ಆನ್‌ಲೈನ್ ಫಾರ್ಮಸಿ ಮೂಲಕ ನಡೆಯಲಿದೆ. ತನ್ನ ಬಳಕೆದಾರರಿಗೆ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ ಮತ್ತು ಡಯಾಗ್ನೋಸ್ಟಿಕ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಹೊಸ ಫ್ಲಿಪ್‌ಕಾರ್ಟ್ ಹೆಲ್ತ್+ ಸೇವೆಯನ್ನು ಪ್ರಾರಂಭಿಸಿದೆ. ಇದರಿಂದ ಇನ್ಮುಂದೆ ಗ್ರಾಹಕರು ತಮಗೆ ಬೇಕಾದ ಔಷದಿಗಳನ್ನು ಫ್ಲಿಪ್‌ಕಾರ್ಟ್‌ ಮುಖಾಂತರ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಫ್ಲಿಪ್‌ಕಾರ್ಟ್‌ ಆನ್‌ಲೈನ್ ಫಾರ್ಮಸಿ ಸ್ಪೇಸ್ SastaSundar.com ಅನ್ನು ಸ್ವಾಧೀನಪಡಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಆನ್‌ಲೈನ್ ಫಾರ್ಮಸಿ ಮತ್ತು ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಘೋಷಿಸಿದೆ. ಇದು ತನ್ನ ಗ್ರಾಹಕರಿಗೆ ಕೈಗೆಟುಕುವ ಮತ್ತು ಅನುಕೂಲಕರವಾದ ಆರೋಗ್ಯ ಸೇವೆ ನೀಡುವ ಭರವಸೆ ನೀಡಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಹೆಲ್ತ ಪ್ಲಸ್‌ ಸೇವೆಯನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ಆರೋಗ್ಯ ಸೇವೆ ನೀಡುವುದಕ್ಕಾಗಿ SastaSundar.com ಅನ್ನು ಸ್ವಾಧೀನ ಪಡಿಸಿಕೊಂಡಿದೆ. SastaSundar.com ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಹೆಲ್ತ್‌ಕೇರ್ ಮತ್ತು ಫಾರ್ಮಸಿ ಪ್ಲಾಟ್‌ಫಾರ್ಮ್ ಆಗಿದೆ. ಇದು 490 ಕ್ಕೂ ಹೆಚ್ಚು ಔಷಧಾಲಯಗಳ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ. ಫ್ಲಿಪ್‌ಕಾರ್ಟ್‌ ಪ್ಲಸ್‌ ಸೇವೆ ಮೂಲಕ ಭಾರತದಲ್ಲಿ ಗ್ರಾಹಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ನೀಡುವ ಗುರಿಯನ್ನು ಹೊಂದಿದೆ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಹೆಲ್ತ್+ ಮೂಲಕ ಔಷದಿಗಳನ್ನು ಖರೀದಿಸುವ ಮುನ್ನ ವೈದ್ಯರ ಜೊತೆ ಸಮಲೋಚಿಸುವ ಅವಕಾಶವನ್ನು ಸಹ ನೀಡಲಾಗಿದೆ. ಇದಕ್ಕಾಗಿ, ಮೊದಲಿಗೆ ಫ್ಲಿಪ್‌ಕಾರ್ಟ್ ಹೆಲ್ತ್ + ತನ್ನ ಆನ್‌ಲೈನ್ ಪೋರ್ಟಲ್ ಮೂಲಕ ಫಾರ್ಮಾಸ್ಯುಟಿಕಲ್‌ಗಳನ್ನು ಖರೀದಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ ಮತ್ತು ಆಯ್ಕೆಗೆ ಅನುಗುಣವಾಗಿ ಅವುಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಲಿದೆ. ಮುಂದಿನ ದಿನಗಳಲ್ಲಿ ಇ-ಡಯಾಗ್ನೋಸ್ಟಿಕ್ಸ್ ಮತ್ತು ಇ-ಸಮಾಲೋಚನೆ ಸೇರಿದಂತೆ ಹಲವು ಹೊಸ ಆರೋಗ್ಯ ಸೇವೆಗಳನ್ನು ಸೇರಿಸಲು ಯೋಜಿಸಿದೆ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಹೊಸ ಫ್ಲಿಪ್‌ಕಾರ್ಟ್ ಹೆಲ್ತ್+ ಉಪಕ್ರಮದ ಅಡಿಯಲ್ಲಿ ಆನ್‌ಲೈನ್ ಫಾರ್ಮಸಿಯೊಂದಿಗೆ ಪ್ರಾರಂಭಿಸಿ, ಇ-ಕಾಮರ್ಸ್ ಮೇಜರ್ ಮೂಲಕ ತನ್ನ ಬಳಕೆದಾರರಿಗೆ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ ಮತ್ತು ಡಯಾಗ್ನೋಸ್ಟಿಕ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಇದು ತನ್ನ ಗ್ರಾಹಕರಿಗೆ ಕೈಗೆಟುಕುವ ಮತ್ತು ಅನುಕೂಲಕರವಾದ ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಒದಗಿಸಲು ಉದ್ದೇಶಿಸಿದೆ. ಈ ನೆಟ್‌ವರ್ಕ್ ಮೂಲಕ ವೈದ್ಯರ ಜೊತೆಗೆ ವೈಯುಕ್ತಿಕ ಸಮಾಲೋಚನೆಯನ್ನು ಸಹ ಒದಗಿಸಲಿದೆ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಬೇಕಾದ ಔಷದಿಗಳನ್ನು ಆನ್‌ಲೈನ್‌ ಪಾರ್ಮಸಿ ಮೂಲಕ ಪಡೆಯಲು ಅನುಮತಿಸಲಿದೆ. ಅಷ್ಟೇ ಅಲ್ಲ ಔಷದಿಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಿದೆ.

ಫಾರ್ಮಸಿ

ಆನ್‌ಲೈನ್‌ ಫಾರ್ಮಸಿ ಇದೇ ಮೊದಲೇನಲ್ಲ, ಈಗಾಗಲೇ ಅಮೆಜಾನ್‌ ಇಂಡಿಯಾ ಬೆಂಗಳೂರಿನಲ್ಲಿ ಅಮೆಜಾನ್‌ ಫಾಮರ್ಸಿಯನ್ನು ಪ್ರರಂಬಿಸಿರೋದು ತಿಳಿದೆ ಇದೆ. ಜೊತೆಗೆ ಟಾಟಾ ಡಿಜಿಟಲ್ ಕೂಡ ಈ ವರ್ಷದ ಆರಂಭದಲ್ಲಿ ಫ್ಲಿಪ್‌ಕಾರ್ಟ್‌ನಂತೆಯೇ 1mg ಆನ್‌ಲೈನ್ ಫಾರ್ಮಸಿಯನ್ನು ಖರೀದಿಸಿದೆ. ಸದ್ಯ ಇದೀಗ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಫಾರ್ಮಸಿ ಸೇವೆಯನ್ನು ಪ್ರಾರಂಭಿಸಿದೆ. ಇಷ್ಟು ದಿನ ದಿನಸಿ ಹಾಗೂ ಬಟ್ಟೆ, ಗ್ಯಾಜೆಟ್ಸ್‌ಗಳನ್ನು ಖರೀದಿಸುತ್ತಿದ್ದ್ ಜನ ಮನೆಯಲ್ಲಿ ಕುಳಿತು ಔಷದಿ ಖರೀದಿಸಬಹುದಾಗಿದೆ. ಸದ್ಯ ಇ-ಕಾಮರ್ಸ್ ದೈತ್ಯರ ಈ ಪೈಪೋಟಿ ಇನ್ನಷ್ಟು ಉತ್ತಮ ಸೇವೆ ನೀಡುವುದಕ್ಕೆ ಉತ್ತೇಜನ ನೀಡಲಿದೆ ಅನ್ನೊದು ಸದಾಶಯವಾಗಿದೆ.

ಫ್ಲಿಪ್‌ಕಾರ್ಟ್‌

ಇದರೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯತ್ವ ಸಾಕಷ್ಟು ಉಪಯುಕ್ತವಾಗಿದೆ. ಈ ಸದಸ್ಯತ್ವ ಒಂದು ವರ್ಷದ ಚಂದಾದಾರಿಕೆಯನ್ನು ಹೊಂದಿರುತ್ತದೆ. ಒಂದು ವರ್ಷದ ನಂತರ ಮತ್ತೊಮ್ಮೆ ನಿಮ್ಮ ಚಂದಾದಾರಿಕೆಯನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಮತ್ತೊಮ್ಮೆ 200 ಸೂಪರ್ ಕಾಯಿನ್‌ಗಳನ್ನು ಹೊಂದಬೇಕಾಗುತ್ತದೆ. ಇದಕ್ಕಾಗಿ ನೀವು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಫ್ಲಿಪ್‌ಕಾರ್ಟ್ ಎಲ್ಲಾ ಪ್ಲಸ್ ಸದಸ್ಯರಿಗೆ 100 ರೂ.ಗಳ ಖರೀದಿಯ ಮೇಲೆ ನಾಲ್ಕು ಸೂಪರ್ ನಾಣ್ಯಗಳನ್ನು ಒದಗಿಸುತ್ತದೆ. ಅಲ್ಲದೆ ಪ್ಲಸ್ ಸದಸ್ಯರು ಒಂದೇ ಆರ್ಡರ್‌ನಲ್ಲಿ ಗರಿಷ್ಠ 100 ಸೂಪರ್ ಕಾಯಿನ್‌ಗಳನ್ನು ಗಳಿಸಬಹುದು. ಒಮ್ಮೆ ನೀವು 200 ಸೂಪರ್ ನಾಣ್ಯಗಳನ್ನು ಹೊಂದಿದ್ದರೆ ನಿಮ್ಮ ಫ್ಲಿಪ್‌ಕಾರ್ಟ್ ಸದಸ್ಯತ್ವವನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.

Best Mobiles in India

English summary
Flipkart has announced the launch of Flipkart Health+, starting with the acquisition of the online pharmacy platform Sastasundar.com.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X