ಫ್ಲಿಪ್‌ಕಾರ್ಟ್‌ನ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

|

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸಬೇಕಿದ್ದರೂ ಇ-ಕಾಮರ್ಸ್‌ ಜಾಲತಾಣಗಳತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇ ಕಾಮರ್ಸ್ ತಾಣಗಳು ಸಹ ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಆಫರ್‌ಗಳನ್ನು ರಿಯಾಯಿತಿಗಳನ್ನು ಘೋಷಿಸುತ್ತಲೇ ಸಾಗಿವೆ. ಈ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್‌ ಇದೀಗ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದ್ದು, ಮೊಬೈಲ್ ಬೋನಾಂಜಾ ಮೇಳವನ್ನು ಆಯೋಜಿಸಿದೆ.

ಇ ಕಾಮರ್ಸ್ ಫ್ಲಿಪ್‌ಕಾರ್ಟ್‌

ಹೌದು, ಜನಪ್ರಿಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್‌ ಇದೀಗ ಮೊಬೈಲ್ ಬೋನಾಂಜಾ ಸೇಲ್ ಮೇಳವನ್ನು ಆಯೋಜಿಸಿದ್ದು, ಐದು ದಿನಗಳ ಕಾಲ ನಡೆಯುವ ಈ ಸೇಲ್ ಮೇಳವು ಇದೇ ಸೆಪ್ಟೆಂಬರ 5 ರಿಂದ ಆರಂಭವಾಗಿದ್ದು, ಸೆಪ್ಟಂಬರ್ 9ರ ವರೆಗೂ ಇರಲಿದೆ. ಮೇಳದಲ್ಲಿ ನೋಕಿಯಾ, ಶಿಯೋಮಿ, ರಿಯಲ್ ಮಿ, ಒಪ್ಪೊ ಸೇರಿದಂತೆ ಇತ್ತೀಚಿನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡುತ್ತಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಮೊಬೈಲ್ ಬೋನಾಂಜಾ ಸೇಲ್ ಮೇಳದಲ್ಲಿ ಯಾವೆಲ್ಲಾ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಲಭ್ಯ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : BSNL ಆಫರ್!..ಬ್ರಾಡ್‌ಬ್ಯಾಂಡ್‌ ಸೇವೆ ಉಚಿತ, ಪ್ರತಿದಿನ 5GB ಡೇಟಾ ಖಚಿತ!ಓದಿರಿ : BSNL ಆಫರ್!..ಬ್ರಾಡ್‌ಬ್ಯಾಂಡ್‌ ಸೇವೆ ಉಚಿತ, ಪ್ರತಿದಿನ 5GB ಡೇಟಾ ಖಚಿತ!

ಒಪ್ಪೊ A3s

ಒಪ್ಪೊ A3s ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಮೂರು ವೇರಿಯಂಟ್‌ಗಳ ಆಯ್ಕೆಯನ್ನು ಹೊಂದಿದೆ. ಈ ಫೋನ್ ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜಾ ಸೇಲ್ ಮೇಳದಲ್ಲಿ 1,000ರೂ. ಡಿಸ್ಕೌಂಟ್ ಪಡೆದಿದ್ದು, 2GB RAM + 16GB ವೇರಿಯಂಟ್‌ 6,990ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 3GB RAM + 32GB ವೇರಿಯಂಟ್ 7,990ರೂ.ಗಳಿಗೆ ಮತ್ತು 4GB RAM + 64GB ವೇರಿಯಂಟ್ ಫೋನ್ 9,990ರೂ.ಗಳಿಗೆ ಸಿಗಲಿದೆ.

ರೆಡ್ಮಿ 6 ಸ್ಮಾರ್ಟ್‌ಫೋನ್

ಮೀಡಿಯಾ ಟೆಕ್ ಹಿಲಿಯೊ ಪಿ22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿಯ 'ರೆಡ್ಮಿ 6' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 12ಎಂಪಿ + 5ಎಂಪಿ ಸೆನ್ಸಾರ್‌ನ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಜೊತೆಗೆ 3000mAh ಬ್ಯಾಟರಿ ಬ್ಯಾಕ್‌ಅಪ್‌ ಪ್ರಮುಖ ಹೈಲೈಟ್‌ ಆಗಿದೆ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಸ್ಮಾರ್ಟ್‌ಫೋನ್ 6,999ರೂ.ಗಳಿಗೆ ಸಿಗಲಿದೆ.

ರಿಯಲ್ ಮಿ 3 ಪ್ರೊ

1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.30 ಇಂಚಿನ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಶಕ್ತಿಯಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. ಹಾಗೆಯೇ 4045mAh ಬ್ಯಾಟರಿ ಬಾಳಿಕೆ ಸಾಮರ್ಥ್ಯ ಪಡೆದಿದೆ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಸ್ಮಾರ್ಟ್‌ಫೋನ್ 12,999ರೂ.ಗಳಿಗೆ ಸಿಗಲಿದೆ.

ಓದಿರಿ : 'ನೋಕಿಯಾ 6.2' ಮತ್ತು 'ನೋಕಿಯಾ 7.2' ಲಾಂಚ್!..ಬೆಲೆ?ಓದಿರಿ : 'ನೋಕಿಯಾ 6.2' ಮತ್ತು 'ನೋಕಿಯಾ 7.2' ಲಾಂಚ್!..ಬೆಲೆ?

ಮೊಟೊರೊಲಾ ಒನ್‌ ವಿಶನ್

1080x2520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.30 ಇಂಚಿನ ಡಿಸ್‌ಪ್ಲೇ ಹೊಂದಿದೆ. Exynos 9609 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಆಂಡ್ರಾಯ್ಡ್ 9 ಪೈ ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ 48ಎಂಪಿ + 5ಎಂಪಿ ಕ್ಯಾಮೆರಾ ಆಯ್ಕೆ ಇದ್ದು, 3500mAh ಬ್ಯಾಟರಿ ಬಾಳಿಕೆ ಸಾಮರ್ಥ್ಯ ಪಡೆದಿದೆ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಸ್ಮಾರ್ಟ್‌ಫೋನ್ 16,999 ರೂ.ಗಳಿಗೆ ಲಭ್ಯ.

ಓದಿರಿ : ಅತೀ ಕಡಿಮೆ ಬೆಲೆಗೆ 'ಇನ್‌ಫಿನಿಕ್ಸ್‌ ಹಾಟ್‌ 8' ಫೋನ್ ಬಿಡುಗಡೆ!ಓದಿರಿ : ಅತೀ ಕಡಿಮೆ ಬೆಲೆಗೆ 'ಇನ್‌ಫಿನಿಕ್ಸ್‌ ಹಾಟ್‌ 8' ಫೋನ್ ಬಿಡುಗಡೆ!

Best Mobiles in India

English summary
Flipkart is hosting a Mobiles Bonanza sale starting today. The sale will go on till September 9. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X