ಫ್ಲಿಪ್‌ಕಾರ್ಟ್‌ ಸೇಲ್ : ಆಸೂಸ್‌ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್!

|

ಟೆಕ್‌ ಮಾರುಕಟ್ಟೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೆ ಸಾಗಿವೆ. ಅದೇ ರೀತಿ ಇ-ಕಾಮರ್ಸ್‌ ತಾಣಗಳು ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್‌ ಆಫರ್‌ಗಳನ್ನು ನೀಡುತ್ತಲೆ ಇವೆ. ಆ ಫೈಕಿ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಇದೀಗ ಮತ್ತೆ 'ಮಂತ್ ಎಂಡ್‌ ಮೊಬೈಲ್ ಸೇಲ್' ಮೇಳವನ್ನು ಆಯೋಜಿಸಿದ್ದು, ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡೀಲ್‌ಗಳನ್ನು ನೀಡಲಿದೆ.

ಫ್ಲಿಪ್‌ಕಾರ್ಟ್‌ ಸೇಲ್ : ಆಸೂಸ್‌ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್!

ಹೌದು, ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ ಒಟ್ಟು ಆರು ದಿನಗಳ 'ಮಂತ್ ಎಂಡ್‌ ಮೊಬೈಲ್ ಸೇಲ್' ಮೇಳವನ್ನು ಶುರುಮಾಡಿದ್ದು, ಮೇಳವು ಇದೇ ಅಗಷ್ಟ್ 26ರಿಂದ ಅಗಷ್ಟ್ 31ರ ವರೆಗೆ ನಡೆಯಲಿದೆ. ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಆಫರ್ ಲಭ್ಯವಿದ್ದು, ಮುಖ್ಯವಾಗಿ ತೈವಾನ್ ಮೂಲದ ಆಸೂಸ್‌ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಮಂತ್‌ ಎಂಡ್‌ ಸೇಲ್ ಮೇಳದಲ್ಲಿ ಆಸೂಸ್‌ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿರುವ ಬೆಸ್ಟ್‌ ಆಫರ್ ತಿಳಿಯಲು ಮುಂದೆ ಓದಿರಿ.

ಓದಿರಿ : ಹೊಸ 'ಆಂಡ್ರಾಯ್ಡ್‌ 10 ಓಎಸ್'ನಲ್ಲಿ ಲಭ್ಯವಾಗುವ ಫೀಚರ್ಸ್‌ ಯಾವುವು ಗೊತ್ತಾ?ಓದಿರಿ : ಹೊಸ 'ಆಂಡ್ರಾಯ್ಡ್‌ 10 ಓಎಸ್'ನಲ್ಲಿ ಲಭ್ಯವಾಗುವ ಫೀಚರ್ಸ್‌ ಯಾವುವು ಗೊತ್ತಾ?

ಆಸೂಸ್‌ Z6

ಆಸೂಸ್‌ Z6

ಆಸೂಸ್‌ Z6 ಸ್ಮಾರ್ಟ್‌ಫೋನ್‌ 6.4 ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ, 8GB RAM ಮತ್ತು 6GB RAM ಸಾಮರ್ಥ್ಯದ ವೇರಿಯಂಟ್‌ಗಳ ಆಯ್ಕೆಯನ್ನು ಪಡೆದಿದೆ. 5,000mAh ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಹೊಂದಿದ್ದು, ಫ್ಲಿಪ್‌ ಕ್ಯಾಮೆರಾ ಈ ಫೋನಿನ ಪ್ರಮುಖ ಹೈಲೈಟ್‌ ಆಗಿದೆ. ಮೇಳದಲ್ಲಿ ಶೇ.11% ರಿಯಾಯಿತಿ ನೀಡಿದ್ದು, ಪ್ರಸ್ತುತ ಫೋನ್‌ ಎಕ್ಸ್‌ಚೇಂಜ್ ಮೇಲೆ 3000ರೂ.ಗಳ ಹೆಚ್ಚುವರಿ ಡಿಸ್ಕೌಂಟ್‌ ಲಭ್ಯವಾಗಲಿದೆ. ಜೊತೆಗೆ ನೋ ಕಾಸ್ಟ್‌ ಇಎಮ್ಐ ಆಯ್ಕೆ ಸಹ ಇದೆ. ಬೆಲೆಯು 31,999ರೂ.ಆಗಿದೆ.

ಝೆನ್‌ಫೋನ್ 5Z

ಝೆನ್‌ಫೋನ್ 5Z

ಈ ಸ್ಮಾರ್ಟ್‌ಫೋನ್‌ 6.2 ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಇದು ಸಹ 8GB RAM ಮತ್ತು 6GB RAM ಸಾಮರ್ಥ್ಯದ ವೇರಿಯಂಟ್‌ಗಳ ಆಯ್ಕೆಯನ್ನು ಪಡೆದಿದೆ. 3,300mAh ಬ್ಯಾಟರಿ ಬಾಳಿಕೆಯ ಇಳಗೊಂಡಿದ್ದು, ಡ್ಯುಯಲ್ ಕ್ಯಾಮೆರಾ ಆಯ್ಕೆ ಪಡೆದಿದೆ. ಮೇಳದಲ್ಲಿ ಈ ಫೋನ್‌ ಖರೀದಿಯ ಮೇಲೆ 5,000ರೂ.ಗಳ ವರೆಗೂ ಎಕ್ಸ್‌ಚೇಂಜ್ ಡಿಸ್ಕೌಂಟ್‌ ಸೌಲಭ್ಯವಿದ್ದು, ಜೊತೆಗೆ ನೋ ಕಾಸ್ಟ್‌ ಇಎಮ್ಐ ಆಯ್ಕೆ ಸಹ ಇದೆ. 8GB RAM ವೇರಿಯಂಟ್ ಬೆಲೆಯು 23,999ರೂ.ಆಗಿದೆ.

ಓದಿರಿ : ಜಿಯೋ ಎಫೆಕ್ಟ್‌ : ‌399ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಆಫರ್ ನೀಡಿದ BSNL!ಓದಿರಿ : ಜಿಯೋ ಎಫೆಕ್ಟ್‌ : ‌399ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಆಫರ್ ನೀಡಿದ BSNL!

ಝೆನ್‌ಫೋನ್ ಮ್ಯಾಕ್ಸ್‌ ಪ್ರೊ ಎಂ1

ಝೆನ್‌ಫೋನ್ ಮ್ಯಾಕ್ಸ್‌ ಪ್ರೊ ಎಂ1

5.9 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರುವ 'ಝೆನ್‌ಫೋನ್ ಮ್ಯಾಕ್ಸ್‌ ಪ್ರೊ ಎಂ1' ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬಲವನ್ನು ಪಡೆದಿದೆ. 3GB RAM ಮತ್ತು 4GB RAM ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, 2TB ವರೆಗೂ ವಿಸ್ತರಿಸುವ ಅವಕಾಶವನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ ಮೇಳದಲ್ಲಿ 3GB RAM + 32GB ಸ್ಟೋರೇಜ್ ವೇರಿಯಂಟ್ ಫೋನ್ 7,499ರೂ.ಗಳಿಗೆ ದೊರೆಯಲಿದೆ.

ಝೆನ್‌ಫೋನ್ ಮ್ಯಾಕ್ಸ್‌ ಎಂ2

ಝೆನ್‌ಫೋನ್ ಮ್ಯಾಕ್ಸ್‌ ಎಂ2

ಝೆನ್‌ಫೋನ್ ಮ್ಯಾಕ್ಸ್‌ ಎಂ2 ಸ್ಮಾರ್ಟ್‌ಫೋನ್ 6.26 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. 4,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, 3GB RAM ಮತ್ತು 4GB RAM ವೇರಿಯಂಟ್‌ ಆಯ್ಕೆಗಳನ್ನು ದೊರೆಯಲಿದೆ. ಬಾಹ್ಯ ಮೆಮೊರಿಯನ್ನು 2TB ವರೆಗೂ ವಿಸ್ತರಿಸುವ ಅವಕಾಶವನ್ನು ಒಳಗೊಂಡಿದೆ. ಈ ಫೋನ್‌ ಸಹ ಫ್ಲಿಪ್‌ಕಾರ್ಟ್‌ ಮೇಳದಲ್ಲಿ 3GB RAM + 32GB ಸ್ಟೋರೇಜ್ ವೇರಿಯಂಟ್ ಫೋನ್ 7,499ರೂ.ಗಳಿಗೆ ದೊರೆಯಲಿದೆ.

ಝೆನ್‌ಫೋನ್ ಮ್ಯಾಕ್ಸ್‌ ಎಂ1

ಝೆನ್‌ಫೋನ್ ಮ್ಯಾಕ್ಸ್‌ ಎಂ1

ಝೆನ್‌ಫೋನ್ ಮ್ಯಾಕ್ಸ್‌ ಎಂ1 ಸ್ಮಾರ್ಟ್‌ಫೋನ್ 5.45 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. 4,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್ ಶಕ್ತಿಯನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ ಮೇಳದಲ್ಲಿ 3GB RAM + 32GB ಸ್ಟೋರೇಜ್ ವೇರಿಯಂಟ್ ಫೋನ್ 6,499ರೂ.ಗಳಿಗೆ ದೊರೆಯಲಿದೆ.

ಓದಿರಿ : ಟಿಕ್‌ಟಾಕ್‌ ಆಪ್‌ನಲ್ಲಿ ಲೈವ್ ಬರುವುದು ಹೇಗೆ ಗೊತ್ತಾ?ಓದಿರಿ : ಟಿಕ್‌ಟಾಕ್‌ ಆಪ್‌ನಲ್ಲಿ ಲೈವ್ ಬರುವುದು ಹೇಗೆ ಗೊತ್ತಾ?

Best Mobiles in India

English summary
Flipkart Month-End Mobiles Fest sale started on August 26th, 2019 and will go on for six days till August 31st. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X