Subscribe to Gizbot

ಬೇಗ ಬುಕ್ ಮಾಡಿದ್ರೆ ಮಾತ್ರ ಬಂಪರ್: ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೇಳ...!

Written By:

ಫ್ಲಿಪ್‌ಕಾರ್ಟ್‌ ಘೋಷಣೆ ಮಾಡಿದ್ದ ನ್ಯೂ ಪಿಂಚ್ ಡೇಟಾ ಸೇಲ್ ಆರಂಭವಾಗಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರಮುಖ ಬ್ರಾಂಡ್‌ಗಳ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದ್ದು, ಸ್ಮಾರ್ಟ್‌ಫೋನ್ ಖರೀದಿಗೆ ಸುಸಂದರ್ಭವಾಗಿದೆ.

ಬೇಗ ಬುಕ್ ಮಾಡಿದ್ರೆ ಮಾತ್ರ ಬಂಪರ್: ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೇಳ..

ಓದಿರಿ: ಗೂಗಲ್ ಮ್ಯಾಪ್‌ ಬಿಡಿ: ಪ್ಲೇ ಸ್ಟೋರಿನಲ್ಲಿ ಬಂದಿದೆ ನೋಡಿ ಹೊಸ ಆಪ್..!

ಇಂದಿನ ಡಿಸೆಂಬರ್ 19ರ ವರೆಗೆ ನಡೆಯಲಿರುವ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ. ಶಿಯೋಮಿ, ಗೂಗಲ್, ಮೊಟೊ ಫೋನ್‌ಗಳ ಮೇಲೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ಅನ್ನು ನೀಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ ನೋಟ್‌ 4 ಮೇಲೆ ರೂ.2000 ಕಡಿತ:

ರೆಡ್‌ಮಿ ನೋಟ್‌ 4 ಮೇಲೆ ರೂ.2000 ಕಡಿತ:

ಭಾರತದ ನಂ.1 ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್‌ 4 ಮೇಲೆ ರೂ.2000 ಕಡಿತವನ್ನು ಕಾಣಬಹುದಾಗಿದೆ. 3GB RAM/32GB ಆವೃತ್ತಿಯ ಸ್ಮಾರ್ಟ್‌ಫೋನ್ ರೂ. 9999ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ 4GB/64GB ಆವೃತ್ತಿಯೂ ರೂ.10,999ಕ್ಕೆ ದೊರೆಯುತ್ತಿದೆ.

ಶಿಯೋಮಿ Mi A1 ಮೇಲೆ ರೂ. 2000 ಕಡಿತ:

ಶಿಯೋಮಿ Mi A1 ಮೇಲೆ ರೂ. 2000 ಕಡಿತ:

ಇದಲ್ಲದೇ ಶಿಯೋಮಿ ಬಿಡುಗಡೆ ಮಾಡಿರುವ ಮೊದಲ ಆಂಡ್ರಾಯ್ಡ್ ಓನ್ ಸ್ಮಾರ್ಟ್‌ಫೋನ್ ಶಿಯೋಮಿ Mi A1 ಮೇಲೆ ರೂ. 2000 ಕಡಿತವನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನ್ ರೂ.12,999ಕ್ಕೆ ಮಾರಾಟವಾಗುತ್ತಿದೆ.

ಮೊಟೊ C ಸ್ಮಾರ್ಟ್‌ಫೋನ್ ಮೇಲೆ ರೂ.1000 ಕಡಿತ:

ಮೊಟೊ C ಸ್ಮಾರ್ಟ್‌ಫೋನ್ ಮೇಲೆ ರೂ.1000 ಕಡಿತ:

ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸದ್ದು ಮಾಡುತ್ತಿರುವ ಮೊಟೊ C ಸ್ಮಾರ್ಟ್‌ಫೋನ್ ಮೇಲೆ ರೂ.1000 ಕಡಿತವನ್ನು ಮಾಡಲಾಗಿದೆ. ರೂ.5,999ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ರೂ. 6,999ಕ್ಕೆ ಮಾರಾಟವಾಗುತ್ತಿತ್ತು.

ಮೊಟೊ E ಸ್ಮಾರ್ಟ್‌ಫೋನ್ ಮೇಲೆಯೂ ಆಫರ್:

ಮೊಟೊ E ಸ್ಮಾರ್ಟ್‌ಫೋನ್ ಮೇಲೆಯೂ ಆಫರ್:

5000mAh ಬ್ಯಾಟರಿಯನ್ನು ಹೊಂದಿರುವ ಮೊಟೊ E ಸ್ಮಾರ್ಟ್‌ಫೋನ್ ರೂ.8,999ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇನ್‌ಫಿನಿಕ್ಸ್ ಜಿರೋ5 ಪ್ರೋ ಸ್ಮಾರ್ಟ್‌ಫೋನ್ ರೂ.16,999ಕ್ಕೆ ದೊರೆಯುತ್ತಿದೆ.

ಹಾನರ್ 6X ಮೇಲೆ ರೂ. 2000 ಕಡಿತ:

ಹಾನರ್ 6X ಮೇಲೆ ರೂ. 2000 ಕಡಿತ:

ಇದೇ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುವ ಹಾನರ್ 6X ಮೇಲೆ ರೂ. 2000 ಕಡಿತವನ್ನು ಘೋಷಣೆ ಮಾಡಲಾಗಿದ್ದು, ರೂ. 9999ಕ್ಕೆ ಲಾಂಚ್ ಆಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart New Pinch Days sale offers: Discounts on Redmi Note 4. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot