ಆಫರ್‌ಗಳ ಅಡ್ಡಾ ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಿದೆ 'ಸಮ್ಮರ್‌ ಕಾರ್ನಿವಲ್‌' ಮೇಳ!

|

ಜನಪ್ರಿಯ ಇ ಕಾಮರ್ಸ್‌ ಜಾಲವತಾಣ ಫ್ಲಿಪ್‌ಕಾರ್ಟ್‌ ಆಫರ್‌ಗಳ ಅಡ್ಡಾ ಎಂದೆ ಗುರುತಿಸಿಕೊಂಡಿದ್ದು, ಎಲ್ಲ ಉತ್ಪನ್ನಗಳ ಮೇಲೂ ಭಾರೀ ಡಿಸ್ಕೌಂಟ್‌ ಕೊಡುಗಡಗಳನ್ನು ನೀಡುವ ಮೇಳಗಳನ್ನು ಆಯೋಜಿಸುತ್ತ ಬಂದಿರುವ ಫ್ಲಿಪ್‌ಕಾರ್ಟ್‌ ಈ ಮೂಲಕ ಗ್ರಾಹಕರ ಫೇವರೇಟ್ ಆನ್‌ಲೈನ್‌ ಮಾರುಕಟ್ಟೆಯಾಗಿದೆ. ಇದೀಗ ಈ ಬೇಸಿಗೆಕಾಲದಲ್ಲಿ 'ಸಮ್ಮರ್‌ ಕಾರ್ನಿವಲ್‌' ಮೇಳವನ್ನು ಏರ್ಪಡಿಸಿದೆ.

ಆಫರ್‌ಗಳ ಅಡ್ಡಾ ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಿದೆ 'ಸಮ್ಮರ್‌ ಕಾರ್ನಿವಲ್‌' ಮೇಳ!

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಜಾಲತಾಣವು ನಾಲ್ಕುದಿನಗಳ 'ಸಮ್ಮರ್‌ ಕಾರ್ನಿವಲ್‌' ಮೇಳವನ್ನು ಆಯೋಜಿಸಿದ್ದು, ಈ ಮೇಳವು ಇಂದಿನಿಂದ (ಮೇ.4) ಆರಂಭವಾಗಿ ಇದೇ ಮೇ 7 ರಂದು ಮುಕ್ತಾಯವಾಗಲಿದೆ. ಈ ಸೀಮಿತ ಅವಧಿಯ ಮೇಳದಲ್ಲಿ ಗೇಮಿಂಗ್‌ ಕಿಟ್‌ಗಳು, ಆಡಿಯೊ ಉತ್ಪನ್ನಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಗ್ಯಾಜೆಟ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳು ದೊರೆಯಲಿವೆ.

ಆಫರ್‌ಗಳ ಅಡ್ಡಾ ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಿದೆ 'ಸಮ್ಮರ್‌ ಕಾರ್ನಿವಲ್‌' ಮೇಳ!

ಮೇಳದಲ್ಲಿ ಹಲವು ಡಿಸ್ಕೌಂಟ್‌ಗಳೊಂದಿಗೆ ಬ್ಯಾಂಕ್‌ಗಳಿಂದ ನೋ ಕಾಸ್ಟ್‌ ಇಎಮ್‌ಐ ಆಯ್ಕೆಯ ಪ್ರಯೋಜನಗಳು ಸಹ ಗ್ರಾಹಕರಿಗೆ ಲಭ್ಯವಾಗಲಿದ್ದು, ಇದರೊಂದಿಗೆ ಎಕ್ಸ್‌ಜೇಂಜ್‌ ಬೆನಿಫಿಟ್ಸ್‌ಗಳು ಆಫರ್‌ ಸೀಗಲಿದೆ. ಹಾಗಾದರೇ ಫ್ಲಿಪ್‌ಟಾರ್ಟ್‌ 'ಸಮ್ಮರ್‌ ಕಾರ್ನಿವಲ್‌' ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಲಭ್ಯವಿರುವ ಆಫರ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಆಪಲ್‌ ಐಫೋನ್‌ XR (64GB)

ಆಪಲ್‌ ಐಫೋನ್‌ XR (64GB)

ಇತ್ತೀಚಿಗೆ ಬೆಲೆ ಇಳಿಕೆ ಕಂಡಿರುವ ಆಪಲ್‌ ಐಫೋನ್‌ ಎಕ್ಸ್‌ಆರ್‌ 59,900ರೂ.ಗಳಿಗೆ ಲಭ್ಯವಿದೆ. ಇದೀಗ ಈ ಐಫೋನ್‌ಗೆ ಫ್ಲಿಪ್‌ಕಾರ್ಟ್‌ ಸಮ್ಮರ್‌ ಕಾರ್ನಿವಲ್ ಮೇಳದಲ್ಲಿ ಸುಮಾರು 5,990ರೂ.ಗಳ ರಿಯಾಯಿತಿ ದೊರೆಯಲಿದ್ದು, 53,910ರೂ.ಗಳಿಗೆ ಲಭ್ಯವಾಗಲಿದೆ. ಹಾಗೇ 17,450ರೂ.ಗಳ ಎಕ್ಸ್‌ಚೇಂಜ್ ಕೊಡುಗೆಯು ಸಹ ಇರಲಿದೆ.

ನೋಕಿಯಾ 6.1 ಪ್ಲಸ್‌

ನೋಕಿಯಾ 6.1 ಪ್ಲಸ್‌

5.8 ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾಗಳನ್ನು ಹೊಂದಿದೆ. 3GB RAM ಶಕ್ತಿಯೊಂದಿಗೆ, ಮೀಡಿಯಾಟೆಕ್‌ ಹಿಲೊಯೊ P60 ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಬ್ಯಾಟರಿ ಬಲ ಹೊಂದಿದೆ. ಮೇಳದಲ್ಲಿ 12,999,ರೂ.ಗಳಿಗೆ ದೊರೆಯಲಿದ್ದು, ಇದರ ಬೆಲೆಯು 17,600ರೂ.ಗಳು ಆಗಿದೆ.

ನೋಕಿಯಾ 5.1 ಪ್ಲಸ್‌

ನೋಕಿಯಾ 5.1 ಪ್ಲಸ್‌

5.8 ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾಗಳನ್ನು ಹೊಂದಿದೆ. 4GB RAM ಶಕ್ತಿಯೊಂದಿಗೆ ಸ್ನ್ಯಾಪ್‌ಡ್ರಾಗನ್ 636 SoC ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದ್ದು, 3,060mAh ಬ್ಯಾಟರಿ ಬಲ ಹೊಂದಿದೆ. ಮೇಳದಲ್ಲಿ 7,999ರೂ.ಗಳಿಗೆ ದೊರೆಯಲಿದ್ದು, ಇದರ ಬೆಲೆಯು 13,199ರೂ.ಗಳು ಆಗಿದೆ.

ರಿಯಲ್‌ ಮಿ 2 ಪ್ರೊ

ರಿಯಲ್‌ ಮಿ 2 ಪ್ರೊ

6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯ ಜೊತೆಗೆ 3,500mAh ಶಕ್ತಿಯ ಬ್ಯಾಟರಿ ಹೊಂದಿರುವ 'ರಿಯಲ್‌ ಮಿ 2 ಪ್ರೊ' ಸ್ಮಾರ್ಟ್‌ಫೋನಿ 4GB RAM ವೇರಿಯಂಟ್ ಬೆಲೆಯು 14,990 ಆಗಿದ್ದು, ಫ್ಲಿಪ್‌ಕಾರ್ಟ್‌ ಸಮ್ಮರ್‌ ಕಾರ್ನಿವಲ್‌ ಮೇಳದಲ್ಲಿ 10,990ರೂ.ಗೆ ದೊರೆಯಲಿದೆ. ಹಾಗೇ 6GB RAM ವೇರಿಯಂಟ್ ಬೆಲೆಯು 16,990 ಆಗಿದ್ದು, 11,950 ರೂ.ಗೆ ಗ್ರಾಹಕರಿಗೆ ಲಭ್ಯವಾಗಲಿದೆ.

ಹಾನರ್‌ 9 ಲೈಟ್

ಹಾನರ್‌ 9 ಲೈಟ್

5.65 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಹುವಾಯಿ ಕಿರಿನ್ 659 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 4GB RAM ಸಾಮರ್ಥ್ಯದೊಂದಿಗೆ 3,000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಈ ಫೋನ್‌ ಬೆಲೆಯು 16,999ರೂ.ಗಳು ಆಗಿದ್ದು, ಮೇಳದಲ್ಲಿ 9,999ರೂ.ಗಳಿಗೆ ದೊರೆಯಲಿದೆ.

ಹಾನರ್‌ 10

ಹಾನರ್‌ 10

5.84 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ 6GB ಸಾಮರ್ಥ್ಯ RAM ಶಕ್ತಿಯನ್ನು ಹೊಂದಿದೆ. 24 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಹುವಾಯಿ ಕಿರಿನ್ 970 SoC ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಸಮ್ಮರ್‌ ಕಾರ್ನಿವಲ್‌ ಮೇಳದಲ್ಲಿ 24,999ರೂ.ಗಳಿಗೆ ದೊರೆಯಲಿದ್ದು, ಇದರ ಬೆಲೆಯು 35,999ರೂ.ಗಳು ಆಗಿದೆ.

Best Mobiles in India

English summary
Flipkart Summer Sale Kicks Off With Deals on Realme 2 Pro, iPhone XR, Nokia 6.1 Plus, and More.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X