Just In
Don't Miss
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಮೊಬೈಲ್‌ನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡಲು ಈ ಕ್ರಮ ಅನುಸರಿಸಿರಿ!
ಪ್ರಸ್ತುತ ಡಿಜಿಟಲ್ ಹಾಗೂ ಆನ್‌ಲೈನ್ ಜಾಹಿರಾತು ಮಾರುಕಟ್ಟೆ ಹೆಚ್ಚು ಟ್ರೆಂಡಿಂಗ್‌ನಲ್ಲಿ ಮುನ್ನುಗುತ್ತಿದೆ. ಬೆಳೆಯುತ್ತಿದೆ. ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್ ಬಳಕೆ ಮಾಡುವಾಗ/ಸರ್ಚ್ ಮಾಡುವಾಗ, ಅಪ್ಲಿಕೇಶನ್ ಬಳಕೆ ಮಾಡುವಾಗ ನಡುವೆ ಜಾಹಿರಾತುಗಳು ಕಾಣಿಸಿಕೊಂಡು ಡಿಸ್ಟರ್ಬ್ ಮಾಡುತ್ತವೆ ಎನ್ನುವುದು ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರ ಸಾಮಾನ್ಯ ಮಾತಾಗಿದೆ. ಹೀಗೆ ನಡು ನಡುವೆ ಕಾಣಿಸಿಕೊಳ್ಳುವ ಜಾಹಿರಾತುಗಳು ಮೊಬೈಲ್ ಬಳಕೆಗೆ ಕಿರಿ ಕಿರಿ ಅನಿಸುತ್ತವೆ ಅಲ್ಲವೇ.?

ಪ್ರಸ್ತುತ ಪ್ರತಿಯೊಬ್ಬರು ಸ್ಮಾರ್ಟ್‌ಫೋನ್ ಹೊಂದಿರುತ್ತಾರೆ, ಅಲ್ಲದೇ ಇಂಟರ್ನೆಟ್ ಬಳಕೆ ಸಹ ಮಾಡುತ್ತಿರುತ್ತಾರೆ. ಹೀಗಾಗಿ ಕಂಪನಿಗಳು ತಮ್ಮ ಜಾಹಿರಾತುಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ತಾಣಗಳ ಮೇಲೆಯೇ ಹೆಚ್ಚಾಗಿ ಕಣ್ಣಿಟ್ಟಿವೆ. ಆನ್‌ಲೈನ್ ಜಾಹಿರಾತುಗಳು ಚುಟುಕಾಗಿದ್ದರೂ ಗ್ರಾಹಕರನ್ನು ಆಕರ್ಷಿಸುವಂತಿದ್ದು, ನಡು ನಡುವೆ ಗ್ರಾಹಕರನ್ನು ಜಾಹಿರಾತುಗಳು ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ.

ಸ್ಮಾರ್ಟ್‌ಫೋನ್ ಬಳಕೆದಾರರೇ ಸಾಮಾಜಿಕ ತಾಣಗಳ ಬಳಕೆಯಲ್ಲಿ, ಕ್ರೋಮ್ ಬ್ರೌಸಿಂಗ್ ವೇಳೆ ಮತ್ತು ಇತರೆ ಇಂಟರ್ನೆಟ್ ಆಪ್ಸ್‌ಗಳ ಬಳಕೆಯ ವೇಳೆ ಡಿಸ್‌ಪ್ಲೇ ಆಗುವ ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದಾಗಿದೆ. ಆ ಮೂಲಕ ಜಾಹಿರಾತುಗಳ ಕಿರಿ ಕಿರಿಯಿಂದ ಮುಕ್ತವಾಗಬಹುದು. ಹಾಗಾದರೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಬ್ರೌಸಿಂಗ್ ವೇಳೆ ಕಾಣಿಸಿಕೊಳ್ಳುವ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗೂಗಲ್ ಸೆಟ್ಟಿಂಗ್ ಆಯ್ಕೆ
ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಕ್ರೋಮ್ ಆಪ್ ಮೂಲಕ ಇಂಟರ್ನೆಟ್ ಬ್ರೌಸ್ ಮಾಡುವಾಗ, ಆರ್ಟಿಕಲ್ ಅಥವಾ ಟೆಕ್ಟ್ಸ್ ಕಂಟೆಂಟ್ ಓದುವಾಗ ಅನೇಕ ಬಾರಿ ನಡು ನಡುವೆ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಅಸಲಿಗೆ ಈ ಜಾಹಿರಾತುಗಳನ್ನು ಗೂಗಲ್ ಕ್ರೋಮ್ ಡಿಸ್‌ಪ್ಲೇ ಮಾಡಿರುವುದಿಲ್ಲ. ಆದರೆ ಆ ಜಾಹಿರಾತುಗಳನ್ನು ಬ್ಲಾಕ್ ಮಾಡಲು ಅವಕಾಶವಿದೆ. ಈ ಮುಂದಿನ ಹಂತಗಳನ್ನು ನೋಡಿರಿ.

* ಗೂಗಲ್ ಕ್ರೋಮ್ ಬ್ರೌಸರ್ ಸೆಟ್ಟಿಂಗ್ ತೆರೆಯಿರಿ.
* ನಂತರ ಸೈಟ್ ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿರಿ.
* ಆನಂತರ ಪಾಪ್‌ಅಪ್ಸ್ ಮತ್ತು toggle ಸ್ವಿಚ್ ಮಾಡಿರಿ.

ಆಡ್ ಬ್ಲಾಕರ್ ಆಪ್
ಇಂಟರ್ನೆಟ್ ಬಳಕೆಯ ವೇಳೆ ಜಾಹಿರಾತು ಕಿರಿ ಕಿರಿ ತಡೆಯಲು ಸ್ಮಾರ್ಟ್‌ಫೋನ್‌ನಲ್ಲಿ ಆಡ್ ಬ್ಲಾಕರ್ ಆಪ್ ಬಳಕೆ ಮಾಡಬಹುದಾಗಿದೆ. ಇದು ಸ್ಮಾರ್ಟ್‌ಫೋನ್ ಜಾಹಿರಾತುಗಳನ್ನು, ಇಂಟರ್ನೆಟ್ ಬಳಕೆಯ ವೇಳೆಯ ಜಾಹಿರಾತುಗಳನ್ನು ಮತ್ತು ಸರ್ಚ್ ಇಂಜಿನ್ ಆಪ್‌ಗಳಲ್ಲಿ ಬ್ರೌಸ್ ಮಾಡುವಾಗ ಕಾಣಿಸುವ ಜಾಹಿರಾತುಗಳನ್ನು ತಡೆಯಲಿದೆ. ಆಂಡ್ರಾಯ್ಡ್ ಫೋನಿನಲ್ಲಿ ad-blocker APK ಪ್ಲಸ್ ಆಪ್ ಅನ್ನು ಇನ್‌ಸ್ಟಾಲ್ ಮಾಡಬಹುದಾಗಿದೆ.

ಆಡ್‌ಬ್ಲಾಕರ್ ಪ್ಲಸ್ ಆಪ್
* ಆಡ್‌ಬ್ಲಾಕರ್ ಪ್ಲಸ್ ಆಪ್ ಅನ್ನು ಬ್ರೌಸರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಫೈಲ್ ಮ್ಯಾನೇಜರ್ ಆಪ್ ತೆರೆದು ಆಡ್‌ಬ್ಲಾಕರ್ ಪ್ಲಸ್ ಆಪ್‌ನ APK ಫೈಲ್ ನೋಡಿ.
* ಆಡ್‌ಬ್ಲಾಕರ್ ಪ್ಲಸ್ ಆಪ್ APK ಫೈಲ್ ಇನ್‌ಸ್ಟಾಲ್ ಮಾಡಿರಿ.
* ಆನಂತರ ಆಪ್ ತೆರೆದು ಓಕೆ ಆಯ್ಕೆ ಸೆಲೆಕ್ಟ್ ಮಾಡಿರಿ.

ಇತರೆ ಆಡ್ ಬ್ಲಾಕರ್ ಆಪ್ಸ್
ಸ್ಮಾರ್ಟ್‌ಫೋನ್ ಇಂಟರ್ನೆಟ್ ಬಳಕೆ ಮಾಡುವಾಗ ನಡು ನಡುವೆ ಕಾಣಿಸುವ ಜಾಹಿರಾತುಗಳ ಕಿರಿ ಕಿರಿಯನ್ನು ದೂರಾಗಿಸಲು ಆಡ್‌ಬ್ಲಾಕರ್ ಪ್ಲಸ್ ಆಪ್ ಬಳಸಬಹುದಾಗಿದೆ. ಇದರೊಂದಿಗೆ ಆಡ್‌ಗಾರ್ಡ್ (AdGuard) , ಆಡ್‌ಲಾಕ್ (AdLock) ಮತ್ತು ಆಡ್‌ಅವೇ (AdAway) ಅಪ್ಲಿಕೇಶನ್‌ಗಳು ಸಹ ನೆಟ್ ಬ್ರೌಸ್ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಜಾಹಿರಾತು ತಡೆಗೆ ನೆರವಾಗಲಿವೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999