ನಿಮ್ಮ ಫೋನಿನಲ್ಲಿ ಗೇಮಿಂಗ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಈ ಸಲಹೆ ಅನುಸರಿಸಿ!

|

ಮೊಬೈಲ್ ಮಾರುಕಟ್ಟೆ ತುಂಬಾ ವಿಸ್ತಾರವಾಗಿದ್ದು, ಮೊಬೈಲ್ ಗೇಮ್ ಅನ್ನು ಇಷ್ಟಪಟ್ಟು ಆಡುವ ಬಳಕೆದಾರರು/ಜನರ ಸಂಖ್ಯೆಯು ಕಡಿಮೆ ಇಲ್ಲ. ಈ ನಿಟ್ಟಿನಲ್ಲಿ ಕೆಲವು ಮೊಬೈಲ್ ತಯಾರಿಕಾ ಕಂಪನಿಗಳು ಬಳಕೆದಾರರಿಗೆ ಅತ್ಯುತ್ತಮ ಗೇಮ್‌ ಅನುಭವ ಸಿಗಲೆಂದು ಕೆಲವು ದೈತ್ಯ ಗೇಮಿಂಗ್ ಸ್ಮಾರ್ಟ್‌ಫೋನ್‌ ಪರಿಚಯಿಸಿವೆ. ಇಂತಹ ಫೋನ್‌ಗಳಲ್ಲಿ ಗೇಮಿಂಗ್ ಮಾಡುವುದು ಬಳಕೆದಾರರಿಗೆ ರೋಚಕ ಎನಿಸಲಿದೆ. ಅದಾಗ್ಯೂ, ಕೆಲವೊಂದು ಬಜೆಟ್‌ ದರದ ಫೋನ್‌ಗಳಲ್ಲಿಯೂ ಗೇಮಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಗೇಮ್‌ ಆಡಬಹುದು.

ಕ್ಷಮತೆಯು

ಹೌದು, ಗೇಮಿಂಗ್ ಕಾರ್ಯ ಕ್ಷಮತೆಯು ಸ್ಮಾರ್ಟ್‌ಫೋನಿನ ಆಂತರಿಕ ಯಂತ್ರಾಂಶವನ್ನು ಅವಲಂಬಿಸಿರುತ್ತದೆ. ಆದರೆ ಗೇಮಿಂಗ್ ಕಾರ್ಯ ಕ್ಷಮತೆಗೆ ಇದೊಂದೇ ಪ್ರಮುಖ ಅಂಶವಲ್ಲ. ಬದಲಾಗಿ ಇತರೆ ಕೆಲವು ಸ್ಮಾರ್ಟ್‌ಫೋನ್‌ ಅಂಶಗಳು ಗೇಮಿಂಗ್ ಕಾರ್ಯ ಕ್ಷಮತೆಯನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾಗಲಿವೆ. ಹಾಗಾದರೇ ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಪವರ್‌ ಸೇವಿಂಗ್ ಮೋಡ್ ಅನ್ನು ಆಫ್ ಮಾಡಿ

ಪವರ್‌ ಸೇವಿಂಗ್ ಮೋಡ್ ಅನ್ನು ಆಫ್ ಮಾಡಿ

ಪವರ್ ಸೇವಿಂಗ್ ಮೋಡ್ ಎಂದರೆ ಬ್ರೈಟ್‌ನೆಸ್, ಗಡಿಯಾರದ ವೇಗ, ಇತ್ಯಾದಿಗಳನ್ನು ಕಡಿಮೆ ಮಾಡುವಂತಹ ಸಿಸ್ಟಮ್‌ನ ಸಂಪನ್ಮೂಲಗಳನ್ನು ಸೀಮಿತಗೊಳಿಸುವ ಮೂಲಕ ಬ್ಯಾಟರಿ ಜೀವಿತಾವಧಿಯನ್ನು ಉಳಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಗೇಮ್‌ ಪ್ರಿಯರು ಗೇಮ್‌ಗಳನ್ನು ಆಡುತ್ತಿರುವಾಗ ಈ ಆಯ್ಕೆ ಆಫ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಫೋನಿನಲ್ಲಿ ಹಿನ್ನಲೆ ಆಪ್ಸ್‌ ಕ್ಲೋಸ್ ಮಾಡಿರಿ

ಫೋನಿನಲ್ಲಿ ಹಿನ್ನಲೆ ಆಪ್ಸ್‌ ಕ್ಲೋಸ್ ಮಾಡಿರಿ

ಗೇಮ್‌ ಪ್ರಿಯರು ತಮ್ಮ ಸ್ಮಾರ್ಟ್‌ಫೋನ್ ಸೀಮಿತ ಪ್ರಮಾಣದ RAM ಅನ್ನು ಹೊಂದಿದ್ದರೂ ಸಹ, ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಸಹಾಯ ಮಾಡಬಹುದು. ಇದು RAM ಅನ್ನು ಮುಕ್ತಗೊಳಿಸುತ್ತದೆ ಮತ್ತು ಗೇಮಿಂಗ್ ಕಾರ್ಯಕ್ಷಮತೆಯನ್ನು ತುಲನಾತ್ಮಕವಾಗಿ ಸುಧಾರಿಸುತ್ತದೆ.

ಗೇಮ್‌ ಮೋಡ್ ಆಯ್ಕೆಗೆ ಬದಲಿಸಿ

ಗೇಮ್‌ ಮೋಡ್ ಆಯ್ಕೆಗೆ ಬದಲಿಸಿ

ಪ್ರಸ್ತುತ ಹಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಗೇಮ್‌ ಮೋಡ್ ಆಯ್ಕೆ ಒಳಗೊಂಡಿರುತ್ತವೆ. ಗೇಮ್ ಮಾಡುವ ವೇಳೆ ಬಳಕೆದಾರರು ಗೇಮ್‌ ಮೋಡ್ ಆಯ್ಕೆ ಸಕ್ರಿಯ ಮಾಡುವುದು (ಒಂದು ವೇಳೆ ಫೋನಿನಲ್ಲಿ ಈ ಆಯ್ಕೆ ಇದ್ದರೆ). ಇದರಿಂದ ಗೇಮಿಂಗ್ ಕಾರ್ಯ ದಕ್ಷತೆ ಹೆಚ್ಚುತ್ತದೆ. ಅತ್ಯುತ್ತಮ ಗೇಮಿಂಗ್ ಅನುಭವ ಪಡೆಯಬಹುದಾಗಿದೆ.

ಗೇಮ್ ಆಡುವಾಗ ವೈ-ಫೈ ಬಳಕೆ ಉತ್ತಮ

ಗೇಮ್ ಆಡುವಾಗ ವೈ-ಫೈ ಬಳಕೆ ಉತ್ತಮ

ವೇಗದ ಮ್ತು ಸುಲಭವಾಗಿ ಆನ್‌ಲೈನ್ ಗೇಮ್‌ ಆಡುವವರು ವೈ-ಫೈ ಬಳಕೆ ಮಾಡುವುದು ಉತ್ತಮ. ಆನ್‌ಲೈನ್‌ ಗೇಮ್‌ಗಳು ಅಧಿಕ ಇಂಟರ್ನೆಟ್ ಸ್ಪೀಡ್ ಅಗತ್ಯ ಇರುತ್ತವೆ. ಮೊಬೈಲ್‌ ಡೇಟಾ ಬಳಕೆಗಿಂತ, ವೈ ಫೈ ಇಂಟರ್ನೆಟ್ ಬಳಕೆ ಮಾಡುವುದು ಉತ್ತಮ ಎನಿಸುತ್ತದೆ.

ಗೇಮ್‌ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿ

ಗೇಮ್‌ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿ

ಸ್ಮಾರ್ಟ್‌ಫೋನ್ ಆಧಾರಿತ ಗೇಮ್‌ಗಳು ಆಡುವಾಗ ಬಳಕೆದಾರರು ಸೆಟ್ಟಿಂಗ್‌ನಲ್ಲಿ ಗೇಮ್‌ನ ಗ್ರಾಫಿಕ್ಸ್ ನಲ್ಲಿ ಕೆಲವು ಬದಲಾವಣೆ ಮಾಡಬೇಕು/ ಹೊಂದಾಣಿಕೆಗಳನ್ನು ಮಾಡಬೇಕು. ಉತ್ತಮ ಫ್ರೇಮ್ ದರಗಳು ಮತ್ತು ಸುಗಮ ಗೇಮಿಂಗ್ ಅನುಭವವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

Cache ಕ್ಲಿಯರ್ ಮಾಡುವುದು

Cache ಕ್ಲಿಯರ್ ಮಾಡುವುದು

ಸ್ಮಾರ್ಟ್‌ಫೋನ್‌ನಲ್ಲಿ ಸಂಪೂರ್ಣ ಸಂಗ್ರಹ (Cache) ಡೇಟಾವನ್ನು ತೆರವುಗೊಳಿಸುವುದರಿಂದ ಸಂಗ್ರಹ ಸ್ಥಳಾವಕಾಶ ಬಹಳಷ್ಟು ಉಳಿಸಬಹುದು. ಸ್ಮಾರ್ಟ್‌ಫೋನ್‌ನ ಅತ್ಯುತ್ತಮ, ತಡೆ ರಹಿತ ಗೇಮಿಂಗ್ ಅನುಭವಕ್ಕೆ ಆಂತರೀಕ ಸಂಗ್ರಹಣೆಯು ಸ್ಥಳಾವಕಾಶ ಸಹ ಮುಖ್ಯವಾಗಿದೆ. ಹೀಗಾಗಿ ಫೋನಿನ Cache ಕ್ಲಿಯರ್ ಮಾಡುವುದು ಉತ್ತಮ. ಇದು ಸುಗಮ ಗೇಮಿಂಗ್ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ.

ಸಾಫ್ಟ್‌ವೇರ್‌ ಅಪ್‌ಡೇಟ್ ಮಾಡುವುದು

ಸಾಫ್ಟ್‌ವೇರ್‌ ಅಪ್‌ಡೇಟ್ ಮಾಡುವುದು

ಸ್ಮಾರ್ಟ್‌ಫೋನ್ ಅಪ್‌ಡೇಟ್ ಕೇಳಿದಾಗ ಅದನ್ನು ಅಪ್‌ಡೇಟ್ ಮಾಡುಬೇಕು. ಇದರಿಂದ ನೂತನ ಆವೃತ್ತಿಗೆ ಫೋನ್ ನವೀಕರಣ ಆಗುತ್ತದೆ. ಜೊತೆಗೆ ಫೋನಿನ ಕಾರ್ಯ ವೈಖರಿಯಲ್ಲಿ ವೇಗ ಕಾಣಬಹುದು. ಅಪ್‌ಡೇಟ್ ಸಾಫ್ಟ್‌ವೇರ್ ಹೊಂದಿದ್ದರೇ, ಗೇಮಿಂಗ್ ಕಾರ್ಯದಕ್ಷತೆಯು ಸಹ ಉತ್ತಮವಾಗಿರುತ್ತದೆ.

Best Mobiles in India

English summary
Follow These Tips To Boost Your Phone’s Gaming Performance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X