ಮೊಬೈಲ್ ಫೋನ್ ಸ್ಪೋಟದಿಂದ ನಾಲ್ವರಿಗೆ ಗಾಯ

|

ಸೆಲ್ ಫೋನ್ ಸ್ಪೋಟಗೊಂಡ ಕಾರಣದಿಂದಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಶಹಾಪುರದಲ್ಲಿ ನಡೆದಿದೆ. ರಾಜೇಂದ್ರ ಶಿಂಧೆ(43), ಅವರ ಹೆಂಡತಿ ರೋಷಿಣಿ(38), ಮಗಳು ರಚನಾ(13) ಮತ್ತು ಮಗ ಅಭಿಷೇಕ್ (10) ಮೃತಪಟ್ಟ ದುರ್ದೈವಿಗಳು.

ವೈದ್ಯರು ಏನು ಹೇಳುತ್ತಾರೆ?

ವೈದ್ಯರು ಏನು ಹೇಳುತ್ತಾರೆ?

ಪೋಷಕರು ಗಂಭೀರವಾಗಿ ಗಾಯಗೊಂಡಿದ್ದು, ಮಕ್ಕಳು ಸಣ್ಣಪುಟ್ಟ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಾಜೇಂದ್ರ ಅವರ ಅಂಗೈ ಶೇಕಡಾ 32 ರಷ್ಟು ಸುಟ್ಟು ಹೋಗಿದೆ, ರೋಷಿಣಿ ಅವರಿಗೆ ಬಲಕಾಲು ಮತ್ತು ಮುಖವು ಶೇಕಡಾ 26 ರಷ್ಟು ಸುಟ್ಟಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಆಗಿರುವ ಡಾ. ಕೈಲಾಶ್ ಪವರ್ ತಿಳಿಸಿದ್ದಾರೆ.

ಮಲಗಿದ್ದಾಗ ಘಟನೆ:

ಮಲಗಿದ್ದಾಗ ಘಟನೆ:

ಥಾಣೆ ಜಿಲ್ಲೆಯ ಶಹಾಪುರ ಪೋಲೀಸರು ತಿಳಿಸಿರುವಂತೆ ಶಹಾಪುರ ತಾಲೂಕಿನ ಕಸರಳ್ಳಿ ಏರಿಯಾದ ಪ್ರತೀಕ್ಷಾ ಅಪಾರ್ಟ್ ಮೆಂಟ್ ನ ಗ್ರೌಂಡ್ ಫ್ಲೋರ್ ನಲ್ಲಿ ಶಿಂಧೆ ಕುಟುಂಬವು ವಾಸಿಸುತ್ತಿತ್ತು. ರಾಜೇಂದ್ರ ಅವರು ಹೇಳಿರುವಂತೆ ಎರಡು ತಿಂಗಳ ಹಿಂದಷ್ಟೇ ಅವರು ಫೋನ್ ಖರೀದಿಸಿದ್ದರು. ರಾಜೇಂದ್ರ ಅವರು ತಿಳಿಸಿರುವಂತೆ ಹಾಸಿಗೆಯಲ್ಲಿ ಅವರು ಮಲಗಿದ್ದರು ಮತ್ತು ಮೂರು ಮಕ್ಕಳು, ಹೆಂಡತಿ ಪಕ್ಕದ ಹಾಸಿಗೆಯಲ್ಲಿ ನೆಲದಲ್ಲಿ ಮಲಗಿದ್ದರು. ಫೋನ್ ಕಿಟಿಕಿಯ ಪಕ್ಕದಲ್ಲಿ ಇತ್ತು. ಚಾರ್ಜಿಗೆ ಹಾಕಿರುವ ಫೋನ್ ನ್ನು ಅನ್ ಪ್ಲಗ್ ಮಾಡಲು ತೆರಳಿದ ಸಂದರ್ಬದಲ್ಲಿ ಫೋನ್ ಸ್ಪೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ಕುಟುಂಬ:

ಆಸ್ಪತ್ರೆಗೆ ದಾಖಲಾದ ಕುಟುಂಬ:

ಸ್ಪೋಟದ ಕಾರಣದಿಂದಾಗಿ ಕರ್ಟನ್ ಮತ್ತು ಬೆಡ್ ಶೀಟ್ ಗೆ ಮೊದಲು ಬೆಂಕಿ ಹೊತ್ತಿಕೊಂಡಿದೆ.ರಾಜೇಂದ್ರ ಅವರ ಒಂದು ಮಗು ಗಾಯಗಳಾಗುವುದರಿಂದ ತಪ್ಪಿಸಿಕೊಂಡಿದೆ. ಮೊದಲು ಇಡೀ ಕುಟುಂಬವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಅಕ್ಕಪಕ್ಕದವರು ಸೇರಿಸಿದ್ದಾರೆ. ನಂತರ ಥಾಣೆಯ ಸಿವಿಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಪೋಟಕ್ಕೆ ಕಾರಣ:

ಸ್ಪೋಟಕ್ಕೆ ಕಾರಣ:

ತಜ್ಞರು ಹೇಳುವ ಪ್ರಕಾರ ಸ್ಪೋಟಕ್ಕೆ ಹಲವು ಕಾರಣಗಳಿದೆ. ಕೇವಲ ಓವರ್ ಚಾರ್ಜಿಂಗ್ ನ ಕಾರಣದಿಂದಾಗಿ ಮಾತ್ರವೇ ಸ್ಪೋಟ ಸಂಭವಿಸುವುದಿಲ್ಲ. ಪ್ರತಿ ಫೋನ್ ಕಂಪೆನಿಯು ಒಂದು ಫೋನ್ ನ್ನು ಮಾರುಕಟ್ಟೆಗೆ ಬಿಡುವ ಮುನ್ನ ಸಂಬಂಧಪಟ್ಟ ಎಲ್ಲಾ ರೀತಿಯ ಟೆಸ್ಟ್ ಗಳನ್ನು ಕೂಡ ಮಾಡಿರಬೇಕು, ಅಷ್ಟೇ ಅಲ್ಲ ಗ್ರಾಹಕರಿಗೆ ಫೋನಿನ ಕುರಿತಾತ ತಾಂತ್ರಿಕ ಮತ್ತು ಅಫಘಾತಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಸ್ಮಾರ್ಟ್ ಫೋನ್ ಗಳು ಒಮ್ಮೆ ಚಾರ್ಜ್ ಫುಲ್ ಆದ ಕೂಡಲೇ ಚಾರ್ಜ್ ಆಗುವುದನ್ನು ಅಂದರೆ ಕರೆಂಟ್ ಸಪ್ಲೈ ಆಗುವುದನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತವೆ ಎಂದು ಥಾಣೆಯ ಟೆಕ್ ಎಕ್ಸ್ ಪರ್ಟ್ ಆಗಿರುವ ನಿತಿನ್ ಪಾಟಿಲ್ ಅವರು ತಿಳಿಸುತ್ತಾರೆ.

ಸಮಸ್ಯೆ ಎಲ್ಲಿಂದ?

ಸಮಸ್ಯೆ ಎಲ್ಲಿಂದ?

ಬ್ಯಾಟರಿ ಕ್ಯಾಪ್ಸೂಲ್ ಪಂಕ್ಚರ್ ಆಗಿದ್ದರೆ, ಪ್ರೊಸೆಸರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವಾದಲ್ಲಿ ಅಥವಾ ಕೂಲಿಂಗ್ ಫೆಸಿಲಿಟಿ ಇಲ್ಲದೇ ಇದ್ದಲ್ಲಿ ಸ್ಪೋಟವಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಯಾವುದೇ ರೀತಿಯ ತಯಾರಿಕಾ ಸಮಸ್ಯೆಗಳು ಫೋನಿನಲ್ಲಿ ಇದ್ದರೂ ಕೂಡ ಈ ಸಮಸ್ಯೆ ಎದುರಾಗಬಹುದು. ಯಾವುದೇ ಕಂಪೆನಿಯೂ ಕೂಡ ಒಂದು ಫೋನ್ ನ್ನು ಒಂದು ಸಮಯಕ್ಕೆ ತಯಾರಿಸುವುದಿಲ್ಲ. ಒಂದು ನಿರ್ಧಿಷ್ಟ ಬ್ಯಾಚ್ ನಲ್ಲಿ ತಯಾರಿಸಲಾಗುತ್ತದೆ.

Best Mobiles in India

Read more about:
English summary
Four of a family hurt as mobile phone explodes while charging, causes fire

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X