ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡಿದ ಯುವತಿ; ಉದ್ಯಮಿ ಕಳೆದುಕೊಂಡ ಹಣವೆಷ್ಟು ಗೊತ್ತಾ!?

|

ವಾಟ್ಸಾಪ್‌ ಬಳಕೆ ಹೆಚ್ಚಾದಂತೆ ಈ ಮೂಲಕ ಅದೆಷ್ಟೋ ವಂಚಕರು ಅಮಾಯಕರನ್ನು ಮೋಸ ಮಾಡಿ ಹಣ ಪೀಕುತ್ತಿದ್ದಾರೆ. ಈ ಕಾರಣಕ್ಕೆ ವಾಟ್ಸಾಪ್‌ನಲ್ಲಿ ಸಾಕಷ್ಟು ಭದ್ರತಾ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳದ ಬಳಕೆದಾರರು ಈ ರೀತಿಯ ಕಿಡಿಗೇಡಿಗಳ ಬಲೆಗೆ ಬಿದ್ದು, ಮಾನದ ಜೊತೆಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಉದ್ಯಮಿಯೊಬ್ಬರು ವಾಟ್ಸಾಪ್‌ ನಲ್ಲಿ ಬಂದ ಕರೆ ಸ್ವೀಕರಿಸಿ ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ.

ಹೌದು, ಸದ್ಯಕ್ಕೆ ಬಹುಪಾಲು ಮಂದಿ ವಾಟ್ಸಾಪ್ ಬಳಕೆ ಮಾಡುತ್ತಿದ್ದು, ಈ ಮೂಲಕ ಬೇಕಾದವರ ಜೊತೆ ಇಂಟರ್ನೆಟ್‌ ಕರೆ ಮಾಡುತ್ತಿದ್ದಾರೆ, ಫೈಲ್‌ಗಳನ್ನು ಕಳುಹಿಸುತ್ತಿದ್ದಾರೆ. ಹೀಗೆ ಹತ್ತು ಹಲವಾರು ಸೌಕರ್ಯ ಇದರಿಂದ ಲಭ್ಯವಾಗುತ್ತಿದ್ದು, ಕೆಲವರಿಗೆ ಇದು ಅನುಕೂಲವಾದರೆ ಇನ್ನೂ ಕೆಲವರಿಗೆ ಅಪರಾಧ ಕೃತ್ಯ ಎಸಗುವ ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ಉದ್ಯಮಿಯೊಬ್ಬರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ವಾಟ್ಸಾಪ್‌ನಲ್ಲಿ ಜರುಗಿದ ಘಟನೆ ಏನು?, ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ವಿಡಿಯೋ ಕರೆ ಮಾಡಿದ್ದ ಬೆಡಗಿ

ವಿಡಿಯೋ ಕರೆ ಮಾಡಿದ್ದ ಬೆಡಗಿ

ಹಣ ಇರುವವರನ್ನೇ ಟಾರ್ಗೆಟ್‌ ಮಾಡುವ ಕಿಡಿಗೇಡಿಗಳು ಈ ರೀತಿಯ ಹೀನ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಇದರ ಭಾಗವಾಗಿಯೇ ಹರಿಯಾಣದಲ್ಲಿ ಸುಂದರವಾದ ಯುವತಿಯೋರ್ವಳು ವಿಡಿಯೋ ಕಾಲ್ ಮಾಡಿ ಉದ್ಯಮಿಯಿಂದ 6 ಲಕ್ಷ 36 ಸಾವಿರ ರೂಪಾಯಿ ಪೀಕಿದ್ದಾಳೆ.

 ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಕಿರಾತಕಿ

ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಕಿರಾತಕಿ

ಉದ್ಯಮಿ, ರೇವಾರಿಯ ಧರುಹೆಡಾ ಪಟ್ಟಣದ ನಿವಾಸಿವಾಗಿದ್ದು, ಅಪರಿಚಿತ ಹುಡುಗಿಯಿಂದ ತನಗೆ ಆರಂಭದಲ್ಲಿ ಒಂದು ವಿಡಿಯೋ ಕರೆ ಬಂದಿತ್ತು, ಅದನ್ನು ನಿರ್ಲಕ್ಷಿಸಿದ್ದೆ. ಇದಾದ ನಂತರ ಪದೇ ಪದೇ ವಿಡಿಯೋ ಕರೆ ಮಾಡಿದ್ದಾಳೆ. ಈ ಮೂಲಕ ವಿಡಿಯೋ ಕಾಲ್‌ ರೆಕಾರ್ಡ್‌ ಮಾಡಿಕೊಂಡು ಮೋಸ ಮಾಡಿದ್ದಾಳೆ ಎಂದು ದೂರು ನೀಡಿರುವ ಉದ್ಯಮಿ ತಮ್ಮ ದೂರಿನ ಪ್ರತಿಯಲ್ಲಿ ಈ ಸಂಬಂಧ ಸಂಪೂರ್ಣ ಘಟನೆ ಉಲ್ಲೇಖ ಮಾಡಿದ್ದಾರೆ.

ವಿಡಿಯೋ ಎಡಿಟ್‌ ಮಾಡಿದ್ದಾಳೆ

ವಿಡಿಯೋ ಎಡಿಟ್‌ ಮಾಡಿದ್ದಾಳೆ

ಉದ್ಯಮಿ ಕರೆ ಸ್ವೀಕಾರ ಮಾಡಿದ ನಂತರ ಅದನ್ನು ರೆಕಾರ್ಡ್‌ ಮಾಡಿಕೊಂಡು ಅದನ್ನು ತನಗೆ ಬೇಕಾದ ರೀತಿ ಅಶ್ಲೀಲವಾಗಿ ಎಡಿಟ್‌ ಮಾಡಿಕೊಂಡ ಆಕೆ ಮತ್ತೆ ಉದ್ಯಮಿಗೆ ಕರೆ ಮಾಡಿದ್ದಾಳೆ. ಇದಾದ ಬಳಿಕ ಆ ವಿಡಿಯೋವನ್ನು ಉದ್ಯಮಿಗೆ ಕಳುಹಿಸಿ ಬ್ಲ್ಯಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾಳೆ. ಇದರ ಭಾಗವಾಗಿಯೇ ಮೊದಲ ಬಾರಿಗೆ ಡಿಸೆಂಬರ್ 13 ರಂದು ಹಣ ಕೇಳಿದ್ದಾಳೆ. ಇದರಿಂದ ಭಯಗೊಂಡ ಉದ್ಯಮಿ ಆಕೆ ಕೇಳಿದ 1 ಲಕ್ಷದ 36 ಸಾವಿರ ರೂ. ಹಣ ನೀಡಿದ್ದಾರೆ.

ಹಣ ಕೊಟ್ಟರು ಸುಮ್ಮನಾಗದ ಯುವತಿ

ಹಣ ಕೊಟ್ಟರು ಸುಮ್ಮನಾಗದ ಯುವತಿ

ಇನ್ನು ಆಕೆ ಕೇಳಿದಷ್ಟೇ ಹಣ ನೀಡಿದರೂ ಸಹ ಮತ್ತೆ ಅದೇ ತಂಡದ ಯುವಕನೊಬ್ಬ ಕರೆ ಮಾಡಿ ಮತ್ತೆ 4.5 ಲಕ್ಷ ರೂ. ಗಳನ್ನು ಕೇಳಿದ್ದಾನೆ. ಇದಕ್ಕೂ ಮೊದಲು ಆತ ಪೊಲೀಸ್‌ ಅಧಿಕಾರಿ ಎಂದು ಹೇಳಿ ಉದ್ಯಮಿಗೆ ಭಯ ಉಂಟು ಮಾಡಿದ್ದಾನೆ. ಹಾಗೆಯೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾನೆ. ಇದರಿಂದ ಬೆಚ್ಚಿದ ಉದ್ಯಮಿ ಆತ ಕೇಳಿದಷ್ಟು ಹಣ ನೀಡಿದ್ದಾರೆ.

ಕಿಡಿಗೇಡಿ

ಇದಾದ ನಂತರವೂ ವರಸೆ ಬದಲಿಸದ ಆ ಕಿಡಿಗೇಡಿ ಗ್ಯಾಂಗ್‌ ಮತ್ತೆ 50 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಗ್ಯಾಂಗ್‌ ಒಟ್ಟಾರೆ 6 ಲಕ್ಷ 36 ಸಾವಿರ ರೂ. ಗಳನ್ನು ಪಡೆದುಕೊಂಡಿದೆ. ಈ ಪ್ರಕ್ರಿಯೆ ನಿರಂತರವಾದ ಹಿನ್ನೆಲೆ ಬೇಸತ್ತ ಉದ್ಯಮಿ ಕೊನೆಗೆ ಸೈಬರ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ವಂಚನೆ ಹಾಗೂ ಸುಲಿಗೆಗೆ ಒತ್ತಾಯಿಸಿದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹಣ ವರ್ಗಾವಣೆ ಮಾಡಿರುವ ಖಾತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನೀವು ಎಚ್ಚರವಾಗಿರಿ

ನೀವು ಎಚ್ಚರವಾಗಿರಿ

ಸಾಮಾನ್ಯವಾಗಿ ನಿಮ್ಮ ಸಂಪರ್ಕ ಖಾತೆಯಲ್ಲಿ ಇಲ್ಲದ ನಂಬರ್‌ನಿಂದ ಯಾವುದೇ ವಾಟ್ಸಾಪ್‌ ಕರೆ ಬಂದರು ಎಚ್ಚರಿಕೆ ವಹಿಸಿ. ಇಲ್ಲವಾದರೆ ಖಂಡಿತಾ ಈ ರೀತಿಯ ಕೃತ್ಯಕ್ಕೆ ಬಲಿಯಾಗಬೇಕಾಗುತ್ತದೆ. ಅಕಸ್ಮಾತ್‌ ಈ ರೀತಿಯ ಸಮಸ್ಯೆಗೆ ಏನಾದರೂ ಈಗಾಗಲೇ ಸಿಲುಕಿಕೊಂಡಿದ್ದರೆ ಇದರಿಂದ ಆತಂಕಕ್ಕೆ ಒಳಗಾಗದೆ ತಕ್ಷಣವೇ ಸೈಬರ್‌ ವಿಭಾಗಕ್ಕೆ ದೂರು ನೀಡಿ.

Best Mobiles in India

English summary
Fraud through WhatsApp video call; lakh of money collected from the businessman.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X