ಆಪಲ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್; 4 ತಿಂಗಳ ಉಚಿತ ಮ್ಯೂಸಿಕ್‌ ಸ್ಟ್ರೀಮಿಂಗ್‌

|

ಆಪಲ್‌ ಕಂಪೆನಿ ಅತ್ಯುತ್ತಮ ಶ್ರೇಣಿಯ ಫೋನ್‌ಗಳು ಹಾಗೂ ಇನ್ನಿತರೆ ಡಿವೈಸ್‌ಗಳನ್ನು ಪರಿಚಯಿಸುತ್ತಿದೆ. ಅದರಲ್ಲೂ ಸಾಫ್ಟ್‌ವೇರ್ ಮತ್ತು ಆನ್‌ಲೈನ್ ಸೇವೆಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದು, ಈ ಕ್ಷಣಕ್ಕೂ ಕೂಡ ಆಪಲ್‌ ನ ಯಾವುದೇ ಡಿವೈಸ್‌ಗಳಿಗೂ ಸಹ ಬೇಡಿಕೆ ಹೆಚ್ಚಾಗಿಯೇ ಇದೆ. ಇದರ ನಡುವೆ ಆಪಲ್‌ ತನ್ನ ಬಳಕೆದಾರರಿಗೆ ಆಫರ್‌ವೊಂದನ್ನು ಘೋಷಣೆ ಮಾಡಿದೆ.

ಉಚಿತ ಆಪಲ್‌

ಹೌದು, ಸಾಮಾನ್ಯವಾಗಿ ಹೊಸ ಬಳಕೆದಾರರಿಗೆ 3 ತಿಂಗಳವರೆಗೆ ಉಚಿತ ಆಪಲ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಆದರೆ, ಈ ಕೊಡುಗೆ ಮೂಲಕ ಗ್ರಾಹಕರು 4 ತಿಂಗಳವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗ ಗ್ರಾಹಕರು ಶಾಝಮ್ (Shazam) ಮೂಲಕ ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡಿ ಆಪಲ್‌ ಮ್ಯೂಸಿಕ್‌ ವಿಭಾಗಕ್ಕೆ ಎಂಟ್ರಿಕೊಟ್ಟರೆ 4 ತಿಂಗಳ ವರೆಗೆ ಉಚಿತ ಮ್ಯೂಸಿಕ್‌ ಸೇವೆ ಪಡೆಯಬಹುದಾಗಿದೆ. ಇನ್ನು ಶಾಝಮ್ ಎನ್ನುವುದು ಮ್ಯೂಸಿಕ್, ಚಲನಚಿತ್ರಗಳು, ಜಾಹೀರಾತುಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಿರುವ ಆಪ್‌ ಆಗಿದ್ದು, ಇದೂ ಸಹ ಆಪಲ್‌ ಒಡೆತನದಲ್ಲಿ ಕೆಲಸ ಮಾಡಲಿದೆ.

ಉಚಿತ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

ಉಚಿತ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

ಶಾಝಮ್ ತಮ್ಮ ಪ್ರಮುಖ ಪೇಜ್‌ನಲ್ಲಿ ಆಫರ್‌ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿ ಕ್ಯೂಆರ್‌ ಕೋಡ್‌ ಆಯ್ಕೆ ನೀಡಿದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ಯಾವುದೇ ಶುಲ್ಕವಿಲ್ಲದೆ 4 ತಿಂಗಳ ವರೆಗೆ ಮ್ಯೂಸಿಕ್‌ ಸ್ಟ್ರೀಮಿಂಗ್ ಸೇವೆಯನ್ನು ಪಡೆಯಬಹುದು ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1

ಹಂತ 1

ನಿಮ್ಮ ಆಪಲ್‌ ಡಿವೈಸ್‌ನಲ್ಲಿ ಶಾಝಮ್ ಪೇಜ್‌ಗೆ ಹೋಗಿ. ಅಲ್ಲಿ ಡೆಸ್ಕ್‌ಟಾಪ್‌ಗಾಗಿ ಕ್ಯೂಆರ್‌ ಹಾಗೂ ಸ್ಮಾರ್ಟ್‌ಫೋನ್‌ಗಾಗಿ ರಿಡೀಮ್ ಬಟನ್ ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಗಮನಿಸಿ, ನಂತರ ಅದರಲ್ಲಿ ಕಾಣಿಸಿಕೊಳ್ಳುವ ಕ್ಯೂಆರ್‌ ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ರಿಡೀಮ್ ಕೋಡ್ ಅನ್ನು ಟ್ಯಾಪ್ ಮಾಡಿ. ಬಳಿಕ ನಿಮ್ಮ ಡಿವೈಸ್‌ನಲ್ಲಿ ಮ್ಯೂಸಿಕ್‌ ಆಪ್‌ ಓಪನ್‌ ಆಗುತ್ತದೆ.

ಹಂತ 2

ಹಂತ 2

ಮ್ಯೂಸಿಕ್‌ ಆಪ್‌ ಓಪನ್‌ ಆದ ಬಳಿಕ ನಿಮ್ಮ ಗುರುತನ್ನು ಪರಿಶೀಲಿಸಲು ಡಿವೈಸ್‌ ನಿಮ್ಮನ್ನು ಕೇಳುತ್ತದೆ. ಆ ವೇಳೆ, ನಿಮ್ಮ ಸ್ಮಾರ್ಟ್‌ಫೋನ್‌ನ ಸೈಡ್ ಬಟನ್ ಒತ್ತಿ ಮತ್ತು ಫೇಸ್ ಐಡಿ ಮೂಲಕ ಗುರುತನ್ನು ದೃಢೀಕರಿಸಿ. ಇದಾದ ನಂತರ ನೀವು ಉಚಿತ ಮ್ಯೂಸಿಕ್‌ ಸೇವೆಯನ್ನು 4 ತಿಂಗಳವರೆಗೆ ಪಡೆಯಬಹುದು.

ಈ ಅಂಶಗಳ ಕಡೆಗೂ ಗಮನವಿರಲಿ

ಈ ಅಂಶಗಳ ಕಡೆಗೂ ಗಮನವಿರಲಿ

ಅಪಲ್‌ನ ಈ ಆಫರ್ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಹಾಗೆಯೇ 4 ತಿಂಗಳ ನಂತರ ಈ ಸೇವೆ ಬೇಡ ಎಂದುಕೊಂಡರೆ ಹಾಗೂ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದರೆ ಉಚಿತ ಸೇವೆಯನ್ನು ರದ್ದು ಮಾಡಬಹುದು.

ಭಾರತದಲ್ಲಿನ ಪ್ಲ್ಯಾನ್‌ ವಿವರ

ಭಾರತದಲ್ಲಿನ ಪ್ಲ್ಯಾನ್‌ ವಿವರ

ಭಾರತದಲ್ಲಿನ ಆಪಲ್‌ ಬಳಕೆದಾರರು ಉಚಿತ ಸೇವಾವಧಿ ಮುಗಿದ ನಂತರ ಪಾವತಿ ಮಾಡಬೇಕಿದೆ. ಇದರಲ್ಲಿ ವಾಯ್ಸ್‌ ಪ್ಲ್ಯಾನ್‌ಗೆ ತಿಂಗಳಿಗೆ 49 ರೂ. ಪಾವತಿ ಮಾಡಬೇಕಿದೆ. ಹಾಗೆಯೇ ಸ್ಟೂಡೆಂಟ್‌ ಪ್ಲ್ಯಾನ್‌ಗೆ ತಿಂಗಳಿಗೆ 99 ರೂ., ಫ್ಯಾಮಿಲಿ ಪ್ಲ್ಯಾನ್‌ ಗೆ ತಿಂಗಳಿಗೆ 149 ರೂ. ಗಳನ್ನು ಪಾವತಿ ಮಾಡಬೇಕಿದೆ.

ಯುಎಇ

ಇದರ ನಡುವ ಆಪಲ್ ಕಂಪೆನಿಯು ಯುಎಇಯಲ್ಲಿ ತನ್ನ ಮ್ಯೂಸಿಕ್‌ ಚಂದಾದಾರಿಕೆ ಸೇವೆಯ ಪಾವತಿಯನ್ನು ಹೆಚ್ಚಿಗೆ ಮಾಡಲು ಮುಂದಾಗಿದೆ. ಆಪಲ್ ಮ್ಯೂಸಿಕ್‌ಗಾಗಿ ಮಾಸಿಕ ಶುಲ್ಕದಲ್ಲಿ 10 % ಹೆಚ್ಚಳದ ಬಗ್ಗೆ ಮಾಹಿತಿ ನೀಡಿದೆ. ಅದರಂತೆ ವೈಯಕ್ತಿಕ ಸದಸ್ಯತ್ವದ ಬೆಲೆಯಲ್ಲಿ AED19.99 (447.42ರೂ.ಗಳು) ರಿಂದ AED21.99 (492.18ರೂ. ಗಳು) ಗೆ ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ.

ಚಂದಾದಾರಿಕೆ

ಯುಎಇಯಲ್ಲಿ ವೈಯಕ್ತಿಕ ಮಾಸಿಕ ಚಂದಾದಾರಿಕೆ ಪಡೆಯುತ್ತಿರುವ ಗ್ರಾಹಕರ ಅಪಲ್‌ ಮ್ಯೂಸಿಕ್‌ 80 ಮಿಲಿಯನ್ ಹಾಡುಗಳು, ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಮತ್ತು ಕ್ಯುರೇಟೆಡ್ ಪ್ಲೇ ಪಟ್ಟಿಗಳ ಫೀಚರ್ಸ್‌ ಪಡೆಯುತ್ತಿದ್ದಾರೆ.

Best Mobiles in India

English summary
Apple company is introducing the best range of phones and other devices. Meanwhile, Apple has provided free music for 4 months to device users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X