ಬೆಂಗಳೂರಿನಲ್ಲಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಇನ್ನು ಮುಂದೆ ಮೊಬೈಲ್ ಡೇಟಾ ಬಳಕೆಯನ್ನು ಮಾಡಿಕೊಳ್ಳಲೇಬೇಕಾಗಿಲ್ಲ, ಕಾರಣ ನಗರದ ಪ್ರಮುಖ ಸ್ಥಳಗಳಲ್ಲಿ ಉಚಿತ ಹೈಸ್ಪೀಡ್ ವೈ-ಫೈಗಳನ್ನು ಅಳಡಿಸಲು ಬಿಬಿಎಂಪಿ ಮುಂದಾಗಿದ್ದು, ಈ ಮೂಲಕ ನಾಗರೀಕರಿಗೆ ಉಚಿತವಾಗಿ ಇಂಟರ್ನೆಟ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಮೊದಲಿಗೆ ಪ್ರಾಯೋಗಿಕವಾಗಿ ರಾಜಧಾನಿಯ ಪ್ರಮುಖ 5 ಪ್ರದೇಶಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಲಭ್ಯವಿರಲಿದೆ.

ಉಚಿತ ವೈ-ಫೈ ಸೌಲಭ್ಯ ಕಲ್ಪಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ಕೈ ಜೋಡಿಸಿದೆ ಎನ್ನಲಾಗಿದೆ. ಈ ಮೂಲಕ ಬ್ರಾಂಡ್ ಬೆಂಗಳೂರು ಸ್ಮಾರ್ಟ್ ಬೆಂಗಳೂರು ಆಗಲಿದೆ.
ಓದಿರಿ: ಇದೊಂದು ಸಾಧನವಿದ್ದರೇ ಪ್ರಪಂಚವನ್ನೇ ಒಂಟಿಯಾಗಿ ಸುತ್ತಬಹುದು..!
ಮೊದಲಿಗೆ ಮೆಜಿಸ್ಟಿಕ್‌ನಲ್ಲಿ:
ರಾಜಧಾನಿನಲ್ಲಿ ಮೊದಲಿಗೆ ಮೆಜೆಸ್ಟಿಕ್‌ನಲ್ಲಿ ಉಚಿತ ವೈ-ಫೈ ಲಭ್ಯವಾಗಲಿದೆ. ಇದರೊಂದಿಗೆ ಶಿವಾಜಿನಗರ ಬಸ್ ನಿಲ್ದಾಣ, ಕೆ.ಆರ್.ಮಾರ್ಕೆಟ್, ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಹೊಸೂರು ರಸ್ತೆಯ ಮಾರುಕಟ್ಟೆಗಳಲ್ಲಿ ಮೊದಲ ಹಂತರದ ಉಚಿತ ವೈ-ಫೈ ಜಾರಿಗೆ ಬರಲಿದೆ ಎನ್ನಲಾಗಿದೆ.
ಇಂಡಸ್ ಕಂಪನಿಯಿಂದ:
ಇಂಡಸ್ ಕಂಪನಿ ಮೊದಲ ಹಂತದಲ್ಲಿ 5 ಸ್ಥಳಗಳಲ್ಲಿ ವೈ-ಫೈ ಒದಗಿಸುವ ಸ್ಮಾರ್ಟ್ ಫೋಲ್‌ಗಳನ್ನು ನಿರ್ಮಿಸಲಿದೆ. ಇದಾದ ನಂತರದಲ್ಲಿ ಏರ್‌ಟೆಲ್-ವೊಡಾಫೋನ್ ಸೇರಿದಂತೆ ವಿವಿಧ ಟೆಲಿಕಾಂ ಕಂಪನಿಗಳು ವೈ-ಫೈ ಸೇವೆಯನ್ನು ಉಚಿತವಾಗಿ ಆರಂಭಿಸಲಿದೆ ಎನ್ನಲಾಗಿದೆ.
ಮೊದಲ 30 ನಿಮಿಷ ಉಚಿತ:
ಉಚಿತ ವೈ-ಫೈ ಸೌಲಭ್ಯವನ್ನು ಪಡೆಯುವ ಗ್ರಾಹಕರು ಮೊದಲ 30 ನಿಮಿಷ ಮಾತ್ರ ಉಚಿತ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ. ಇದಾದ ನಂತರದಲ್ಲಿ ವೈ-ಫೈ ಸೇವೆಯನ್ನು ನೀಡುತ್ತಿರುವ ಕಂಪನಿ ಶುಲ್ಕ ವಿಧಿಸಲಿದೆ ಎನ್ನಲಾಗಿದೆ.
ಜನಸಂದಣಿಯ ಪ್ರದೇಶಗಳು:
ನಗರದಲ್ಲಿ ಅತೀ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಆರಂಭವಾಗಲಿದೆ. ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಸೇವೆಯೂ ದೊರೆಯಲಿದೆ. ಮೆಜೆಸ್ಟಿಕ್, ಶಿವಾಜಿನಗರ, ಶಾಂತಿನಗರ, ಜಯನಗರ, ಬನಶಂಕರಿ, ಯಶವಂತಪುರ, ಕೆಂಗೇರಿ, ದೊಮ್ಮಲೂರು, ವೈಟ್ ಫೀಲ್ಡ್, ಬನ್ನೇರುಘಟ್ಟ ಮತ್ತು ಕೋರಮಂಗಲ ಬಸ್ ನಿಲ್ದಾಣಗಳಲ್ಲಿ ಶೀಘ್ರವೇ ಪ್ರಯಾಣಿಕರು ಉಚಿತ ವೈ-ಫೈ ಬಳಕೆ ಮಾಡಿಕೊಳ್ಳಬಹುದಾಗಿದೆ.
300 ಕಡೆಗಳಲ್ಲಿ ಉಚಿತ ವೈ–ಫೈ ಸೌಲಭ್ಯ:
ನಗರದ ವಿವಿಧ 300 ಕಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಬಿಬಿಎಂಪಿ ನೀಡಲಿದೆ ಎನ್ನಲಾಗಿದೆ. ಪ್ರತಿಯೊಂದು ಕಡೆಗಳಲ್ಲಿ ವೈ-ಫೈ ಅಳವಡಿಸಲು ರೂ.12-15 ಸಾವಿರ ವೆಚ್ವವಾಗಲಿದೆ ಎಂದು ಅಂದಾಜಿಸಲಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.