251 ರೂ.ಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ!..ಆದ್ರೆ ಕಂಪೆನಿ ನಿರ್ದೇಶಕ ಅರೆಸ್ಟ್!!

Written By:

ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಗೆ "ಫ್ರೀಡಂ 251" ಸ್ಮಾರ್ಟ್‌ಫೋನ್ ನೀಡುವುದಾಗಿ ಹೇಳಿದ್ದ ನೋಯ್ಡಾ ಮೂಲದ ಕಂಪೆನಿ ರಿಂಗಿಂಗ್ ಬೆಲ್ಸ್ ಕಂಪೆನಿ ಫ್ರೀಡಂ 251 ಸ್ಮಾರ್ಟ್‌ಫೋನ್ ರೀತಿಯಲ್ಲಿಯೇ ಮತ್ತೊಂದು ಕಪ್ಪು ಬಣ್ಣದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಆದರೆ ಕಂಪೆನಿಯ ನಿರ್ದೇಶಕ ಮೋಹಿತ್ ಗೊಯಲ್ ಅರೆಸ್ಟ್ ಆಗಿದ್ದಾನೆ.!!

ಗಾಜಿಯಾಬದ್ ಮೂಲದ ಅಯ್ಯಮ್ ಎಂಟರ್‌ಪ್ರೈಸ್ ರಿಂಗಿಂಗ್ ಬೆಲ್ಸ್ ಕಂಪೆನಿ ವಿರುದ್ದ ವಂಚನೆ ಪ್ರಕರಣವನ್ನು ದಾಖಲಿಸಿದ್ದು, ಅಯ್ಯಮ್ ಎಂಟರ್‌ಪ್ರೈಸ್ ಕಂಪೆನಿಗೆ 30 ಲಕ್ಷ ರೂ,ಗಳನ್ನು ವಂಚಿಸಿರುವ ಆರೋಪದಡಿಯಲ್ಲಿ ಪೋಲಿಸರು ಮೋಹಿತ್ ಗೊಯಲ್‌ನನ್ನು ಅರಸ್ಟ್ ಮಾಡಿದ್ದಾರೆ.

 251 ರೂ.ಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ! ಕಂಪೆನಿ ನಿರ್ದೇಶಕ ಅರೆಸ್ಟ್!!

ಭಾರತದಲ್ಲಿ ಹೆಚ್ಚು ಡೇಟಿಂಗ್ ಆಪ್‌ ಬಳಸುವವರು ಯಾರು ಗೊತ್ತಾ?

ಈ ಬಗ್ಗೆ ಗಾಜಿಯಾಬಾದ್ ಡೆಪ್ಯುಟಿ ಎಸ್‌ಪಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಈ ವಂಚನೇ ಸೇರಿ ಇತರ ವಂಚನೆ ಪ್ರಕರಣಗಳು ಸಹ ರಿಂಗಿಂಗ್ ಬೆಲ್ಸ್ ಕಂಪೆನಿ ವಿರುದ್ದ ದಾಖಲಾಗಿದ್ದು, ಇವುಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

 251 ರೂ.ಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ! ಕಂಪೆನಿ ನಿರ್ದೇಶಕ ಅರೆಸ್ಟ್!!

ಫ್ರೀಡಂ 251 ಸ್ಮಾರ್ಟ್‌ಫೋನ್ ರೀತಿಯಲ್ಲಿಯೇ ಮತ್ತೊಂದು ಕಪ್ಪು ಬಣ್ಣದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ರಿಂಗಿಂಗ್ ಬೆಲ್ಸ್ ಕಂಪೆನಿ ಪ್ರಯತ್ನಿಸಿತ್ತು ಎನ್ನಲಾಗಿದ್ದು, ಈಗಾಗಲೇ ಸುಮಾರು 7 ಕೋಟಿಗೂ ಹೆಚ್ಚು ಜನರು ಬುಕ್ ಮಾಡಿರುವ ಫ್ರೀಡಂ 251 ಕಥೆಗೆ ಸ್ಪೂರ್ತಿಯಾಗಿದೆ.!!

English summary
The new look of the Ringing Bells Freedom 251, now in black. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot