ಫ್ಯೂಜಿಫಿಲ್ಮ್‌ ನಿಂದ ಹೊಸ ಲೆನ್ಸ್‌ ಲಾಂಚ್‌; ಸಖತ್‌ ಆಗಿ ಫೋಟೋಗ್ರಫಿ ಮಾಡಬಹುದು!

|

ಭಾರತದಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿಯು ಈ ಹಿಂದೆ ಹೊಸ ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಪರಿಚಯಿಸಿ ಭಾರೀ ಜನಮನ್ನಣೆ ಪಡೆದಿದ್ದು. ಈ ಕ್ಯಾಮೆರಾ ಫ್ಯೂಜಿಫಿಲ್ಮ್‌ ಸ್ವಾಮ್ಯದ ಕಲರ್‌ ರಿಪ್ರೊಡಕ್ಷನ್‌ ಟೆಕ್ನಾಲಜಿಯನ್ನು ಹೊಂದಿದೆ. ಹಾಗೆಯೇ ಸ್ಟಿಲ್‌ಗಳು ಮತ್ತು ವಿಡಿಯೋಗಳೆರಡರಲ್ಲೂ ಅತ್ಯುತ್ತಮವಾದ ಚಿತ್ರದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಇದರ ನಡುವೆ ಈಗ ಈ ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾಗಳಿಗೆ ಹೊಸ ಎರಡು ಲೆನ್ಸ್‌ ಅನ್ನು ಪರಿಚಯಿಸಿದೆ.

ಫ್ಯೂಜಿಫಿಲ್ಮ್

ಹೌದು, ಫ್ಯೂಜಿಫಿಲ್ಮ್ ತನ್ನ X ಸರಣಿಯ ಮಿರರ್‌ಲೆಸ್‌ ಡಿಜಿಟಲ್ ಕ್ಯಾಮೆರಾಗಳಿಗಾಗಿ ಎರಡು ಹೊಸ ಲೆನ್ಸ್‌ಗಳನ್ನು ಲಾಂಚ್‌ ಮಾಡಿದ್ದು, ಇದಕ್ಕೆ ಫ್ಯೂಜಿಫಿಲ್ಮ್ XF56mm F1.2 R WR ಹಾಗೂ XF30mmF2.8 R LM WR ಮ್ಯಾಕ್ರೋ ಎಂದು ಹೆಸರಿಸಲಾಗಿದೆ. ಈ ಎರಡೂ ಲೆನ್ಸ್‌ಗಳು X ಸರಣಿಯ ಮಿರರ್‌ಲೆಸ್‌ ಡಿಜಿಟಲ್ ಕ್ಯಾಮೆರಾಗಳಿಗಾಗಿ ವಿನ್ಯಾಸಗೊಳಿಸಲಾದ XF ಲೆನ್ಸ್‌ಗಳ ಶ್ರೇಣಿಗೆ ಸೇರ್ಪಡೆಯಾಗಿವೆ. ಹಾಗಿದ್ರೆ, ಈ ಲೆನ್ಸ್‌ಗಳ ಕಾರ್ಯವೈಖರಿ ಹೇಗಿದೆ?, ಭಾರತದಲ್ಲಿ ಇವುಗಳ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

XF56mm F1.2 R WR ನ ಪ್ರಮುಖ ಫೀಚರ್ಸ್‌

XF56mm F1.2 R WR ನ ಪ್ರಮುಖ ಫೀಚರ್ಸ್‌

XF56mm F1.2 R WR 56mm ನ ಮಿಡ್‌ ಟೆಲಿಫೋಟೋ ಫೋಕಲ್ ಲೆಂಥ್‌ ಹೊಂದಿರುವ ವೇಗದ ಪ್ರೈಮ್ ಲೆನ್ಸ್ ಆಗಿದೆ. ಅಂದರೆ 35mm ಸ್ವರೂಪದಲ್ಲಿ 85mm ಗೆ ಸಮನಾಗಿರುತ್ತದೆ ಎಂದರ್ಥ. ಈ ಲೆನ್ಸ್ ಕನಿಷ್ಠ 50 ಸೆಂ.ಮೀ ಕೇಂದ್ರೀಕರಿಸುವ ದೂರ, ಚಿತ್ರ ಪರಿಹರಿಸುವ ಕಾರ್ಯಕ್ಷಮತೆ ಹಾಗೂ ಔಟ್ ಆಫ್ ಫೋಕಸ್ ಬ್ಯಾಗ್ರೌಂಡ್ ರೆಂಡರಿಂಗ್ ನಲ್ಲಿ ಗಮನಾರ್ಹ ಬದಲಾವಣೆ ನೀಡಲಿದೆ.

ಲೆನ್ಸ್‌

ಇದರೊಂದಿಗೆ ಈ ಲೆನ್ಸ್‌ ಮೂಲಕ ಫ್ಯೂಜಿಫಿಲ್ಮ್ ಟೇಬಲ್ ಟಾಪ್ ಫೋಟೋಗ್ರಫಿ ವಿಷಯದಲ್ಲಿ ಕನಿಷ್ಠ ಫೋಕಸಿಂಗ್ ಅಂತರವನ್ನು ಸುಧಾರಿಸಿದೆ. ಹಾಗೆಯೇ ಬೀದಿ ಛಾಯಾಗ್ರಹಣ ಸೇರಿದಂತೆ ವಿವಿಧ ರೀತಿಯ ಶೂಟಿಂಗ್ ಸಂದರ್ಭಗಳಲ್ಲಿ ಇದು ಹೆಚ್ಚಿನ ಆಕರ್ಷಕ ಅನುಭವ ನೀಡಲಿದೆ ಎಂದು ಕಂಪೆನಿಯೇ ತಿಳಿಸಿದೆ.

XF30mmF2.8 R LM WR ಮ್ಯಾಕ್ರೋ ಫೀಚರ್ಸ್‌ ಏನು?

XF30mmF2.8 R LM WR ಮ್ಯಾಕ್ರೋ ಫೀಚರ್ಸ್‌ ಏನು?

XF30mmF2.8 R LM WR ಮ್ಯಾಕ್ರೋ 30mm ಫೋಕಲ್ ಲೆಂಥ್‌ ಆಯ್ಕೆ ಪಡೆದುಕೊಂಡಿದೆ. ಅಂದರೆ ಇದು 35mm ಫಿಲ್ಮ್ ಫಾರ್ಮ್ಯಾಟ್‌ನಲ್ಲಿ 46mm ಗೆ ಸಮನಾಗಿರುತ್ತದೆ. ಇನ್ನುಳಿದಂತೆ ಇದು ಸ್ಟ್ಯಾಂಡರ್ಡ್ ಪ್ರೈಮ್ ಲೆನ್ಸ್ ಆಗಿದ್ದು, ಸದ್ಯಕ್ಕೆ ಬಳಕೆಯಲ್ಲಿರುವ ಸಾಂಪ್ರದಾಯಿಕ ಸ್ಟ್ಯಾಂಡರ್ಡ್ ಲೆನ್ಸ್‌ಗಳಿಗೆ ಹೋಲಿಕೆ ಮಾಡಿದರೆ ಈ ಲೆನ್ಸ್‌ 3.9 ಇಂಚುಗಳಷ್ಟು ಗಣನೀಯವಾಗಿ ಕಡಿಮೆಯಾದ ಕನಿಷ್ಠ ವರ್ಕಿಂಗ್‌ ಡಿಸ್ಟೆನ್ಸ್‌ ಹೊಂದಿದೆ. ಹಾಗೆಯೇ ಹೆಚ್ಚು ಸುಧಾರಿತ ಕ್ಲೋಸ್ ಅಪ್ ಕಾರ್ಯಕ್ಷಮತೆಯ ಅಯ್ಕೆ ಪಡೆದುಕೊಂಡಿದ್ದು, 1:1 ಮ್ಯಾಗ್ನಿಫಿಕೇಶನ್ ರೇಟಿಯೋನಲ್ಲಿ ಮ್ಯಾಕ್ರೋ ಫೋಟೋಗ್ರಫಿ ಸಾಮರ್ಥ್ಯದ ಫೀಚರ್ಸ್‌ ಪಡೆದುಕೊಂಡಿದೆ.

ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ

ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ

ಈ ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಹಲವು ಫೀಚರ್ಸ್‌ ಗಳನ್ನು ಪಡೆದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಆಟೋ-ಫೋಕಸ್ ಡೀಪ್ ಲರ್ನಿಂಗ್ ಟೆಕ್ನಾಲಜಿ ಆಧಾರದ ಮೇಲೆ ಕಂಟೆಂಟ್‌ ಅನ್ನು ಆಟೋ ಫೋಕಸ್‌ ಮಾಡುತ್ತದೆ. ಹಾಗೆಯೇ ಸ್ಟಿಲ್ ಇಮೇಜ್‌ಗಳು ಮತ್ತು ಫಿಲ್ಮ್‌ಗಳಲ್ಲಿ ಕಂಟೆಂಟ್ ರಚನೆಗಾಗಿ X ಸರಣಿಯ ಸಾಮರ್ಥ್ಯವನ್ನು ಹೆಚ್ಚಿಸಲು ಇದರಲ್ಲಿ ಇನ್‌ಬಿಲ್ಟ್‌ 8K/30P ರೆಕಾರ್ಡಿಂಗ್ ಅನ್ನು ಆಯ್ಕೆಯನ್ನು ಇದು ಪಡೆದುಕೊಂಡಿದೆ. ಈ ಕ್ಯಾಮೆರಾವನ್ನು ಫ್ಯೂಜಿಫಿಲ್ಮ್‌ ಈ ತಿಂಗಳ ಆರಂಭದಲ್ಲಿ ಲಾಂಚ್‌ ಮಾಡಿತ್ತು.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಫ್ಯೂಜಿಫಿಲ್ಮ್ XF56mmF1.2 R WR ಬೆಲೆ 1,04,999 ರೂ. ಗಳಾಗಿದೆ. ಹಾಗೆಯೇ XF30mmF2.8 R ಮ್ಯಾಕ್ರೋ ಬೆಲೆ 61,999 ರೂ. ಗಳು. ಈ ಎರಡೂ ಲೆನ್ಸ್‌ಗಳು ಫ್ಯೂಜಿಫಿಲ್ಮ್ನ ಅಧಿಕೃತ ರಿಟೇಲರ್‌ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ.

Best Mobiles in India

English summary
Fujifilm Launches Two New Lenses for X Series Mirrorless Digital Cameras.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X