ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್‌; ಭಾರತದಲ್ಲಿ ಅಂದಾಜು ಬೆಲೆ ಇಷ್ಟು!?

|

ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಯಾಮ್‌ಸಂಗ್‌ ಗ್ಯಾಲ್ಸಕಿ ಫೋನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ಫೋನ್‌ಗಳ ಬ್ಯಾಟರಿ ಸಾಮರ್ಥ್ಯ ಹಾಗೂ ಪ್ರೊಸೆಸರ್‌ , ಕ್ಯಾಮೆರಾ ಆಯ್ಕೆ ಗ್ರಾಹಕರನ್ನು ಇನ್ನಷ್ಟು ಹೆಚ್ಚಾಗಿ ಸೆಳೆಯುವಂತೆ ಮಾಡುತ್ತಿದೆ. ಅದರಂತೆ ಸ್ಯಾಮ್‌ಸಂಗ್ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಇದೀಗ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ ಬಗ್ಗೆ ಘೋಷಣೆ ಮಾಡಿದೆ. ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಫೋನ್‌ ಬಗ್ಗೆಯೂ ಟೆಕ್‌ ವಲಯದಲ್ಲಿ ಮಾಹಿತಿ ಹರಿದಾಡುತ್ತಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G (Samsung Galaxy A14 5G) ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲೇ ಇದರ ಕೆಲ ಫೀಚರ್ಸ್‌ ಲೀಕ್‌ ಆಗಿವೆ. ಲೀಕ್‌ ಆದ ಫೀಚರ್ಸ್‌ ನಂತೆ ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಆಯ್ಕೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಇದರ ಇತರೆ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಅಂದಾಜು ಬೆಲೆ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್ 6.8 ಇಂಚಿನ IPS LCD + ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಕ್ಯಾಮೆರಾ ಉದ್ದೇಶಕ್ಕೆ ಈ ಡಿಸ್‌ಪ್ಲೇ ಡ್ರಾಪ್ ನಾಚ್ ಆಯ್ಕೆಯನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಫೋನ್‌ Exynos 1330 ಚಿಪ್‌ಸೆಟ್‌ನೊಂದಿಗೆ ಮೊದಲ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ Exynos 1330 ಅನ್ನು ಬಳಸುವ ಗ್ಯಾಲಕ್ಸಿ A14 5G ಬಗ್ಗೆ ಗೀಕ್‌ಬೆಂಚ್‌ನ ಡೇಟಾಬೇಸ್‌ನಲ್ಲಿ ಮಾಹಿತಿ ದಾಖಲಾಗಿದೆ. ಈ ಚಿಪ್‌ಸೆಟ್‌ಗೆ S5E8535 ಎಂಬ ಸಂಕೇತನಾಮವಿದ್ದು, ಇದು 2.4GHz ನಲ್ಲಿ ಕ್ಲಾಕ್ ಮಾಡಲಾದ ಎರಡು ಉನ್ನತ ಮಟ್ಟದ CPU ಕೋರ್‌ಗಳನ್ನು ಮತ್ತು 2GHz ನಲ್ಲಿ ಕ್ಲಾಕ್ ಮಾಡಲಾದ ಆರು ಶಕ್ತಿ ಸಮರ್ಥ CPU ಕೋರ್‌ಗಳನ್ನು ಹೊಂದಿದೆ.

ಮಾಲಿ

ಈ ಫೋನ್‌ ARM ಮಾಲಿ G68 GPU ಬಲ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಗೀಕ್‌ಬೆಂಚ್‌ನ ಸಿಂಗಲ್ ಕೋರ್ CPU ಪರೀಕ್ಷೆಯಲ್ಲಿ ಫೋನ್ 770 ಅಂಕಗಳನ್ನು ಮತ್ತು ಮಲ್ಟಿ ಕೋರ್ CPU ಪರೀಕ್ಷೆಯಲ್ಲಿ 2,151 ಅಂಕಗಳನ್ನು ಗಳಿಸಿಕೊಂಡಿದೆ. ಹಾಗೆಯೇ 4GB RAM ವೇರಿಯಟ್‌ನಲ್ಲಿ ಕಂಡುಬರಲಿದೆ ಎನ್ನಲಾಗಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಡಿವೈಸ್‌ನ ಬಲಭಾಗದಲ್ಲಿ ವಾಲ್ಯೂಮ್ ರಾಕರ್‌ಗಳು ಮತ್ತು ಪವರ್ ಬಟನ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಹೊಂದಿರಲಿದೆ ಎಂದು ಲೀಕ್‌ ಆದ ಫೋಟೋದಿಂದ ತಿಳಿದುಬಂದಿದೆ.

ಕ್ಯಾಮೆರಾ ರಚನೆ ಮತ್ತು ಇತರೆ

ಕ್ಯಾಮೆರಾ ರಚನೆ ಮತ್ತು ಇತರೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿರಲಿದ್ದು, ಇದರಲ್ಲಿ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸರ್‌ ಹೊಂದಿದೆ. ಜೊತೆಗೆ ಸೆಲ್ಪಿಗಾಗಿ 13 ಮೆಗಾಪಿಕ್ಸೆಲ್‌ ಆಯ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ವೈ-ಫೈ ಬಿ/ಜಿ/ಎನ್, ಬ್ಲೂಟೂತ್ ಆವೃತ್ತಿ 5.2 , ಯುಎಸ್‌ಬಿ ಟೈಪ್-ಸಿ ಪೋರ್ಟ್ ಕನೆಕ್ಟಿವಿಟಿ ಆಯ್ಕೆಯನ್ನು ಇದು ಪಡದುಕೊಂಡಿರಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಸ್ಮಾರ್ಟ್‌ಫೋನ್‌ಗೆ ಅಂದಾಜು €230 ಇದು ಬೆಲೆ ಇರಬಹುದು ಎಂದು ಹೇಳಲಾಗುತ್ತಿದೆ. ಈ ಬೆಲೆ ನಿಗದಿಯಾದರೆ ಭಾರತದಲ್ಲಿ ಈ ಫೋನ್‌ 19,478 ರೂ. ಗಳಿಗೆ ಲಭ್ಯವಾಗಲಿದೆ. ಇನ್ನು 2023 ರ ಮೊದಲಾರ್ಧದಲ್ಲಿ ಜಾಗತಿಕವಾಗಿ ಲಾಂಚ್‌ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Galaxy A14 5G could be the first smartphone with Exynos 1330 processor .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X