Subscribe to Gizbot

ಗ್ಯಾಂಗ್ನಂನಿಂದ ಯೂ ಟ್ಯೂಬ್‌ಗೆ ಕೋಟಿ ಕೋಟಿ ಹಣ

Posted By:

ಗ್ಯಾಂಗ್ನಂ ಡ್ಯಾನ್ಸ್ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದೆ. ಗ್ಯಾಂಗ್ನಂ ಡ್ಯಾನ್ಸ್‌ ವಿಡಿಯೋದಿಂದಲೇ ಯೂಟ್ಯೂಬ್‌ 8 ಲಕ್ಷ ಡಾಲರ್‌ ಸಂಪಾದಿಸಿದೆ. ದಕ್ಷಿಣ ಕೊರಿಯಾ ಮೂಲದ ಪಾಪ್‌ ಗಾಯಕನಾದ ಸಯೀ (PSY) ಅವರ ಗ್ಯಾಂಗ್ನಂಡ್ಯಾನ್ಸ್ ವಿಡಿಯೋವನ್ನು ವಿಶ್ವದಾದ್ಯಂತ ಬರೊಬ್ಬರಿ 123 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಗೂಗಲ್‌ನ ಟಾಪ್‌ 25 ಜಾಹೀರಾತು ಸಂಸ್ಥೆಗಳು ಗ್ಯಾಂಗ್ನಂ ಡ್ಯಾನ್ಸ್‌ ಪ್ಲೇ ಆಗುವ ಮೊದಲು ಬರುವ ಜಾಹೀರಾತಿಗಾಗಿ ಒಪ್ಪಂದ ಮಾಡಿಕೊಂಡಿದ್ದು, ಈ ಜಾಹೀರಾತಿನಿಂದಲೇ ಯೂಟ್ಯೂಬ್‌ 150 ಮಿಲಿಯನ್‌ ಡಾಲರ್‌ ಸಂಪಾದಿಸಲಿದೆ ಎಂದು ಗೂಗಲ್‌ನ ಮಾರುಕಟ್ಟೆಯ ಮುಖ್ಯ ಅಧಿಕಾರಿ ನಿಕೀಶ್‌ ಅರೋರ ಹೇಳಿದ್ದಾರೆ.

ಗ್ಯಾಂಗ್ನಂ ವಿಡಿಯೋ ಮೊದಲು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿದ್ದು 2012r ಜುಲೈ 21 ರಂದು. ಅಲ್ಲಿಂದ ಇಲ್ಲಿಯವರೆಗೆ 123 ಕೋಟಿ ಮಂದಿ ವೀಕ್ಷಿಸಿದ್ದು. ಪ್ರತಿದಿನ ದಿನ ಇದನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇಷ್ಟೇ ಅಲ್ಲದೇ 'ಗ್ಯಾಂಗ್ನಂ ಸ್ಟೈಲ್‌'ನ್ನು 2012 ವರ್ಷದ ಪದ ಎಂದುಇಂಗ್ಲಿಷ್‌ನ ಕೊಲ್ಲಿನ್ಸ್‌ ಡಿಕ್ಷನರಿ ತನ್ನ ಡಿಕ್ಷನರಿಯಲ್ಲಿ ಸೇರಿಸಿದೆ.

ಟಿ -20 ವಿಶ್ವಕಪ್‌ ಕ್ರಿಕೆಟ್‌ ಸಂದರ್ಭದಲ್ಲಿ ಗ್ಯಾಂಗ್ನಂ ಸ್ಟೈಲ್‌ ಇನ್ನಷ್ಟು ಹೆಚ್ಚು ಪ್ರಸಿದ್ದಿಯಾಯಿತು. ಕ್ರೀಸ್‌ಗೇಲ್‌ ಜನಪ್ರಿಯಗೊಳಿಸಿದ್ದ ಈ ಡ್ಯಾನ್ಸ್‌ನ್ನು ವಿಶ್ವಕಪ್‌ ಗೆದ್ದ ಬಳಿಕ ವೆಸ್ಟ್‌ಇಂಡೀಸ್‌ ತಂಡ ಗ್ಯಾಂಗ್ನಂ ನೃತ್ಯ ಮಾಡುವುದರ ಮೂಲಕ ತನ್ನ ವಿಜಯೋತ್ಸವವನ್ನು ಆಚರಿಸಿದ್ದರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot