ಗಾರ್ಮಿನ್‌ನಿಂದ ಮತ್ತೆ ಎರಡು ಸ್ಮಾರ್ಟ್‌ವಾಚ್‌ ಬಿಡುಗಡೆ: ಭಿನ್ನ ಫೀಚರ್ಸ್‌ ಆಯ್ಕೆ!

|

ಗಾರ್ಮಿನ್ ಕಂಪೆನಿ ಸ್ಮಾರ್ಟ್‌ವಾಚ್‌ ತಯಾರಿಕಾ ವಿಭಾಗದಲ್ಲಿ ಅದರಲ್ಲೂ ದುಬಾರಿ ಬೆಲೆಯ ವಾಚ್‌ಗಳನ್ನು ಪರಿಚಯಿಸಿ ಹೆಸರುಗಳಿಸಿದೆ. ಈಗ ಕಂಪೆನಿಯು ಈ ಎಲ್ಲಾ ಮೇಲ್ವಿಚಾರಣೆ ಫೀಚರ್ಸ್‌ ಜೊತೆಗೆ ಮತ್ತೊಂದಷ್ಟು ಸುಧಾರಿತ ಫೀಚರ್ಸ್‌ ಇರುವ ಎರಡು ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ವಾಚ್‌ಗಳು ಒಂದಕ್ಕೊಂದು ಭಿನ್ನ ಪೀಚರ್ಸ್‌ ಪಡೆದುಕೊಂಡಿವೆ.

 ಗಾರ್ಮಿನ್ ವೆನು

ಹೌದು, ಗಾರ್ಮಿನ್‌ ಕಂಪೆನಿಯಿಂದ ಗಾರ್ಮಿನ್ ವೆನು Sq2 ಮತ್ತು ವೆನು Sq2 ಮ್ಯೂಸಿಕ್ ಆವೃತ್ತಿಯ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಭಾರತದಲ್ಲಿ ಸ್ಮಾರ್ಟ್ವಾಚ್ ಶ್ರೇಣಿಯನ್ನು ಗಾರ್ಮಿನ್ ವಿಸ್ತರಿಸಿಕೊಂಡಿದೆ. ಈ ಸ್ಮಾರ್ಟ್‌ವಾಚ್‌ಗಳು ಪ್ರಮುಖವಾಗಿ GPS ಫೀಚರ್ಸ್‌ ಪಡೆದಿವೆ. ಅದರಲ್ಲೂ ದಿನದ ಎಲ್ಲಾ ಸಮಯದಲ್ಲೂ ಆರೋಗ್ಯ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಪಡೆದುಕೊಂಡಿವೆ.

ಮ್ಯೂಸಿಕ್

ಇನ್ನು Sq2 ಮ್ಯೂಸಿಕ್ ಆವೃತ್ತಿಯ ಸ್ಮಾರ್ಟ್‌ವಾಚ್‌ ಮೂಲಕ ಸಂಗೀತ ಆಲಿಸಬಹುದಾಗಿದ್ದು, ಇದರಲ್ಲಿ ಸ್ಪೀಕರ್‌ ಸಹ ಇದೆ. ಇನ್ನು ಬರೋಬ್ಬರಿ 500 ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇತರೆ ಮ್ಯೂಸಿಕ್‌ ಆಪ್‌ಗಳ ಮೂಲಕವೂ ಇಷ್ಟದ ಸಂಗೀತ ಟ್ಯೂನ್‌ ಮಾಡಬಹುದು. ಹಾಗಿದ್ರೆ ಮತ್ಯಾಕೆ ತಡ, ಈ ಸ್ಮಾರ್ಟ್‌ವಾಚ್‌ಗಳ ಬೆಲೆ ಎಷ್ಟು?, ಫೀಚರ್ಸ್‌ ಏನು? ಎಂಬ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಗಾರ್ಮಿನ್ ವೆನು Sq2 ಮತ್ತು ವೆನು Sq2 ಮ್ಯೂಸಿಕ್ ಆವೃತ್ತಿಯ ಸ್ಮಾರ್ಟ್‌ವಾಚ್‌ಗಳು 1.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 320 x 360 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿವೆ. ಹಾಗೆಯೇ ಹಗುರವಾದ ಅಲ್ಯೂಮಿನಿಯಂ ಚಾಸಿಸ್ ಅನ್ನು ಪಡೆದಿವೆ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಈ ಎರಡೂ ವಾಚ್‌ಗಳು ಸಹ ವಿವಿಧ ಫೀಚರ್ಸ್‌ ಪಡೆದುಕೊಂಡಿವೆ. ಅದರಲ್ಲಿ ಮ್ಯೂಸಿಕ್ ಆವೃತ್ತಿಯ ವಾಚ್‌ನಲ್ಲಿ ಸ್ಪೀಕರ್‌ ಆಯ್ಕೆ ನೀಡಲಾಗಿದೆ. ಹಾಗೆಯೇ ಹಾಡುಗಳನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಬ್ಲೂಟೂತ್‌ ಕನೆಕ್ಟಿವಿಟಿ ಮೂಲಕ ಹೆಡ್‌ಫೋನ್‌ ಅಥವಾ ಇಯರ್‌ಫೋನ್‌ಗಳಲ್ಲಿ ಸಂಗೀತ ಆಲಿಸಬಹುದು.

ಅಪ್‌ಗ್ರೇಡ್‌

ಈ ಸ್ಮಾರ್ಟ್‌ವಾಚ್‌ಗಳು ಅಪ್‌ಗ್ರೇಡ್‌ ಆಗಿರುವ 4ನೇ ಜನ್‌ ಫೀಚರ್ಸ್‌ ಹೊಂದಿರುವ ಸೆನ್ಸರ್‌ನಲ್ಲಿ ಹೃದಯ ಬಡಿತದ ಮೇಲ್ವಿಚಾರಣೆ ಮಾಡುವುದರೊಂದಿಗೆ ಚಟುವಟಿಕೆಗಳ ಟ್ರ್ಯಾಕಿಂಗ್ ಸಮಯದಲ್ಲಿ ವಿವರವಾದ ಡೇಟಾವನ್ನು ಒದಗಿಸಲು ಬೀಟ್-ಬೈ-ಬೀಟ್ ಆಧಾರಿತ ವಿಧಾನವನ್ನು ಬಳಸುತ್ತದೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಟ್ರ್ಯಾಕ್ ಮಾಡುವುದು ಇವುಗಳ ಮತ್ತೊಂದು ವಿಶೇಷ. ಹಾಗೆಯೇ ದೇಹವು ಶಕ್ತಿಶಾಲಿಯಾಗಿದೆಯಾ ಅಥವಾ ದಣಿದಿದೆಯಾ, ದೇಹಕ್ಕೆ ವಿಶ್ರಾಂತಿ ಬೇಕಾಗಿದೆಯಾ ಎಂಬಿತ್ಯಾದಿ ಮಾಹಿತಿಯನ್ನು ನಿರಂತರವಾಗಿ ನೀಡುತ್ತಿರುತ್ತವೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಸ್ಮಾರ್ಟ್‌ವಾಚ್‌ಗಳು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿವೆ. ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 11 ದಿನಗಳ ವರೆಗೆ ಬಳಕೆ ಮಾಡಬಹುದು. ಹಾಗೆಯೇ ಇದರಲ್ಲಿ ಬ್ಯಾಟರಿ ಸೇವರ್ ಮೋಡ್‌ ಸಹ ಇದ್ದು, ಇದರಿಂದ ಒಂದು ಚಾರ್ಜ್‌ನಲ್ಲಿ ಒಂದು ದಿನದವರೆಗೆ ಹೆಚ್ಚುವರಿಯಾಗಿ ಬಳಕೆ ಮಾಡಬಹುದಾಗಿದೆ. ಇನ್ನು 25 ಇನ್‌ಬಿಲ್ಟ್‌ ಅಪ್ಲಿಕೇಶನ್‌ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ GPS, ರನ್ನಿಂಗ್, ಸೈಕ್ಲಿಂಗ್, ಟೆನ್ನಿಸ್ ಮತ್ತು ಇನ್ನಿತರೆ ಒಳಾಂಗಣ ಕ್ರೀಡಾ ಅಪ್ಲಿಕೇಶನ್‌ ಇವೆ. ಈ ವಾಚ್‌ಗಳು ಆಂಡ್ರಾಯ್ಡ್‌ ಹಾಗೂ ಐಓಎಸ್ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್‌ ಮಾಡಲಿವೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ವೇಣು Sq2 ಸ್ಮಾರ್ಟ್‌ವಾಚ್‌ಗೆ 27,990ರೂ.ಗಳನ್ನು ನಿಗದಿ ಮಾಡಲಾಗಿದ್ದು, ವೇಣು Sq2 ಮ್ಯೂಸಿಕ್‌ ಆವೃತ್ತಿ ಸ್ಮಾರ್ಟ್‌ವಾಚ್‌ಗೆ 33,490ರೂ. ನಿಗದಿ ಮಾಡಲಾಗಿದೆ. ಈ ತಿಂಗಳ 28 ರಿಂದ (ಅಕ್ಟೋಬರ್) ಕ್ರೋಮಾ, ಅಮೆಜಾನ್, ಫ್ಲಿಪ್‌ಕಾರ್ಟ್‌ ಹಾಗೂ ಇನ್ನಿತರೆ ಇ-ಕಾಮರ್ಸ್‌ ಸೈಟ್‌ ಹಾಗೂ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ವೇಣು Sq2 ಕೂಲ್ ಮಿಂಟ್, ಗ್ರೇ, ವೈಟ್‌ ಬಣ್ಣದಲ್ಲಿ ಲಭ್ಯವಿದ್ದರೆ Sq2 ಮ್ಯೂಸಿಕ್‌ ಆವೃತ್ತಿ ವಾಚ್‌ ಬ್ಲಾಕ್‌ ಕಲರ್‌ ನಲ್ಲಿ ಮಾತ್ರ ಲಭ್ಯ ಇದೆ.

Best Mobiles in India

English summary
Garmin company has gained a name in the smartwatch manufacturing segment. Now Garmin has launched Venu Sq2, Venu Sq2 Music Edition smartwatch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X