ಮಕ್ಕಳು ಸ್ಮಾರ್ಟ್‌ಫೋನ್‌ ಹಟಕ್ಕೆ ಬಿದ್ದಿದ್ದಾರೆಯೇ? ...ಈ 'ಆಪ್‌' ನಿಂದ ಎಲ್ಲವೂ ಬದಲಾಗಲಿದೆ!

|

ಸದ್ಯಕ್ಕೆ ಮಕ್ಕಳು ಸ್ಮಾರ್ಟ್‌ಫೋನ್‌ ಅನ್ನು ಹೆಚ್ಚಾಗಿ ಬಳಕೆ ಮಾಡುವುದು ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಮೊಬೈಲ್‌ ಕೈನಲ್ಲಿ ಇದ್ದರಷ್ಟೇ ಊಟ ಮಾಡುವುದು ಎಂಬ ಹಠಕ್ಕೆ ಬಿದ್ದಿರುವುದು ತಂದೆ ತಾಯಿಗಳಿಗೆ ಒಂದು ರೀತಿಯ ಬಾಧೆಯಾಗಿದೆ. ಅದಾಗ್ಯೂ ಈ ವಿಷಯದ ಬಗ್ಗೆ ತಿಳಿಸಿಕೊಂಡರೆ ನೀವೇ ನಿಮ್ಮ ಮಕ್ಕಳಿಗೆ ಮೊಬೈಲ್‌ ಕೊಡುತ್ತೀರ. ಹಾಗೆಯೇ ಅವರ ಬೆಳವಣಿಗೆಗೆ ಸಹಕರಿಸುತ್ತೀರ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಚಿಕ್ಕಮಕ್ಕಳಿಗಷ್ಟೇ ಅಲ್ಲದೆ ಅತಿಯಾಗಿ ಬಳಕೆ ಮಾಡಿದರೆ ದೊಡ್ಡವರಿಗೂ ಸಮಸ್ಯೆ ಎದುರಾಗುತ್ತವೆ. ಅಂತಹುದರಲ್ಲಿ ಮಕ್ಕಳಿಗೆ ಹೇಗೆ ಮೊಬೈಲ್‌ ಕೊಡಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿರಬಹುದು. ಇದಕ್ಕೆಂದೆ ಮಕ್ಕಳ ಕಾಳಜಿ ಹಾಗೂ ಆರೈಕೆಯನ್ನು ಅರ್ಥ ಮಾಡಿಕೊಂಡು ಹೊಸ ಆಪ್‌ ಒಂದನ್ನು ರಚಿಸಲಾಗಿದೆ. ಈ ಆಪ್‌ ನಿಮ್ಮ ಮಕ್ಕಳು ಕೇವಲ ರೀಲ್ಸ್‌ ಅಥವಾ ಗೇಮ್‌ ಆಡಿಕೊಂಡು ಕಾಲ ಕಳೆಯುವ ಬದಲು ಆರೋಗ್ಯಕರವಾಗಿ ಬೆಳೆಯಲು ಮುಂದಾಗುತ್ತಾರೆ. ಅದು ಹೇಗೆ ಅಂತೀರ ಈ ಲೇಖನ ಓದಿ.

ಹೊಸ ಆಪ್‌ ರಚನೆ

ಹೊಸ ಆಪ್‌ ರಚನೆ

ಈಗಾಗಲೇ ಸ್ಮಾರ್ಟ್‌ ಡಿವೈಸ್‌ನಲ್ಲಿ ಮಕ್ಕಳಿಗೆ ಉಪಯೋಗವಾಗುವ ಹಲವಾರು ಫೀಚರ್ಸ್‌ಗಳನ್ನು ನೀಡಲಾಗಿದೆ. ಹಾಗೆಯೇ ಆಪ್‌ ಸ್ಟೋರ್‌ಗಳಲ್ಲಿ ಮಕ್ಕಳ ಸಂಬಂಧ ಲಕ್ಷಾಂತರ ಆಪ್‌ಗಳು ಲಭ್ಯ ಇವೆ. ಆದರೂ ಮಕ್ಕಳು ಮಾತ್ರ ಅವುಗಳನ್ನು ಹೆಚ್ಚು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣದಿಂದ ಸಾಫ್ಟ್‌ವೇರ್‌ ಡೆವಲಪರ್‌ ಆಂಡ್ರ್ಯೂ ಹಾಲ್ ಅವರು ಹೊಸ ಆಪ್‌ ಜೆನ್‌ಮೂವ್‌ (GenMove) ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ಆಪ್‌ ಮಕ್ಕಳನ್ನು ಫೋನ್‌ನಿಂದ ದೂರ ಇರಿಸುವುದಿಲ್ಲ..

ಈ ಆಪ್‌ ಮಕ್ಕಳನ್ನು ಫೋನ್‌ನಿಂದ ದೂರ ಇರಿಸುವುದಿಲ್ಲ..

ಈ ಹೊಸ ಆಪ್‌ ಮಕ್ಕಳನ್ನು ದೂರ ಸರಿಸದೆ ಅವರ ದೈಹಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಹೆಚ್ಚು ಸಹಾಯಕವಾಗಿದೆ. ಈ ಆಪ್‌ ಹೊರಾಂಗಣದಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಮಕ್ಕಳು ಹೆಚ್ಚು ಸಕ್ರಿಯರಾಗಿರಲು ಸಹಕಾರಿಯಾಗಿದೆ.

ಇಂದು ಮಕ್ಕಳು ಮನೆಯಿಂದ ಆಚೆಯೇ ಬರುವುದಿಲ್ಲ

ಇಂದು ಮಕ್ಕಳು ಮನೆಯಿಂದ ಆಚೆಯೇ ಬರುವುದಿಲ್ಲ

ಈ ಹಿಂದೆ ಮಕ್ಕಳು ಹೊರಗೆ ಹೋದರೆ ಮನೆಗೆ ಬರಲು ಅಳುತ್ತಿದ್ದರು, ಆದರೆ ಇಂದು ಮನೆಯಿಂದ ಹೊರಹೋಗಲು ಅಳುತ್ತಾರೆ. ಇದಕ್ಕೆಲ್ಲಾ ಕಾರಣ ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಡಿವೈಸ್‌ಗಳು. ಅಂತೆಯೇ ವಿವಿಧ ರೀತಿಯ ಹೊರಾಂಗಣ ಆಟಗಳನ್ನು ಆಡದೆ ಹೊರಗುಳಿಯದಿರುವುದು ನಿಜವಾದ ಕಳವಳ ಪಡುವ ವಿಷಯವಾಗಿದೆ. ಇದರ ಬದಲಿಗೆ Roblox ಹಾಗೂ Minecraft ನಂತಹ ವರ್ಚುವಲ್ ಸ್ಪೇಸ್‌ಗಳಲ್ಲಿ ಗಂಟೆಗಟ್ಟಲೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಇದಕ್ಕೆಲ್ಲಾ ಈ ಆಪ್‌ ಕಡಿವಾಣ ಹಾಕಲಿದೆ.

ಈ ಜೆನ್‌ ಮೂವ್‌ನ ಕೆಲಸ ಏನು?

ಈ ಜೆನ್‌ ಮೂವ್‌ನ ಕೆಲಸ ಏನು?

ತಜ್ಙರ ಪ್ರಕಾರ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಹಠ ಬೀಳುವುದು ತಪ್ಪಲ್ಲ, ಆದರೆ, ಅದರಿಂದ ಮಕ್ಕಳಿಗೆ ಯಾವ ರೀತಿಯ ಜ್ಞಾನ ವೃದ್ಧಿಯಾಗುತ್ತಿದೆ ಎಂಬುದನ್ನು ಗಮನಹರಿಸಬೇಕಿದೆ. ಆದರೆ, ಈ ಆಪ್‌ ಮೂಲಕ ಮಕ್ಕಳ ಅತಿಯಾದ ಸ್ಕ್ರೀನ್ ಟೈಮ್ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಈ ಆಪ್‌ ವ್ಯಾಯಾಮಕ್ಕೆ ಸಂಬಂಧಿಸಿದ್ದಾಗಿದ್ದು, ವಿಡಿಯೋ ಗೇಮ್‌ಗಳನ್ನೇ ಬಂಡವಾಳವಾಗಿಸಿಕೊಂಡು ಮಕ್ಕಳನ್ನು ಈ ರೀತಿ ಪಳಗಿಸಬಹುದಾಗಿದೆ.

ವ್ಯಾಯಾಮ

ಈ ಆಪ್‌ ಮಕ್ಕಳಿಗೆ ವ್ಯಾಯಾಮ ಮಾಡಿಸುತ್ತದೆ, ಆಟ ಆಡಿಸುತ್ತದೆ, ಕೃತಕ ಬುದ್ಧಿಮತ್ತೆ (AI) ಮತ್ತು ಆಗ್ಮೆಂಟೆಡ್ ರಿಯಾಲಿಟಿ (AR) ಗಳ ಮೂಲಕ ಮಕ್ಕಳಿಗೆ ವಿಶೇಷ ಅನುಭವ ನೀಡುತ್ತದೆ. ಹಾಗೆಯೇ ಸ್ಮಾರ್ಟ್‌ಫೋನ್‌ನಲ್ಲಿರುವ ಸೆಲ್ಪಿ ಕ್ಯಾಮೆರಾದ ಮೂಲಕ ಈ ಆಪ್‌ ಕೆಲಸ ಮಾಡಲಿದ್ದು, ಡಿಸ್‌ಪ್ಲೇ ಮುಂದೆ ಕಾಣಿಸಿಕೊಳ್ಳುವ ಯಾವುದೇ ವಸ್ತುಗಳೊಂದಿಗೆ ಸಂವಹನ ನಡೆಸುತ್ತದೆ.

ದೇಹದ ಚಲನೆ ಮೂಲಕ ಆಟಗಳನ್ನು ಆಡಬಹುದು

ದೇಹದ ಚಲನೆ ಮೂಲಕ ಆಟಗಳನ್ನು ಆಡಬಹುದು

ಸಾಮಾನ್ಯವಾಗಿ ಮಕ್ಕಳು ಕಣ್ಣ ಸನಿಹಕ್ಕೆ ಸ್ಮಾರ್ಟ್‌ಫೋನ್‌ ತಂದು ಗೇಮ್‌ ಆಡುವುದು ನಾವು ನೀವೆಲ್ಲಾ ದಿನನಿತ್ಯ ನೋಡುವ ಸಂಗತಿ. ಆದರೆ, ಈ ಆಪ್‌ನಲ್ಲಿ ಮಕ್ಕಳ ದೇಹದ ಚಲನೆಯ ಮೂಲಕ ಆಟಗಳನ್ನು ನಿಯಂತ್ರಿಸಬಹುದಾಗಿದೆ. ಇದರಿಂದ ಮಕ್ಕಳು ಇನ್ನಷ್ಟು ಖುಷಿಯಿಂದ ಇಂತಹ ಆಟಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ.

ಈ ಆಪ್‌ನಲ್ಲಿ 50 ಆಟಗಳಿವೆ

ಈ ಆಪ್‌ನಲ್ಲಿ 50 ಆಟಗಳಿವೆ

ಈ ಆಪ್‌ ಸರಿಸುಮಾರು 50 ಆಟಗಳನ್ನು ಹೊಂದಿದ್ದು, ಅವುಗಳ ಅನುಕ್ರಮವು ಪ್ರತಿ ದಿನವೂ ವಿಭಿನ್ನವಾಗಿರುತ್ತದೆ. ಜೊತೆಗೆ ಫಿಟ್‌ನೆಸ್ ಸೆಷನ್‌ಗೆ ಸಮನಾಗಿ ದಿನಕ್ಕೆ 10 ನಿಮಿಷಗಳ ಕಾಲ ಪ್ಲೇ ಮಾಡಲು ಆಪ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಪೋಷಕರು ಸಹ ಈ ಆಪ್‌ ಮೂಲಕ ಮಕ್ಕಳ ಜೊತೆ ಆಟ ಆಡಬಹುದಾದ ಆಯ್ಕೆ ನೀಡಲಾಗಿದೆ.

Best Mobiles in India

English summary
GenMove app encourages kids to get moving through games on their smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X