ಜಿಯೋ ಸಿಮ್‌ನ್ನು ಇ-ಸಿಮ್‌ ಆಗಿ ಪರಿವರ್ತಿಸುವುದು ಹೇಗೆ..?

By Gizbot Bureau
|

ಆಪಲ್‌ ತನ್ನ ಐಫೋನ್‌ಗಳಿಗೆ 2018ರಿಂದ ಇ-ಸಿಮ್‌ ಬೆಂಬಲವನ್ನು ನೀಡುತ್ತಿದೆ. ಇದುವರೆಗೂ ಐದು ಐಫೋನ್‌ ಮಾದರಿಗಳು ಭಾರತದಲ್ಲಿ ಡ್ಯುಯಲ್‌ ಸಿಮ್‌ ನೆಟ್‌ವರ್ಕ್‌ನ್ನು ಬೆಂಬಲಿಸುತ್ತಿವೆ. ಆದರೆ, ಐಫೋನ್‌ನಲ್ಲಿ ಡ್ಯುಯಲ್‌ ಸಿಮ್‌ ಬಳಕೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಂತೆ ಸುಲಭವಾಗಿಲ್ಲ.

ಇ-ಸಿಮ್‌ ಸೇವೆ

ಏಕೆಂದರೆ, ಭಾರತದಲ್ಲಿ ಏರ್‌ಟೆಲ್‌ ಮತ್ತು ಜಿಯೋ ಮಾತ್ರ ಇ-ಸಿಮ್‌ ಸೇವೆಯನ್ನು ನೀಡುತ್ತಿವೆ, ಅದರಲ್ಲೂ, ಏರ್‌ಟೆಲ್‌ ಕೇವಲ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಮಾತ್ರ ಇ-ಸಿಮ್‌ ಸೇವೆಯನ್ನು ಪರಿಚಯಿಸಿದ್ದು, ಸ್ಟೋರ್‌ಗೆ ಹೋಗದೆ ಏರ್‌ಟೆಲ್‌ ಇ-ಸಿಮ್‌ನ್ನು ಕನ್ಫೀಗರ್‌ ಮಾಡಬಹುದಾಗಿದೆ. ಆದರೆ, ಜಿಯೋ ನೆಟ್‌ವರ್ಕ್‌ನಲ್ಲಿ ಇ-ಸಿಮ್‌ ಕನ್ಫೀಗರ್‌ ಮಾಡಲು ಒಂದಿಷ್ಟು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಡಿಜಿಟಲ್‌ ಸ್ಟೋರ್‌ನಲ್ಲಿ ಇ-ಸಿಮ್‌

ಡಿಜಿಟಲ್‌ ಸ್ಟೋರ್‌ನಲ್ಲಿ ಇ-ಸಿಮ್‌

ಮೈ ಜಿಯೋ ಸ್ಟೋರ್‌ನಲ್ಲಿ ನಿಮ್ಮ ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸುವ ವ್ಯವಸ್ಥೆ ಇಲ್ಲ. ಆದರೆ, ನಿಮ್ಮ ಹತ್ತಿರದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ನೀವು ಇ-ಸಿಮ್‌ ಪಡೆಯಬಹುದಾಗಿದ್ದು, ಐಫೋನ್‌ಗಾಗಿ ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸಿಕೊಳ್ಳಬಹುದು.

10 ನಿಮಿಷ ಸಮಯ

10 ನಿಮಿಷ ಸಮಯ

ಭೌತಿಕ ಸಿಮ್‌ನಿಂದ ಇ-ಸಿಮ್‌ಗೆ ಬದಲಾವಣೆ ಮಾಡಿಕೊಳ್ಳಲು ದೀರ್ಘಾವದೀ ಸಮಯವೇನು ಬೇಕಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ 10 ನಿಮಿಷ ಸಾಕು. ಹೌದು, ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ಇ-ಸಿಮ್‌ ಅಗತ್ಯವಿರುವ ಐಫೋನ್‌ನ ಐಎಂಇಐ ಸಂಖ್ಯೆಯನ್ನು ನೀಡಬೇಕಾಗುತ್ತದೆ. ನಂತರ ನೀವು ಒಟಿಪಿ ಸಂಖ್ಯೆಯನ್ನು ಸ್ವೀಕರಿಸಲಿದ್ದು, ಅದನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಿ. ಹಾಗೂ ನಿಮ್ಮ ಭಾವಚಿತ್ರ ಹಾಗೂ ವಿಳಾಸದ ಪುರಾವೆಯನ್ನು ನೀಡಬೇಕಾಗುತ್ತದೆ. ಇದೆಲ್ಲಾ ಪ್ರಕ್ರಿಯೆ ಮುಗಿದು ನಿಮ್ಮ ಇ-ಸಿಮ್‌ ಸಕ್ರಿಯಗೊಳ್ಳಲು 10 ನಿಮಿಷ ಕಾಲಾವಕಾಶ ಬೇಕಾಗಬಹುದು.

ಉಚಿತ ಸೇವೆ

ಉಚಿತ ಸೇವೆ

ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸಲು ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ. ಇನ್ನು, ನೀವು ಇ-ಸಿಮ್‌ ಪಡೆಯಲು ಹೋಗುವಾಗ ಆಧಾರ್‌ ಕಾರ್ಡ್‌ನಂತಹ ವಿಳಾಸದ ಪುರಾವೆಯನ್ನು ತೆಗೆದುಕೊಂಡು ಹೋಗಿ, ಇದರ ಜೊತೆ ಯಾವ ಸಂಖ್ಯೆಯನ್ನು ಇ-ಸಿಮ್‌ ಆಗಿ ಬದಲಾಯಿಸುತ್ತೀರೋ ಆ ಮೊಬೈಲ್‌ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ. ಏಕೆಂದರೆ, ಬದಲಾವಣೆಯ ಪ್ರಕ್ರಿಯೆಗೆ ಒಟಿಪಿ ಅವಶ್ಯವಿದ್ದು, ನಮೂದಿಸಬೇಕಾಗುತ್ತದೆ.

ಜಿಯೋ ರಿಚಾರ್ಜ್‌ ಪ್ಲಾನ್ಸ್‌

ಜಿಯೋ ರಿಚಾರ್ಜ್‌ ಪ್ಲಾನ್ಸ್‌

ಇ-ಸಿಮ್‌ಗೆ ಪ್ರತ್ಯೇಕವಾಗಿ ಯಾವುದೇ ರಿಚಾರ್ಜ್‌ ಪ್ಲಾನ್‌ಗಳು ಇಲ್ಲ. ನಿಮ್ಮ ಭೌತಿಕ ಸಿಮ್‌ನ ಯೋಜನೆಗಳೇ ಇಲ್ಲಿಯೂ ಮುಂದುವರೆಯಲಿದೆ. ಇನ್ನು, ಇ-ಸಿಮ್‌ನ್ನು ಭೌತಿಕ ಸಿಮ್‌ ಆಗಿ ಪರಿವರ್ತಿಸುವುದು ಸುಲಭವಾಗಿದ್ದು, ಅಮೀಪದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ಉಚಿತವಾಗಿ ಇ-ಸಿಮ್‌ನಿಂದ ಭೌತಿಕ್‌ ಸಿಮ್‌ಗೆ ಬದಲಾಯಿಸಿಕೊಳ್ಳಬಹುದು.

Best Mobiles in India

Read more about:
English summary
Here is a complete process on how to get a Jio e-SIM card in India and how to use an e-SIM on an iPhone 11, iPhone 11 Pro, iPhone XR, and the iPhone XS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X