ಕಪ್ಪು ಹಲಗೆಯ ಮೇಲೆ ಮೈಕ್ರೋಸಾಫ್ಟ್ ಪಾಠ ಮಾಡಿದ ಶಿಕ್ಷಕನಿಗೆ ಭಾರತದ ನೆರವು ಸಿಕ್ಕಿದ್ದು ಹೀಗೆ!!

  ಇಂಟರ್‌ನೆಟ್‌ನಲ್ಲಿ ಕೆಲವೊಂದು ಚಿತ್ರಗಳು ವೈರಲ್ ಆಗಲು ಹೆಚ್ಚು ಸಮಯ ಬೇಕಾಗಿಲ್ಲ. ಇಂಟರ್‌ನೆಟ್ ಬಳಸುವ ಎಲ್ಲರ ಮನಸ್ಸನ್ನು ಕಲಕುವ ಒಂದು ಚಿತ್ರ ಕೆಲವೇ ದಿನಗಳಲ್ಲಿ ಇಂಟರ್‌ನೆಟ್ ಪ್ರಪಂಚದ ಹಾಟ್‌ಸ್ಪಾಟ್ ಚಿತ್ರ ಆಗಿರುತ್ತದೆ. ಇಂತಹುದೇ ಒಂದು ಮತ್ತೊಂದು ಚಿತ್ರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿ ಇದೀಗ ನೂರಾರು ಮಕ್ಕಳಿಗೆ ವರದಾನವಾಗಿದೆ.

  ತುತ್ತು ಅನ್ನಕ್ಕೂ ಕಷ್ಟವಿರುವ ದೇಶ ಘಾನಾದಲ್ಲಿ ಕಪ್ಪು ಹಲಗೆಯ ಮೇಲೆ ಕಂಪ್ಯೂಟರ್ ಹೇಳಿಕೊಡುವ ಒಂದು ಚಿತ್ರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಕಂಪ್ಯೂಟರ್ ಇಲ್ಲದಿದ್ದರೂ ಬೋರ್ಡ್‌ ಮೇಲೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಯುವ ಶಿಕ್ಷಕ ನಿರ್ಣಯವನ್ನು ಇಡೀ ವಿಶ್ವವೇ ಶ್ಲಾಘಿಸಿ ಭರಪೂರ ಸಹಾಯ ನೀಡಿದೆ.ಇದಕ್ಕೆ ಭಾರತದ ಒಂದು ಕಂಪೆನಿ ಕೂಡ ಕೈ ಜೋಡಿಸಿದೆ.

  ಕಪ್ಪು ಹಲಗೆಯ ಮೇಲೆ ಮೈಕ್ರೋಸಾಫ್ಟ್ ಪಾಠ ಮಾಡಿದ ಶಿಕ್ಷಕನಿಗೆ ಭಾರತದ ನೆರವು!

  ಚಿತ್ರವೊಂದು ಕಥೆ ಹೇಳುತ್ತದೆ ಎಂಬುದಕ್ಕೆ, ಕಂಪ್ಯೂಟರ್ ಸಹ ಇಲ್ಲದಿದ್ದರೂ ಸಹ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಗ್ಗೆ ಕಲಿಸಿದ ಆ ಶಿಕ್ಷಕ ಕೂಡ ಈಗ ವಿಶ್ವದ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾಯಕನಂತೆ ಬಿಂಬಿತರಾಗಿದ್ದಾರೆ. ಹಾಗಾದರೆ, ಹಲಗೆಯ ಮೇಲೆ ಕಂಪ್ಯೂಟರ್ ಪಾಠ ಹೇಳಿಕೊಟ್ಟ ಈ ಶಿಕ್ಷಕ ಯಾರು? ಏನಿದು ಸ್ಟೋರಿ ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫೇಸ್‌ಬುಕ್‌ನಲ್ಲಿ ವೈರಲ್ ಚಿತ್ರ!

  ಬಹುಶಃ ನೀವು ಸಹ ನೋಡಿರಬಹುದಾದ ಈ ಒಂದು ಚಿತ್ರ ಇಡೀ ವಿಶ್ವದಾಧ್ಯಂತ ವೈರಲ್ ಆಗಿತ್ತು. ಕಪ್ಪು ಹಲಗೆಯ ಮೇಲೆ ಮೈಕ್ರೊಸಾಫ್ಟ್ ವರ್ಡ್‌ನ ಸಂಪೂರ್ಣ ಇಂಟರ್ಫೇಸ್ ವಿಂಡೋವನ್ನು ಬರೆದು ಮಕ್ಕಳಿಗೆ ಆ ಬಗ್ಗೆ ಹೇಳಿಕೊಡುತ್ತಿದ್ದ ಶಿಕ್ಷಕನು, ಆ ಚಿತ್ರವನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದರು. ನಂತರ ಕೆಲವೇ ದಿನಗಳಲ್ಲಿ ಆ ಚಿತ್ರ ವೈರಲ್ ಆಗಿತ್ತು.

  ಯಾರು ಆ ಶಿಕ್ಷಕ?

  ವಿಶ್ವದಾಧ್ಯಂತ ವೈರಲ್ ಆಗಿದ್ದ ಚಿತ್ರದಲ್ಲಿರುವವರು ಯಾರು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡಿತು. ಆ ಪ್ರಶ್ನೆಗೆ ಉತ್ತರ ನಂತರ ಸಿಕ್ಕಿತು. ಘಾನಾ ದೇಶದ ಸೆಕಿಡೋಡೇಸ್ ಎಂಬ ಚಿಕ್ಕ ಪಟ್ಟಣದಲ್ಲಿರುವ ಬೆಟೆನೆಸ್ ಎಂಎ ಜೂನಿಯರ್ ಪ್ರೌಢಶಾಲೆಯ ಕಂಪ್ಯೂಟರ್ ಶಿಕ್ಷಕರಾದ 'ರಿಚರ್ಡ್ ಅಪಿಯಾ ಅಕೋಟೋ' ಎಂಬ ಹೆಸರು ಜಗತ್ತಿಗೆ ತಿಳಿಯಿತು.!

  ರಿಚರ್ಡ್ ಅಪಿಯಾ ಅಕೋಟೋ!

  ಬೋರ್ಡ್‌ ಮೇಲೆ ಮೈಕ್ರೊಸಾಫ್ಟ್ ವರ್ಡ್‌ನ ಸಂಪೂರ್ಣ ಇಂಟರ್ಫೇಸ್ ವಿಂಡೋವನ್ನು ಬರೆದು ಮಕ್ಕಳಿಗೆ ಪಾಠ ಕಲಿಸುವ ಮೂಲಕ ಗಮನಸೆಳೆದಿದ್ದರು. ''ಘಾನಾ ಶಾಲೆಯಲ್ಲಿ ಐಸಿಟಿ ಬೋಧನೆ ತುಂಬಾ ತಮಾಷೆಯಾಗಿದೆ. ನಾನುವಿದ್ಯಾರ್ಥಿಗಳನ್ನು ಇಷ್ಟಪಡುತ್ತೇನೆ. ಹಾಗಾಗಿ, ಅವರಿಗೆ ಬೋಧಿಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

  How to Send a WhatsApp Message Without Saving the Contact in Your Phone - GIZBOT KANNADA
  ನಂಬಲಾಗದಷ್ಟು ನಿರೂಪಣೆ!

  ನಂಬಲಾಗದಷ್ಟು ನಿರೂಪಣೆ!

  ಕಪ್ಪು ಹಲಗೆಯ ಮೇಲೆ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದು ಭಾರತದಂತಹ ದೇಶಗಳಲ್ಲಿಯೂ ವಿಶೇಷವೇನಲ್ಲ. ಆದರೆ, ರಿಚರ್ಡ್ ಅಪಿಯಾ ಅಕೋಟೋ ಅವರು ಬೋರ್ಡ್‌ ಮೇಲೆ ಮೈಕ್ರೊಸಾಫ್ಟ್ ವರ್ಡ್‌ನ ಸಂಪೂರ್ಣ ಇಂಟರ್ಫೇಸ್ ವಿಂಡೋವನ್ನೇ ಬರೆದದ್ದು, ನಂಬಲಾಗದಷ್ಟು ವಿವರವಾದ ನಿರೂಪಣೆಯಾಗಿತ್ತು ಎಂಬುದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು.

  ಅಕೋಟೋ ಶ್ರಮಕ್ಕೆ ಸಿಕ್ಕಿತು ಫಲ!

  ಕಪ್ಪು ಹಲಗೆಯ ಮೇಲೆ ಕಂಪ್ಯೂಟರ್ ಪಾಠ ಮಾಡುವ ಚಿತ್ರಗಳು ವೈರಲ್ ಆದ ನಂತರ ರಿಚರ್ಡ್ ಅಪಿಯಾ ಅಕೋಟೋ ಅವರು ಪ್ರಶಂಸೆ ಗಳಿಸಿದರು. ಇದು ಮೈಕ್ರೋಸಾಫ್ಟ್ ಮತ್ತು ಭಾರತದ ಎನ್ಐಐಟಿ ಸೇರಿದಂತೆ ಅನೇಕ ಜನರು ಮತ್ತು ಸಂಸ್ಥೆಗಳಿಗೆ ದೇಣಿಗೆ ನೀಡಲು ಮತ್ತು ಅವರ ಶಾಲೆಗೆ ಸಹಾಯ ಮಾಡಲು ಪ್ರೇರೇಪಿಸಿತು.

  ಪಿಹೆಚ್‌ಡಿ ವಿದ್ಯಾರ್ಥಿಯಿಂದ ಮೊದಲ ದಾನ!

  ಅಕೋಟೋ ಅವರ ಶ್ರಮಕ್ಕೆ ಮನಸೋತ ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ವಿಧ್ಯಾರ್ಥಿ ಅಮಿರಾ ಅಲಾರ್ತಿ ಅವರು ವಿದ್ಯಾರ್ಥಿಗಳಿಗೆ ಸಣ್ಣ ಕೊಡುಗೆಯಾಗಿ ತನ್ನ ಲ್ಯಾಪ್‌ಟಾಪ್ ಅನ್ನು ನೀಡಿದರು. ಮೊದಲ ನೀಡಿದ ಅಮಿರಾ 'ಇತರರಿಗೆ ಹೋಲಿಸುವ ನ್ಯಾಯೋಚಿತ ಅವಕಾಶಗಳು ಲಭ್ಯವಿಲ್ಲ, ಎಂದು ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

  ಭಾರತೀಯ ಸಂಸ್ಥೆಯಿಂದ ಕೊಡುಗೆ!!

  ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆದ ನಂತರ ,ಘಾನದಲ್ಲಿರುವ ಭಾರತೀಯ ಸಂಸ್ಥೆಯ ಅಂಗಸಂಸ್ಥೆ "NIIT ಘಾನಾ" ಕೂಡ ಅಕೋಟೋ ಅವರ ಶಾಲೆಗೆ ಕಂಪ್ಯೂಟರ್‌ಗಳನ್ನು ದೇಣಿಗೆಯಾಗಿ ನೀಡಿತು. ಐದು ಹೊಸ ಡೆಸ್ಕಾಪ್ ಕಂಪ್ಯೂಟರ್‌ಗಳು ಮತ್ತು ಪಠ್ಯಪುಸ್ತಕಗಳನ್ನು ಶಾಲೆಗೆ ಮತ್ತು ಒಂದು ಲ್ಯಾಪ್‌ಟಾಪ್ ಅನ್ನು ಅಕೋಟೋ ಅವರಿಗೆ NIITಯಿಂದ ಸಿಕ್ಕಿದವು.

  ಮೈಕ್ರೋಸಾಫ್ಟ್ ಸಹಾಯಹಸ್ತ!!

  ಸಿಂಗಪೂರ್‌ನಲ್ಲಿ ನಡೆದ ಮೈಕ್ರೋಸಾಫ್ಟ್ ವಾರ್ಷಿಕ ಎಜುಕೇಟರ್ಸ್ ಎಕ್ಸ್‌ಚೇಂಜ್ ಕಾರ್ಯಕ್ರಮಕ್ಕೆ ಅಕೋಟೋ ಅವರನ್ನು ಮೈಕ್ರೋಸಾಫ್ಟ್ ಕಂಪೆನಿ ಕರೆಸಿಕೊಂಡಿತು. ಅಕೋಟೋ ಅವರ ಶಾಲೆಗೆ ಪೂರ್ಣ ಕಂಪ್ಯೂಟರ್ ಲ್ಯಾಬ್ ಒದಗಿಸುವುದಕ್ಕೆ ಬದ್ಧವಾಗಿದೆ ಮತ್ತು ಘಾನಾ ಅವರ ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೈಕ್ರೋಸಾಫ್ಟ್ ಕಂಪನಿ ಹೇಳಿದೆ.

  'ರೆಡ್‌ಮಿ ನೋಟ್ 5 ಪ್ರೊ' ಖರೀದಿಸುವುದಕ್ಕಿಂತ ಈ 9,999 ರೂ.ಬೆಲೆಯ 'ರೆಡ್ ಮಿ ವೈ2' ಖರೀದಿ ಬೆಸ್ಟ್!!

  ಭಾರತದಲ್ಲಿ ಶಿಯೋಮಿ ರೆಡ್ ಮಿ ವೈ2 ಸ್ಮಾರ್ಟ್‌ಪೋನ್ ಬಿಡುಗಡೆಗೆ ಭಾರತೀಯ ಸ್ಮಾರ್ಟ್ ಪೋನ್ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ನೆನ್ನೆಯಷ್ಟೆ ಬಿಡುಗಡೆಯಾದ ಶಿಯೋಮಿ ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ ಪೋನ್ ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್ ಕೇವಲ ಒಂದೇ ದಿನದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದೆ. !

  ಚೀನಾದಲ್ಲಿ ವರ್ಷಾರಂಭದಲ್ಲಿ ಬಿಡುಗಡೆಗೊಂಡಿದ್ದ ರೆಡ್‌ಮಿ ಎಸ್‌2 ಸ್ಮಾರ್ಟ್‌ಪೋನ್ ಅನ್ನು ರಿಬ್ರಾಂಡ್ ಮಾಡಲಾಗಿದ್ದು, ಭಾರತದಲ್ಲಿ ರೆಡ್ ಮಿ ವೈ2 ಸ್ಮಾರ್ಟ್ ಪೋನ್ ಆಗಿ ಬಿಡುಗಡೆಯಾಗಿದೆ. ಈ ಮೊದಲೇ ಫೀಚರ್ಸ್‌ಗಳಿಂದ ಬಾರೀ ಸುದ್ದಿಯಾಗಿದ್ದ, ರೆಡ್‌ಮಿ ಎಸ್‌2 ಸ್ಮಾರ್ಟ್‌ಪೋನ್ ರೆಡ್ ಮಿ ವೈ2 ಹೆಸರಿನಲ್ಲಿ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವುದು ಅಚ್ಚರಿ ಮೂಡಿಸಿದೆ.

  ಕೇವಲ 9,999 ರೂಪಾಯಿಗಳಿಗೆ ಭಾರೀ ಫೀಚರ್ಸ್ ಹೊತ್ತಿರುವ ಶಿಯೋಮಿ ರೆಡ್ ಮಿ ವೈ2 ಸ್ಮಾರ್ಟ್‌ಪೋನ್ ಶಿಯೋಮಿ ನೋಟ್ ಪ್ರೊಗೆ ಸೆಡ್ಡು ಹೊಡೆಯುತ್ತಿದೆ. 17 ಸಾವಿರ ಬೆಲೆ ಹೊಂದಿರುವ ಶಿಯೋಮಿ ನೋಟ್ ಪ್ರೊ ಫೋನಿಗಿಂತ ಸ್ವಲ್ಪವೇ ಕಡಿಮೆ ಫೀಚರ್ಸ್ ಹೊಂದಿರುವ ಈ ಫೋನನ್ನು ಬೆಲೆ ಆಧಾರಿತವಾಗಿ ನೋಟ್ 5 ಪ್ರೊಗಿಂತಲೂ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನಬಹುದು.

  ರೆಡ್‌ಮಿ ನೋಟ್ 5 ಪ್ರೊ VS ರೆಡ್ ಮಿ ವೈ2!!

  3GB RAM ಮತ್ತು 32GB ಮೆಮೊರಿ ಹೊಂದಿರುವ 'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ ಬೆಲೆ 9,999 ರೂ.ಗೆ ಲಭ್ಯವಿದ್ದರೆ, 4GB RAM ಮತ್ತು 64GB ಮೆಮೊರಿ ಹೊಂದಿರುವ ರೆಡ್ ಮಿ ವೈ 2ನ ಬೆಲೆ 12,999 ರೂ.ಇದೆ. ಇನ್ನು 4GB RAM ಮತ್ತು 64GB ಮೆಮೊರಿ ಹೊಂದಿರುವ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಬೆಲೆ 9,999 ರೂ.ಗೆ ಲಭ್ಯವಿದ್ದರೆ, 6GB RAM ಮತ್ತು 64GB ಮೆಮೊರಿ ಹೊಂದಿರುವ ನೋಟ್ 5 ಪ್ರೊನ ಬೆಲೆ 16,999 ರೂಪಾಯಿಗಳಾಗಿವೆ.

  ಯಾವ ಸ್ಮಾರ್ಟ್‌ಪೋನ್ ಬೆಸ್ಟ್?

  ಎರಡೂ ಫೋನ್‌ಗಳನ್ನು ನಾವು ಖಂಡಿತ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ರೆಡ್ ಮಿ ವೈ2 ಸ್ಮಾರ್ಟ್‌ಫೋನಿಗಿಂತ ಉತ್ತಮವಾಗಿದೆ. ಆದರೆ, ಬೆಲೆ ವಿಷಯಕ್ಕೆ ಬಂದಾಗ ರೆಡ್ ಮಿ ವೈ2 ಸ್ಮಾರ್ಟ್‌ಫೋನ್ ಖರೀದಿಸಲು ಯೋಗ್ಯವಾದ ಸ್ಮಾರ್ಟ್‌ಫೋನ್ ಆಗಿದೆ. ರೆಡ್‌ಮಿ ನೋಟ್ 5 ಪ್ರೊ ಫೋನಿನ ಶೇ 80 ರಷ್ಟು ಕೆಲಸವನ್ನು ರೆಡ್ ಮಿ ವೈ2 ಸ್ಮಾರ್ಟ್‌ಫೋನ್ ಕೂಡ ನಿರ್ವಹಿಸಲಿದೆ. ಹಾಗಾಗಿ, ಎರಡೂ ಫೋನ್‌ಗಳ ಫೀಚರ್ಸ್ ಮತ್ತು ಶಕ್ತಿಯನ್ನು ಮುಂದೆ ತಿಳಿಯಿರಿ.

  ಎರಡೂ ಫೋನ್‌ಗಳ ಡಿಸ್‌ಪ್ಲೇ ಹೇಗಿದೆ?

  ರೆಡ್ ಮಿ ವೈ 2 5.99 ಇಂಚ್ IPS LCD (720x1440 ಪಿಕ್ಸೆಲ್ಸ್) ಡಿಸ್ ಪ್ಲೇ ಹೊಂದಿದ್ದು, 18:9 ಅನುಪಾತ, 2.5 ಡಿ.ಕರ್ವ್ ಗ್ಲಾಸ್ ನಿಂದ ರಕ್ಷಿಸಲ್ಪಟ್ಟಿದೆ. 'ರೆಡ್‌ಮಿ ನೋಟ್ 5 ಪ್ರೊ' 18: 9 ಆಕಾರ ಅನುಪಾತದಲ್ಲಿ 15.2cm (5.99 ಇಂಚಿನ) FHD + ಡಿಸ್‌ಪ್ಲೇಯನ್ನು ಹೊಂದಿದೆ 2.5 ಡಿ.ಕರ್ವ್ ಗ್ಲಾಸ್ ನಿಂದ ರಕ್ಷಿಸಲ್ಪಟ್ಟಿದೆ. ಎರಡೂ ಪೋನ್‌ಗಳು ಬೆಜೆಲ್ ಲೆಸ್ ವಿನ್ಯಾಸ ಹೊಂದಿದ್ದರೂ, ರೆಡ್‌ಮಿ ನೋಟ್ 5 ಡಿಸ್‌ಪ್ಲೇ ಪಿಕ್ಸೆಲ್ (1080*2160) ಸಾಮರ್ಥ್ಯ ಹೆಚ್ಚಿದೆ.

  ಎರಡೂ ಫೋನ್‌ಗಳ ಕಾರ್ಯಾಚರಣೆ

  'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8 ಒರಿಯೋ ಆಧಾರಿತ MIUI 9.5 ಸ್ನ್ಯಾಪ್ ಡ್ರಾಗನ್ 625, 2.0 GHz Octa Core ಪ್ರೊಸೆಸೆರ್ ನಿಂದ ಕಾರ್ಯನಿರ್ವಹಿಸಲಿದೆ. ರೆಡ್‌ಮಿ ನೋಟ್ 5 ಪ್ರೊ ಆಂಡ್ರಾಯ್ಡ್ 8 ಒರಿಯೋ MIUI 9.5 ಸ್ನಾಪ್ ಡ್ರಾಗನ್ 636 soc ಪ್ರೊಸೆಸರ್‌ನಿಂದ ಕಾರ್ಯನಿರ್ವಹಣೆ ನೀಡಲಿದೆ. RAM ಮತ್ತು ಪ್ರೊಸೆಸರ್ ವಿಷಯದಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ವಲ್ಪವೇ ಶಕ್ತಿಶಾಲಿಯಾಗಿದೆ ಎಂದು ಹೇಳಬಹುದು.

  ಎರಡೂ ಫೋನ್‌ಗಳ ಕ್ಯಾಮೆರಾ?

  'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ 12+5MP ಸಾಮರ್ಥ್ಯದ ಎರಡು ರಿಯಲ್ ಕ್ಯಾಮೆರಾಗಳು ಹಾಗೂ 16MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 12+5MP ಸಾಮರ್ಥ್ಯದ ಎರಡು ರಿಯಲ್ ಕ್ಯಾಮೆರಾಗಳು ಹಾಗೂ 20MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನಿನ ಸೆಲ್ಫಿ ಕ್ಯಾಮೆರಾದ ಸಾಮರ್ಥ್ಯ ಸ್ವಲ್ಪ ಹೆಚ್ಚಿದೆ.

  ಕ್ಯಾಮೆರಾ ತಂತ್ರಜ್ಞಾನ ಹೇಗಿದೆ?

  ಹೊಸ ಶಿಯೋಮಿ ರೆಡ್ ಮಿ ವೈ2 ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ ಪೋನ್ ಆಗಿದ್ದು, 16MP AI ಸೆಲ್ಫಿ ಕ್ಯಾಮೆರಾ ಸೆನ್ಸಾರ್ f/2.0 ಅಪಾರ್ಚರ್, AI ಇಂಟಿಗ್ರೇಷನ್, ಸೆಲ್ಫಿ LED ಫ್ಲಾಶ್ ಲೈಟ್ ಹೊಂದಿದೆ. ಇದಲ್ಲದೇ Auto HDR, AI ಪೊರ್ಟರೆಟ್ ಸೆಲ್ಫಿ ಮತ್ತು ಬ್ಯುಟಿಪೈ ಮೊಡ್ ಹೊಂದಿದ್ದು, 10 ರೀತಿಯ ಪೋಟೋ ಎಡಿಟಿಂಗ್ ನಲ್ಲಿ ಬಳಕೆಯಾಗಲಿವೆ. ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿಯೂ ಬಹುತೇಕ ಇದೇ ರೀತಿಯ ತಂತ್ರಜ್ಞಾನವನ್ನು ಶಿಯೋಮಿ ಅಳವಡಿಸಿರುವುದನ್ನು ನೀವು ನೋಡಬಹುದು.

  ಎರಡೂ ಫೋನ್‌ಗಳ ಬ್ಯಾಟರಿ ಶಕ್ತಿ ಎಷ್ಟು?

  ಶಿಯೋಮಿ 'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ 3080mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದರೆ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳೂ ರೆಡ್‌ಮಿ ನೋಟ್ 5 ಪ್ರೊ 5V/2A ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿವೆ. ರೆಡ್ ಮಿ ವೈ2' ಸ್ಮಾರ್ಟ್‌ಫೋನ್ ಸಂಪೂರ್ಣ ಒಂದು ದಿನದ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಶಿಯೋಮಿ ಹೇಳಿದೆ.

  ಫೇಸ್ ಅನ್‌ಲಾಕ್ ಫೀಚರ್!!

  ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ಫೇಸ್ ಅನ್‌ಲಾಕ್ ಫೀಚರ್ ನೀಡಿದಂತೆ, ರೆಡ್ ಮಿ ವೈ2 ಸ್ಮಾರ್ಟ್‌ಫೋನಿನಲ್ಲಿಯೂ AI ಆಧಾರಿತ ಫೇಸ್ ಅನ್‌ಲಾಕ್ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ನಿಡಲಾಗಿದೆ. ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಂತೆ ರೆಡ್ ಮಿ ವೈ2ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಸಹ ಬಳಸಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Ghana Teacher Who Taught Microsoft Word on Blackboard Gifted Computers By Indian Company. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more