TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಜಿಮೇಲ್ ಬಳಕೆದಾರರಿಗಾಗಿ 2019 ರಲ್ಲಿ ಗೂಗಲ್ ಸಾಕಷ್ಟು ತಂತ್ರಗಳನ್ನು ಹೊಂದಿರುವಂತೆ ಕಾಣುತ್ತಿದೆ. ಗೂಗಲ್ ನಲ್ಲಿ ಕೆಲವು ಹೊಸ ಫೀಚರ್ ಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇದು ಬಳಕೆದಾರರಿಗೆ ಇಮೇಲ್ ಬರೆಯುವಾಗ ತಪ್ಪುಗಳನ್ನು ಸರಿಮಾಡುವುದಕ್ಕೆ ಮತ್ತು ಎಡಿಟ್ ಮಾಡುವುದಕ್ಕೆ ಸಹಕಾರಿಯಾಗಿರುತ್ತದೆ . ಎರಡು ಫೀಚರ್ ಗಳು ಶಾರ್ಟ್ ಕಟ್ ಬಟನ್ ಗಳ ರೂಪದಲ್ಲಿ ಬರಲಿದೆ ಮತ್ತು ಮೂರನೆಯದ್ದು ಜಿಮೇಲ್ ವೆಬ್ ನಲ್ಲಿ ಬೇರೆಬೇರೆ ರೀತಿಯ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಅನುವು ಮಾಡಿಕೊಡುವ ಫೀಚರ್ ಆಗಿದೆ ಎಂದು ತಿಳಿಸಲಾಗಿದೆ.
ಕಂಪೋಸ್ ವಿಂಡೋದಲ್ಲಿ ಅಂಡೂ/ರೀಡೂ ಗೆ ಶಾರ್ಟ್ ಕಟ್ ಬಟನ್ ಗಳು:
ಕಂಪೋಸ್ ವ್ಯೂನಲ್ಲೇ ಇನ್ನು ಮುಂದೆ ಅಂಡೂ ಮಾಡುವುದು ಸುಲಭವಾಗುತ್ತದೆ. ಇಮೇಲ್ ನಲ್ಲಿ ಅಚಾನಕ್ ಆಗಿ ನೀವು ಯಾವುದನ್ನೇ ಡಿಲೀಟ್ ಮಾಡಿಕೊಂಡಿದ್ದರೆ ಅಥವಾ ಮಾಡಿದ್ದು ತಪ್ಪಾಗಿ ಹಿಂದೆ ಮಾಡಿದ್ದೇ ಸರಿ ಅನ್ನಿಸಿದರೆ ಕೂಡಲೇ ಅಂಡೂ ಮಾಡಿಕೊಳ್ಳಬಹುದಾದ ಅವಕಾಶವನ್ನು ಇನ್ನು ಮುಂದೆ ಸರಳಗೊಳಿಸಲಾಗುತ್ತದೆ. ಕಂಪೋಸ್ ವ್ಯೂ ಮೂಲಕವೇ ನೀವಿದನ್ನು ಸಾಧಿಸಿಕೊಳ್ಳಬಹುದು. ರೀಡೂ ಬೇಕಿದ್ದಲ್ಲಿ ಅದೂ ಕೂಡ ಕಂಪೋಸ್ ವ್ಯೂನಲ್ಲೇ ಲಭ್ಯವಾಗುತ್ತದೆ.
ಸ್ಟ್ರೈಕ್ ರಫ್ ಟೆಕ್ಸ್ಟ್ ಗೆ ಶಾರ್ಟ್ ಕಟ್ :
ಬೋಲ್ಡ್, ಇಟ್ಯಾಲಿಕ್ ಮತ್ತು ಅಂಡರ್ ಲೈನ್ ಗಳ ಜೊತೆಗೆ ಸ್ಟ್ರೈಕ್ ರಫ್ ಟೆಕ್ಸ್ಟ್ ಕೂಡ ಬಳಕೆದಾರರಿಗೆ ಲಭ್ಯವಾಗುತ್ತದೆ. ಭಾಷೆಯಲ್ಲಿ ಬದಲಾವಣೆ ಸೂಚಿಸುವ ಸಂದರ್ಬದಲ್ಲಿ ಈ ಕಾರ್ಯವನ್ನು ತ್ವರಿತವಾಗಿ ಮಾಡುವುದು ಮತ್ತು ಪರಿಣಾಮಕಾರಿಯಾಗಿ ಇಮೇಲ್ ಗಳಲ್ಲಿ ಬರೆಯಲು ಇದು ಸಹಕಾಯಾಗಿರುತ್ತದೆ. ಇಮೇಲ್ ಗಳನ್ನು ಬರೆಯುವಾಗ ಫಾರ್ಮೇಟಿಂಗ್ ಸೆಕ್ಷನ್ ನಲ್ಲಿ ಇದೂ ಕೂಡ ಇರುತ್ತದೆ.
.EML ಫೈಲ್ ಗಳನ್ನು rfc822 ಫಾರ್ಮೇಟ್ ನಲ್ಲಿ ಡೌನ್ ಲೋಡ್ ಮಾಡುವ ಸಾಮರ್ಥ್ಯವು ಗೂಗಲ್ ವೆಬ್ ನಲ್ಲಿರುತ್ತದೆ.
ಬ್ಲಾಗ್ ಪೋಸ್ಟ್ ಮಾಹಿತಿ:
.EML ಫಾರ್ಮೆಟ್ ಇತರೆ ಇಮೇಲ್ ಕ್ಲೈಂಟ್ ಗಳು ಬೆಂಬಲಿಸುತ್ತದೆ ಮತ್ತು ಈ ಕ್ಲೈಂಟ್ ಗಳ ಮೆಸೇಜ್ ನ್ನು ನೀವು ಕೂಡ ಜಿಮೇಲ್ ಮೆಸೇಜ್ ನ ಅಟ್ಯಾಚ್ ಮೆಂಟ್ ನಲ್ಲಿ ನೋಡಬಹುದು. ತಮ್ಮ ಇಮೇಲ್ ನಲ್ಲೂ ಕೂಡ ಇದನ್ನು ಅಟ್ಯಾಚ್ ಮಾಡಬಹುದು ಎಂದು ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಗಮನಿಸಬೇಕಾಗಿರುವ ಅಂಶ:
ಜಿ-ಸ್ಯೂಟ್ ಬ್ಲಾಗ್ ಪೋಸ್ಟ್ ಹೇಳುವಂತೆ ಈ ಫೀಚರ್ ಗಳು ಕೆಲವೇ ದಿನಗಳಲ್ಲಿ ಲಭ್ಯವಾಗುತ್ತದೆ. ಮತ್ತು ಎಲ್ಲಾ ಫೀಚರ್ ಗಳು ಡೀಫಾಲ್ಟ್ ಆಗಿ ಸ್ವಿಚ್ ಆನ್ ಆಗಿರುತ್ತದೆ.ಗಮನಿಸಬೇಕಾಗಿರುವ ಅಂಶವೇನೆಂದರೆ ಕಳೆದ ಸೆಪ್ಟೆಂಬರ್ ನಲ್ಲಿ ಗೂಗಲ್ ತನ್ನ ಜಿಮೇಲ್ ಫ್ಲಾಟ್ ಫಾರ್ಮ್ ನಲ್ಲಿ ಗೂಗಲ್ ಇನ್ ಬಾಕ್ಸ್ ನ್ನು ಸ್ಥಗಿತಗೊಳಿಸುವ ಬಗ್ಗೆ ಪ್ರಕಟಿಸಿತ್ತು. ಜಿಮೇಲ್ ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಬಗ್ಗೆ ಕೂಡ ಗೂಗಲ್ ಸಂಸ್ಥೆ ತಿಳಿಸಿತ್ತು. ಪ್ರತಿಯೊಬ್ಬರಿಗೂ ಉತ್ತಮ ಇಮೇಲ್ ಫೀಚರ್ ಸಿಗಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಮಾರ್ಚ್ 2019 ಕ್ಕೆ ಗೂಗಲ್ ಇನ್ ಬಾಕ್ಸ್ ನ್ನು ಸ್ಥಗಿತಗೊಳಿಸಿ ನಾವು ಹೆಚ್ಚು ಜಿಮೇಲ್ ಗೆ ಗಮನ ನೀಡಲಿದ್ದೇವೆ ಎಂದು ತಿಳಿಸಿತ್ತು. ಅದೇ ರೀತಿ ಈಗಿನ ಸದ್ಯದ ಬೆಳವಣಿಗೆಗಳು ನಡೆಯುತ್ತಿದೆ.