ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ 'ಗೂಗಲ್' ಮನವಿ!!..ಏಕೆ ಗೊತ್ತಾ!?

ಸ್ಮಾರ್ಟ್‌ಫೋನ್‌ಗಳು ನಿಷ್ಕ್ರೀಯವಾಗುವ, ಹ್ಯಾಂಗ್ ಆಗುವ ದೂರುಗಳು ಗೂಗಲ್ ಕಂಪೆನಿಗೆ ಯಾವಾಗಲೂ ಬರುತ್ತಿದ್ದವು. ಈ ಕುರಿತು ಸಂಶೋಧನೆ ನಡೆಸಲು ಮುಂದಾದ ಗೂಗಲ್ ಗುರುತಿಸಿದ್ದು ಭಾರತೀಯರು ಸೇರಿ ವಿಶ್ವದೆಲ್ಲೆಡೆ ಹೆಚ್ಚು ಬಳಕೆಯಾಗುತ್ತಿದ್ದ ಸಾಮೂಹಿಕ

By Bhaskar
|

ಇದ್ದಕ್ಕಿದ್ದಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ನಿಷ್ಕ್ರೀಯವಾಗುವ, ಹ್ಯಾಂಗ್ ಆಗುವ ದೂರುಗಳು ಗೂಗಲ್ ಕಂಪೆನಿಗೆ ಯಾವಾಗಲೂ ಬರುತ್ತಿದ್ದವು. ಈ ಕುರಿತು ಸಂಶೋಧನೆ ನಡೆಸಲು ಮುಂದಾದ ಗೂಗಲ್ ಗುರುತಿಸಿದ್ದು ಭಾರತೀಯರು ಸೇರಿ ವಿಶ್ವದೆಲ್ಲೆಡೆ ಹೆಚ್ಚು ಬಳಕೆಯಾಗುತ್ತಿದ್ದ ಸಾಮೂಹಿಕ ಮೆಸೇಂಜಿಂಗ್ ವ್ಯವಸ್ಥೆ.

ಹೌದು, ಗುಡ್‌ಮಾರ್ನಿಂಗ್, ಗುಡ್‌ನೈಟ್ ಮೆಸೇಜ್‌ಗಳನ್ನು ಪ್ರತಿದಿನವೂ ಚಾಚುತಪ್ಪದೆ ಕಳುಹಿಸುವ ಹಾಗೂ ಪಡೆಯದುಕೊಳ್ಳುವವರಿಂದಾಗಿ ಇಡೀ ಆಂಡ್ರಾಯ್ಡ್ ಫೋನ್‌ಗಳೇ ಹ್ಯಾಂಗ್ ಆಗುವ ತೊಂದರೆಯನ್ನು ಎದುರಿಸುತ್ತಿವೆ. ವಿಶ್ವದಲ್ಲಿ ಭಾರತೀಯರೇ ಹೆಚ್ಚು ಸಾಮೂಹಿಕ ಮೆಸೇಂಜಿಂಗ್ ವ್ಯವಸ್ಥೆಯ ಅಡಿಯಲ್ಲಿ ಬಂದಿದ್ದಾರೆ ಎಂದು ಗೂಗಲ್ ಸಹ ಸ್ಪಷ್ಟಪಡಿಸಿದೆ.

ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ 'ಗೂಗಲ್' ಮನವಿ!!..ಏಕೆ ಗೊತ್ತ

ಒಬ್ಬರಿಗೆ ಬಂದ ಮೆಸೇಜ್‌ಗಳನ್ನು ಮತ್ತೊಬ್ಬರಿಗೆ ಕಳುಹಿಸುವ ವಿಧಾನಕ್ಕೆ ಗೂಗಲ್ ಸುಸ್ತು ಹೊಡೆದು ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ ಹೇಳಿದೆ ಜೊತೆಗೆ ತೊಂದರೆಯನ್ನು ಪರಿಹರಿಸಲು ಆಪ್ ಅನ್ನು ಸಹ ಬಿಡುಗಡೆ ಮಾಡಿದೆ. ಹಾಗಾದರೆ ಆ ಆಪ್ ಯಾವುದು? ಭಾರತದಲ್ಲಿ ವಿನಿಮಯ ಆಗುವ ಸಂದೇಶಗಳು ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.

ಸರಾಸರಿ 50 ಮೆಸೇಜ್‌ಗಳು

ಸರಾಸರಿ 50 ಮೆಸೇಜ್‌ಗಳು

ವಾಟ್ಸ್‌ಆಪ್, ಫೇಸ್‌ಬುಕ್ ಮೆಸೇಂಜರ್‌ಗಳ ಮೂಲಕಒಬ್ಬ ವ್ಯಕ್ತಿ ದಿನಕ್ಕೆ 50 ಜನಕ್ಕಾದರೂ ಟೆಕ್ಸ್ಟ್, ಇಮೇಜ್ ಹಾಗೂ ವಿಡಿಯೋ ಸಂದೇಂಶಗಳನ್ನು ವಿನಿಮಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿಯೇ, ಭಾರತೀಯರ ಸ್ಮಾರ್ಟ್‌ಫೋನ್ ಮೆಮೊರಿ ಸಮಸ್ಯೆ ಎದುರಿಸುತ್ತಿದೆ ಎಂದು ಗೂಗಲ್ ಹೇಳಿದೆ.

ಸರ್ವರ್‌ಗಳಿಗೆ ಪೀಕಲಾಟ

ಸರ್ವರ್‌ಗಳಿಗೆ ಪೀಕಲಾಟ

ಕೋಟ್ಯಾಂತರ ಜನರು ಒಮ್ಮೆಲೆ ವಾಟ್ಸ್ಆಪ್ ಫೇಸ್‌ಬುಕ್ ಹಾಗೂ ಇನ್ನಿತರ ಸೇವೆಗಳನ್ನ್ನು ಬಳಸುತ್ತಿರುವುದರಿಂದ ಅವುಗಳ ಮೂಲ ಸರ್ವರ್‌ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.!ಹೊಸ ವರ್ಷದ ದಿನದಂದು ಭಾರತೀಯರು ವಿನಿಮಯ ಮಾಡಿದ 200 ಕೋಟಿಗೂ ಹೆಚ್ಚು ಮೆಸೇಜ್‌ಗೆ ವಾಟ್ಸ್ಆಪ್ ಸರ್ವರ್ ನಿಷ್ಕ್ರೀಯವಾಗಿದ್ದನ್ನು ಇಲ್ಲಿ ನೋಡಬಹುದು.

ಫೋನ್ ಹ್ಯಾಂಗ್ ಆಗಲು ನೇರಕಾರಣ

ಫೋನ್ ಹ್ಯಾಂಗ್ ಆಗಲು ನೇರಕಾರಣ

ವಾಟ್ಸ್ಆಪ್, ಫೇಸ್‌ಬುಕ್ ಹಾಗೂ ಇನ್ನಿತರ ಮಾಧ್ಯಮಗಳಿಂದ ಮೊಬೈಲ್ ಒಳಗೆ ತಲುಪುವ ಟೆಕ್ಸ್ಟ್, ಇಮೇಜ್ ಹಾಗೂ ವಿಡಿಯೋ ಸಂದೇಂಶಗಳು ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ನೇರಕಾರಣವಾಗಿದೆ. ಮೊಬೈಲ್ ಮೆಮೊರಿಯನ್ನು ಆಕ್ರಮಿಸಿಕೊಳ್ಳುವ ಇವು ಮೊಬೈಲ್ ಕಾರ್ಯನಿರ್ವಹಣೆಯನ್ನು ಹಾಳುಮಾಡುತ್ತಿವೆ.

ಪರಿಹಾರಕ್ಕಾಗಿ ಹೊಸ ಆಪ್

ಪರಿಹಾರಕ್ಕಾಗಿ ಹೊಸ ಆಪ್

ಸಾಮೂಹಿಕ ಮೆಸೇಂಜಿಂಗ್ ತೊಂದರೆಯಿಂದ ಉಂಟಾಗುತ್ತಿದ್ದ ಅನನುಕೂಲ ನಿಭಾಯಿಸಲು ಗೂಗಲ್ ಹೊದೊಂದು ಆಪ್ ಪರಿಚಯಿಸಿದೆ. "ಫೈಲ್ಸ್ ಗೋ" ಎಂಬ ಹೊಸ ಆಪ್ ಇದಕ್ಕಾಗಿ ಬಿಡುಗಡೆಯಾಗಿದ್ದು, ಒಂದೇ ರೀತಿಯ ಹಲವು ಫೈಲ್‌ಗಳನ್ನು ಹುಡುಕಿ ಡಿಲೀಟ್ ಮಾಡಲು ಹೇಳುತ್ತದೆ.

ನಾವು ಮಾಡಬೇಕಿರುವುದು ಏನು?

ನಾವು ಮಾಡಬೇಕಿರುವುದು ಏನು?

ಸ್ಮಾರ್ಟ್‌ಫೋನಿನಲ್ಲಿ ಆಂತರಿಕ ಮೆಮೊರಿ ಹೆಚ್ಚು ಖಾಲಿ ಇದ್ದರೆ ಮಾತ್ರ ಆ ಫೋನ್ ಕಾರ್ಯನಿರ್ವಹಣೆ ಚೆನ್ನಾಗಿರುತ್ತದೆ. ಹಾಗಾಗಿ, ಫೈಲ್ಸ್ ಗೋ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿದ್ದರೂ ಸಹ ದಿನವೂ ಫೋನ್ ಆಂತರಿಕ ಮೆಮೊರಿ ಖಾಲಿ ಉಳಿಯುವಂತೆ ಟೆಕ್ಸ್ಟ್, ಇಮೇಜ್ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡುತ್ತಿರಿ.

ಹೀಗೆ ಮಾಡುದ್ರೆ ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗಲ್ವಂತೆ!..'ಗೂಗಲ್‌' ಹೇಳಿದ್ದು!!

ಹೀಗೆ ಮಾಡುದ್ರೆ ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗಲ್ವಂತೆ!..'ಗೂಗಲ್‌' ಹೇಳಿದ್ದು!!

ಎಲ್ಲಾ ರೀತಿಯ ಸೌಲಭ್ಯಗಳೂ ಇರುವ ಇಂದಿನ ಸ್ಮಾರ್ಟ್‌ಫೋನ್‌ಗಲ್ಲಿ ಅದಕ್ಕೆ ತಕ್ಕಂತೆ ಬ್ಯಾಟರಿ ಮಾತ್ರ ಬಾಳಿಕೆ ಬರುವುದೇ ಇಲ್ಲ ಎಂಬುದು ಬಳಕೆದಾರರ ದೂರು. ಹಾಗಾಗಿ, ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಮೊಬೈಲ್ ಕಂಪೆನಿಗಳು ಸೇರಿದಂತೆ ಎಲ್ಲ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದರೆ, ಇಲ್ಲಿಯವರೆಗೂ ಇದಕ್ಕೆ ಬೇಕಾದ ಯಶಸ್ಸು ದೊರೆತಿಲ್ಲ.

ಇದರ ಹೊರತಾಗಿಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗೂಗಲ್ ಇತ್ತೀಚಿಗೆ ಮಾಹಿತಿ ನೀಡಿದೆ. ಬ್ಯಾಟರಿ ಬಾಳಿಕೆಯ ಕುರಿತು ಆಪ್ ಡೆವಲಪರ್ಗಳೊಂದಿಗೂ ಮಾತನಾಡಿರುವ ಗೂಗಲ್ ಸಂಸ್ಥೆ, ಬ್ಯಾಟರಿ ಹೆಚ್ಚು ಬಳಕೆಯಾಗದಂತೆ ನಜರು ಯಾವ ಕ್ರಮ ಕೈಗೊಳ್ಳಬಹುದೆಂಬ ಬಗ್ಗೆಯೂ ಸಹ ಮಾತನಾಡಿದೆ.

ಬ್ಯಾಟರಿ ಏಕೆ ಬೇಗ ಖಾಲಿಯಾಗುತ್ತೆ ಎಂಬ ಬಗ್ಗೆ ಆಂಡ್ರಾಯ್ಡ್ ದೇವ್ ಶೃಂಗಸಭೆಯಲ್ಲಿ ಗೂಗಲ್ ಮಾಹಿತಿ ನೀಡಿದ್ದು, ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿ ಆಗುವುದಕ್ಕೆ ಕೇವಲ ಆಪ್‌ಗಳಷ್ಟೇ ಕಾರಣವಲ್ಲ. ಬದಲಾಗಿ ಬ್ರೈಟ್‌ನೆಸ್ ಸಹ ಕಾರಣ ಎಂದು ತಿಳಿಸಿದೆ. ಇನ್ನು ಇದಕ್ಕೆ ಗೂಗಲ್ ಪರಿಹಾರವನ್ನು ಸಹ ತಿಳಿಸಿದ್ದು, ಆ ಪರಿಹಾರಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

 ಡಾರ್ಕ್‌ ಮೋಡ್ ಬಳಸಿ !

ಡಾರ್ಕ್‌ ಮೋಡ್ ಬಳಸಿ !

ಗೂಗಲ್ ಪ್ರಕಾರ, ಬ್ರೈಟ್‌ನೆಸ್ ಜೊತೆಗೆ ಸ್ಕ್ರೀನ್ ಕಲರ್ ಸಹ ಬಹುಬೇಗ ಬ್ಯಾಟರಿ ಖಾಲಿಯಾಗಲು ಪ್ರಮುಖ ಕಾರಣವಾಗಿದೆ. ಡಾರ್ಕ್ಮೋಡ್ ಇಡೀ ಮೊಬೈಲ್‌ ಆಪರೇಟಿಂಗ್ ಸಿಸ್ಟಮ್ ಥೀಮ್ ಅನ್ನು ಬದಲಾವಣೆ ಮಾಡಲಿದೆ. ಒಂದು ವೇಳೆ ಡಾರ್ಕ್ ಮೋಡ್ ನಲ್ಲಿ ಬ್ರೈಟ್ ನೆಸ್ ಹೆಚ್ಚಿದ್ದರೂ ಮೊಬೈಲ್ ಬ್ಯಾಟರಿ ಬಳಕೆ ಕಡಿಮೆ ಮಾಡಲಿದೆ ಎಂದು ಗೂಗಲ್ ಸಲಹೆ ನೀಡಿದೆ.

ವೈಬ್ರೇಷನ್ ಆಫ್ ಮಾಡಿ

ವೈಬ್ರೇಷನ್ ಆಫ್ ಮಾಡಿ

ಸ್ಮಾರ್ಟ್‌ಫೋನ್ ವೈಬ್ರೇಟ್ ರಿಂಗ್ ಆಗುವ ರೀತಿ ಸೆಟ್ಟಿಂಗ್ಸ್ ಬೇಡವೇ ಬೇಡ. ಏಕೆಂದರೆ, ವೈಬ್ರೇಷನ್ ಎಷ್ಟು ಜೋರಾಗಿ ಇರುತ್ತದೋ ಅಷ್ಟೇ ಹೆಚ್ಚು ಬ್ಯಾಟರಿ ಬಳಕೆಯಾಗುತ್ತದೆ. ಪೋನಿನಲ್ಲಿ ವೈಬ್ರೇಷನ್ ಹುಟ್ಟಿಹಾಕಲು ಇರುವ ಸಾಧನವೇ ಬೇರೆ ಇರುವುದರಿಂದ ಬ್ಯಾಟರಿ ಬಹಳ ವೇಗವಾಗಿ ವಿನಿಯೋಗವಾಗುತ್ತದೆ.

ಲೊಕೇಷನ್ ಸರ್ವೀಸ್ ಬಳಕೆ ಬೇಡ

ಲೊಕೇಷನ್ ಸರ್ವೀಸ್ ಬಳಕೆ ಬೇಡ

ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಲೊಕೇಷನ್ ಸರ್ವೀಸ್ ಬಳಕೆ ಮಾಡದಿರುವುದು ಉತ್ತಮ. ಏಕೆಂದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಷನ್ ಸರ್ವೀಸ್ ಬಳಕೆ ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಲಿದೆ. ಹಾಗಾಗಿ, ಸೇವಿಂಗ್ ಮೋಡ್‌ನಲ್ಲಿ ಲೊಕೇಷನ್ ಸರ್ವೀಸ್ ಬಳಸಿದರೆ ಒಳ್ಳೆಯದು.

ನೋಟಿಫಿಕೇಷನ್‌ಗಳಿಗೆ ಗುಡ್‌ಬೈ ಹೇಳಿ

ನೋಟಿಫಿಕೇಷನ್‌ಗಳಿಗೆ ಗುಡ್‌ಬೈ ಹೇಳಿ

ಒಂದು ಅಂದಾಜಿನ ಪ್ರಕಾರ ಪ್ರತಿಯೋರ್ವರ ಸ್ಮಾರ್ಟ್‌ಪೋನಿಗೆ ಪ್ರತಿದಿನ 50 ಕ್ಕೂ ಹೆಚ್ಚು ನೋಟಿಫಿಕೇಷನ್‌ಗಳು ಬರುತ್ತವೆಯಂತೆ. ಮೆಸೇಜ್, ಆಪ್‌ಗಳು ಹೀಗೆ ಹಲವು ನೋಟಿಫಿಕೇಷನ್‌ಗಳು ಬ್ಯಾಟರಿಯನ್ನು ತಿನ್ನುತತ್ತಿವೆ. ಹಾಗಾಗಿ, ಅಗತ್ಯಗತ್ಯವೆನಿಸಿದ ಇಮೇಲ್ ನೋಟಿಫಿಕೇಷನ್ ಮಾತ್ರ ಎನೇಬಲ್ ಮಾಡಿ ಬ್ಯಾಟರಿ ಉಳಿಸಿಕೊಳ್ಳಿ.

ಸ್ಕ್ರೀನ್ ಟೈಮ್ ಔಟ್!

ಸ್ಕ್ರೀನ್ ಟೈಮ್ ಔಟ್!

ನಿಮಗೆ ಗೊತ್ತಾ? ಮೊಬೈಲ್ ಟಾರ್ಚ್ ಆನ್ ಆದಾಗ ಬಳಕೆಯಾಗುವ ಬ್ಯಾಟರಿ ಶಕ್ತಿಗಿಂತ ಸ್ಕ್ರೀನ್ ಆನ್ ಆಗಿದ್ದಾಗ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಸ್ಕ್ರೀನ್ ಟೈಮ್ ಔಟ್ ಸೆಟ್ ಮಾಡುವಾಗ ಅತೀ ಕಡಿಮೆ ಅವಧಿಯ ಟೈಮ್ ಔಟ್ ಸೆಟ್ ಮಾಡಿ ಬ್ಯಾಟರಿಯನ್ನು ಉಳಿಸಿ.

ಬ್ಲೂಟೂತ್ ಮತ್ತು ವೈಫೈ

ಬ್ಲೂಟೂತ್ ಮತ್ತು ವೈಫೈ

ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವಂತೆ ಮಾಡಲು ಬ್ಲೂಟೂತ್ ಮತ್ತು ವೈಫೈಗಳನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿಕೊಳ್ಳಿ. ಕೆಲವೊಮ್ಮೆ ಈ ಎಲ್ಲಾ ಆಯ್ಕೆಗಳನ್ನು ನಿಮಗೆ ಗೊತ್ತಿಲ್ಲದೇ ನೀವು ಆನ್ ಮಾಡಿರುವುದರಿಂದ ನಿಮ್ಮ ಬ್ಯಾಟರಿ ನಿಮಗೇ ಗೊತ್ತಿಲ್ಲದಂತೆ ಖಾಲಿಯಾಗುತ್ತಿರುತ್ತದೆ.

 ವೈರ್‌ಲೆಸ್ ಚಾರ್ಜಿಂಗ್

ವೈರ್‌ಲೆಸ್ ಚಾರ್ಜಿಂಗ್

ಬೇಡ ವೈರ್‌ಲೆಸ್ ಚಾರ್ಜರ್ ಬಳಸುವುದು ಸುಲಭ ಆಗಿದ್ದರೂ ಫೋನ್ ಬೇಗನೆ ಬಿಸಿಯಾಗುತ್ತದೆ. ಇನ್ನು ಫಾಸ್ಟ್ ಚಾರ್ಜ್‌ರ್‌ಗಳ ಕಥೆಯೂ ಇದೇ ಆಗಿರುವುದರಿಂದ ವೈರ್‌ಲೆಸ್ ಮತ್ತು ಫಾಸ್ಟ್ ಚಾರ್ಜಿಂಗ್ ಅನ್ನು ದೂರವಿಡಿ. ನೆನಪಿಡಿ ವೈರ್‌ಲೆಸ್ ಮತ್ತು ಫಾಸ್ಟ್ ಚಾರ್ಜಿಂಗ್ ಎರಡೂ ಬ್ಯಾಟರಿಗೆ ಹಾನಿಯುಂಟು ಮಾಡುತ್ತವೆ.

Best Mobiles in India

English summary
ndians’ obsession for sending ‘Good Morning’ messages is leading to one in three smartphone users in India run out of space on their phones daily. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X