ಗೂಗಲ್‌ ಸರ್ಚ್‌ನಲ್ಲಿ ನೇರವಾಗಿ ಫುಡ್‌ ಆರ್ಡರ್‌/ಟೇಬಲ್‌ ಬುಕ್‌ ಮಾಡಲು ಅವಕಾಶ!

By Suneel
|

ಹೊಸ ಪ್ರದೇಶಗಳಿಗೆ ಪ್ರವಾಸ ಹೋದಾಗ, ವೀಕೆಂಡ್‌ ಎಂಜಾಯ್‌ ಮಾಡೋಕೆ ರೆಸ್ಟೋರೆಂಟ್‌ಗಳನ್ನು ಹುಡುಕಿ ಹೋದಾಗ ಉತ್ತಮ ಆಹಾರ ಆರ್ಡರ್‌ ಮಾಡೋಕೆ, ಅಥವಾ ರೆಸ್ಟೋರೆಂಟ್‌ಗಳಲ್ಲಿ ಒಳ್ಳೆ ಟೇಬಲ್‌ ಚಾಯ್ಸ್‌ ಮಾಡೋಕೆ ಸ್ವಲ್ಪ ಕಷ್ಟಾನೆ. ವೀಕೆಂಡ್‌ನಲ್ಲಿ ಎಂಜಾಯ್‌ಮೆಂಟ್‌ ಬಯಸುವವರ ಮತ್ತು ಪ್ರವಾಸಿಗರ ಇಂತಹ ಕಷ್ಟ ನೋಡೋಕೆ ಆಗೋದೆ ಗೂಗಲ್‌ ಈಗ ಭಾರತದಾದ್ಯಂತ ನೇರವಾಗಿ ಫುಡ್‌ ಆರ್ಡರ್‌ ಮಾಡೋಕೆ ಮತ್ತು ರೆಸ್ಟೋರೆಂಟ್‌ನಲ್ಲಿ ಟೇಬಲ್‌ ಬುಕ್‌ ಮಾಡೋಕೆ ಸರ್ಚ್‌ ಇಂಜಿನ್‌ನಲ್ಲಿ ಅವಕಾಶ ಮಾಡಿಕೊಟ್ಟಿದೆ.

ಗೂಗಲ್‌ ಈಗ ಫುಡ್‌ ಆರ್ಡರ್‌ ಮಾಡೋಕೆ ಮತ್ತು ರೆಸ್ಟೋರೆಂಟ್‌ಗಳಲ್ಲಿ ಟೇಬಲ್‌ ಬುಕ್‌ ಮಾಡೋಕೆ ಸರ್ಚ್‌ನಲ್ಲಿ ನೇರ ಅವಕಾಶ ನೀಡುತ್ತಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

ಗೂಗಲ್‌

ಗೂಗಲ್‌

ಗೂಗಲ್‌ ತನ್ನ ಬಳಕೆದಾರರಿಗೆ ಫುಡ್‌ ಆರ್ಡರ್‌ ಮಾಡೋಕೆ ಮತ್ತು ತಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಮುಂಗಡವಾಗಿ ನಿರ್ಧಿಷ್ಟ ಟೇಬಲ್‌ ಬುಕ್‌ ಮಾಡಲು ಸುಲಭ ಮಾರ್ಗ ನೀಡುತ್ತಿದೆ. ನೇರವಾಗಿ ಸರ್ಚ್ ಮುಖಾಂತರ ತಮ್ಮ ಹತ್ತಿರದ ರೆಸ್ಟೋರೆಂಟ್‌ಗಳಲ್ಲಿ ಟೇಬಲ್‌ ಕಾಯ್ಕಿರಬಹುದು ಅಥವಾ ಫುಡ್‌ ಆರ್ಡರ್‌ ಮಾಡಬಹುದು.

 ಜೊಮಾಟೊ

ಜೊಮಾಟೊ

ಗೂಗಲ್‌ ಕಂಪನಿ ಫುಡ್‌ ಡೆಲಿವರಿ ಮತ್ತು ಟೇಬಲ್‌ ರಿಸರ್ವೇಶನ್‌ಗಾಗಿ 'ಜೊಮಾಟೊ'ದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ 'ಸ್ವಿಗ್ಗಿ'ಯೊಂದಿಗೆ(Swiggy) ಫುಡ್‌ ಡೆಲಿವರಿ ಮತ್ತು ಡೈನ್‌ಔಟ್‌ಗಾಗಿ , ಬಿಟ್‌ಪ್ಲಸ್(Bytplus)ನೊಂದಿಗೂ ಸಹ ಫುಡ್‌ ಡೆಲಿವರಿಗಾಗಿ ಒಪ್ಪಂದ ಮಾಡಿಕೊಂಡಿದೆ.

ಗೂಗಲ್‌ ಬಳಕೆದಾರರು

ಗೂಗಲ್‌ ಬಳಕೆದಾರರು

ಬಳಕೆದಾರರು ರೆಸ್ಟೋರೆಂಟ್‌ಗಾಗಿ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸರ್ಚ್‌ ಮಾಡಿದರೆ "Place an order" ಮತ್ತು "Find a Table' ಆಯ್ಕೆಗಳು ಪ್ರದರ್ಶನವಾಗುತ್ತವೆ. ಬಳಕೆದಾರ ಒಮ್ಮೆ ಆಯ್ಕೆ ಮೇಲೆ ಟ್ಯಾಪ್‌ ಮಾಡಿದರೆ ಬಳಕೆದಾರ ಕಂಪನಿಯ ಮೊಬೈಲ್‌ ವೆಬ್‌ಸೈಟ್‌ಗೆ ಮರಳಿ ತನ್ನ ಆರ್ಡರ್‌ ಅನ್ನು ಪೂರ್ಣಗೊಳಿಸಬಹುದು.

ಗೂಗಲ್‌ ಅಧಿಕೃತ ಬ್ಲಾಗ್‌

ಗೂಗಲ್‌ ಅಧಿಕೃತ ಬ್ಲಾಗ್‌

ಗೂಗಲ್‌ 'ಜನರು ತಮ್ಮ ಮೊಬೈಲ್‌ನಲ್ಲಿ ರೆಸ್ಟೋರೆಂಟ್‌ಗಾಗಿ ಸರ್ಚ್‌ ಮಾಡಿದರೆ 'Place an order' ರಿಸಲ್ಟ್‌ ಪಡೆಯುತ್ತಾರೆ' ಎಂದು ಹೇಳಿದೆ. ಈ ಸೇವೆಯು ಐಓಎಸ್‌ ಮತ್ತು ಆಂಡ್ರಾಯ್ಡ್ ಎರಡಕ್ಕೂ ಲಭ್ಯ.

 Open YOLO

Open YOLO

ಗೂಗಲ್ ಇತ್ತೀಚೆಗೆ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ 'You Only Login Once(Open YOLO) ಎಂಬ ಪಾಸ್‌ವರ್ಡ್‌ ಮ್ಯಾನೇಜ್‌ ಆಪ್‌ ಅನ್ನು ಆರಂಭಿಸಿದೆ. ಈ ಆಪ್‌ ಓಪನ್‌ ಮಾಡಿದರೆ ಸ್ವಯಂಚಾಲಿತವಾಗಿ ಆಪ್‌ ಪಾಸ್‌ವರ್ಡ್‌ ಅನ್ನು ತೆಗೆದುಕೊಳ್ಳುತ್ತದೆ.

Best Mobiles in India

Read more about:
English summary
Search giant Google is making it easier for the users to order food and book a table at their favourite restaurant. The company will now allow users who are looking for a restaurant nearby to book a table or order food right from the 'search' itself.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X