ಗೂಗಲ್‌ ಸಂಸ್ಥೆಯಿಂದ ಪತ್ರಿಕೋದ್ಯಮ ಪರಿಹಾರ ನಿಧಿ!

|

ಕೊರೊನಾ ವೈರಸ್ ವಕ್ಕರಿಸಿ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ನೀಡಿದೆ. ಈ ಸಂದರ್ಭದಲ್ಲಿ ಬಹುತೇಕ ವಲಯಗಳು ಹಣಕಾಸಿನ ಸಂಕಷ್ಟದಲ್ಲಿ ಸಿಲುಕಿವೆ. ಆ ಪೈಕಿ ಪತ್ರಿಕೋದ್ಯಮವು ಒಂದಾಗಿದ್ದು, ಸುದ್ದಿ ಸಂಸ್ಥೆಗಳು ಜಾಹೀರಾತುಗಳ ಆದಾಯ ಇಲ್ಲದೇ ಸಂಕಷ್ಟದಲ್ಲಿದೆ. ಈ ನಿಟ್ಟಿನಲ್ಲಿ ವಿಶ್ವ ಟೆಕ್ ದೈತ್ಯ ಗೂಗಲ್ ಸಂಸ್ಥೆ ವಿಶ್ವಾದ್ಯಂತ ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ನೆರವಾಗಲು 'ಪತ್ರಿಕೋದ್ಯಮ ಪರಿಹಾರ ನಿಧಿ'-(Journalism Emergency Relief Fund) ಸ್ಥಾಪನೆ ಮಾಡಿರುವುದಾಗಿ ಘೋಷಿಸಿದೆ.

ಗೂಗಲ್ ಸಂಸ್ಥೆ

ಹೌದು, ಗೂಗಲ್ ಸಂಸ್ಥೆಯು ಗೂಗಲ್ ನ್ಯೂಸ್ ಇನಿಶಿಯೇಟಿವ್ ಅಡಿಯಲ್ಲಿ ಸಣ್ಣ, ಮಧ್ಯಮ ಮತ್ತು ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ತುರ್ತು ನೆರವು ಒದಗಿಸಲು ಪತ್ರಿಕೋದ್ಯಮ ಪರಿಹಾರ ನಿಧಿಯನ್ನು ಪ್ರಾರಂಭಿಸಿದೆ. ಆದರೆ ಪರಿಹಾರದ ಮೊತ್ತ ಎಷ್ಟು ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಜಗತ್ತಿನಾದ್ಯಂತ ಸರ್ಕಾರಗಳು ಲಾಕ್‌ಡೌನ್‌ ಜಾರಿ ಮಾಡಿವೆ.

ತುರ್ತು ಪರಿಹಾರ ನಿಧಿ

ಗೂಗಲ್ ಪತ್ರಿಕೋದ್ಯಮ ತುರ್ತು ಪರಿಹಾರ ನಿಧಿ ಮೂಲಕ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದೆ. ಸಣ್ಣ ಹೈಪರ್ ಸ್ಥಳೀಯ ಸುದ್ದಿ ಸಂಸ್ಥೆಗಳಿಂದ ಹಿಡಿದು ದೊಡ್ಡ ಸುದ್ದಿ ಸಂಸ್ಥೆಗಳಿಗೂ ಧನಸಹಾಯ ನೀಡಲಾಗುವುದು ಎಂದು ಗೂಗಲ್ ನ್ಯೂಸ್‌ನ ಉಪಾಧ್ಯಕ್ಷ ರಿಚರ್ಡ್ ಗಿಂಗ್ರಾಸ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅರ್ಜಿ ಸಲ್ಲಿಸಲು

ಇನ್ನು ಗೂಗಲ್ ಪರಿಹಾರ ನಿಧಿಯಿಂದ ಫಂಡಿಂಗ್ ಪಡೆಯಲು ಸುದ್ದಿ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇದೇ 29, 2020 (ರಾತ್ರಿ 11:59) ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಗಿದ ಬಳಿಕ ಗೂಗಲ್ ಫಂಡಿಂಗ್ ಪ್ರಕ್ರಿಯೆ ನಡಸಲಿದೆ. ಆ ನಂತರ ಗೂಗಲ್ ಪರಿಹಾರ ನಿಧಿಯಿಂದ ಪರಿಹಾರ ಪಡೆದ ಸುದ್ದಿ ಸಂಸ್ಥೆಗಳ ಹೆಸರನ್ನು ಪ್ರಕಟ ಮಾಡುವುದಾಗಿ ಹೇಳಿದೆ. ಅರ್ಜಿ ಸಲ್ಲಿಸಲು- https://newsinitiative.withgoogle.com/

Best Mobiles in India

English summary
Google on Wednesday announced a Journalism Emergency Relief Fund to support the small-scaled newsrooms across the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X