ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಆಕರ್ಷಕ; ಗೂಗಲ್‌ ಪರಿಚಯಿಸಿದೆ ಹೊಸ ಫೀಚರ್ಸ್‌ !

|

ಗೂಗಲ್‌ ಕಂಪೆನಿ ಸರ್ಚ್ ಇಂಜಿನ್ ತಂತ್ರಜ್ಞಾನ, ಕ್ಲೌಡ್ ಕಂಪ್ಯೂಟಿಂಗ್, ಕಂಪ್ಯೂಟರ್ ಸಾಫ್ಟ್‌ವೇರ್, ಕ್ವಾಂಟಮ್ ಕಂಪ್ಯೂಟಿಂಗ್, ಇ-ಕಾಮರ್ಸ್, ಕೃತಕ ಬುದ್ಧಿಮತ್ತೆ ಹಾಗೂ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಹೆಚ್ಚಿನ ಪ್ರಯೋಗಾತ್ಮಕ ಕೆಲಸ ಮಾಡುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಈಗ ಗೂಗಲ್‌ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಹೊಸ ಫೀಚರ್ಸ್‌ ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ಕಂಪೆನಿಯು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಸ್ಮಾರ್ಟ್‌ವಾಚ್‌ಗಳಿಗೆ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಫೀಚರ್ಸ್‌ಗಳಲ್ಲಿ ರೀಡಿಂಗ್‌ ಮೋಡ್‌, ಹೋಮ್ ಸ್ಕ್ರೀನ್‌ನಲ್ಲಿ ಯೂಟ್ಯೂಬ್ ಸರ್ಚ್‌ ವಿಜೆಟ್ ಸೇರಿದಂತೆ ಇನ್ನೂ ಹೆಚ್ಚಿನ ಫೀಚರ್ಸ್‌ ಪರಿಚಯಿಸಿದೆ. ಹಾಗಿದ್ರೆ ಯಾವೆಲ್ಲಾ ಫೀಚರ್ಸ್‌ನಿಂದ ಆಂಡ್ರಾಯ್ಡ್‌ ಡಿವೈಸ್‌ ಬಳಕೆದಾರರರಿಗೆ ಏನೆಲ್ಲಾ ಅನುಕೂಲ ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿರಿ.

ರೀಡಿಂಗ್‌ ಮೋಡ್‌

ರೀಡಿಂಗ್‌ ಮೋಡ್‌

ಗೂಗಲ್‌ ರೀಡಿಂಗ್ ಮೋಡ್‌ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಮೂಲಕ ಓದುವ ಅನುಭವವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷ ಚೇತನರು ಅಥವಾ ಕಳಪೆ ದೃಷ್ಟಿ ಹೊಂದಿರುವವರಿಗೆ ಇದು ಅತ್ಯಾನುಕೂಲ. ಇದು ಗ್ರಾಹಕೀಯಗೊಳಿಸಬಹುದಾದ ಡಿಸ್‌ಪ್ಲೇ ಆಯ್ಕೆ ನೀಡಲಿದ್ದು, ಕಾಂಟ್ರಾಸ್ಟ್, ಫಾಂಟ್ ಸ್ಟೈಲ್‌ ಮತ್ತು ಗಾತ್ರ ಹಾಗೂ ವೇಗ ನಿಯಂತ್ರಣದೊಂದಿಗೆ ಪಠ್ಯ ಕಂಡುಬರುತ್ತದೆ.

ಗೂಗಲ್‌ ಫೋಟೋದಲ್ಲಿ ಹೊಸ ಫೀಚರ್ಸ್‌

ಗೂಗಲ್‌ ಫೋಟೋದಲ್ಲಿ ಹೊಸ ಫೀಚರ್ಸ್‌

ಗೂಗಲ್‌ ಫೋಟೋದಲ್ಲಿ ಇತ್ತೀಚೆಗೆ ಕೊಲಾಜ್ ಎಡಿಟರ್‌ಗೆ ವಿಭಿನ್ನ ಶೈಲಿಗಳನ್ನು ಪರಿಚಯಿಸಲಾಗಿದೆ. ಇದರಿಂದ ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಮ್ಮ ಮೆಚ್ಚಿನ ಫೋಟೋಗಳನ್ನು ಶೇರ್‌ ಮಾಡಿಕೊಳ್ಳಬಹುದು.

ಹೊಸ ಎಮೋಜಿ

ಹೊಸ ಎಮೋಜಿ

ಎಮೋಜಿ ಕಿಚನ್ ನಲ್ಲೂ ಹೊಸ ಎಮೋಜಿಗಳನ್ನು ಪರಿಚಯಿಸಲಾಗಿದೆ. ನೀವು ಜಿಬೋರ್ಡ್‌ ಮೂಲಕ ಸೃಜನಾತ್ಮಕ ಸ್ಟಿಕ್ಕರ್ ಕಾಂಬೊಗಳನ್ನು ಮ್ಯಾಶ್ ಮಾಡಬಹುದಾಗಿದೆ. ಹಾಗೆಯೇ ಹೊಂದಾಣಿಕೆಯ ಎಮೋಜಿಯೊಂದಿಗೆ ನಿಮ್ಮ ರಜಾ ದಿನಗಳನ್ನು ಇನ್ನಷ್ಟು ಮಜಾಗೊಳಿಸಿಕೊಳ್ಳಬಹುದಾಗಿದೆ.

ಯೂಟ್ಯೂಬ್ ಹೋಮ್ ಸ್ಕ್ರೀನ್ ಸರ್ಚ್‌ ವಿಜೆಟ್

ಯೂಟ್ಯೂಬ್ ಹೋಮ್ ಸ್ಕ್ರೀನ್ ಸರ್ಚ್‌ ವಿಜೆಟ್

ಯೂಟ್ಯೂಬ್‌ಗೆ ಸಂಬಂಧಿಸಿದಂತೆ ನೂತನ ಪೀಚರ್ಸ್‌ ಪರಿಚಯಿಸಲಾಗಿದೆ. ಈ ಮೂಲಕ ನಿಮ್ಮ ಹೋಮ್ ಸ್ಕ್ರೀನ್‌ನಿಂದ ತ್ವರಿತ ಟ್ಯಾಪ್‌ನೊಂದಿಗೆ, ನಿಮ್ಮ ವಿಡಿಯೋಗಳು, ಶಾರ್ಟ್‌ಗಳು ಅಥವಾ ಲೈಬ್ರರಿಗೆ ಪ್ರವೇಶ ಪಡೆಯಬಹುದಾಗಿದೆ.

ಗೂಗಲ್‌ TV ಯಿಂದ ವಿಡಿಯೋ ಸ್ಟ್ರೀಮ್‌

ಗೂಗಲ್‌ TV ಯಿಂದ ವಿಡಿಯೋ ಸ್ಟ್ರೀಮ್‌

ಗೂಗಲ್‌ ಈ ಗೂಗಲ್‌ ಟಿವಿ ವಿಭಾಗದಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದ್ದು, ಮುಂದಿನ ವಾರದಿಂದ ನೀವು ಒಂದೇ ಟ್ಯಾಪ್‌ನಲ್ಲಿ ಗೂಗಲ್‌ ಟಿವಿ ಆಪ್‌ನಿಂದ ನಿಮ್ಮ ಹೊಂದಾಣಿಕೆಯ ಟಿವಿಗೆ ನೇರವಾಗಿ ವಿಡಿಯೋ ಬಿತ್ತರಿಸಬಹುದಾಗಿದೆ. ಅದರಲ್ಲೂ ವಿಡಿಯೋ ವೀಕ್ಷಿಸುತ್ತಿರುವಾಗ ನೀವು ಇತರ ಆಯ್ಕೆಗಳನ್ನು ಬ್ರೌಸ್ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ.

ಡಿಜಿಟಲ್ ಕಾರ್ ಕೀ ಶೇರಿಂಗ್‌

ಡಿಜಿಟಲ್ ಕಾರ್ ಕೀ ಶೇರಿಂಗ್‌

ನೀವು ಇನ್ಮುಂದೆ ನಿಮ್ಮ ಫೋನ್ ಅನ್ನು ಬಳಸಿಕೊಂಡು ನಿಮ್ಮ ಕಾರನ್ನು ಲಾಕ್ ಮಾಡಬಹುದು, ಅನ್‌ಲಾಕ್ ಮಾಡಬಹುದು ಮತ್ತು ಆನ್ ಮಾಡಬಹುದು. ಅದರಲ್ಲೂ ಈ ಫೀಚರ್ಸ್‌ ಪಿಕ್ಸೆಲ್‌ ಮತ್ತು ಐಫೋನ್‌ ಬಳಕೆದಾರರಿಗೆ ಲಭ್ಯವಿದ್ದು, ಡಿಜಿಟಲ್ ಕಾರ್ ಕೀಯನ್ನು ನಿಮ್ಮ ಸಂಬಂಧಿಕರು ಹಾಗೂ ಬೇಕಾದವರ ಜೊತೆಗೆ ಶೇರ್‌ ಮಾಡಿಕೊಳ್ಳಬಹುದಾಗಿದೆ. ಇದರ ನಡುವೆ ಆಂಡ್ರಾಯ್ಡ್‌ ಆವೃತ್ತಿ 12 ಹೊಂದಿರುವ ಫೋನ್‌ಗಳಿಗೆ ಇನ್ನೇನು ಕೆಲವು ದಿನಗಳಲ್ಲಿ ಈ ಫೀಚರ್ಸ್‌ ಲಭ್ಯವಾಗುತ್ತದೆ. ಹಾಗೆಯೇ ನಿಮ್ಮ ಫೋನ್‌ನ ಡಿಜಿಟಲ್ ವ್ಯಾಲೆಟ್ ಆಪ್‌ ಮೂಲಕ ನಿಮ್ಮ ಕಾರಿಗೆ ಯಾರು ಪ್ರವೇಶ ಪಡೆಯಬಹುದು ಎಂಬುದನ್ನು ನೀವು ನಿರ್ಧಾರ ಮಾಡಬಹುದು.

ವೇರ್‌ ಓಎಸ್‌ ಫೀಚರ್ಸ್‌

ವೇರ್‌ ಓಎಸ್‌ ಫೀಚರ್ಸ್‌

ಈಗಂತೂ ಬಹುಪಾಲು ಮಂದಿ ಆರೋಗ್ಯ ಸೇರಿದಂತೆ ಇನ್ನಿತರೆ ಕಾರಣಕ್ಕೆ ಸ್ಮಾರ್ಟ್‌ವಾಚ್‌ಗಳನ್ನು ಬಳಕೆ ಮಾಡುತ್ತಾರೆ. ಅದರಂತೆ ಬಳಕೆದಾರರಿಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿ ಎಂದು ಗೂಗಲ್‌ ಟೈಲ್‌ಗಳು ಪ್ರಮುಖ ಮಾಹಿತಿಯನ್ನು ಒಂದೇ ನೋಟದಲ್ಲಿ ವೀಕ್ಷಣೆ ಮಾಡಲು ಅನುವು ಮಾಡುಕೊಟ್ಟಿವೆ. ಅಂದರೆ ಎಲ್ಲಿಂದಲಾದರೂ ನಿಮ್ಮ ಮನೆ ಅಥವಾ ಕಚೇರಿಗೆ ನ್ಯಾವಿಗೇಟ್ ಮಾಡಲು ನೀವು ಈಗಾಗಲೇ ಗೂಗಲ್‌ ನಕ್ಷೆಗಳ ಟೈಲ್ ಅನ್ನು ಬಳಸುತ್ತಿರಬಹು, ಇದರ ನಡುವೆಯೇ ಈಗ ಹೊಸ ಟೈಲ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಹಾಗೆಯೇ ನಿಮ್ಮ ನೆಚ್ಚಿನವರ ಜೊತೆ ಸಂಪರ್ಕದಲ್ಲಿರಲು ಇದು ಸಹಾಯಕವಾಗಲಿದೆ.

ಗೂಗಲ್‌ ಕೀಪ್‌ಆಪ್‌ ಅಪ್‌ಡೇಟ್‌

ಗೂಗಲ್‌ ಕೀಪ್‌ಆಪ್‌ ಅಪ್‌ಡೇಟ್‌

ಗೂಗಲ್‌ ವೇರ್ ಓಎಸ್‌ ಗೂಗಲ್‌ ಕೀಪ್ ಆಪ್‌ ಅನ್ನು ನವೀಕರಿಸಿದ್ದು, ನಿಮ್ಮ ಫೋನ್‌ನಲ್ಲಿ ಬರೆದಿರುವ ನಿಮ್ಮ ಟಿಪ್ಪಣಿಗಳು ಮತ್ತು ಮಾಡಬೇಕಾದ ಕಾರ್ಯಗಳು ನಿಮ್ಮ ಸ್ಮಾರ್ಟ್‌ವಾಚ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಈ ಮೂಲಕ ಸುಲಭವಾಗಿ ನಿಮ್ಮ ದೈನಂದಿನ ಪ್ಲ್ಯಾನ್‌ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ.

ಅಡಿದಾಸ್ ರನ್ನಿಂಗ್ ಆಪ್‌

ಅಡಿದಾಸ್ ರನ್ನಿಂಗ್ ಆಪ್‌

30 ವ್ಯಾಯಾಮಗಳನ್ನು ಟ್ರ್ಯಾಕ್‌ ಮಾಡಲು ಮುಂದಿನ ವಾರದಿಂದ ನೀವು ಅಡಿದಾಸ್ ಆಪ್‌ಗೆ ಪ್ರವೇಶ ಪಡೆಯಬಹುದಾಗಿದೆ. ಇದರಲ್ಲಿ ನೀವು 'ಹೇ ಗೂಗಲ್‌, ಸ್ಟಾರ್ಟ್‌ ಎ ರನ್‌ ವಿತ್‌ ಅಡಿಡಾಸ್ ರನ್ನಿಂಗ್' ಎಂದು ಹೇಳುವ ಮೂಲಕ ಅಡಿದಾಸ್ ಆಪ್‌ಗೆ ಪ್ರವೇಶ ಪಡೆಯಬಹುದಾಗಿದ್ದು,ಇದು ನಿಮ್ಮ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡುತ್ತದೆ.

Best Mobiles in India

Read more about:
English summary
Google Announces New Features For Android And Wear OS smartwatch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X