ಗೂಗಲ್, ಆಪಲ್ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಪದವಿ ಬೇಕಿಲ್ಲ!

|

ನೀವು ಪದವಿ ಪಡೆದಿಲ್ಲವೇ, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೇರೆ, ಹಾಗಾದರೆ ಇಲ್ಲೊಂದು ಸಿಹಿ ಸುದ್ದಿ ಇದೆ ಕೇಳಿ. ಹೌದು ನೀವು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂದರೆ ನಿಮ್ಮ ವಿಧ್ಯಾಭ್ಯಾಸ ಕಡಿಮೆ ಇದೆ ಎಂದು ಕೊರಗಬೇಕಾಗಿಲ್ಲ. ಇಂಜಿನಿಯರಿಂಗ್ ಮಾಡಿದವರಿಗೆ ಮಾತ್ರ ಗೂಗಲ್, ಐಬಿಎಂ ಗಳಲ್ಲಿ ಕೆಲಸ ಸಿಗುವುದಿಲ್ಲ. ಬದಲಾಗಿ ಟ್ಯಾಲೆಂಟ್ ಇರುವ ಎಲ್ಲರಿಗೂ ಕೆಲಸ ಸಿಗುತ್ತದೆ.

ಗೂಗಲ್, ಆಪಲ್ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಪದವಿ ಬೇಕಿಲ್ಲ!

ನಮಗೆಲ್ಲಾ ತಿಳಿದಿರುವಂತೆ ದೊಡ್ಡ ದೊಡ್ಡ ತಂತ್ರಜ್ಞಾನ ಸಂಸ್ಥೆಗಳಲ್ಲಿ ಅತೀ ಹೆಚ್ಚು ಜ್ಞಾನವಿರುವ ಕೆಲಸಗಾರರೇ ಇದ್ದಾರೆ.ಅವರುಗಳಲ್ಲಿ ಹೆಚ್ಚಿನವರು ವಿಶ್ವದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರೇ ಆಗಿರುತ್ತಾರೆ. ಹಾಗಂತ ಅದು ಕಾಲೇಜ್ ನ ವಿಧ್ಯಾಭ್ಯಾಸ ಕಡ್ಡಾಯ ಎಂದರ್ಥವಲ್ಲ. ಯಾಕೆಂದರೆ ಹೆಚ್ಚಿನ ಕಂಪೆನಿಗಳು ಉದಾಹರಣೆಗೆ ಆಪಲ್, ಗೂಗಲ್ , ಐಬಿಎಂ ಇತ್ಯಾದಿ ಕಂಪೆನಿಗಳು ಈಗ ಅನುಭವವಿರುವ ಮತ್ತು ಡಿಪ್ಲೋಮಾ ಆಗಿರುವ ವ್ಯಕ್ತಿಗಳನ್ನು ಕೂಡ ಕೆಲಸಕ್ಕೆ ಸೇರಿಸಿಕೊಳ್ಳುತ್ತಿವೆ.

ಆನ್ ಲೈನ್ ಕೆಲಸ ಹುಡುಕಾಟ ಸೇವಾ ಸಂಸ್ಥೆ ಗ್ಲಾಸ್ ಡೋರ್ ನಡೆಸಿರುವ ಸರ್ವೇಯಿಂದ ಈ ಅಂಶ ತಿಳಿದುಬಂದಿದೆ. ಈ ಸಂಸ್ಥೆ 15 ಪ್ರಮುಖ ಸಂಸ್ಥೆಗಳನ್ನು ಹೆಸರಿಸಿದೆ. ಅವುಗಳಲ್ಲಿ ಪ್ರಮುಖವಾದ ಮೂರು ಸಂಸ್ಥೆಗಳೆಂದರೆ ಗೂಗಲ್, ಆಪಲ್, ಮತ್ತು ಐಬಿಎಂ. ಹೌದು ಈ ಸಂಸ್ಥೆಗಳಿಗೆ ಸೇರುವ ವ್ಯಕ್ತಿಗಳಿಗೆ ಯಾವುದೇ ವಿಶ್ವವಿದ್ಯಾಲಯದಿಂದ ಟ್ರೈನಿಂಗ್ ಅಥವಾ ಕಡ್ಡಾಯವಾಗಿ ಯಾವುದೇ ಡಿಗ್ರಿ ಆಗಿರುವ ಅಗತ್ಯವಿಲ್ಲವಂತೆ.

ಹಾಗಂತ ಈ ಸಂಸ್ಥೆ ಕ್ವಾಲಿಫಿಕೇಷನ್ ಗೆ ಬೆಲೆಯೇ ನೀಡುವುದಿಲ್ಲ ಎಂದರ್ಥವಲ್ಲ. ಗ್ಲಾಸ್ ಡೋರ್ ಸಂಸ್ಥೆ ನೀಡಿರುವ ಸರ್ವೇ ವರದಿಯ ಅನುಸಾರ ಯಾರು ಸ್ಕಿಲ್ ಗಳನ್ನು ಹೊಂದಿರುತ್ತಾರೋ ಅಥವಾ ಕೆಲಸದಲ್ಲಿ ಚಾಕಚಕ್ಯತೆಯನ್ನು ಹೊಂದಿರುತ್ತಾರೋ ಅಂತವರು ಜಾಬ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತಾರಂತೆ. ಕಾಲೇಜ್ ಡಿಗ್ರಿ ಇಲ್ಲದೇ ಇದ್ದರೂ ಕೂಡ ಸಾಮರ್ಥ್ಯವಿರುವ ವ್ಯಕ್ತಿ ಯಶಸ್ಸು ಗಳಿಸಿ ಇಂತಹ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸುತ್ತಿದ್ದಾನೆ ಎಂಬುದು ಇದರ ಅರ್ಥವಾಗಿದೆ.

ಟೆಕ್ನಾಲಜಿಗಳ ದೈತ್ಯ ಎಂದು ಕರೆಸಿಕೊಳ್ಳುವ ಆಪಲ್ ಸಂಸ್ಥೆಯಲ್ಲಿ ಅಭ್ಯರ್ಥಿಗಳು ತಮ್ಮ ಅನುಭವದ ಹೊರತಾಗಿ ಯಾವುದೇ ಎಕಾಡಮಿಕ್ ಅಂಕಗಳ ಆಧಾರದಲ್ಲಿ ಆಯ್ಕೆಯಾಗುವುದು ಬಹಳ ಕಡಿಮೆಯಂತೆ. ಇನ್ನು ಯುಎಸ್ ನ ಐಬಿಎಂನಲ್ಲಿ ಕೆಲಸ ನಿರ್ವಹಿಸುತ್ತಿರುವ ಶೇಕಡಾ 15 ರಷ್ಟು ಮಂದಿ ಯಾವುದೇ ಪದವಿ ಪಡೆದಿಲ್ಲವಂತೆ. ಅವರು ಕೇವಲ ಅವರ ಸಾಮರ್ಥ್ಯದ ಮೇಲೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ ಎಂಬುದನ್ನ ಕಳೆದ ವರ್ಷ ನಡೆದ ಸಂದರ್ಶನವೊಂದರಲ್ಲಿ ಐಬಿಎಂನ ಉಪಾಧ್ಯಕ್ಷ ಜಾನ್ನಾ ಡಾಲಿಯೇ ತಿಳಿಸಿದ್ದಾರೆ.

ಗೂಗಲ್ ವಿಚಾರದಲ್ಲಿ ಈ ವಿಚಾರವು ಸ್ವಲ್ಪ ಕುತೂಹಲಕಾರಿಯಾಗಿದೆ. ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ಗಾಗಿ ಅಧ್ಯಯನ ಮಾಡುತ್ತಿದ್ದಾಗ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಭೇಟಿಯಾದರು. ಅವರು ಪ್ರಾಯೋಗಿಕವಾಗಿ Google ಅನ್ನು ಸಂಸ್ಥೆಯ ಗೋಡೆಗಳೊಳಗೆ ರಚಿಸಿದ್ದಾರೆ. ಆರಂಭಿಕ ವರ್ಷಗಳಲ್ಲಿ, ಆಂತರಿಕ ಸಂಸ್ಕೃತಿಯಲ್ಲಿ ಕಂಪನಿಯು ಒಂದು ವಿಶ್ವವಿದ್ಯಾನಿಲಯವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿತು. ಈ ವಿಧಾನವು ಗೂಗಲ್ ಗೆ ಯುವ ಪ್ರತಿಭೆಗಳನ್ನು ಆಕರ್ಷಿಸಲು ಸಹಾಯ ಮಾಡಿತು. ಆದರೆ ಬೇಡಿಕೆಯ ಮಟ್ಟವು ಹೆಚ್ಚಿತ್ತು: ಹೆಚ್ಚಿನ ಸಮಯದವರೆಗೆ ಗೂಗಲ್ ಉನ್ನತ ವಿಶ್ವವಿದ್ಯಾನಿಲಯಗಳಿಂದ ಬಂದ ಉದ್ಯೋಗಿಗಳನ್ನು ನೇಮಕ ಮಾಡುವ ಮತ್ತು ಉನ್ನತ ದರ್ಜೆಗಳನ್ನು ಹೊಂದಿದವರನ್ನು ಮಾತ್ರ ನೇಮಿಸಿದೆ ಎಂಬ ಅಪವಾದ ಎದುರಿಸಿತು. ನಿಜಕ್ಕೂ ಹೇಳಬೇಕೆಂದರೆ ಗೂಗಲ್ ಯಾವತ್ತೂ ಹಾಗೆ ಮಾಡಿಲ್ಲವಂತೆ. ಅಕ್ಷರಗಳು ಗೂಗಲ್ ಗೆ ಬಹಳ ಮುಖ್ಯವಾಗಿ ಬೇಕು. ಹಾಗಂತೆ ಅದು ಒಂದು ಪದವಿಗೆ ಸೀಮಿತವಾಗಿಲ್ಲವಂತೆ.

ಹೆಚ್ಚಿನ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹೆಣಗಾಡುತ್ತವೆಯಂತೆ.ಇದರ ಅರ್ಥ ಇಷ್ಟೇ ಪದವಿ ರಹಿತರೂ ಕೂಡ ಟ್ಯಾಲೆಂಟ್ ಇದ್ದರೆ ಈ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಪ್ರಯತ್ನ ನಡೆಸಬಹುದು.

Best Mobiles in India

English summary
Google, Apple And These 13 Companies Ditch College Degree Requirements, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X