ಭಾರತೀಯರು ಕೇಳುವ ಈ ಒಂದು ಪ್ರಶ್ನೆಗೆ ಗೂಗಲ್‌ ಸುಸ್ತು!!..ಏನದು ಗೊತ್ತಾ?

|

ಗೂಗಲ್ ಮನುಷ್ಯರಿಂದಲೇ ಅಭಿವೃದ್ಧಿಯಾದರೂ ಸಹ ಅದಕ್ಕೆ ತಿಳಿಯದ ಉತ್ತರಗಳು ತುಂಬಾ ಕಡಿಮೆ ಎನ್ನಬಹುದು. ಗೂಗಲ್ ಅನ್ನು ಬಳಸುವ ಪ್ರತಿಯೋರ್ವರನ್ನು ಟ್ರ್ಯಾಕ್ ಮಾಡಿ ಅವರ ಬೇಕುಬೇಡಗಳೆಲ್ಲವನ್ನು ತಿಳಿದು ಪಟ್ಟಿ ಮಾಡಿಕೊಂಡು ಅವರಿಗೇ ಸಹಾಯ ಮಾಡುತ್ತದೆ. ತನ್ನನ್ನು ಪ್ರಶ್ನಿಸಿದವರಿಗೆಲ್ಲಾ ಸ್ಪಷ್ಟ ಉತ್ತರ ಹುಡುಕಿಕೊಡಲು ಪ್ರಯತ್ನಿಸುತ್ತಲೇ ಇರುತ್ತದೆ ಮತ್ತು ಇದೆ.

ಆದರೆ, ಗೂಗಲ್‌ನಲ್ಲಿ ಜನರು ಕೇಳುವ ಪ್ರಶ್ನೆಗಳು ಗೂಗಲ್‌ ಅನ್ನೇ ಸುಸ್ತು ಹೊಡೆಸುತ್ತವೆ. ಗೂಗಲ್ ಕೂಡ ಊಹೆ ಮಾಡದಂತಹ ಪ್ರಶ್ನೆಗಳು ಹಲವು ಅದಕ್ಕೆ ಎದುರಾಗಿವೆ. ಆದರೆ, ಇಂದು ವಿಶೇಷತೆ ಇದೆ. ಗೂಗಲ್‌ಗೆ ಇಂತಹ ನೂರಾರು ವಿಚಿತ್ರ ಪ್ರಶ್ನೆಗಳು ಎದುರಾಗುತ್ತಿದ್ದರೂ ಸಹ ಭಾರತೀಯರು ಮಾತ್ರ ಕೇಳುವ ಒಂದು ಪ್ರಶ್ನೆ ಮಾತ್ರ ಗೂಗಲ್‌ಗೂ ತಲೆನೊವ್ವಾಗಿದೆಯಂತೆ.

ಭಾರತೀಯರು ಕೇಳುವ ಈ ಒಂದು ಪ್ರಶ್ನೆಗೆ ಗೂಗಲ್‌ ಸುಸ್ತು!!..ಏನದು ಗೊತ್ತಾ?

ಹೌದು, ಭಾರತೀಯರು ಯದ್ವಾ ತದ್ವಾ ವಿವಾಹದ ಬಗ್ಗೆಯೇ ಗೂಗಲ್ ಮಾಡುತ್ತಿರುವುದು ಗೂಗಲ್‌ಗೂ ಆಶ್ಚರ್ಯವಾಗಿದೆಯಂತೆ. ಇದರಿಂದ ದಿಕ್ಕೆಟ್ಟಂತಾಗಿರುವ ಗೂಗಲ್ ಟ್ವಿಟರ್‌ನಲ್ಲಿ ವಿಚಿತ್ರ ಪ್ರಶ್ನೆಯೊಂದನ್ನು ಕೇಳಿ ಟ್ವಿಟ್ಟಿಸಿದೆ. ನನಗೆ ಈಗಲೂ ಭಾರತೀಯರ ಕುರಿತ ಈ ಒಂದು ಸಂಗತಿ ಇನ್ನೂ ಅರ್ಥವಾಗದ ವಿಷಯವಾಗಿ ಉಳಿದುಹೋಗಿದೆ ಎಂದು ತಾನೇ ಹೇಳಿಕೊಂಡಿದೆ.

ಭಾರತೀಯರು ಕೇಳುವ ಈ ಒಂದು ಪ್ರಶ್ನೆಗೆ ಗೂಗಲ್‌ ಸುಸ್ತು!!..ಏನದು ಗೊತ್ತಾ?

ನಾವು ನಿಜವಾಗಿಯೂ, ನಿಜವಾಗಿಯೂ, ನಿಜವಾಗಿಯೂ...ಹೀಗೆ ಬರೆಯುತ್ತಾ ಬಂದಿರುವ ಗೂಗಲ್ ಇಂಡಿಯಾ, 'ಯಾವಾಗಲೂ ನೀವೇಕೆ ಗೂಗಲ್ ಅಸಿಸ್ಟಂಟ್ ಅನ್ನು ಮದುವೆಯಾಗಲು ಕೇಳಿಕೊಳ್ಳುತ್ತೀರಾ ಎಂದು ನಾವು ತಿಳಿದುಕೊಳ್ಳಲು ಬಯಸಿತ್ತೇವೆ' ಎಂದು ಟ್ವಿಟ್ ಮಾಡಿದೆ. ಕನ್‌ಫ್ಯೂಸ್ ಆದರೂ ಭಾರತೀಯರನ್ನು ಟ್ರೋಲ್ ಮಾಡಿದಂತೆ ಇರುವ ಟ್ವಿಟ್ ಪ್ರಶ್ನೆ ಇದಾಗಿದೆ.

ಗೂಗಲ್ ಹೇಳಿದ ವಿಷಯ ನಿಜವಾಗಿಯೂ ನಗುತರಿಸುವಂತಿದೆ. ಅಷ್ಟಕ್ಕೂ ಜನರು ಗೂಗಲ್ ಅಸಿಸ್ಟೆಂಟ್ ಅನ್ನು ಮದುವೆಯಾಗುವಂತೆ ಕೋರುವುದು ಏಕೆ ಎಂದೆನಿಸುತ್ತಿದೆ. ನೀವು ಕೂಡ ಗೂಗಲ್ ಅಸಿಸ್ಟೆಂಟ್ ಅನ್ನು ಮದುವೆಯಾಗಲು ಕೇಳಿದ್ದರೆ ಅದನ್ನು ಮರೆತುಬಿಡಿ. ಏಕೆಂದರೆ, ಗೂಗಲ್ ಅಸಿಸ್ಟೆಂಟ್ ವ್ಯಕ್ತಿಯಲ್ಲ. ಅದನ್ನು ಕೇಳಿದರೇ ನಿಮ್ಮ ಅರ್ಥವೂ ಸಹ ಬೇರೆಯೇ ಆಗುತ್ತದೆ.

Best Mobiles in India

English summary
Google India recently took to Twitter to ask the users of Google Assistant a very pointed question - why they keep asking Google Assistant to marry them.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X