Subscribe to Gizbot

ಗೂಗಲ್ ನೊಂದಿಗೆ ಕೈ ಜೋಡಿಸಿದ ಜಿಯೋ ಫೋನ್..!

Written By: Lekhaka

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಜಿಯೋ ಫೋನ್ ನಲ್ಲಿ ಮತ್ತೊಂದು ಹೊಸ ಆಯ್ಕೆ ಬಳಕೆದಾರರಿಗೆ ದೊರೆಯಲಿದೆ. ಜಿಯೋ ಫೋನ್ ಗಾಗಿಯೇ ಗೂಗಲ್ ತನ್ನ ಅಸಿಸ್ಟೆಂಟ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡಲಾಗಿದೆ.

ಗೂಗಲ್ ನೊಂದಿಗೆ ಕೈ ಜೋಡಿಸಿದ ಜಿಯೋ ಫೋನ್..!

ಈ ಮೂಲಕ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ. ಈಗಾಗಲೇ ಜಿಯೋ ಫೋನಿನಲ್ಲಿ ವಾಯ್ಡ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದ್ದು, ಆ ಸ್ಥಾನಕ್ಕೆ ಗೂಗಲ್ ಅಸಿಸ್ಟೆಂಟ್ ಬರಲಿದೆ.

ಸದ್ಯ ಗೂಗಲ್ ಅಸಿಸ್ಟೆಂಟ್ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನದಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಜಿಯೋ ಫೋನ್ ಬಳಕೆದಾರರು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬಳಕೆ ಮಾಡಿಕೊಂಡು ಟೆಕ್ಸ್ಟ್ ಮೇಸೆಜ್ ಮಾಡಬಹುದು, ಮ್ಯೂಸಿಕ್ ಪ್ಲೇ ಮಾಡಬಹುದು ಎನ್ನಲಾಗಿದೆ.

ಶಿಯೋಮಿಯ ಈ ಫೋನ್‌ ಲಾಂಚ್ ಆದರೆ ಒನ್‌ಪ್ಲಸ್ 5T, ಗ್ಯಾಲೆಕ್ಸಿ S8 ಕೇಳುವವರಿರುವುದಿಲ್ಲ..!

ಗೂಗಲ್ ಜಿಯೋ ಮೂಲಕ ಭಾರತದ ಮೂಲೆ ಮೂಲೆಗಳಲ್ಲಿ ತನ್ನ ವಾಯ್ಸ್ ಅಸಿಸ್ಟೆಂಟ್ ಸೇವೆಯನ್ನು ವಿಸ್ತರಿಸುವ ಮತ್ತು ಪ್ರಚಾರ ಮಾಡುವ ಯೋಜನೆಯನ್ನು ರೂಪಿಸಿದೆ. ಜಿಯೋ ಫೋನ್ ಹೆಚ್ಚಿನ ಜನರನ್ನು ತಲುಪಲು ಮುಂದಾಗಿರುವ ಹಿನ್ನಲೆಯಲ್ಲಿ ಜಿಯೋ ದೊಂದಿಗೆ ಗೂಗಲ್ ಕೈ ಜೋಡಿಸಿದೆ.

ಇದಲ್ಲದೇ ಗೂಗಲ್ ಹೋಮ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಜನರನ್ನು ಸೆಳೆಯುವ ಸಲುವಾಗಿ ಗೂಗಲ್ ಜಿಯೋ ಫೋನಿನಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ.

English summary
Google has announced a special edition version of Google Assistant for JioPhone with support for Hindi and English.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot