ದಿನಸಿ ಖರೀದಿಗೆ ವಾಲ್ಮಾರ್ಟ್ ನಿಂದ ಹೊಸ ರೂಪ- ಗೂಗಲ್ ಅಸಿಸ್ಟೆಂಟ್ ಬಳಸಿ ಮನೆಯ ದಿನಸಿ ಖರೀದಿಗೆ ಅವಕಾಶ

By Gizbot Bureau
|

ಗೂಗಲ್ ಅಸಿಸ್ಟೆಂಟ್ 2016 ರಲ್ಲಿ ಪರಿಚಿತವಾದಾಗಿನಿಂದಲೂ ಕೂಡ ಪ್ರತಿದಿನ ಬಳಕೆದಾರರಿಗೆ ಅನುಕೂಲವಾಗುವಂತಹ ಫೀಚರ್ ಗಳನ್ನು ಬಿಡುಗಡೆಗೊಳಿಸುತ್ತಲೇ ಇದೆ. ಡುಪ್ಲೆಕ್ಸ್ ಬೆಂಬಲವನ್ನು ಕಳೆದ ವರ್ಷ ಸೇರಿಸಲಾಗಿತ್ತು ಇದು ಹ್ಯೂಮನ್ ಸೌಂಡಿಂಗ್ ವಾಯ್ಸ್ ಮೂಲಕ ಬಳಕೆದಾರರಿಗೆ ರಿಸರ್ವೇಷನ್ ಮಾಡಲು ಅವಕಾಶ ನೀಡುತ್ತಿತ್ತು.

ದಿನಸಿ ಖರೀದಿಗೆ ವಾಲ್ಮಾರ್ಟ್:

ದಿನಸಿ ಖರೀದಿಗೆ ವಾಲ್ಮಾರ್ಟ್:

ಇದು ಹವಾಮಾನ ವೀಕ್ಷಣೆ, ಸುದ್ದಿಗಳನ್ನು ಪ್ಲೇ ಮಾಡುವುದು ಮತ್ತು ಕರೆಗಳನ್ನು ಕಾಲ್ ಸ್ಕ್ರೀನಿನಿಂದ ಪಿಕ್ ಮಾಡುವುದು ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿದೆ. ಇದೀಗ ಗೂಗಲ್ ಹೊಸದಾಗಿ ಮತ್ತಷ್ಟು ವೈಶಿಷ್ಟ್ಯತೆಗಳನ್ನು ಸೇರಿಸುವುದಕ್ಕೆ ಮುಂದಾಗಿದೆ. ಇದೀಗ ಗೂಗಲ್ ನೀವು ದಿನಸಿ ಖರೀದಿಸುವಿಕೆಯನ್ನು ಗೂಗಲ್ ಅಸಿಸ್ಟೆಂಟ್ ಮೂಲಕ ಮತ್ತಷ್ಟು ಸುಲಭಗೊಳಿಸುವುದಕ್ಕೆ ಮುಂದಾಗಿದ್ದು ಅದಕ್ಕಾಗಿ ಕ್ರೋಮ್ ಓಎಸ್ ನ್ನು ಇಂಟಿಗ್ರೇಟ್ ಮಾಡಲಾಗಿದೆ.

ಯುಸ್ ನಲ್ಲಿ ಬೆಂಬಲ:

ಯುಸ್ ನಲ್ಲಿ ಬೆಂಬಲ:

ಯುಸ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಗೆ ವಾಲ್ ಮಾರ್ಟ್ ಬೆಂಬಲ ಸಿಗುತ್ತದೆ. ಅಲ್ಲಿ ಬಳಕೆದಾರರು ಕೇವಲ ದಿನಸಿಯ ಹೆಸರನ್ನು ಹೇಳಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ. ಈ ಫೀಚರ್ ನ್ನು ವಾಲ್ಮಾರ್ಟ್ ವಾಯ್ಸ್ ಆರ್ಡರ್ ಎಂದು ಕರೆಯಲಾಗುತ್ತದೆ. ಇದನ್ನು ವಾಲ್ಮಾರ್ಟ್ ಮತ್ತು ಗೂಗಲ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಹೇ ಗೂಗಲ್ ಟಾಕ್ ಟು ವಾಲ್ಮಾರ್ಟ್:

ಹೇ ಗೂಗಲ್ ಟಾಕ್ ಟು ವಾಲ್ಮಾರ್ಟ್:

ಗ್ರಾಹಕರು ಇದೀಗ ಶಾಪಿಂಗ್ ಮಾಡಲು ಹೇ ಗೂಗಲ್ ಟಾಕ್ ಟು ವಾಲ್ಮಾರ್ಟ್ ಎಂದು ಹೇಳಿ ಅವರ ದಿನಸಿ ವಸ್ತುಗಳನ್ನು ಹೇಳಿದರೆ ವಾಲ್ಮಾರ್ಟ್ ದಿನಸಿ ಕಾರ್ಟ್ ಗೆ ಅದು ಸೇರಿಕೊಳ್ಳುತ್ತದೆ. ವಾಲ್ಮಾರ್ಟ್ ಮಷೀನ್ ಲರ್ನಿಂಗ್ ಅಲ್ಗೋರಿತ್ತಮ್ ಮೂಲಕ ಗ್ರಾಹಕರು ಕೇಳಿದ ವಸ್ತುಗಳನ್ನು ಸರಿಯಾಗಿ ಕಾರ್ಟ್ ಗೆ ಸೇರಿಸುತ್ತದೆ ಮತ್ತು ಅವರ ಹಿಂದಿನ ಖರೀದಿಯ ಆಧಾರದಲ್ಲಿ ಅದನ್ನು ಗುರುತಿಸುತ್ತದೆ.

ಬಿಲಿಯನ್ ಗೂ ಅಧಿಕ ಡಿವೈಸ್:

ಬಿಲಿಯನ್ ಗೂ ಅಧಿಕ ಡಿವೈಸ್:

ಗೂಗಲ್ ಅಸಿಸ್ಟೆಂಟ್ ಇದೀಗ ಬಿಲಿಯನ್ ಗೂ ಅಧಿಕ ಡಿವೈಸ್ ಗಳಲ್ಲಿ ಲಭ್ಯವಿದೆ. ಅದರಲ್ಲಿ ಆಂಡ್ರಾಯ್ಡ್ ಫೋನ್ ಗಳು, ಆಪ್ ಐಫೋನ್ ಗಳು, ಸ್ಮಾರ್ಟ್ ಡಿಸ್ಪ್ಲೇಗಳು, ಸ್ಮಾರ್ಟ್ ವಾಚ್ ಗಳು ಇತ್ಯಾದಿಗಳು ಸೇರಿವೆ. ಗ್ರಾಹಕರು ತಮ್ಮ ದಿನಸಿ ಕಾರ್ಟ್ ನ್ನು ಮೇಲಿನ ಯಾವುದೇ ಡಿವೈಸ್ ಗಳಿಂದಲೂ ಕೂಡ ತಯಾರಿಸಲು ಸಾಧ್ಯವಾಗುತ್ತದೆ.

ವಾಲ್ಮಾರ್ಟ್ ಹೇಳಿಕೆ:

"ಗ್ರಾಹಕರು ಶಾಪಿಂಗ್ ಮಾಡುವ ವಿಧಾನವನ್ನು ಇನ್ನು ಮುಂದೆ ಈ ತಂತ್ರಜ್ಞಾನವು ಬದಲಿಸುತ್ತದೆ ಮತ್ತು ಖಂಡಿತ ಇದು ಗ್ರಾಹಕರಿಗೆ ಅನುಕೂಲಕರವಾಗುತ್ತದೆ. ಒಂದೇ ಬಾರಿ ತಮಗೆ ಬೇಕಾದ ಎಲ್ಲಾ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ" ಎಂದು ವಾಲ್ಮಾರ್ಟ್ ಅಭಿಪ್ರಾಯ ಪಡುತ್ತದೆ.

Most Read Articles
Best Mobiles in India

Read more about:
English summary
Google Assistant can now order groceries from Walmart, gets deep integration with Chrome OS

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X