ವಿಮಾನ ವಿಳಂಬವಾಗುವುದಾದರೆ ಗೂಗಲ್ ಅಸಿಸ್ಟೆಂಟ್ ನಿಂದ ತಿಳಯಬಹುದು

|

ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ರೆ ಜಗತ್ತೇ ನಮ್ಮ ಕೈಯಲ್ಲಿ ಇದ್ದಂತೆ. ಸಣ್ಣಪುಟ್ಟದ್ದಕ್ಕೂ ನಾವು ಮೊಬೈಲ್ ನ ಮೊರೆ ಹೋಗುವುದು ಈಗಿನ ಕಾಲದಲ್ಲಿ ಸರ್ವೇಸಾಮಾನ್ಯ. ಸಂಪರ್ಕ ಸಾಧನವಾಗಿದ್ದ ಫೋನ್ ಇದೀಗ ಕೇವಲ ಸಂಪರ್ಕ ಮಾತ್ರಕ್ಕೆ ಸೀಮಿತವಾಗಿರದೆ ಅಧ್ಯಯನ, ವರದಿ, ಸಂಶೋಧನೆ, ಮಾಹಿತಿ ಸಂಗ್ರಹ, ಮನರಂಜನೆ, ಆಟ, ಪಾಠ, ಹೀಗೆ ಹಲವು ಆಯಾಮಗಳಿಗೆ ತೆರೆದುಕೊಂಡಿದೆ.

ವಿಮಾನ ವಿಳಂಬವಾಗುವುದಾದರೆ ಗೂಗಲ್ ಅಸಿಸ್ಟೆಂಟ್ ನಿಂದ ತಿಳಯಬಹುದು

ಕೈಯಲ್ಲಿರೋ ಫೋನ್ ಇವತ್ತು ಮಳೆ ಬರುತ್ತೋ ಇಲ್ವೋ? ಇವತ್ತು ನಮ್ ಮನೆ ಹತ್ತಿರ ಚಳಿ ಹೇಗಿರುತ್ತೆ ಇತ್ಯಾದಿ ವಿಷಯಗಳನ್ನು ತಿಳಿಸುವಾಗ ವಿಮಾನ ಸಂಚಾರದ ಬಗ್ಗೆ ತಿಳಿಸದೇ ಇದ್ದರೆ ಹೇಗೆ ಹೇಳಿ?

ವಿಮಾನ ವಿಳಂಬದ ಬಗ್ಗೆ ಏರ್ ಲೈನ್ ಗಿಂತ ಮುಂಚೆಯೇ ಮಾಹಿತಿ:

ವಿಮಾನ ವಿಳಂಬದ ಬಗ್ಗೆ ಏರ್ ಲೈನ್ ಗಿಂತ ಮುಂಚೆಯೇ ಮಾಹಿತಿ:

ಇನ್ನು ಕೆಲವೇ ದಿನಗಳಲ್ಲಿ ಮೆಷಿನ್ ಲರ್ನಿಂಗ್(ಎಂಎಲ್) ನೊಂದಿಗೆ ಸಂಯೋಜಿಸಲ್ಪಟ್ಟ ಫ್ಲೈಟ್ ನ ಸ್ಟೇಟಸ್ ಡಾಟಾ ಬಳಸಿ ಗೂಗಲ್ ಅಸಿಸ್ಟೆಂಟ್ ನಿಮ್ಮ ವಿಮಾನ ತಡವಾಗುತ್ತದೆಯೇ ಎಂಬ ಬಗ್ಗೆ ಏರ್ ಲೈನ್ ಪ್ರಕಟಿಸುವುದಕ್ಕಿಂತ ಮುನ್ನವೇ ತಿಳಿಸುತ್ತದೆ.

ಸ್ಮಾರ್ಟ್ ಫೋನ್ ನಲ್ಲಿ ವಿಮಾನ ವಿಳಂಬದ ಮಾಹಿತಿ:

ಸ್ಮಾರ್ಟ್ ಫೋನ್ ನಲ್ಲಿ ವಿಮಾನ ವಿಳಂಬದ ಮಾಹಿತಿ:

ಗೂಗಲ್ ಹೇಳುವ ಪ್ರಕಾರ ಗೂಗಲ್ ಅಸಿಸ್ಟೆಂಟ್ ವಿಮಾನ ತಡವಾಗಿ ಬರುತ್ತದೆ ಎಂದು ತನ್ನ ಕ್ರಮಾವಳಿಗಳು ಊಹೆ ಮಾಡಿದ ಕೂಡಲೇ ಸ್ಮಾರ್ಟ್ ಫೋನ್ ನಲ್ಲಿ ಬಳಕೆದಾರರಿಗೆ ನೋಟಿಫಿಕೇಷನ್ ನೀಡುತ್ತದೆ.

85% ನಿಖರ ಮಾಹಿತಿ:

85% ನಿಖರ ಮಾಹಿತಿ:

ಈ ವರ್ಷದ ಆರಂಭದಲ್ಲಿ ಗೂಗಲ್ ವಿಮಾನ ವಿಳಂಬವಾಗುವ ಬಗ್ಗೆ ಭವಿಷ್ಯ( ಗೂಗಲ್ ಫ್ಲೈಟ್ ಮೂಲಕ) ವನ್ನು ಫ್ಲೈಟ್ ಸ್ಟೇಟಸ್ ನ್ನು ಹುಡುಕಾಡಿದಾಗ ಹಂಚಿಕೊಳ್ಳಲಾಗುತ್ತಿತ್ತು ಮತ್ತು ಅಂದಾಜು 85% ವಿಳಂಬವಾಗುವಿಕೆಯ ಖಾತ್ರಿಯನ್ನು ನೀಡಲಾಗುತ್ತಿತ್ತು.

ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿ:

ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿ:

ಐತಿಹಾಸಿಕ ಫ್ಲೈಟ್ ಸ್ಟೇಟಸ್ ಡಾಟಾವನ್ನು ಮೆಷೀನ್ ಲರ್ನಿಂಗ್ ನೊಂದಿಗೆ ಕಂಬೈನ್ ಮಾಡಿ ಏರ್ ಲೈನ್ ವಿಳಂಬವಾಗುವುದರ ಭವಿಷ್ಯವನ್ನು ಮೊದಲೇ ತಿಳಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.

ಅಂದಾಜು ವಿಳಂಬದ ವಿವರ:

ಅಂದಾಜು ವಿಳಂಬದ ವಿವರ:

ಡಿಲೇ ಆಗುವ ಫ್ಲೈಟ್ ಗಳ ನಿಖರ ವಿವರವನ್ನು ನೀಡುವುದರ ಜೊತೆಗೆ ಇನ್ನು ಮುಂದೆ ಗೂಗಲ್ ಅಸಿಸ್ಟೆಂಟ್ ಅಂದಾಜಿನ ಪ್ರಕಾರ ವಿಳಂಬವಾಗಬಹುದಾದ ಫ್ಲೈಟ್ ಗಳ ವಿವರವನ್ನು ಕೂಡ ನೀಡುತ್ತದೆ.

ಏನೆಂದು ಹೇಳಬೇಕು?

ಏನೆಂದು ಹೇಳಬೇಕು?

ನೀವು ಕೇವಲ "ಹೇ! ಗೂಗಲ್ ನನ್ನ ಫ್ಲೈಟ್ ಸಮಯಕ್ಕೆ ಸರಿಯಾಗಿ ಬರುತ್ತದೆಯೇ?" ಅಥವಾ "ಹೇ! ಗೂಗಲ್ ಎಂದು ವಿಮಾನದ ಹೆಸರನ್ನು ಹೇಳಿ ಎಲ್ಲಿಂದ ಎಲ್ಲಿಗೆ ಪಯಣಿಸುತ್ತಿರುವ ಏರ್ ಲೈನ್" ಎಂಬುದನ್ನು ತಿಳಿಸಿದರೆ ಕೂಡ ಈ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ ಗೂಗಲ್.

ಕೆಲವೇ ವಾರಗಳಲ್ಲಿ ಲಭ್ಯ:

ಕೆಲವೇ ವಾರಗಳಲ್ಲಿ ಲಭ್ಯ:

ಮುಂದಿನ ಕೆಲವು ವಾರಗಳಲ್ಲಿ ಗೂಗಲ್ ಅಸಿಸ್ಟೆಂಟ್ ನಿಮಗೆ ವಿಮಾನ ವಿಳಂಬವಾಗುವಿಕೆಯ ಬಗೆಗಿನ ಭವಿಷ್ಯವನ್ನು ಕಾರಣಸಹಿತ ನಿಮ್ಮ ಫೋನಿನಲ್ಲಿಯೇ ನೀಡುತ್ತದೆ ಎಂಬುದಾಗಿ ಕಂಪೆನಿ ತಿಳಿಸಿದೆ.

Best Mobiles in India

Read more about:
English summary
Google Assistant to soon predict flight delays on smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X