Just In
- 5 hrs ago
ಟ್ರಾಯ್ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್ಟೆಲ್ನಿಂದ ಭಾರಿ ವಿರೋಧ! ಕಾರಣ ಏನು?
- 6 hrs ago
2023ರಲ್ಲಿ ಈ ಸ್ಮಾರ್ಟ್ಫೋನ್ ಸೌಂಡ್ ಮಾಡೋದು ಪಕ್ಕಾ! ಏನೆಲ್ಲಾ ನಿರೀಕ್ಷೆ?
- 7 hrs ago
ಈ ಡಿವೈಸ್ಗಳನ್ನು ನೋಡಿದ್ರೆ, ನೀವು ಖಂಡಿತಾ ಹುಬ್ಬೇರಿಸ್ತೀರಾ!..ಬೆಲೆಯೂ ಕಡಿಮೆ!
- 9 hrs ago
ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ಕೆಲಸ ಇನ್ನು ಸುಲಭ!
Don't Miss
- Movies
'ಕಾಂತಾರ' ಮಹಿಮೆ, ಬಾಲಿವುಡ್ ಸೆಟ್ನಲ್ಲಿ 'ಲೀಲಾ', ಸಿಕ್ತು ಒಂದೊಳ್ಳೆ ಉಡುಗೊರೆ
- News
Karnataka budget 2023: ಫೆ.10ಕ್ಕೆ ಬಜೆಟ್ ಅಧಿವೇಶನ, ಫೆ. 17ಕ್ಕೆ ಬಜೆಟ್ ಮಂಡಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ
- Sports
WFI ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ 7 ಸದಸ್ಯರ ಸಮಿತಿ ರಚನೆ
- Automobiles
ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿಯಾದ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್ಯುವಿಯ ವಿಶೇಷತೆಗಳು
- Finance
ಉದ್ಯೋಗ ಕಡಿತದ ನಡುವೆ ಸಿಹಿಸುದ್ದಿ: ಭಾರತ್ಪೇಯಲ್ಲಿ ಉದ್ಯೋಗಾವಕಾಶ
- Lifestyle
ಸತ್ತು ಸ್ವರ್ಗಕ್ಕೆ ಹೋಗಿ ಮತ್ತೆ ಬದುಕಿ ಬಂದ ಪೆರ್ರಿ ಎಂಬ ವ್ಯಕ್ತಿಯ ಕತೆ, ಅಚ್ಚರಿಯಾದರೂ ಇದು ಸತ್ಯ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗೂಗಲ್ ಅಸಿಸ್ಟೆಂಟ್' ಬಳಸುವಾಗ ನೀವು ತಿಳಿದಿರಲೇಬೇಕಾದ ಟ್ರಿಕ್ಸ್!
ಯಾವುದೇ ಗೂಗಲ್ ಸಾಧನಗಳನ್ನು ತೆರೆದು 'ಓಕೆ ಗೂಗಲ್' ಎಂದು ಹೇಳಿದರೆ ಸಾಕು 'ಅಲ್ಲೋರ್ವ ಗೂಗಲ್ ಅಸಿಸ್ಟೆಂಟ್' ಎಂಬ ಸಹಾಯಕ ಬಂದುಬಿಡುತ್ತಾನೆ. ನಿಮ್ಮೆಲ್ಲಾ ಆನ್‌ಲೈನ್ ಲೋಕವನ್ನು ಅರಿತು ನಿಮಗೆ ಆತ ಸಹಾಯ ಮಾಡುತ್ತಾನೆ. ಫೋನ್ ಕಾಲ್ ಮಾಡುವುದು, ಮೇಸೆಜ್ ಕಳಿಸುವುದು, ಅಲರಾಂ ಸೆಟ್ ಮಾಡುವುದು ಸೇರಿದಂತೆ ಆತ ಎಲ್ಲವನ್ನೂ ಮಾಡುತ್ತಾನೆ.

ಆತನಿಂದ ಇಷ್ಟೇಲ್ಲಾ ಉಪಯೋಗ ಇದ್ದರೂ ಸಹ ಆತನ ಉಪಯೋಗವನ್ನು ಮಾಡಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಇದೆ. ಆದರೆ, ನೀವು ಮಾತ್ರ ಹೀಗೆ ತಪ್ಪುಮಾಡಿಕೊಳ್ಳಬೇಡಿ. ಗೂಗಲ್ ಅಸಿಸ್ಟೆಂಟ್ ಅನ್ನು ಸಾಕಷ್ಟು ಸದುಪಯೋಗ ಮಾಡಿಕೊಳ್ಳಿ. ಏಕೆಂದರೆ, ನಿಮ್ಮ ಮೊಬೈಲ್ ಹೋಮ್ ಬಟನ್ ಅನ್ನು ಒತ್ತಿ ಹಿಡಿದರೆ ಸಾಕು ಗೂಗಲ್ ಅಸಿಸ್ಟೆಂಟ್ ಕಾಣಿಸಿಕೊಳ್ಳುತ್ತಾನೆ.
ಈ ಗೂಗಲ್ ಅಸಿಸ್ಟೆಂಟ್ ಲವು ವಿಶೇಷ ಕೆಲಸಗಳನ್ನು ಮಾಡಬಹುದು. ಆ ಕೆಲವು ಪ್ರಮುಖ ಕೆಲಸಗಳನ್ನು ಗೂಗಲ್ ಅಸಿಸ್ಟೆಂಟ್ ಮಾಡುವುದನ್ನು ನಾವು ವಿವರಿಸಬೇಕಾಗಿಲ್ಲ. ಆದರೂ ಇಲ್ಲಿ ಅದರ ಪ್ರಮುಖ ಕೆಲಸಗಳ ಬಗ್ಗೆ ವಿವರಣೆ ನೀಡಲಾಗಿದೆ. ಏಕೆಂದರೆ, ಗೂಗಲ್ ಅಸಿಸ್ಟೆಂಟ್ ಬಳಸುವಾಗ ನೀವು ಈ ಕೆಲ ಟ್ರಿಕ್ಸ್ ತಿಳಿದಿದ್ದರೆ ನಿಮ್ಮ ಆನ್‌ಲೈನ್ ಲೋಕ ಬಹಳ ಸರಳವಾಗುತ್ತದೆ.

1 . ಸುದ್ದಿಗಳನ್ನು ಓದುವುದಕ್ಕೆ ಬಳಕೆ ಮಾಡಬಹುದು
ಗೂಗಲ್ ಅಸಿಸ್ಟೆಂಟ್ ಗೆ ನೀವು "ಪ್ಲೇ ದಿ ನ್ಯೂಸ್ " ಎಂದು ಹೇಳಿದರೆ ಸಾಕು, ಅದು ಕೂಡಲೇ ಸುದ್ದಿಗಳನ್ನು ನಿಮಗಾಗಿ ಓದಲು ಪ್ರಾರಂಭಿಸಿಬಿಡುತ್ತೆ. ಇದು ಕೇವಲ ಕಾಟಾಚಾರಕ್ಕೆ ಓದಿದಂತೆ ಇರುವುದಿಲ್ಲ ಬದಲಾಗಿ ಎಲ್ಲಾ ಸುದ್ಧಿಗಳನ್ನು ಕೇಳಿ ನೀವು ಅರ್ಥೈಸಿಕೊಳ್ಳುವಂತೆ ಓದುತ್ತದೆ. ಒಂದು ಸುದ್ದಿಯಿಂದ ಮತ್ತೊಂದು ಸುದ್ದಿಗೆ ಹೋಗಲು, ಇಲ್ಲವೇ ಓದುತ್ತಿರುವ ಸುದ್ದಿಯನ್ನು ನಿಲ್ಲಿಸಲು, "ನೆಕ್ಸ್ಟ್", "ಪಾಝ್", "ಸ್ಟಾಪ್ " ಎಂಬ ಪದಗಳನ್ನು ಬಳಕೆ ಮಾಡಬಹುದು. ಅಷ್ಟೇ ಅಲ್ಲ ಇಂತದ್ದೇ ಪೇಪರ್ ನ ಇಲ್ಲವೇ ನ್ಯೂಸ್ ವೆಬ್ ಸೈಟ್ ನ ಸುದ್ದಿಗಳನ್ನು ಓದುವಂತೆಯೂ ನೀವು ಗೂಗಲ್ ಅಸಿಸ್ಟೆಂಟ್ ಗೆ ಆರ್ಡರ್ ಮಾಡಬಹುದು.ಅದಕ್ಕಾಗಿ ನೀವು ಗೂಗಲ್ ಅಸಿಸ್ಟೆಂಟ್ ಓಪನ್ ಮಾಡಿ,ಸೆಟ್ಟಿಂಗ್ಸ್ ಅನ್ನು ಟ್ಯಾಪ್ ಮಾಡಿ ಅಲ್ಲಿ ನ್ಯೂಸ್ ನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ.

2. ನಿಮ್ಮ ಕೆಲಸದ ಇಲ್ಲವೇ ಯಾವುದೇ ವಿಚಾರವನ್ನು ನಿಮಗೆ ನೆನಪಿಸಲು
ಅಲಾರಾಂಗಳನ್ನು ಸೆಟ್ ಮಾಡಲು, ಯಾರದ್ದಾದ್ರೂ ಹುಟ್ಟಿದ ದಿನ, ಮದುವೆ ದಿನ ಇತ್ಯಾದಿಗಳ ಬಗ್ಗೆ ರಿಮೈಂಡರ್ ಸೆಟ್ ಮಾಡಲು ಗೂಗಲ್ ಅಸಿಸ್ಟೆಂಟ್ ನೆರವಾಗುತ್ತೆ. ಅಷ್ಟೇ ಅಲ್ಲ ನೀವಿರುವ ಸ್ಥಳದ ಆಧಾರದ ಮೇಲೂ ಕೆಲವು ರಿಮೈಂಡರ್ ಗಳನ್ನು ಅಳವಡಿಸಿಡಬಹುದು. ಉದಾಹರಣೆಗೆ ನೀವಿರುವ ಸ್ಥಳದ AC ಸ್ವಿಚ್ ಆಫರ್ ಮಾಡಲು ನೆನಪು ಮಾಡುವಂತೆ ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ತಿಳಿಸಬಹುದು. ಇದರಿಂದ ಸುಲಭವಾಗಿ ನಿಮ್ಮ ನೆನಪುಗಳನ್ನು ನೆನಪಿಟ್ಟುಕೊಳ್ಳಬಹುದು.

3. ವಿಚಾರಗಳನ್ನು ನಿಮ್ಮ ಭಾಷೆಗೆ ವರ್ಗಾಯಿಸಲು
ಗೂಗಲ್ ಅಸಿಸ್ಟೆಂಟ್ ಮೂಲಕ ನೀವು ಯಾವುದೇ ಪದವನ್ನು ಮಾತ್ರವಲ್ಲ ಬದಲಾಗಿ ಒಂದು ಪೂರ್ಣ ವಾಕ್ಯವನ್ನೇ ನಿಮ್ಮ ಭಾಷೆಗೆ ವರ್ಗಾಯಿಸಿಕೊಳ್ಳಲು ಸಹಾಯ ಮಾಡುತ್ತದೆ. ವರ್ಗಾವಣೆಯಾದ ಪದ ಇಲ್ಲ ವಾಕ್ಯವು ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ ಅದನ್ನು ನೀವು ಓದಬಹುದು ಇಲ್ಲವೇ ಗೂಗಲ್ ಅಸಿಸ್ಟೆಂಟ್ ಬಳಿ ಓದಲು ಹೇಳಬಹುದು. ಅದನ್ನು ಭಾಷಾಂತರ ಮಾಡಲು ಆಯ್ಕೆ ತೆರೆಯುವುದು ಸಹ ಅಲ್ಲಿ ನಿಮಗೆ ಕಾಣುತ್ತದೆ.

4. ಪರಿವರ್ತಕವಾಗಿ ಬಳಕೆ ಮಾಡಬಹುದು
ಯಾವುದೇ ಮಾಪನವನ್ನು ಮತ್ತು ಕರೆನ್ಸಿಯನ್ನು ಪರಿವರ್ತಕವಾಗಿ ಬಳಸಲು ಗೂಗಲ್ ಅಸಿಸ್ಟೆಂಟ್ ನಿಮಗೆ ನೆರವಾಗಲಿದೆ. ಕೇವಲ ಕೆಲವೇ ಸೆಕೆಂಡ್ ನಲ್ಲಿ ಒಂದು ಪ್ರದೇಶದ ಕರೆನ್ಸಿಯನ್ನು ಇನ್ನೊಂದು ಪ್ರದೇಶದ ಕರೆನ್ಸಿಯಾಗಿ ಕನ್ವರ್ಟ್ ಮಾಡಿದಾಗ ಎಷ್ಟಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಬಹುದು. ಅಷ್ಟೇ ಅಲ್ಲ ಯಾವುದೇ ಪ್ರದೇಶದ ಸಮಯವನ್ನೂ ಕೂಡ ತಕ್ಷಣಕ್ಕೇ ತಿಳಿಯುವ ಅವಕಾಶವನ್ನು ಇದು ನೀಡುತ್ತೆ.

5. ಮಾರ್ಗದರ್ಶಕ ಮತ್ತು ಸಂಚಾರ ದಟ್ಟಣೆಯ ವಿವರ ತಿಳಿಯಲು
ಸಂಚಾರ ದಟ್ಟಣೆಯಿಂದ ನಿಮ್ಮನ್ನು ಕಾಪಾಡಲು ಇದು ನೆರವಾಗುತ್ತೆ. ನೀವು ಸಂಚರಿಸುತ್ತಿರುವ ಪ್ರದೇಶದಲ್ಲಿ ವಾಹನ ದಟ್ಟಣೆ ಹೇಗಿದೆ , ಬೇರೆ ಯಾವ ರಸ್ತಿಯಲ್ಲಿ ಸಂಚರಿಸಿದರೆ ನೀವು ಸೇರಬೇಕಾದ ಸ್ಥಳವನ್ನು ಬೇಗನೆ ಸೇರಲು ಸಾಧ್ಯ ಅನ್ನುವ ರಿಯಲ್ ಟೈಮ್ ಮಾಹಿತಿಯನ್ನು ಗೂಗಲ್ ಅಸಿಸ್ಟೆಂಟ್ ನಿಮಗೆ ನೀಡಲಿದೆ. ಅಷ್ಟೇ ಅಲ್ಲ ನೀವು ಸೇರಬೇಕಾದ ಸ್ಥಳವನ್ನು ತಲುಪಲು ಇನ್ನೆಷ್ಟು ಸಮಯ ಬೇಕು ಅನ್ನುವು ಕ್ಷಣಕ್ಷಣ ಮಾಹಿತಿ ನಿಮಗೆ ಆ ಮೂಲಕ ತಿಳಿಸುವ ವ್ಯವಸ್ಥೆಯನ್ನು ಇದು ಮಾಡಲಿದೆ.

6. ಹಾಡು ಮತ್ತು ವೀಡಿಯೋಗಳನ್ನು ನೋಡಲು
ಹಾಡುಗಳನ್ನು ಗೂಗಲ್ ಪ್ಲೇ ಮ್ಯೂಸಿಕ್ ಅಥವಾ ಯು ಟ್ಯೂಬ್ ಬಳಸಿ ಕೇಳುವ ಅವಕಾಶವು ಈ ಗೂಗಲ್ ಅಸಿಸ್ಟೆಂಟ್ ಮೂಲಕ ಕೇಳಬಹುದು. ಅಷ್ಟೇ ಗಾನ, ಸ್ವಾನ್ ಇತ್ಯಾದಿಗಳಿಂದಲೂ ಕೂಡ ಹಾಡುಗಳನ್ನು ಕೇಳಬಹುದು. ಅಷ್ಟೇ ಅಲ್ಲ ವೀಡಿಯೋಗಳನ್ನು ಹೀಗೆ ನೋಡಬಹುದು ಮತ್ತು ಜಸ್ಟ್ ಬಾಯಲ್ಲಿ ಕೇಳುವ ಮೂಲಕ ಹಾಡಿನ ವಾಲ್ಯೂಮ್ ಹೆಚ್ಚಿಸುವುದು, ಸ್ಟಾಪ್ ಮಾಡುವುದು, ಮತ್ತೊಂದು ಹಾಡನ್ನು ಹಾಕಿಕೊಳ್ಳುವುದು ಇತ್ಯಾದಿಗಳನ್ನು ಮಾಡಲೂ ಕೂಡ ಅವಕಾಶವಿದೆ..

7. ಸ್ಥಳದ ಹುಡುಕಾಟಕ್ಕೆ ಬಳಕೆ ಮಾಡಬಹುದು
"ಫೈಂಡ್ ನಿಯರ್ ಬೈ ರೆಸ್ಟೋರೆಂಟ್", " ಫೈಂಡ್ ನಿಯರ್ ಬೈ ಸ್ಟೋರ್ಸ್" ಎಂದು ಹೇಳಿದರೆ, ನೀವು ನಿಮ್ಮ ಹತ್ತಿರದ ಹೋಟೆಲ್ ಅಥವಾ ಶಾಪಿಂಗ್ ಮಾಡಲು ಬೇಕಾಗಿರುವ ಉತ್ತಮ ಅಂಗಡಿ ಯಾವುದೆಂದು ಅವುಗಳ ರೇಟಿಂಗ್ ನೋಡಿ ನೀವು ಆರಿಸಿಕೊಳ್ಳಬಹುದು. ಎಟಿಎಂ ನಿಯರ್ ಮಿ, ಟೆಂಪಲ್ ನಿಯರ್ ಮಿ ಎಂದು ಟೈಪ್ ಮಾಡಿದರೆ ಅದರ ಸಂಪೂರ್ಣ ಮಾಹಿತಿ ಕ್ಷಣರ್ಧದಲ್ಲಿ ನಿಮ್ಮ ಮುಂದಿರುತ್ತೆ.

8. ಖರೀದಿಸಬೇಕಾಗಿರುವಪಟ್ಟಿ ತಯಾರಿಸಲು
ನೀವು ಯಾವುದಾದರೂ ವಸ್ತುವನ್ನು ಬೇಕಿದ್ದರೆ ನಿಮ್ಮ ಶಾಪಿಂಗ್ ಲಿಸ್ಟ್ ಗೆ ಸೇರಿಸಿಕೊಳ್ಳುವ ಅವಕಾಶವನ್ನು ಗೂಗಲ್ ಅಸಿಸ್ಟೆಂಟ್ ನೀಡಲಿದೆ. "ಗೂಗಲ್ ಆಡ್ (ಖರೀದಿಸಬೇಕಾದ ವಸ್ತುವಿನ ಹೆಸರು) ಟು ಯುವರ್ ಶಾಪಿಂಗ್ ಲಿಸ್ಟ್ " ಎಂದು ಹೇಳಿದರೆ, ಗುಗಲ್ ಕೀಪ್ ಅಥವಾ ಆನ್ ಲೈನ್ ಗೂಗಲ್ ಶಾಪಿಂಗ್ ಲಿಸ್ಟ್ ಗೆ ನೀವು ಖರೀದಿಸಬೇಕಾಗಿರುವ ವಸ್ತುವನ್ನು ಸೇರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಇದನ್ನು ನೀವು ಮತ್ತೆ ನೋಡಲು ಬಹುದು ಜಸ್ಟ್ " ವಾಟ್ಸ್ ಆನ್ ಮೈ ಶಾಪಿಂಗ್ ಲಿಸ್ಟ್ " ಎಂದು ಹೇಳಿದರೆ ಸಾಕು, ನೀವು ಮಾಡಿದ ಪಟ್ಟಿ ನಿಮ್ಮ ಮುಂದೆ ಇರುತ್ತೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470