ಮೂರು ಗಂಟೆಗಳ ಕಾಲ 'ಕ್ಯಾಲೆಂಡರ್' ಸ್ಥಗಿತ!..'ಗೂಗಲ್' ವಿರುದ್ಧ ಆಕ್ರೋಶ!

|

ಗೂಗಲ್ ಕ್ಯಾಲೆಂಡರ್ ಸೇವೆಯನ್ನು ನೆಚ್ಚಿಕೊಂಡಿದ್ದ ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಬಳಕೆದಾರರು ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಸೇವೆಯಿಲ್ಲದೇ ಪರದಾಡಿದ ಘಟನೆ ವರದಿಯಾಗಿದೆ. ಜಾಗತಿಕವಾಗಿ ಮೂರು ಗಂಟೆಗಳ ಕಾಲ ಗೂಗಲ್ ಕ್ಯಾಲೆಂಡರ್ ಸೇವೆ ಸ್ಥಗಿತಗೊಂಡಿದ್ದು, ನಿಗದಿಪಡಿಸಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇಲ್ಲದೆ ಹಲವರು ಪರದಾಡಿದ್ದಾರೆ.

ಮೂರು ಗಂಟೆಗಳ ಕಾಲ 'ಕ್ಯಾಲೆಂಡರ್' ಸ್ಥಗಿತ!..'ಗೂಗಲ್' ವಿರುದ್ಧ ಆಕ್ರೋಶ!

ಭಾರತೀಯ ಕಾಲಮಾನ ಪ್ರಕಾರ, ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ಕ್ಯಾಲೆಂಡರ್ ಸೇವೆಯಲ್ಲಿ ಸಮಸ್ಯೆ ಎದುರಾಗಿತ್ತು ಎಂದು ತಿಳಿದುಬಂದಿದೆ. ಗೂಗಲ್ ಕ್ಯಾಲೆಂಡರ್ನಲ್ಲಿ ಜನರು ಮಹತ್ವದ ಮೀಟಿಂಗ್ ಮತ್ತು ಕಾರ್ಯಕ್ರಮಗಳ ಮಾಹಿತಿಯ ಬದಲಾಗಿ 404 ಎರರ್ ಸಂದೇಶ ಪಡೆದು ಸಮಸ್ಯೆಯನ್ನು ಅನುಭವಿಸಿದ್ದಾರೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಮೂರು ಗಂಟೆಗಳ ಕಾಲ 'ಕ್ಯಾಲೆಂಡರ್' ಸ್ಥಗಿತ!..'ಗೂಗಲ್' ವಿರುದ್ಧ ಆಕ್ರೋಶ!

ಓದಿರಿ: ಶಾಕಿಂಗ್ ನ್ಯೂಸ್!..ಭಾರತದಲ್ಲಿ ಶೀಘ್ರವೇ 'ವಾಟ್ಸ್ಆಪ್' ಬ್ಯಾನ್?!

ವಿಶ್ವಾದ್ಯಂತ ಬಳಕೆದಾರರು ಮಂಗಳವಾರ ಬೆಳಿಗ್ಗೆ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ದೋಷ ಸಂದೇಶವನ್ನು ಕಂಡುಕೊಂಡಿದ್ದಾರೆ. ಕೇವಲ ಕಂಪ್ಯೂಟರುಗಳಲ್ಲಷ್ಟೇ ಅಲ್ಲದೆ, ಮೊಬೈಲ್ ಸಾಧನಗಳಲ್ಲಿಯೂ ಗೂಗಲ್ ಕ್ಯಾಲೆಂಡರ್ ತೆರೆಯುವಲ್ಲಿ ಸಮಸ್ಯೆಯಿತ್ತು. ಆದರೆ ಐಒಎಸ್ (ಆಪಲ್) ಕಾರ್ಯಾಚರಣಾ ವ್ಯವಸ್ಥೆಯ ಸಾಧನಗಳಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದಿಲ್ಲ.

ಈ ಕುರಿತು ಗೂಗಲ್ ಪ್ರತಿಕ್ರಿಯೆ ನೀಡಿದ್ದು, ಬಳಕೆದಾರರಿಗೆ ಆದ ತೊಂದರೆಯ ಬಗ್ಗೆ ವಿಶ್ಲೇಷಿಸುತ್ತಿದ್ದೇವೆ. ಗೂಗಲ್ ಕ್ಯಾಲೆಂಡರ್ ಮತ್ತು ಹ್ಯಾಂಗ್‌ ಔಟ್‌ಗಳ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ. ಈ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಮತ್ತು ನಿಮ್ಮ ತಾಳ್ಮೆ ಮತ್ತು ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಹ ತಿಳಿಸಿದೆ.

ಓದಿರಿ: ತನಗೇ ಗೊತ್ತಿಲ್ಲದೆ ಆತ 11.5 ಲಕ್ಷ ರೂ. ಕಳೆದುಕೊಂಡ!..ಹೇಗೆ ಗೊತ್ತಾ?!

ಇನ್ನು ಮೀಟಿಂಗ್, ತರಗತಿ, ಮತ್ತಿತರ ಪೂರ್ವನಿಗದಿತ ಕಾರ್ಯಕ್ರಮಗಳ ಅಲರ್ಟ್‌ಗಳಿಲ್ಲದೆ ಕೆಲವರಂತೂ ತಮ್ಮ ಹತಾಶೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಗೆಡವಿದ್ದಾರೆ. ಕ್ಯಾಲೆಂಡರ್‌ನ ದೋಷದ ಸ್ಕ್ರೀನ್ ಶಾಟ್‌ಗಳನ್ನು ಗೂಗಲ್ ಕ್ಯಾಲೆಂಡರ್‌ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಜನರು ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Best Mobiles in India

English summary
“The problem with Google Calendar and Hangouts Meet should be resolved,” Google said in a statement Tuesday afternoon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X