ಗೂಗಲ್‌ ಕ್ರೋಮ್‌ನಲ್ಲಿ ಹೊಸ ಫೀಚರ್ಸ್‌; ಡೌನ್‌ಲೋಡ್‌ಗಳು ಇನ್ನಷ್ಟು ಸೇಫ್‌

|

ಗೂಗಲ್‌ ಕ್ರೋಮ್‌ ಎನ್ನುವುದು ಕ್ರಾಸ್-ಪ್ಲಾಟ್‌ಫಾರ್ಮ್ ವೆಬ್ ಬ್ರೌಸರ್ ಆಗಿದೆ. ಇದರಲ್ಲಿ ಹಲವಾರು ಫೀಚರ್ಸ್‌ಗಳು ಲಭ್ಯ ಇವೆ. ಹಾಗೆಯೇ ಬಳಕೆದಾರರು ಸೆಕ್ಯೂರ್‌ ಆಗಿ ಈ ಮೂಲಕ ಮಾಹಿತಿ ಜಾಲಾಡಲು ಸಾಕಷ್ಟು ಅನುಕೂಲಗಳನ್ನೂ ಸಹ ನೀಡಲಾಗಿದೆ. ಅದಾಗ್ಯೂ ಕ್ರೋಮ್‌ನಲ್ಲಿ ಕೆಲವು ಭದ್ರತಾ ಲೋಪದೋಷಗಳು ಕಂಡು ಬರುತ್ತಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಗೂಗಲ್‌ ಮುಂದಾಗಿದೆ.

ಕ್ರೋಮ್‌

ಹೌದು, ಗೂಗಲ್‌ ಕ್ರೋಮ್‌ ಇಂದು ಸ್ಮಾರ್ಟ್‌‌ ಡಿವೈಸ್‌ ಇರುವ ಬಹುಪಾಲು ಎಲ್ಲರೂ ಬಳಕೆ ಮಾಡುವ ವೆಬ್ ಬ್ರೌಸರ್ ಆಗಿದ್ದು, ಇದೀಗ ಹೊಸ ಫೀಚರ್ಸ್‌ ಅನ್ನು ಪಡೆಯಲು ಮುಂದಾಗಿದೆ. ಹಾಗೆಯೇ ಹೆಚ್ಚಿನ ಭದ್ರತೆ ಇರುವ HTTPS ಸಂಪರ್ಕಗಳ ಬಳಕೆಯನ್ನು ಉತ್ತೇಜಿಸುವ ಹಿನ್ನೆಲೆ ಗೂಗಲ್‌ ಕಳೆದ ಕೆಲವು ವರ್ಷಗಳಿಂದ ಕ್ರೋಮ್‌ಗೆ ಭದ್ರತಾ ಫೀಚರ್ಸ್‌ಗಳನ್ನು ಸೇರಿಸಿಕೊಂಡು ಬರುತ್ತಿದೆ. ಅಂತೆಯೇ ಬಳಕೆದಾರರು ಇದರಲ್ಲಿ ಏನಾದರೂ ಸರ್ಚ್‌ ಮಾಡುವಾಗ ಅಥವಾ ಡೌನ್‌ಲೋಡ್‌ ಮಾಡುವಾಗ ಹೆಚ್ಚು ಸೆಕ್ಯೂರ್‌ ಆಗಿರಬಹುದು.

ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಗೂಗಲ್ ಹಂಚಿಕೊಂಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಕ್ರೋಮ್‌ ನ ಭದ್ರತಾ ಸೆಟ್ಟಿಂಗ್‌ಗಳಲ್ಲಿ' ಯಾವಾಗಲೂ ಸುರಕ್ಷಿತ ಸಂಪರ್ಕಗಳನ್ನು ಬಳಸಿ' ಎಂಬ ಆಯ್ಕೆಯನ್ನು ಈಗಾಗಲೇ ನೀಡಲಾಗಿದ್ದು, ಈ ಆಯ್ಕೆಯನ್ನು ಸಕ್ರಿಯಗೊಳಿಸಿದಾಗ, ನೀವು ಉದ್ದೇಶಪೂರ್ವಕವಾಗಿ ಅಸುರಕ್ಷಿತ ಸೈಟ್‌ಗಳಿಗೆ ಭೇಟಿ ನೀಡಿದರೆ ಅಥವಾ ಅಲ್ಲಿಂದ ಏನಾದರೂ ಡೌನ್‌ಲೋಡ್ ಮಾಡಲು ಮುಂದಾದರೆ ಇದು ಬಹಳ ಪ್ರಯೋಜಕಾರಿಯಾಗಲಿದೆ. ಇದೇ ರೀತಿ ಹೊಸ ಫೀಚರ್ಸ್‌ ಕೆಲಸ ಮಾಡಲಿದೆ.

ಅಸುರಕ್ಷಿತ

ಅಂದರೆ, ಅಸುರಕ್ಷಿತ ವೆಬ್‌ಸೈಟ್‌ಗಳನ್ನು ನಿಮಗೆ ಅರಿವಿಲ್ಲದೆ ಓಪನ್‌ ಮಾಡಿದರೆ ಅದನ್ನು HTTPS ಗೆ ಅಪ್‌ಗ್ರೇಡ್ ಮಾಡಲು ಕ್ರೋಮ್‌ ಪ್ರಯತ್ನಿಸುತ್ತದೆ. ಅದರಲ್ಲಿ ಏನಾದರೂ ಸುರಕ್ಷಿತ ಆವೃತ್ತಿ ಕಂಡುಬರದಿದ್ದರೆ, ಈ ಸಂಬಂಧ ಮಾಹಿತಿ ನೀಡುವುದರ ಜೊತೆಗೆ ನೀವು ಇನ್ನೂ ಮುಂದುವರಿಯಲು ಬಯಸುತ್ತೀರಾ ಎಂದು ಕೇಳುತ್ತದೆ. ಹೀಗಾಗಿ ನೀವು ಎಚ್ಚೆತ್ತುಕೊಳ್ಳಬಹುದಾಗಿದೆ.

ಹಳೆಯ HTTP ಸೈಟ್ ಸುರಕ್ಷಿತವಲ್ಲ

ಹಳೆಯ HTTP ಸೈಟ್ ಸುರಕ್ಷಿತವಲ್ಲ

ಈಗಾಗಲೇ ಬಹುಪಾಲು ಮಂದಿಗೆ ತಿಳಿದಿರುವಂತೆ ಯಾವುದೇ ಹಳೆಯ HTTP ಸೈಟ್ ಅನ್ನು ಈಗ ವಿಳಾಸ ಪಟ್ಟಿಯಲ್ಲಿ ಸುರಕ್ಷಿತವಾಗಿಲ್ಲ ಎಂದು ಫ್ಲ್ಯಾಗ್ ಮಾಡಲಾಗಿದೆ. ಹೀಗಾಗಿಯೇ ಸುರಕ್ಷಿತ ವೆಬ್‌ಸೈಟ್‌ಗಳಲ್ಲಿ ಸುರಕ್ಷಿತವಲ್ಲದ ಡೌನ್‌ಲೋಡ್‌ಗಳು ಅಥವಾ ವೆಬ್ ಫಾರ್ಮ್‌ಗಳ ಬಳಕೆಯನ್ನು ಕ್ರೋಮ್‌ ನಿಷೇಧಿಸುತ್ತದೆ.

ಡೌನ್‌ಲೋಡ್ ಆಗುವುದಿಲ್ಲ...

ಡೌನ್‌ಲೋಡ್ ಆಗುವುದಿಲ್ಲ...

ನೀವು HTTPS ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ ನಂತರ ಅಸುರಕ್ಷಿತ HTTP ಸರ್ವರ್‌ಗೆ ಫಾರ್ವರ್ಡ್ ಮಾಡಿದರೆ ಗೂಗಲ್‌ ಕ್ರೋಮ್‌ ಡೌನ್‌ಲೋಡ್ ಮಾಡುವುದನ್ನು ನಿಲ್ಲಿಸುತ್ತದೆ. ಕ್ರೋಮ್‌ ಬ್ರೌಸರ್‌ನಲ್ಲಿ HTTP ಪುಟಗಳ ಬೆಂಬಲವನ್ನು ಕ್ರೋಮ್‌ ಈಗಾಗಲೇ ಕೊನೆಗೊಳಿಸಿದೆ ಎನ್ನುವುದು ನಿಮ್ಮ ಗಮನಕ್ಕಿರಲಿ. ಈ ಮೂಲಕ ಸುರಕ್ಷಿತ ಹಾಗೂ ಅಸುರಕ್ಷಿತ ತಾಣಗಳ ಸಂಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.

ಬ್ಲಾಕ್ ಅನ್ನು ಬೈಪಾಸ್ ಮಾಡಬಹುದು

ಬ್ಲಾಕ್ ಅನ್ನು ಬೈಪಾಸ್ ಮಾಡಬಹುದು

ಅಸುರಕ್ಷಿತ ಡೌನ್‌ಲೋಡ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಕ್ರಮದ ನಂತರವೂ ಕ್ರೋಮ್‌ ಬಳಕೆದಾರರು ಬ್ಲಾಕ್ ಅನ್ನು ಬೈಪಾಸ್ ಮಾಡಬಹುದಾಗಿದೆ. ಅಂದರೆ ಇವನ್ನು ನಿರ್ಬಂಧಿಸುವ ಬದಲು ಇಂಟರ್ನೆಟ್‌ನ ಅಪಾಯಕಾರಿ ಪ್ರದೇಶಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು ಬಳಕೆದಾರರಿಗೆ ಕ್ರೋಮ್‌ ಎಚ್ಚರಿಕೆ ನೀಡುತ್ತದೆ. ಇದರಿಂದ ನೀವು ಎಚ್ಚೆತ್ತುಕೊಂಡರೆ ಒಳಿತು, ಇಲ್ಲವಾದರೆ ನಿಮ್ಮ ಡಿವೈಸ್‌ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕ್ರೋಮ್‌ ಬಳಕೆದಾರರಿಗೆ ಹೆಚ್ಚಿನ ಭದ್ರತೆ

ಕ್ರೋಮ್‌ ಬಳಕೆದಾರರಿಗೆ ಹೆಚ್ಚಿನ ಭದ್ರತೆ

ಗೂಗಲ್‌ ಕ್ರೋಮ್‌ ತನ್ನ ಬಳಕೆದಾರರಿಗೆ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಪರಿಚಯಿಸಲಾದ ಟಾಗಲ್‌ನಂತೆ ಈಗ ಹೊಸ ಫೀಚರ್ಸ್‌ ಇರಲಿದ್ದು, ಇದು 'ಯಾವಾಗಲೂ ಸುರಕ್ಷಿತ ಸಂಪರ್ಕಗಳನ್ನು ಬಳಸಿ' ಟಾಗಲ್‌ನ ಭಾಗವಾಗಿ ಕೆಲಸ ಮಾಡಲಿದೆ. ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದ್ದು, ಮಾರ್ಚ್ 2023 ರಲ್ಲಿ ಬಿಡುಗಡೆಯಾಗಲಿರುವ ಕ್ರೋಮ್‌ 111 ರವರೆಗೆ ಬಳಕೆಗೆ ಲಭ್ಯ ಇರುವುದಿಲ್ಲ ಎನ್ನಲಾಗಿದೆ. ಹೀಗಾಗಿ ಈ ಹೊಸ ಸೌಲಭ್ಯವನ್ನು ಪಡೆಯಲು ಬಳಕೆದಾರರು ಬಹು ಸಮಯ ಕಾಯಬೇಕಿದೆ.

Best Mobiles in India

English summary
Google Chrome is getting new feature to make downloads secure.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X