ಹೊಸ ಅಪ್ಡೇಟ್ ಪರಿಚಯಿಸಿದ ಗೂಗಲ್‌ ಕ್ರೋಮ್‌!

|

ಜಾಗತಿಕವಾಗಿ ಅತಿ ಹೆಚ್ಚು ಬಳಸಲಾಗುವ ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್ ಕೂಡ ಒಂದಾಗಿದೆ. ಸದ್ಯ ವೆಬ್‌ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಮೂಲಕ ಬ್ರೌಸಿಂಗ್‌ ಮಾಡುವುದು ಸಾಕಷ್ಟು ಸುಲಭವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಗೂಗಲ್‌ ಕ್ರೋಮ್‌ ಅನ್ನು ಬಳಸುತ್ತಾರೆ. ಸದ್ಯ ಇದೀಗ ಗೂಗಲ್‌ ಕ್ರೋಮ್‌ ಹೊಸ ಅಪ್ಡೇಟ್‌ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಪ್ಡೇಟ್‌ ಮಾಡಲಾದ ಈ ಫೀಚರ್ಸ್‌ ಕ್ರೋಮ್ ತೆರೆದಿರುವ ಎಲ್ಲಾ ಟ್ಯಾಬ್‌ಗಳಿಗಿಂತ ಸಕ್ರಿಯ ಟ್ಯಾಬ್‌ಗಳಿಗೆ ಆದ್ಯತೆ ನೀಡುವ ಮೂಲಕ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸಕ್ರಿಯ ಟ್ಯಾಬ್‌ಗಳಿಗೆ ಆದ್ಯತೆ ನೀಡುವ ಮೂಲಕ ಬ್ಯಾಟರಿ ಅವಧಿಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹೀಗಾಗಿ ಸಿಪಿಯು ಬಳಕೆಯನ್ನು ಐದು ಪಟ್ಟು ಕಡಿಮೆ ಮಾಡುತ್ತದೆ ಮತ್ತು ಬ್ಯಾಟರಿ ಅವಧಿಯನ್ನು 1.25 ಗಂಟೆಗಳವರೆಗೆ ವಿಸ್ತರಿಸುತ್ತದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಕ್ರೋಮ್ ತನ್ನ ಫೀಚರ್ಸ್‌ಗಳಲ್ಲಿ ಹೊಸ ಅಪ್ಡೇಟ್‌ ಮಾಡಿದ್ದು, ಬ್ಯಾಟರಿ ಪವರ್‌ ಅನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಅಲ್ಲದೆ ಈ ಹೊಸ ಅಪ್ಡೇಟ್‌ ನಿಂದಾಗಿ ಕ್ರೋಮ್‌ ಸಹ ಶೇಕಡಾ 25 ರಷ್ಟು ವೇಗವಾಗಿ ಪ್ರಾರಂಭವಾಗುತ್ತದೆ, ಪೇಜ್‌ಗಳನ್ನು 7%ರಷ್ಟು ವೇಗವಾಗಿ ಲೋಡ್ ಮಾಡುತ್ತದೆ. ಅಲ್ಲದೆ ಮೊದಲಿಗಿಂತ ಕಡಿಮೆ ಶಕ್ತಿ ಮತ್ತು RAM ಅನ್ನು ಬಳಸುತ್ತದೆ ಎಂದು ಹೇಳಲಾಗಿದೆ. ಈ ಅಂಕಿಅಂಶಗಳು Google ನ ಆಂತರಿಕ ಮಾನದಂಡಗಳನ್ನು ಆಧರಿಸಿವೆ. ಇದಲ್ಲದೆ, "ಬಳಕೆದಾರರು ಹಿಂದುಳಿದ ಮತ್ತು ಮುಂದಕ್ಕೆ ನ್ಯಾವಿಗೇಟ್ ಮಾಡುವಾಗ ಆಂಡ್ರಾಯ್ಡ್‌ನಲ್ಲಿನ ಕ್ರೋಮ್ ತಕ್ಷಣವೇ ಪೇಜ್‌ಗಳನ್ನು ಲೋಡ್ ಮಾಡುತ್ತದೆ.

ಟ್ಯಾಬ್

ಇನ್ನು ಬಳಕೆದಾರರು ತೆರೆದ ಟ್ಯಾಬ್‌ಗಳನ್ನು ಅನುಕೂಲಕರವಾಗಿ ಹುಡುಕಲು ಸಹಾಯ ಮಾಡುವಂತಹ ಟ್ಯಾಬ್ ಸರ್ಚ್‌ ಅನ್ನು ಸಹ ಕ್ರೋಮ್ ಪರಿಚಯಿಸಿದೆ. ಇದು ನಿಮ್ಮ ತೆರೆದ ಟ್ಯಾಬ್‌ಗಳ ಪಟ್ಟಿಯನ್ನು ನೀವು ಈಗ ನೋಡಲು ಅವಕಾಶ ನೀಡುತ್ತದೆ. ನಿಮಗೆ ಅಗತ್ಯವಿರುವದನ್ನು ಹುಡುಕಲು ತ್ವರಿತವಾಗಿ ಟೈಪ್ ಮಾಡಿದರೆ ಸಾಕು ಇದು ನಿಮ್ಮ ಟ್ಯಾಬ್‌ಗಳಿಗಾಗಿ ಹುಡುಕುತ್ತದೆ. ಇನ್ನು ಈ ಫೀಚರ್ಸ್‌ ಮೊದಲು Chromebooks ನಲ್ಲಿ ಬರುತ್ತದೆ ಮತ್ತು ನಂತರ Chrome ನ ಇತರ ಡೆಸ್ಕ್‌ಟಾಪ್ ಆವೃತ್ತಿಗಳಿಗೆ ವಿಸ್ತರಿಸುತ್ತದೆ. Chrome ವಿಂಡೋಗಳ ಸಂಖ್ಯೆಯನ್ನು ಲೆಕ್ಕಿಸದೆ ಯಾವುದೇ ಟ್ಯಾಬ್ ಅನ್ನು ಹುಡುಕಲು ಟ್ಯಾಬ್ ಸರ್ಚ್‌ ಫೀಚರ್ಸ್‌ ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಟ್ಯಾಬ್‌

ಸದ್ಯ Chrome ನಲ್ಲಿ ಟ್ಯಾಬ್‌ಗಳನ್ನು ಪಿನ್ ಮಾಡಲು, ಗುಂಪು ಟ್ಯಾಬ್‌ಗಳನ್ನು ಮತ್ತು ಟ್ಯಾಬ್‌ಗಳನ್ನು ಕಳುಹಿಸಲು Chrome ಈಗಾಗಲೇ ಸಾಧನಗಳನ್ನು ಪರಿಚಯಿಸಿದೆ. ಆದರೆ ಹೊಸ ಆಪ್ಡೇಟ್‌ ವಿಳಾಸ ಪಟ್ಟಿಯಿಂದ ನೇರವಾಗಿ ವಸ್ತುಗಳನ್ನು ಹುಡುಕಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಮಲ್ಟಿ ಮೆನುಗಳನ್ನು ತೆರೆಯುವ ಬದಲು ಪದಗಳನ್ನು ಟೈಪ್ ಮಾಡುವ ಮೂಲಕ ಬಳಕೆದಾರರು "ಕ್ರೋಮ್ ಹಿಸ್ಟರಿ ಡಿಲೀಟ್‌" ಅಥವಾ ಪಾಸ್‌ವರ್ಡ್‌ಗಳನ್ನು ಎಡಿಟ್‌ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಹೆಚ್ಚುವರಿಯಾಗಿ, Chrome ನಲ್ಲಿನ ಹೊಸ ಟ್ಯಾಬ್ ಪುಟಕ್ಕೆ Chrome ಶೀಘ್ರದಲ್ಲೇ ಕಾರ್ಡ್‌ಗಳನ್ನು ಸೇರಿಸುತ್ತದೆ.

Best Mobiles in India

English summary
Google Chrome’s final update for 2020 promises performance improvements for smoother work life.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X