ಗೂಗಲ್ ಕ್ರೋಮ್ ನಲ್ಲಿ ಹೊಸ ಆಯ್ಕೆ.!

Written By: Lekhaka

ಗೂಗಲ್ ದಿನ ಕಳೆದಂತೆ ಬಳಕೆದಾರರ ಸ್ನೇಹಿಯಾಗುವ ಕಾರ್ಯಕ್ಕೆ ಮುಂದಾಗಿದೆ. ತನ್ನ ಜನಪ್ರಿಯ ಕ್ರೋಮ್ ಬ್ರೌಸರ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ತರಲು ಮುಂದಾಗಿದ್ದು, ಅದಲ್ಲೂ ಹೊಸದೊಂದು ಆಯ್ಕೆಯನ್ನು ನೀಡಲಿದೆ.

ಗೂಗಲ್ ಕ್ರೋಮ್ ನಲ್ಲಿ ಹೊಸ ಆಯ್ಕೆ.!

ಈ ಕುರಿತು ಮಾಹಿತಿಯನ್ನು ನೀಡಿರುವ ಆಂಡ್ರಾಯ್ಡ್ ಪೊಲೀಸ್ ವೆಬ್ ಸೈಟ್, ಗೂಗಲ್ ಕ್ರೋಮ್ ನಲ್ಲಿ ನಿಮಗೆ ಕೆಲವು ವೆಬ್ ಸೈಟ್ ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎಂದು ವರದಿ ಮಾಡಿದೆ. ಈ ಆಯ್ಕೆಯ ಟೆಸ್ಟಿಂಗ್ ಸದ್ಯ ನಡೆಯುತ್ತಿದೆ.

2017ರಲ್ಲಿ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಸ್ಮಾರ್ಟ್ಫೋನ್ಸ್ ಮಾಹಿತಿ ಬಹಿರಂಗ!!

ಈ ಮ್ಯೂಟ್ ಆಯ್ಕೆಯನ್ನು ವೆಬ್ ಸೈಟ್ ಗಳ ಪೇಜ್ ಇನ್ ಫೋ ಒಳಗಡೆ ಕಾಣಬಹುದಾಗಿದೆ. ಒಮ್ಮೆ ವೆಬ್ ಸೈಟ್ ಗಳನ್ನು ಮ್ಯೂಟ್ ಮಾಡಿದ ನಂತರದಲ್ಲಿ ನೀವು ಕ್ರೋಮ್ ಬ್ರೌಸರ್ ನಲ್ಲಿ ಮತ್ತೇ ಆ ವೆಬ್ ಸೈಟ್ ಅನ್ನು ಓಪನ್ ಮಾಡಿದರೆ ಅದರ ಆಡಿಯೋ ಬಂದ್ ಆಗಿರಲಿದೆ.

ಏಕೆಂದರೆ ಇಂದಿನ ದಿನದಲ್ಲಿ ಅನೇಕ ವೆಬ್ ಸೈಟ್ ಗಳಲ್ಲಿ ವಿಡಿಯೋ ತನ್ನಿಂದ ತಾನೆ ಪ್ಲೇಯಾಗಲಿದ್ದು, ಇದರಿಂದ ಕಿರಿಕಿರಿ ಹೆಚ್ಚಾಗಿದೆ ಪ್ರತಿ ಬಾರಿಯೂ ವಿಡಿಯೋ ಮೇಲೆ ಕ್ಲಿಕ್ ಮಾಡಿ ಮ್ಯೂಟ್ ಮಾಡಬೇಕಾಗಿದೆ. ಆದರೆ ಈ ಹೊಸ ಆಯ್ಕೆಯು ಅದರಿಂದ ಮುಕ್ತಿ ನೀಡಲಿದೆ.

ಸದ್ಯ ಟೆಸ್ಟಿಂಗ್ ಯಶಸ್ವಿಯಾದರೆ ಈ ಮ್ಯೂಟ್ ಆಯ್ಕೆಯೂ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ.

Read more about:
English summary
Google Chrome seems to be likely testing the permanent muting of websites from the Page Info bubble.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot