ಗೂಗಲ್‌ ಕ್ರೋಮ್‌ನಲ್ಲಿರುವ ಈ ಫೀಚರ್ಸ್‌ಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?

|

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಲು ಗೂಗಲ್‌ ಕ್ರೋಮ್‌ ಅನ್ನು ಬಳಸುತ್ತಾರೆ. ಯಾವುದೇ ವಿಚಾರವಾಗಲಿ ಸರ್ಚ್‌ ಮಾಡೋ ವಿಚಾರ ಬಂದಾಗ ಹೆಚ್ಚಿನ ಜನರ ಆಯ್ಕೆ ಗೂಗಲ್‌ ಕ್ರೋಮ್‌ ಆಗಿದೆ. ಗೂಗಲ್‌ ಕ್ರೋಮ್‌ ಬ್ರೌಸರ್‌ ಕೂಡ ತನ್ನ ಬಳಕೆದಾರರಿಗಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಸರ್ಚಿಂಗ್‌ ಅನುಭವ ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ ಬ್ರೌಸರ್‌ ಬಳಕೆದಾರರ ಅನುಭವ ಸುಧಾರಿಸುವುದಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಇವುಗಳನ್ನು ಬಳಸಿದರೆ ನಿಮಗೆ ಇನ್ನಷ್ಟು ಉತ್ತಮ ಪಲಿತಾಂಶ ದೊರೆಯಲಿದೆ. ಹಾಗಾದ್ರೆ ಗೂಗಲ್‌ ಕ್ರೋಮ್‌ ಬಳಸುವಾಗ ನಿಮ್ಮ ಸರ್ಚಿಂಗ್‌ ಅನ್ನು ಸುಧಾರಿಸುವ ಹಾಗೂ ಅತ್ಯುತ್ತಮ ಅನುಭವ ನೀಡುವ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಕ್ರೋಮ್‌ ಸರ್ಚ್‌ ಜರ್ನಿಸ್‌

ಗೂಗಲ್‌ ಕ್ರೋಮ್‌ ಸರ್ಚ್‌ ಜರ್ನಿಸ್‌

ಗೂಗಲ್‌ ಕ್ರೋಮ್‌ ಸರ್ಚ್‌ ಜರ್ನಿಸ್‌ ಫೀಚರ್ಸ್‌ ನಲ್ಲಿ ನೀವು ಯಾವುದೇ ವಿಚಾರವನ್ನು ಸರ್ಚ್‌ ಮಾಡಿದರೂ ಕೂಡ ಅದಕ್ಕೆ ಸಂಬಂಧಿಸಿದ ಹಿಂದಿನ ಸರ್ಚ್‌ ಅನ್ನು ಕೂಡ ನೀಡಲಿದೆ. ನಿರ್ದಿಷ್ಟ ವಿಷಯದ ಕುರಿತು ನೀವು ಮಾಡಿದ ಎಲ್ಲಾ ಸರ್ಚ್‌ಗಳನ್ನುಸಂಘಟಿಸುವ ಮತ್ತು ಅರ್ಥ ಮಾಡಿಕೊಳ್ಳುವ ಮೂಲಕ ಈ ಫೀಚರ್ಸ್‌ ಕಾರ್ಯನಿರ್ವಹಿಸಲಿದೆ. ಅಲ್ಲದೆ ನೀವು ಸರ್ಚ್‌ ಮಾಡಿದ ವಿಚಾರಗಳ್ನು ಮತ್ತೆ ಬಳಸಲು ನಿಮಗೆ ಅನುಮತಿಸಲಿದೆ. ಇದಕ್ಕಾಗಿ ನೀವು "Resume your journey" ಬಟನ್ ಅನ್ನು ಕ್ಲಿಕ್ ಮಾಡಿರಿ.

ಆಲ್‌ ಟ್ಯಾಬ್‌ ಕ್ಲೋಸ್‌

ಆಲ್‌ ಟ್ಯಾಬ್‌ ಕ್ಲೋಸ್‌

ಗೂಗಲ್‌ ಕ್ರೋಮ್‌ನಲ್ಲಿ ಸರ್ಚ್‌ ಮಾಡುವಾಗ ಆಕಸ್ಮಿಕವಾಗಿ ನೀವು ತೆರೆದ ಎಲ್ಲಾ ಟ್ಯಾಬ್‌ಗಳು ಕ್ಲೋಸ್‌ ಆದರೆ ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನೀವು ಕ್ಲೋಸ್‌ ಮಾಡಿದ ಎಲ್ಲಾ ಟ್ಯಾಬ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಪುನಃ ತೆರೆಯಲು ನೀವು ಕ್ರೋಮ್‌ ಅನ್ನು ಕಸ್ಟಮೈಸ್ ಮಾಡಬಹುದು. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದಾಗಿದೆ.

ಹಂತ:1 ಮೊದಲಿಗೆ ಕ್ರೋಮ್‌ ಬ್ರೌಸರ್‌ನ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೆನುವಿನ ಮೇಲೆ ಕ್ಲಿಕ್ ಮಾಡಿ
ಹಂತ:2 ನಂತರ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ
ಹಂತ:3 "ಆನ್‌ ಸ್ಟಾರ್ಟಪ್‌" ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:4 ಇದೀಗ "Continue where you left off" ಆಯ್ಕೆಯನ್ನು ಆರಿಸಿ.
ಹೀಗೆ ಮಾಡುವ ಮೂಲಕ ಆಕಸ್ಮಿಕವಾಗಿ ಕ್ಲೋಸ್‌ ಮಾಡಿದ ಟ್ಯಾಬ್‌ಗಳನ್ನು ಮತ್ತೆ ತೆರೆಯಬಹುದು.

ಗೂಗಲ್‌ ಲೆನ್ಸ್‌

ಗೂಗಲ್‌ ಲೆನ್ಸ್‌

ನೀವು ಗೂಗಲ್‌ ಕ್ರೋಮ್‌ನಲ್ಲಿ ಸರ್ಚ್‌ ಮಾಡಿದ ಇಮೇಜ್‌ ಬಗ್ಗೆ ಹೆಚ್ಚಿನ ವಿಚಾರವನ್ನು ತಿಳಿಯಲು ಗೂಗಲ್‌ ಲೆನ್ಸ್‌ ಅನ್ನು ಬಳಸಬಹುದಾಗಿದೆ. ಇದರಿಂದ ನಿಮಗೆ ವೆಬ್‌ಸೈಟ್‌ನಲ್ಲಿ ಕಾಣುವ ಕಟ್ಟಡದ ಚಿತ್ರ, ಪ್ರಾಣಿಗಳು ಮತ್ತು ಸಸ್ಯಗಳ ವಿಚಾರಗಳನ್ನು ತಿಳಿದುಕೊಳ್ಳಲು ಬಳಸಬಹುದಾಗಿದೆ. ಇದಕ್ಕಾಗಿ ನೀವು ಸರ್ಚ್‌ ಮಾಡಿದ ಚಿತ್ರದ ಮೇಲೆ ರೈಟ್‌ ಕ್ಲಿಕ್ ಮಾಡಿ, ನಂತರ ಗೂಗಲ್‌ ಲೆನ್ಸ್‌ನಲ್ಲಿ ಸರ್ಚ್‌ ಮಾಡುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಬ್ರೌಸರ್‌ನ ಬಲಭಾಗದಲ್ಲಿ ಇಮೇಜ್‌ನ ಸಂಪೂರ್ಣ ವಿವರವನ್ನು ತಿಳಿಯಬಹುದಾಗಿದೆ.

ಸೆಂಡ್‌ ಲಿಂಕ್ಸ್‌

ಸೆಂಡ್‌ ಲಿಂಕ್ಸ್‌

ಗೂಗಲ್‌ ಕ್ರೋಮ್‌ನಲ್ಲಿ ನೀವು ಓದಲು ಬಯಸುವ ಆರ್ಟಿಕಲ್‌ಗಳ ಲಿಂಕ್‌ಗಳನ್ನು ಶೇರ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಇನ್ನು ಬೇರೆಯವರಿಗೆ ಲಿಂಕ್‌ಗಳನ್ನು ಸೆಂಡ್‌ ಮಾಡಲು ಶೇರ್‌ ಲಿಂಕ್‌ ಫೀಚರ್ಸ್‌ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ ನೀವು ಅಡ್ರೆಸ್‌ ಬಾರ್‌ನ ಬಲಭಾಗದಲ್ಲಿ, ನೀವು ಶೇರ್‌ ಐಕಾನ್ ಅನ್ನು ಕಾಣಬಹುದು. ಇದರಲ್ಲಿ ನೀವು ಬ್ರೌಸ್ ಮಾಡುತ್ತಿರುವ ಲಿಂಕ್ ಅನ್ನು ಶೇರ್‌ ಮಾಡಲು ಬೇಕಾಗುವ ಆಯ್ಕೆಗಳು ಲಭ್ಯವಾಗಲಿದೆ.

ಸೈಟ್ ಶಾರ್ಟ್‌ಕಟ್‌ ಕ್ರಿಯೆಟ್‌

ಸೈಟ್ ಶಾರ್ಟ್‌ಕಟ್‌ ಕ್ರಿಯೆಟ್‌

ನೀವು ಹೆಚ್ಚು ಸರ್ಚ್‌ ಮಾಡುವ ವೆಬ್‌ಸೈಟ್‌ಗಳನ್ನು ಶಾರ್ಟ್‌ಕಟ್‌ ಕೂಡ ಮಾಡಬಹುದು. ನೀವು ಹೊಸ ಟ್ಯಾಬ್ ಅನ್ನು ತೆರೆದಾಗ ಈ ಆಯ್ಕೆಯನ್ನು ಪ್ರದರ್ಶಿಸಲು Chrome ನಲ್ಲಿ "ಹೊಸ ಟ್ಯಾಬ್" ಪೇಜ್‌ ಅನ್ನು ನೀವು ಕಸ್ಟಮೈಸ್ ಮಾಡಬಹುದು. ನಂತರ ಕೆಳಗಿನ ಬಲಭಾಗದಲ್ಲಿರುವ "ಕಸ್ಟಮೈಸ್" ಅನ್ನು ಕ್ಲಿಕ್ ಮಾಡಿ. ಇದರಲ್ಲಿ, ನೀವು ಕ್ಯುರೇಟ್ ಮಾಡುವ ಶಾರ್ಟ್‌ಕಟ್‌ಗಳ ಲಿಸ್ಟ್‌ ಅನ್ನು ಪೇಜ್‌ನಲ್ಲಿ ಡಿಸ್‌ಪ್ಲೇ ಆಗುವಂತೆ ಮಾಡುವ ಆಯ್ಕೆಯನ್ನು ಕೂಡ ಬಳಸಬಹುದಾಗಿದೆ.

Best Mobiles in India

English summary
Google Chrome tips and tricks to enhance internet surfing experience

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X