21ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೂಗಲ್!..ಅಲ್ಲಲ್ಲ..ಅದಕ್ಕೂ ಈ ಬಗ್ಗೆ ಡೌಟ್ ಇದೆ!

|

ನವಯುಗದ ಮಹಾಗುರು ಎಂದೇ ಕರೆಸಿಕೊಳ್ಳುತ್ತಿರುವ ಗೂಗಲ್ ಇಂದು ತನ್ನ 21ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ಆದರೆ, ಯಾವ ವಿಷಯದ ಬಗ್ಗೆ ಬೇಕಾದರೂ ಮಾಹಿತಿ ಹುಡುಕಿಕೊಡುವ ಗೂಗಲ್‌ ಸಂಸ್ಥೆಗೆ ತನ್ನದೇ ಹುಟ್ಟುಹಬ್ಬದ ಬಗ್ಗೆ ಗೊಂದಲ ಇರುವಂತಿದೆ ಎಂದರೆ ಆಶ್ಚರ್ಯವೇ ಸರಿ. ಏಕೆಂದರೆ, ಇಂದು (ಸೆ. 27) ತನ್ನ 21ನೇ ಹುಟ್ಟುಹಬ್ಬ ಎನ್ನುತ್ತಿರುವ ಗೂಗಲ್‌ನನ್ನು 'when was google founded' ಎಂದು ಕೇಳಿದರೆ ಸೆಪ್ಟೆಂಬರ್ 4, 1998 ಎಂದು ಉತ್ತರಿಸುತ್ತದೆ. ಹಿಂದಿನ ವರ್ಷಗಳಲ್ಲಿ ಅದು ತನ್ನ ಹುಟ್ಟುಹಬ್ಬವನ್ನು ಸೆ. 7, 8 ಹಾಗೂ 6 ನೇ ತಾರೀಖಿನಂದು ಸಹ ಆಚರಿಸಿಕೊಂಡದ್ದೂ ಇದೆ ಎಂದು ಸಿನೆಟ್ ವರದಿ ನೆನಪಿಸಿಕೊಂಡಿದೆ.

ಗೂಗಲ್ ಎಂಬ ಪದವನ್ನು ಟೈಪಿಸಿರುತ್ತಾನೆ.

ವಿಶ್ವದಲ್ಲಿ ಇಂದು ಇಂಟರ್‌ನೆಟ್ ಬಳಸುವ ಪ್ರತಿಯೋರ್ವನು ಗೂಗಲ್ ಎಂಬ ಪದವನ್ನು ಟೈಪಿಸಿರುತ್ತಾನೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್ ಇಂದು ಇಂಟರ್‌ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಕಣಜವನ್ನು ಹೊಂದಿದೆ. ಬೇಕಾದ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿಕೊಡುವ ವ್ಯವಸ್ಥೆಯಾಗಿ, ಇಂಟರ್ನೆಟ್ ಬಳಸುವವರಿಗೆಲ್ಲ ತುಂಬ ಪರಿಚಿತವಾದ ಹೆಸರೆಂದರೆ ಅದು 'ಗೂಗಲ್' ಮಾತ್ರ.! 1998 ರಲ್ಲಿ ಈ ದಿನ, ಸೆರ್ಗೆ ಬ್ರಿನ್ ಮತ್ತು ಲಾರೆನ್ಸ್ ಪೇಜ್, ಇಬ್ಬರು ಪಿಎಚ್.ಡಿ. ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಗಳು, "ದೊಡ್ಡ-ಪ್ರಮಾಣದ ಸರ್ಚ್ ಎಂಜಿನ್"ನ ಮೂಲಮಾದರಿಯನ್ನು ಪ್ರಾರಂಭಿಸುವ ಆಲೋಚನೆಯೊಂದಿಗೆ ಬಂದರು ಎಂದು ನಾವೀಗ ಗೂಗಲ್‌ನಿಂದಲೇ ತಿಳಿಯಬಹುದು.

ಸರ್ಚ್ ಇಂಜನ್ ಸೇವೆ

ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪೆನಿ ವಿಶ್ವದ ಅಸಮಾನ್ಯ ಸಾಮ್ರಾಟ ಕಂಪೆನಿ ಕೂಡ ಆಗಿದೆ. ಮುಂದಿನ 20 ವರ್ಷಗಳಲ್ಲಿ ಗೂಗಲ್‌ನಂತಹ ಕಂಪೆನಿ ಪ್ರಪಂಚದಲ್ಲಿ ಮತ್ತೊಂದಿರುವುದಿಲ್ಲ ಎಂದು ವಿಶ್ವದ ತಜ್ಞರೆಲ್ಲರೂ ಲೆಕ್ಕಾಚಾರ ಹಾಕಿದ್ದಾರೆ. ಕೇವಲ ಸರ್ಚ್ ಇಂಜನ್ ಸೇವೆ ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆ ಈಗ ಸಂದೇಶ ಕಳುಹಿಸುವುದರಿಂದ ಪ್ರಾರಂಭಿಸಿ ಸ್ವಯಂಚಾಲಿತ ಕಾರುಗಳನ್ನು ತಯಾರಿಸುವವರೆಗೆ ಹಲವು ಕೆಲಸಗಳಲ್ಲಿ ತೊಡಗಿಕೊಂಡಿದೆ. ಜಿಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಹೋಮ್ ಸರಣಿಯ ಸ್ಮಾರ್ಟ್ ಸಹಾಯಕರು, ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ, ಪಿಕ್ಸೆಲ್ ಮೊಬೈಲ್ ಫೋನುಗಳು ಎಲ್ಲವೂ ಗೂಗಲ್ ಸಂಸ್ಥೆಯ ಒಡೆತನದಲ್ಲೇ ಇವೆ.

ವಿಚಿತ್ರಗಳನ್ನು ಸಹ ಒಳಗೊಂಡಿದೆ.

ಯಾವುದೋ ಲೋಕದವರ ಹೆಸರಿನಂತೆ ಕಾಣುವ ಈ ಗೂಗಲ್ ಕಂಪೆನಿ ಇಂದು ವಿಶ್ವದ ಇಂಟರ್‌ನೆಟ್ ಪ್ರಪಂಚವನ್ನು ಆಳುತ್ತಿದೆ. ಇದೆಲ್ಲವೂ ಈಗಾಗಲೇ ನಿಮಗೂ ತಿಳಿದಿರಬಹುದಾದ ವಿಷಯ ಎಂದು ಹೇಳಬಹುದು. ಆದರೆ, ಗೂಗಲ್ ಕಂಪೆನಿ ಹಲವು ವಿಚಿತ್ರಗಳನ್ನು ಸಹ ಒಳಗೊಂಡಿದೆ. ಅವುಗಳಲ್ಲಿ ಹೆಚ್ಚು ಗಮನಸೆಳೆಯುವುದು 'ಗೂಗಲ್' ಎಂದರೇನು? ಎಂಬ ಪ್ರಶ್ನೆ ಕೂಡ ಒಂದು. ಹಾಗಾಗಿ, ಇಂದಿನ ಲೇಖನದಲ್ಲಿ ಗೂಗಲ್ ಎಂದರೆ ಏನು?, ಗೂಗಲ್ ಎಂಬ ಹೆಸರನ್ನು ಆ ಕಂಪೆನಿ ಇಟ್ಟುಕೊಂಡಿದ್ದು? ಗೂಗಲ್‌ ಪದದ ಸೃಷ್ಟಿಕರ್ತ ಯಾರು? ಮತ್ತು ಗೂಗಲ್ ಪದಕ್ಕೆ ನಿಜವಾದ ಅರ್ಥವೇನು? ಎಂಬ ಒಂದು ಕುತೋಹಲ ಮಾಹಿತಿಯನ್ನು ನಾನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ಸಿಂಪಲ್ ಪ್ರಶ್ನೆ ಗೂಗಲ್ ಎಂದರೆನು?

ಸಿಂಪಲ್ ಪ್ರಶ್ನೆ ಗೂಗಲ್ ಎಂದರೆನು?

ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ.

ಸಿಂಪಲ್ ಆಗಿ ಗೂಗಲ್ !

ಸಿಂಪಲ್ ಆಗಿ ಗೂಗಲ್ !

ಮೇಲಿನದು ನಿಮಗೆ ಅರ್ಥವಾಗದಿದ್ದರೆ ಈಗ ನೇರ ವಿಷಯಕ್ಕೆ ಬರೋಣ. `1' ರ ನಂತರ `00' ಬರೆದರೆ ನೂರು ಅಲ್ಲವೇ? ಅದೇ ಒಂದರ ಮುಂದೆ `000' ಬರೆದರೆ ಸಾವಿರ ಇನ್ನು ಮುಂದೆ ಹೋಗಿ `0000000' ಬರೆದರೆ ಅದು ಒಂದು ಕೋಟಿ. ಹೀಗೆ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'.

ಗೂಗಲ್ ಎಂಬ ಪದ ಹುಟ್ಟಿದ್ದು ಹೇಗೆ?

ಗೂಗಲ್ ಎಂಬ ಪದ ಹುಟ್ಟಿದ್ದು ಹೇಗೆ?

1920ರಲ್ಲಿ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ ಎಂಬ ಅದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಸೋದರ ಸಂಬಂಧಿಯ ಮಗ ಮಿಲ್ಟನ್ ಸಿರೋಟಾಗೆ ಕೇಳಿದನಂತೆ. ಆ ಹುಡುಗ ಚೇಷ್ಟೆ ಮಾಡುತ್ತ ತನ್ನ ಬಾಯಿಗೆ ತೋಚಿದನ್ನು ಹೇಳಿದ ಹೆಸರು `ಗೂಗಲ್'

ಬಾಲಕನ ತೊದಲು ನುಡಿ!

ಬಾಲಕನ ತೊದಲು ನುಡಿ!

ಮಿಲ್ಟನ್ ಸಿರೋಟಾ ಹೇಳಿದ ತೊದಲು ನುಡಿಯನ್ನು ಎಡ್ವರ್ಡ್ ಕಸ್ನರ್ ದೊಡ್ಡ ಸಂಖ್ಯೆಗೆ ಹೆಸರಾಗಿ ಇಟ್ಟ. ತಾನು ಬರೆದ ಪುಸ್ತಕ ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' ಮೂಲಕ ಈ ಹೆಸರಿಗೆ ಬಹಳ ಪ್ರಚಾರ ಕೊಟ್ಟ. ನಂತ ಗೂಗಲ್ ಸಂಸ್ಥೆ ಹುಟ್ಟಿ ಅದರ ಕೀರ್ತಿ ಬೆಳೆದಂತೆಲ್ಲಾ `ಗೂಗಲ್' ಎಂಬ ಹೆಸರು ವಿಶ್ವದಲ್ಲಿ ಮನೆಮಾತಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಇಡೀ ಜಗತ್ತು 9 ವರ್ಷದ ಬಾಲಕನ ತೊದಲು ನುಡಿಯನ್ನು ಈಗ ಒಪ್ಪಿಕೊಂಡುಬಿಟ್ಟಿದೆ.!

ಗೂಗಲ್ ಕಂಪೆನಿಗೆ ಈ ಹೆಸರು ಬರಲು ಕಾರಣ?

ಗೂಗಲ್ ಕಂಪೆನಿಗೆ ಈ ಹೆಸರು ಬರಲು ಕಾರಣ?

`1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಸಿಗುವ ಪದಗಳಿಗೆ `ಗೂಗಲ್' ಎನ್ನುತ್ತಾರೆ. ಹಾಗಾಗಿ, ' ಬಹಳ ಬಹಳ ಸಂಖ್ಯೆಯಷ್ಟು ವೆಬ್‌ಸೈಟುಗಳನ್ನು ನಮ್ಮ ಸರ್ಚ್ ಎಂಜಿನ್ ಹುಡುಕಿ ದಾಖಲಿಸಿ ಇಟ್ಟುಕೊಂಡಿದೆ' ಎಂದು ಹೇಳಿಕೊಳ್ಳುವ ಸಲುವಾಗಿ ಗೂಗಲ್ ಸಂಸ್ಥೆಯು `ಗೂಗಲ್' ಎಂಬ ದೊಡ್ಡ ಸಂಖ್ಯೆಯ ಹೆಸರನ್ನು ತನಗೆ ಇಟ್ಟುಕೊಂಡಿದೆ ಅಷ್ಟೆ.

ಗೂಗಲ್ ಪ್ಲಸ್ ಎಂದರೆ?

ಗೂಗಲ್ ಪ್ಲಸ್ ಎಂದರೆ?

ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ.ಅಂದರೆ ಗೂಗಲ್‌ಗಿಂತಲೂ ಹೆಚ್ಚು ಗೂಗಲ್‌ ಪ್ಲಸ್ ಹೆಸರಿನ ಮೌಲ್ಯ.

ಇದು ನಿಮಗೆ ಗೊತ್ತಿರಲಿ.!

ಇದು ನಿಮಗೆ ಗೊತ್ತಿರಲಿ.!

ಭಾರತೀಯರು ಗಣಿತದ ಜನಕರು. ಶೂನ್ಯ ಪರಿಕಲ್ಪನೆಯನ್ನು ಸೃಷ್ಟಿಸಿದವರೂ ಭಾರತೀಯರೇ. ಜಗತ್ತಿಗೆ ಬೃಹತ್ ಸಂಖ್ಯೆಗಳನ್ನು ಪರಿಚಯಿಸಿದರು ಸಹ ಭಾರತೀಯರೇ. ಏಕ, ದಶ, ಶತ, ಸಹಸ್ರ, ಲಕ್ಷ, ಕೋಟಿ, ನೀಲ, ಪದ್ಮಾ, ಶಂಖ, ಮಹಾಶಂಖ ಹೀಗೆ ಭಾರಿ ಹೆಸರನ್ನು ನೀಡಿದವರು ಭಾರತೀಯರು. ಸೊನ್ನೆಯನ್ನು ನೀಡಿ ಗೂಗಲ್ ಅನ್ನು ಮೀರಿಸಿದವರು ನಮ್ಮ ಪೂರ್ವಜರು

Best Mobiles in India

English summary
On this day in 1998, Sergey Brin and Lawrence Page, two Ph.D. students from Stanford, came up with the idea of launching a prototype of a “large-scale search engine" (Google).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X