ವಿಶ್ವಮಾನವ ಕಲ್ಪನೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಕುವೆಂಪು ಅವರಿಗೆ ಗೂಗಲ್ ಕನ್ನಡದಲ್ಲಿಯೇ ಗೌರವ ಸಮರ್ಪಿಸಿದೆ. ಕುವೆಂಪು ಅವರ ಜನ್ಮದಿನದ (ಡಿ.29) ಅಂಗವಾಗಿ 113ನೇ ಜನ್ಮ ದಿನಾಚರಣೆ 'ಗೂಗಲ್' ಡೂಡಲ್ ಕನ್ನಡ ಸಾಹಿತ್ಯ ಕ್ಷೇತ್ರದ ಮುಕುಟಮಣಿಯ ಭಾವಚಿತ್ರಕ್ಕೆ ನಮನ ಸಲ್ಲಿಸಿದೆ.!!
ಗೂಗಲ್ ತನ್ನ ಮುಖಪುಟದಲ್ಲಿ ಕುವೆಂಪು ಭಾವ ಚಿತ್ರವದ ಜೊತೆಗೆ ಕನ್ನಡದಲ್ಲಿಯೇ ಗೂಗಲ್ ಎಂದು ಬರೆದಿರುವ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಕೆ ಮಾಡಿದೆ. ಬಿಳಿ ಪಂಚೆ ಮತ್ತು ಜುಬ್ಬದಲ್ಲಿ ಕುವೆಂಪು ಕಂಗೊಳಿಸುತ್ತಿದ್ದು, ಪ್ರಕೃತಿಯ ಮಡಿಲಲ್ಲಿ ಬಂಡೆ ಮೇಲೆ ಕುಳಿತಿರುವ ಕುವೆಂಪು ಭಾವಚಿತ್ರವನ್ನು ಗೂಗಲ್ ಮುಖಪುಟದಲ್ಲಿ ಬಳಕೆ ಮಾಡಿಕೊಂಡಿದೆ.!!
ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾಗಿರುವ ಕುವೆಂಪು 1904 ಡಿಸೆಂಬರ್ 29ರಂದು ಕುಪ್ಪಳ್ಳಿಯಲ್ಲಿ ಕುವೆಂಪು ಅವರು ಜನಿಸಿದ್ದರು. ಶ್ರೀರಾಮಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ನಂತಹ ಮೇರು ಕೃತಿಗಳನ್ನು ರಚಿಸಿರುವ ಕುವೆಂಪು ಅವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಪ್ರಮುಖರು!!
ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ನಾಟಕ, ವಿಮರ್ಶೆ, ಪ್ರೇಮಗೀತೆ, ಕಾದಂಬರಿ, ಕಾವ್ಯ, ವಿಮರ್ಶಾತ್ಮಕ ಪ್ರಬಂಧ, ಮಕ್ಕಳ ನಾಟಕ, ಸಾನೆಟ್ಟುಗಳು, ಮಹಾಕಾವ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವ ಕನ್ನಡಕ್ಕೆ ತಮ್ಮ 'ಶ್ರೀ ರಾಮಾಯಣ ದರ್ಶನಂ' ಕೃತಿಯ ಮೂಲಕ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡದಲ್ಲೇ ಡೂಡಲ್ ಬಿಡಿಸುವ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಕೆ ಮಾಡಿರುವುದು ಕನ್ನಡಿಗರ ಹೆಮ್ಮೆಯಾಗಿದೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.