Subscribe to Gizbot

'ಫಾದರ್ಸ್‌ ಡೇ' ಗೂಗಲ್‌ ಆಡ್‌; ನೋಡಿದ್ರೆ ನೀವು ಕಣ್ಣೀರ್‌ ಹಾಕ್ತೀರೀ..

Written By:

"ತಾಯಿಯೇ ಮೊದಲ ದೇವರು, ತಂದೆಯೇ ಮೊದಲ ಗುರು", ಈ ವಾಕ್ಯನ ಪ್ರತಿಯೊಬ್ಬರು ಕೇಳಿರುತ್ತಾರೆ. ವ್ಯತ್ಯಾಸ ಅಂದ್ರೆ ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯಲ್ಲಿ ಕೇಳಿರುತ್ತಾರೆ. ಪ್ರತಿಯೊಬ್ಬರು ಮೊದಲು ಸ್ಫೂರ್ತಿಗೊಳ್ಳುವುದೇ ಈ ವಾಕ್ಯದಿಂದ.

ಜೂನ್‌ 19 ಭಾನುವಾರ 'ಫಾದರ್‌ ಡೇ' ಎಂಬುದನ್ನ ಎಷ್ಟು ಜನರು ನೆನಪಿಟ್ಟಿಕೊಂಡಿದ್ದಾರೋ ಗೊತ್ತಿಲ್ಲ. ಆದ್ರೆ 'ಫಾದರ್‌ ಡೇ' ಆಚರಣೆ ಹೊರತು ಪಡಿಸಿ 'ತಂದೆ' ಬಗ್ಗೆ ಮಾತನಾಡುತ್ತಾ ಹೋದಂತೆಲ್ಲಾ ಅವರ ವಿಶೇಷ ಸ್ಥಾನಗಳು ಹೆಚ್ಚುತ್ತಾ ಹೋಗುತ್ತವೆ.

'ಫಾದರ್ಸ್‌ ಡೇ' ಗೂಗಲ್‌ ಆಡ್‌; ನೋಡಿದ್ರೆ ನೀವು ಕಣ್ಣೀರ್‌ ಹಾಕ್ತೀರೀ..

ಸುರಕ್ಷತೆ ಅಂತ ಬಂದಾಗ ಅಲ್ಲಿ ತಂದೆ ಇರ್ತಾರೆ, ಮಕ್ಕಳ ಶಿಕ್ಷಣ ಬಂದಾಗ ಅಲ್ಲೂ ಸಹ ತಂದೆ ಇರ್ತಾರೆ, ಅಕ್ಷರಶಃ ಹೇಳೋದಾದ್ರೆ ತಂದೆಯು ಮಕ್ಕಳ ಅಭಿವೃದ್ದಿ, ರಕ್ಷಣೆ, ಶಿಕ್ಷಣ, ಎಲ್ಲಾ ವಿಷಯಕ್ಕೂ ಸಹ ತಮ್ಮ ಅರ್ಧ ಜೀವನವನ್ನು ಮುಡಿಪಾಗಿಡುತ್ತಾರೆ.

ಜಸ್ಟ್‌ ಒಂದು ರೋಡ್‌ ಕ್ರಾಸ್‌ನಲ್ಲಿ ಸ್ಟಕ್‌ ಆದ್ರೂ ಸಹ ಮೊದಲು ಕರೆಯೋದು ಅವರನ್ನ, ತುಂಬಾ ಬೇಸರವಾಗಿ ಯಾವುದೇ ಕ್ಷೇತ್ರದಲ್ಲಿ ಬೆಳವಣಿಗೆಗಾಗಿ ದಾರಿ ಕಾಣುತ್ತಿಲ್ವಾ? ಸ್ಫೂರ್ತಿ ನೀಡುವವರು ತಂದೆ. ಪ್ರತಿಯೊಬ್ಬರ ಜೀವನದ ಬೆಸ್ಟ್‌ ಕೌನ್ಸೆಲರ್‌ ಅಂದ್ರೆ ತಂದೆ.

ಗೂಗಲ್‌ ಮ್ಯಾಪ್‌ ಬಳಸಲು ಇಂಟರ್ನೆಟ್‌ ಬೇಕಿಲ್ಲ

ಅಂದಹಾಗೆ ಗಿಜ್‌ಬಾಟ್‌ನಲ್ಲಿ ಯಾಕ್‌ ಈ ರೀತಿ ಹೇಳ್ತಿದ್ದಾರೆ ಅಂತಿರಾ? ಹಲವರಿಗೆ ತಿಳಿದಂತೆ ಭಾನುವಾರ (ಜೂನ್‌ 19) 'ಫಾದರ್ಸ್‌ ಡೇ'. ಗೂಗಲ್‌ 'ಫಾದರ್ಸ್‌ ಡೇ' ಪ್ರಯುಕ್ತ ಒಂದು ಜಾಹಿರಾತನ್ನು ಬಿಡುಗಡೆ ಮಾಡಿದೆ. ಈ ಜಾಹಿರಾತಿನಲ್ಲಿ ಭಾರತೀಯ ಸಿನಿಮಾ ಆಕ್ಟರ್‌ 'ವಿಕ್ಕಿ ಕೌಶಲ್‌' ಅಭಿನಯಿಸಿದ್ದು, ಜಾಹಿರಾತು ನೋಡಿದ ನಂತರ ಪ್ರತಿಯೊಬ್ಬರೂ ಸಹ ಅವರ ತಂದೆಯ ಬಗ್ಗೆ ಭಾವನಾತ್ಮಕವಾಗಿ ಅತಿರೇಕಕ್ಕೇರುವುದರಲ್ಲಿ ಸಂಶಯವಿಲ್ಲ.

ತಂದೆ ತನ್ನ ಮಕ್ಕಳ ಬಗ್ಗೆ ಎಷ್ಟು ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ ಎಂಬುದನ್ನು ಭಾವನಾತ್ಮಕವಾಗಿ ಈ ಜಾಹಿರಾತಿನಲ್ಲಿ ನೀಡಲಾಗಿದೆ. ಈ ಜಾಹಿರಾತು ನೋಡಿದ ನಂತರ ನಿಮ್ಮ ತಂದೆಯನ್ನು ಹಾಗೆ ಒಮ್ಮೆ ಪ್ರೀತಿಯಿಂದ ತಬ್ಬಿಕೊಳ್ಳಬೇಕು ಅಂತ ಅನಿಸುತ್ತೋ ಇಲ್ವೋ ನೀವೆ ಹೇಳಿ.. ಕೆಳಗಿನ ವೀಡಿಯೋ ನೋಡಿ. ಅಂದಹಾಗೆ 'ಹ್ಯಾಪಿ ಫಾದರ್ಸ್‌ ಡೇ'.
ವೀಡಿಯೋ ಕೃಪೆ:Google India

English summary
Google Does It Once Again! This Emotional Father-Son Ad Will Leave You Teary Eyed. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot