Subscribe to Gizbot

ಗೂಗಲ್ ಡ್ರೈವ್ ಮೂಲಕ ಕಂಪ್ಯೂಟರ್ ಡಾಟಾ ಬ್ಯಾಕಪ್ ಪಡೆಯುವ ಅವಕಾಶ!!

Written By:

ಗೂಗಲ್ ಸಂಸ್ಥೆಯ ಪ್ರಖ್ಯಾತ ಕ್ಲೌಡ್‌ ಸೇವಿಂಗ್ ತಾಣ ಗೂಗಲ್ ಡ್ರೈವ್ ಇದೀಗ ಬ್ಯಾಕಪ್ ಟೂಲ್ ಆಗಿ ಕಾರ್ಯನಿರ್ವಹಣೆ ನೀಡಲಿದೆ.! ಹೌದು, ಗೂಗಲ್ ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ ಹೊರತರುತಿದ್ದು, ಗೂಗಲ್ ಡ್ರೈವ್ ಮೂಲಕ ಕಂಪ್ಯೂಟರ್ ಡೇಟಾವನ್ನು ವಾಪಸ್ ಪಡೆದುಕೊಳ್ಳುವ ಅವಕಾಶ ಸಿಗಲಿದೆ.!!

ಆನ್‌ಲೈನ್‌ನಲ್ಲಿ ಡಾಟಾವನ್ನು ಸೇವ್ ಮತ್ತು ಶೇರ್ ಮಾಡಬಹುದುದಾದ ಗೂಗಲ್ ಡ್ರೈವ್ ಆಯ್ಕೆಯೂ ಜೂನ್ 28ರಿಂದ ಲಭ್ಯವಾಗಲಿದೆ ಎಂದು ಹೆಳಲಾಗಿದ್ದು, ಗೂಗಲ್ ಡ್ರೈವ್‌ ಮೂಲಕ ಡೆಸ್ಕ್‌ಟಾಪ್‌ ಮೇಲಿರುವ ಅಥವಾ ನೀವು ಆಯ್ಕೆ ಮಾಡಿದ ಯಾವುದೇ ಫೈಲ್‌ಗಳನ್ನು ಬ್ಯಾಕಪ್ ಪಡೆಯಬಹುದಾಗಿದೆ.!!

ಗೂಗಲ್ ಡ್ರೈವ್ ಮೂಲಕ ಕಂಪ್ಯೂಟರ್ ಡಾಟಾ ಬ್ಯಾಕಪ್ ಪಡೆಯುವ ಅವಕಾಶ!!

ಗೂಗಲ್‌ನ ಈ ಹೊಸ ಆಯ್ಕೆಯಿಂದಾಗಿ ಗೂಲ್‌ ಡ್ರೈವ್‌ನ 15 GB ಡೇಟಾ ಲಿಮಿಟೆಗೆ ಸ್ವಲ್ಪ ರಿಲೀಫ್ ದೊರೆತಿದ್ದು, ಇದೀಗ ಡ್ರೈವ್‌ನಲ್ಲಿಯೂ ಡಾಟಾ ಡಿಲೀಟ್ ಮಾಡಿದರೂ ಬ್ಯಾಕಪ್ ಪಡೆಯಬಹುದು.ಆದರೆ, ಗೂಗಲ್ ಡ್ರೈವ್‌ನಲ್ಲಿ ಬ್ಯಾಕಪ್ ಪಡೆಯುವ ಸಮಯದ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ.!!

ಗೂಗಲ್ ಡ್ರೈವ್ ಮೂಲಕ ಕಂಪ್ಯೂಟರ್ ಡಾಟಾ ಬ್ಯಾಕಪ್ ಪಡೆಯುವ ಅವಕಾಶ!!

ಆದರೂ, ತನ್ನ ಬಳಕೆದಾರರಿಗೆ ಅಗತ್ಯವಿರುವ ಫೀಚರ್‌ಗಳನ್ನು ಇತರೆ ಕಂಪೆನಿಗಳಿಗಿಂತಲೂ ಮೊದಲೇ ಬಿಡುಗಡೆ ಮಾಡುವ ಗೂಗಲ್ ಇದೀಗ ಗೂಗಲ್ ಡ್ರೈವ್ ಮೂಲಕ ಬ್ಯಾಕಪ್ ತೆಗೆದುಕೊಳ್ಳುವ ಸೇವೆಯನ್ನು ನೀಡುತ್ತಿರುವುದು ಸ್ವಾಗತಾರ್ಹವೆ.!!

English summary
Google is turning Drive into a much more robust backup tool.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot