ವಿಶ್ವದಾದ್ಯಂತ 'ಗೂಗಲ್‌' ಉದ್ಯೋಗಿಗಳಿಂದ ಕೆಲಸಕ್ಕೆ ಬಹಿಷ್ಕಾರ!!..ಏಕೆ ಗೊತ್ತಾ?

|

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕಳೆದೆರಡು ವರ್ಷಗಳಲ್ಲಿ 48 ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ. ಈ ಪಟ್ಟಿಯಲ್ಲಿ ಗೂಗಲ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ 13 ಹಿರಿಯ ಅಧಿಕಾರಿಗಳೂ ಸಹ ಸೇರಿದ್ದಾರೆ ಎಂದು ಗೂಗಲ್ ಸ್ಪಷ್ಟಪಡಿಸಿದ ನಂತರವೂ, ಗೂಗಲ್‌ ಉದ್ಯೋಗಿಗಳು ಗುರುವಾರ ವಿಶ್ವದಾದ್ಯಂತ ಕೆಲಸಕ್ಕೆ ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಹೌದು, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಹಿರಿಯ ಉದ್ಯೋಗಿಗಳ ಬಗ್ಗೆ ಕಂಪನಿ ಹೊಂದಿರುವ ಮೃದು ಧೋರಣೆಯನ್ನು ಖಂಡಿಸಿ ಸಾವಿರಾರು ಗೂಗಲ್‌ ಉದ್ಯೋಗಿಗಳು ವಿಶ್ವದಾದ್ಯಂತ ಕೆಲಸಕ್ಕೆ ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಟೊಕಿಯೊ, ಸಿಂಗಾಪುರ, ಜೂರಿಚ್‌, ಲಂಡನ್‌, ಡಬ್ಲಿನ್‌, ಬರ್ಲಿನ್‌ ಹೀಗೆ ಅನೇಕ ನಗರಗಳಲ್ಲಿ ಪ್ರತಿಭಟನೆ ನಡೆದಿದೆ.

ವಿಶ್ವದಾದ್ಯಂತ 'ಗೂಗಲ್‌' ಉದ್ಯೋಗಿಗಳಿಂದ ಕೆಲಸಕ್ಕೆ ಬಹಿಷ್ಕಾರ!!..ಏಕೆ ಗೊತ್ತಾ?

'ವಾಕ್‌ಔಟ್‌ ಆಫ್‌ ರಿಯಲ್‌ ಚೇಂಜ್‌' ಎಂಬ ಭಿತ್ತಿಪತ್ರಗಳನ್ನು ಹಿಡಿದು ಗೂಗಲ್ ಉದ್ಯೋಗಿಗಳು ಪ್ರತಿಭಟಿಸಿದ್ದಾರೆ. ಇನ್ನು ಉದ್ಯೋಗಿಗಳ ಪ್ರತಿಭಟನೆಗೆ ಮಣಿದಂತೆ ಕಂಡಿರುವ ಗೂಗಲ್ ಈ ಬಗ್ಗೆ ಸ್ಪಷ್ಟನೆಯನ್ನು ಸಹ ನೀಡಿದೆ. ಲೈಂಗಿಕ ಪೀಡಕ ಉದ್ಯೋಗಿಗಳಿಗೆ ಕಠಿಣ ಸಂದೇಶ ರವಾನಿಸಿದ್ದು, ಮಹಿಳಾ ಉದ್ಯೋಗಿಗಳ ರಕ್ಷಣೆಗೆ ಕಂಪನಿ ಸದಾ ಹೀಗೆ ಬದ್ಧವಾಗಿದೆ ಎಂದು ಹೇಳಿದೆ.

ಪ್ರತಿಭಟನೆ ನಡೆದದ್ದು ಏಕೆ?

ಪ್ರತಿಭಟನೆ ನಡೆದದ್ದು ಏಕೆ?

ಲೈಂಗಿಕ ದೌರ್ಜನ್ಯ ಆರೋಪದ ಮೇರೆಗೆ 2014ರಲ್ಲೇ ಕಂಪನಿ ತೊರೆದ ಹಿರಿಯ ಉದ್ಯೋಗಿ ಆಂಡಿ ರೂಬಿನ್ ಅವರಿಗೆ ಕಂಪನಿ 90 ದಶಲಕ್ಷ ಡಾಲರ್‌ ಮೌಲ್ಯದ ಎಕ್ಸಿಟ್ ಪ್ಯಾಕೇಜ್‌ ನೀಡಿತ್ತು. ಇನ್ನು ಮತ್ತೋರ್ವ ಹಿರಿಯ ಉದ್ಯೋಗಿ ರಿಚರ್ಡ್ ಡಿವ್ಯೂಲ್ ಅವರನ್ನು ಮನೆಗೆ ಕಳುಹಿಸದೇ ರಕ್ಷಿಸುವ ಕೆಲಸವಾಗಿದೆ ಎಂದು ವರದಿಯೊಂದು ಹೇಳಿತ್ತು. ಇದು ಪ್ರತಿಭಟನೆಗೆ ಕಾರಣವಾಗಿತ್ತು.

ಕಳಂಕಿತರನ್ನು ರಕ್ಷಿಸಲಾಗುತ್ತಿಲ್ಲ.

ಕಳಂಕಿತರನ್ನು ರಕ್ಷಿಸಲಾಗುತ್ತಿಲ್ಲ.

ಯಾವುದೇ ಕಾರಣಕ್ಕೂ ಕಳಂಕಿತರನ್ನು ರಕ್ಷಿಸಲಾಗುತ್ತಿಲ್ಲ. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಪಿತರ ವಿರುದ್ಧ ಆಂತರಿಕ ಸಮಿತಿ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರನ್ನು 'ಎಕ್ಸಿಟ್ ಪ್ಯಾಕೇಜ್‌' ಇಲ್ಲದೇ ಮನೆಗೆ ಕಳುಹಿಸಲಾಗುತ್ತಿದೆ,' ಎಂದು ಗೂಗಲ್‌ ಸಂಸ್ಥೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಮಹಿಳಾ ಉದ್ಯೋಗಿಗಳ ರಕ್ಷಣೆಗೆ ಕಂಪನಿ ಸದಾ ಬದ್ಧವಾಗಿರುವುದಾಗಿ ತಿಳಿಸಿದೆ.

ಸಿಇಒ ಸುಂದರ್​ ಪಿಚೈ ಹೇಳಿದ್ದೇನು?

ಸಿಇಒ ಸುಂದರ್​ ಪಿಚೈ ಹೇಳಿದ್ದೇನು?

ನಮ್ಮ ಕಂಪೆನಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮತ್ತು ಲೈಂಗಿಕ ಕಿರುಕುಳ ಆರೋಪ ಎದುರಿಸುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿದ್ದೇವೆ ಎಂದು ಗೂಗಲ್​ನ ಸಿಇಒ ಸುಂದರ್​ ಪಿಚೈ​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಪೂರ್ಣ ಸುರಕ್ಷತೆ ಕೊಂಚ ಕಷ್ಟ.

ಸಂಪೂರ್ಣ ಸುರಕ್ಷತೆ ಕೊಂಚ ಕಷ್ಟ.

ಕಾರ್ಯಸ್ಥಳದಲ್ಲಿ ಸಂಪೂರ್ಣ ಸುರಕ್ಷತೆ ನೀಡುವುದಾಗಿ ಭರವಸೆ ನೀಡುವುದು ಕೊಂಚ ಕಷ್ಟ. ಆದರೆ ಲೈಂಗಿಕ ಕಿರುಕುಳದ ಯಾವುದೇ ಮಾಹಿತಿ ನಮ್ಮ ಬಳಿ ಬಂದಲ್ಲಿ ಅದನ್ನು ಅತ್ಯಂತ ಗಂಭೀರವಾಗಿ ತನಿಖೆ ನಡೆಸುತ್ತೇವೆ. ಲೈಂಗಿಕ ಕಿರುಕುಳ ದೂರನ್ನು ಕೂಲಂಕಶವಾಗಿ ಪರಿಶೀಲಿಸಿ, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೂಗಲ್​ ಮುಖ್ಯಸ್ಥರು ತಿಳಿಸಿದ್ದಾರೆ.

48 ನೌಕರರು ವಜಾ!

48 ನೌಕರರು ವಜಾ!

ದೇಶದಲ್ಲಿ ಮೀಟೂ ಅಭಿಯಾನ ಸದ್ಯ ಚರ್ಚೆಯ ಕೇಂದ್ರ ಬಿಂದುವಾಗಿರುವ ಸಂದರ್ಭದಲ್ಲೇ, ಟೆಕ್​ ದೈತ್ಯ ಗೂಗಲ್​ ಕಂಪೆನಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕಳೆದೆರಡು ವರ್ಷಗಳಲ್ಲಿ 48 ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ. ಗೂಗಲ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ 13 ಹಿರಿಯ ಅಧಿಕಾರಿಗಳೂ ಸಹ ಈ ಲೀಸ್ಟ್‌ನಲ್ಲಿದ್ದಾರೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

Most Read Articles
Best Mobiles in India

Read more about:
English summary
Google walk out: Employees stage global protest over poor handling of sexual harassment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more