ಭಾರತದಲ್ಲಿ ಗೂಗಲ್ VS ಫೇಸ್‌ಬುಕ್ ಫೈಟ್!..ಜಾಗ ಪಡೆದ ಜಿಯೋ!

|

2019ರ ಮೇ ತಿಂಗಳಿನ ಇಂಡಿಯಾ ಡಿಜಿಟಲ್‌ ರ್ಯಾಂಕಿಂಗ್ ಪಟ್ಟಿಯಲ್ಲಿ ಗೂಗಲ್‌ ಮತ್ತು ಫೇಸ್‌ಬುಕ್‌ ಮತ್ತು ಇ ಕಾಮರ್ಸ್ ಅಮೆಜಾನ್ ಸಂಸ್ಥೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಮಾಧ್ಯಮ ವಲಯದ ವಿಶ್ಲೇಷಣಾ ಸಂಸ್ಥೆ ಕಾಮ್‌ಸ್ಕೋರ್ ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ, ಇಂಟರ್‌ನೆಟ್ ಲೋಕದ ದಿಗ್ಗಜ ಗೂಗಲ್ ಈ ಬಾರಿಯೂ ನಂ. 1 ಸ್ಥಾನ ಪಡೆದುಕೊಂಡಿದ್ದರೆ, ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ ಮತ್ತು ನೆಟ್‌ವರ್ಕ್ 18 ಸಂಸ್ಥೆಗಳು ಟಾಪ್ 5ರ ಸ್ಥಾನಕ್ಕೇರಿವೆ.

ಭಾರತದಲ್ಲಿ ಗೂಗಲ್ VS ಫೇಸ್‌ಬುಕ್ ಫೈಟ್!..ಜಾಗ ಪಡೆದ ಜಿಯೋ!

ಹೌದು, ಗೂಗಲ್‌ ಸೈಟ್ಸ್ 96.8 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಮೇ ತಿಂಗಳಿನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ತನ್ನದಾಗಿಸಿದೆ. ಇನ್ನು ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ 92.5 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದರೆ, ಅಮೆಜಾನ್‌ ಸೈಟ್ಸ್‌ 76.8 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದೆ. ಇವುಗಳ ನಂತರದ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ ಮತ್ತು ನೆಟ್‌ವರ್ಕ್ 18 ಸಂಸ್ಥೆಗಳು ಸ್ಥಾನ ಪಡೆದಿದ್ದು, ಅತ್ಯುನ್ನತ ಶ್ರೇಯಾಂಕಿತ ಮಾಧ್ಯಮ ಆಟಗಾರರು ಎಂದು ಕರೆಸಿಕೊಂಡಿವೆ.

ಇನ್ನು ಫ್ಲಿಪ್‌ಕಾರ್ಟ್, ಪೇಟಿಎಂ, ಟ್ರೂಕಾಲರ್, ರಿಲಯನ್ಸ್ ಜಿಯೋ ಡಿಜಿಟಲ್ ಸರ್ವೀಸಸ್ ಮತ್ತು ದಿ ವಾಲ್ಟ್ ಡಿಸ್ನಿ ಕಂಪನಿಯನ್ನು ಕ್ರಮವಾಗಿ ನಂ. 6, ನಂ. 7, ನಂ. 8, ನಂ 9 ಮತ್ತು ನಂ 10 ಸ್ಥಾನಗಳಲ್ಲಿ ಇರಿಸಲಾಗಿದೆ. ಫ್ಲಿಪ್‌ಕಾರ್ಟ್ ಟಾಪ್ 10 ರಲ್ಲಿ ಎರಡನೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿ ಸ್ಥಾನ ಪಡೆದಿದ್ದು, ಈ ಪ್ಲಾಟ್‌ಫಾರ್ಮ್ ಓಟ್ಟಾರೆಯಾಗಿ ಶೇಕಡಾ 56 ರಷ್ಟು ಅಂಕಗಳನ್ನು ಗಳಿಸಿದೆ. ಅಮೆಜಾನ್‌ ಸೈಟ್ಸ್‌ 76.8 ಅಂಕಗಳೊಂದಿಗೆ ಫ್ಲಿಪ್‌ಕಾರ್ಟ್ ಅನ್ನು ಹಿಂದಿಕ್ಕಿರುವುದನ್ನು ಪಟ್ಟಿ ತಿಳಿಸಿದೆ.

ಭಾರತದಲ್ಲಿ ಗೂಗಲ್ VS ಫೇಸ್‌ಬುಕ್ ಫೈಟ್!..ಜಾಗ ಪಡೆದ ಜಿಯೋ!

ದೇಶದ ಟೆಲಿಕಾಂ ಪ್ರಪಂಚದ ಸಿಕ್ಕನ್ನೇ ಬದಲಿಸಿದ ರಿಲಯನ್ಸ್ ಜಿಯೋ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಡಿಜಿಟಲ್ ಸರ್ವೀಸಸ್ ಟಾಪ್ 10 ಪಟ್ಟಿಯಲ್ಲಿರುವ ಏಕೈಕ ಡಿಜಿಟಲ್ ಸೇವಾ ಪೂರೈಕೆದಾರನಾಗಿ ಜಿಯೋ ಹೊರಹೊಮ್ಮಿದ್ದು, 2019 ರಲ್ಲಿ ಜಿಯೋ ಜಿಟಲ್ ಸರ್ವೀಸಸ್ 49.1 ಶೇಕಡಾವಾರು ಅಂಕಗಳನ್ನು ಗಳಿಸಿದೆ. ಜಿಯೋ ಈ ಬಾರಿ ಟ್ರೂಕಾಲರ್‌ನೊಂದಿಗೆ ( 49.6) ಪೈಪೋಟಿ ನಡೆಸಿದೆ ಎಂದು ಕಾಮ್‌ಸ್ಕೋರ್ ತಿಳಿಸಿದೆ. ಇನ್ನು ವಾಲ್ಟ್ ಡಿಸ್ನಿ ಕಂಪನಿ ಟಾಪ್ 10 ಪಟ್ಟಿಯನ್ನು ಪೂರ್ಣಗೊಳಿಸಿರುವುದನ್ನು ನಾವು ನೋಡಬಹುದಾಗಿದೆ.

ಫ್ರೆಶರ್ ಉದ್ಯೋಗಿಗಳಿಗೆ 1 ಲಕ್ಷ ರೂ. ಬೋನಸ್ ಘೋಷಿಸಿದ ವಿಪ್ರೊ!ಫ್ರೆಶರ್ ಉದ್ಯೋಗಿಗಳಿಗೆ 1 ಲಕ್ಷ ರೂ. ಬೋನಸ್ ಘೋಷಿಸಿದ ವಿಪ್ರೊ!

ಗ್ಲೋಬಲ್ ಸರ್ಚ್ ಎಂಜಿನ್ , ಇಮೇಲ್, ಹ್ಯಾಂಡ್‌ಸೆಟ್, ಟೆಕ್ ದೈತ್ಯ, ಗೂಗಲ್ ಸಂಸ್ಥೆ 2018 ರ ಭಾರತದ ಅತ್ಯಂತ ಪ್ರಭಾವಶಾಲಿ ಬ್ರಾಂಡ್ (ಎಂಐಬಿ) ಆಗಿ ಹೊರಹೊಮ್ಮತ್ತು.
ಕುತೂಹಲಕಾರಿಯಾಗಿ, ಗೂಗಲ್ ಸತತ ಐದು ವರ್ಷಗಳು ಅಗ್ರಸ್ಥಾನದಲ್ಲಿದೆ. ಇದೀಗ 2019ರ ಮೇ ತಿಂಗಳಿನ ಪಇಂಡಿಯಾ ಡಿಜಿಟಲ್‌ ರ್ಯಾಂಕಿಂಗ್ ಪಟ್ಟಿಯಲ್ಲಿ ಗೂಗಲ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಗೂಗಲ್ ಅನ್ನು ಹಿಂದಿಕ್ಕಲು ಫೇಸ್‌ಬುಕ್‌ ಸತತ ಪ್ರಯತ್ನಗಳನ್ನು ಮಾಡುತ್ತಲೇ ಇದೆ.

Best Mobiles in India

English summary
- Internet, social media and e-commerce giants – Google, Facebook and Amazon – hogged the top three spots in comScore's Top 10 rankings for May 2019 in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X