ಗೂಗಲ್‌ನ ಈ ನಿರ್ಧಾರ ಭಾರತೀಯರಿಗೆ ಅನುಕೂಲವಾಗೋದು ಗ್ಯಾರಂಟಿ!

|

ಗೂಗಲ್‌ನ ವಾರ್ಷಿಕ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್‌ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಇದರಲ್ಲಿ ಭಾರತದ ಡಿಜಿಟಲ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸದ್ಯ ಇದೀಗ ಡಿಜಿಲಾಕರ್‌ ಖಾತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದಕ್ಕೆ ಗೂಗಲ್‌ ಫೈಲ್ಸ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಅಧಿಕೃತ ದಾಖಲೆಗಳನ್ನು ಗುರುತಿಸುವಲ್ಲಿ ಹಾಗೂ ನಿಮ್ಮ ಡಿಜಿಲಾಕರ್‌ನಲ್ಲಿಡುವುದಕ್ಕೆ ಸಹಾಯ ಮಾಡಲಿದೆ.

ಗೂಗಲ್‌

ಹೌದು, ಗೂಗಲ್‌ ಫೈಲ್ಸ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ದಾಖಲೆಗಳನ್ನು ಸೆಕ್ಯುರ್‌ ಮಾಡುವಲ್ಲಿ ಇದರ ಪಾತ್ರ ಮಹತ್ವದಾಗಿದೆ. ಇದು ನಿಮ್ಮ ದಾಖಲೆಗಳನ್ನು ಗುರುತಿಸುವುದಲ್ಲದೆ ಅವುಗಳನ್ನು ಸುರಕ್ಷಿತ ಫೋಲ್ಡರ್‌ನಲ್ಲಿ ಸಂಘಟಿಸಲು ಸಾಧ್ಯವಾಗಲಿದೆ. ಜೊತೆಗೆ ಜನರು ತಮ್ಮ ಅಧಿಕೃತ ಡಿಜಿಟಲ್ ಡಾಕ್ಯುಮೆಂಟ್‌ಗಳಿಗೆ ಸುಲಭ ಪ್ರವೇಶವನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ಈ ಹೊಸ ಬದಲಾವಣೆಯಿಂದ ಏನೆಲ್ಲಾ ಉಪಯೋಗ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲೀಕರಣ

ಪ್ರಸ್ತುತ ದಿನಗಳಲ್ಲಿ ಬಹುಮುಖ್ಯವಾದ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗ್ತಿದೆ. ಅದರಂತೆ ಹೆಚ್ಚಿನ ಜನರು ತಮ್ಮ ಬಹುಮುಖ್ಯವಾದ ಡಾಕ್ಯುಮೆಂಟ್‌ಗಳನ್ನು ಡಿಜಿಲಾಕರ್‌ನಲ್ಲಿ ಸ್ಟೋರ್‌ ಮಾಡುವುದು ಸಾಮಾನ್ಯವಾಗಿದೆ. ಇದೀಗ ಗೂಗಲ್‌ ತನ್ನ ಗೂಗಲ್‌ ಫೈಲ್ಸ್‌ನಲ್ಲಿ ಬಹುಮುಖ್ಯವಾದ ಬದಲಾವಣೆಗಳನ್ನು ಮಾಡಿದೆ. ಅದರಂತೆ ಗೂಗಲ್‌ ನಿಮ್ಮ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಗುರುತಿಸುವ ಕೆಲಸ ಮಾಡಲಿದೆ. ಅಲ್ಲದೆ ನಿಮ್ಮ ಪ್ರಮುಖ ದಾಖಲೆಗಳನ್ನು ಸೆಕ್ಯುರ್‌ ಫೋಲ್ಡ್‌ರ್‌ನಲ್ಲಿ ಸೇವ್‌ ಮಾಡಲಿದೆ. ಇದಕ್ಕಾಗಿ ಹೊಸ ರಾಷ್ಟ್ರೀಯ ಇ-ಆಡಳಿತ ವಿಭಾಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಗೂಗಲ್‌ ಹೇಳಿದೆ.

ಗೂಗಲ್‌ನ

ಗೂಗಲ್‌ನ ಈ ಸಹಯೋಗವು ಬಳಕೆದಾರರು ಡಿಜಿಲಾಕರ್ ಖಾತೆಯನ್ನು ಸಂಯೋಜಿಸಲು ಅವಕಾಶ ನೀಡಲಿದೆ. ಇದರಿಂದ ನಿಮ್ಮ ಆಧಾರ್ ಕಾರ್ಡ್ ಅಥವಾ ಡ್ರೈವರ್ ಲೈಸೆನ್ಸ್‌ನಂತಹ ಪ್ರಮುಖ ದಾಖಲೆಗಳನ್ನು ನೇರವಾಗಿ ಫೈಲ್ ಮ್ಯಾನೇಜರ್‌ನಿಂದ ಸ್ಟೋರೇಜ್‌ ಮಾಡಲು ಅವಕಾಶ ನೀಡಲಿದೆ. ಡಾಕ್ಯುಮೆಂಟ್‌ಗಳನ್ನು ಸ್ಥಳೀಯವಾಗಿ ಸುರಕ್ಷಿತವಾದ ರೀತಿಯಲ್ಲಿ ಸ್ಟೋರೇಜ್‌ ಮಾಡಲಿದೆ. ನೀವು ಇದನ್ನು ಪ್ರವೇಶಿಸಬೇಕಾದರೆ ಲಾಕ್ ಸ್ಕ್ರೀನ್ ದೃಢೀಕರಣದ ಅಗತ್ಯವಿರುತ್ತದೆ ಎಂದು ಗೂಗಲ್‌ ಹೇಳಿಕೊಂಡಿದೆ.

ಗೂಗಲ್‌

ಸದ್ಯ ಹೊಸ ಅಪ್ಡೇಟ್‌ನಿಂದಾಗಿ ಗೂಗಲ್‌ ಫೈಲ್ಸ್‌ ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ ಸ್ಟೋರೇಜ್‌ ಆಗಿರುವ ಪ್ರಮುಖ ದಾಖಲೆಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಿದೆ. ಇದು ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳಂತಹ ದಾಖಲೆಗಳನ್ನು ಗುರುತಿಸಲಿದೆ. ನಂತರ ಅವುಗಳನ್ನು ಸುರಕ್ಷಿತ ಫೋಲ್ಡರ್‌ನಲ್ಲಿ ಸಂಗ್ರಹಿಸುತ್ತದೆ. ನೂರಾರು ಡಾಕ್ಯುಮೆಂಟ್‌ಗಳ ನಡುವೆಯೂ ನಿಮ್ಮ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಗೂಗಲ್‌ ಫೈಲ್ಸ್‌ ಸರ್ಚ್‌ ಮಾಡಲಿದೆ ಅನ್ನೊದು ಇಂಟ್ರೆಸ್ಟಿಂಗ್‌ ವಿಚಾರವಾಗಿದೆ.

ಗೂಗಲ್‌ನ ಹೊಸ ಬದಲಾವಣೆಯಿಂದ ನಿಮಗೇನು ಲಾಭ!

ಗೂಗಲ್‌ನ ಹೊಸ ಬದಲಾವಣೆಯಿಂದ ನಿಮಗೇನು ಲಾಭ!

ಗೂಗಲ್‌ ಫೈಲ್ಸ್‌ ಸಾಮಾನ್ಯವಾಗಿ ಬಳಸುವ ಫೈಲ್ ಮ್ಯಾನೇಜರ್ ಆಗಿದೆ. ಇದು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಫ್ರಿ ಲೋಡ್‌ ಆಗಿರುತ್ತದೆ. ಇದೀಗ ಡಿಜಿಲಾಕರ್‌ಗೆ ಜೊತೆಗೆ ಗೂಗಲ್‌ ಫೈಲ್ಸ್‌ ಸಹಯೋಗ ಹೊಂದಿರುವುದರಿಂದ ನಿಮ್ಮ ಪ್ರಮುಖ ದಾಖಲೆಗಳ ಡಿಜಿಟಲ್ ಪ್ರತಿಯನ್ನು ಪಡೆಯುವುದು ಸುಲಭವಾಗಲಿದೆ. ಜೊತೆಗೆ ನಿಮ್ಮ ಎಲ್ಲಾ ಡಾಕ್ಯುಮೆಂಟ್ ಗಳನ್ನು ಒಂದೇ ಸ್ಥಳದಲ್ಲಿ ನೋಡುವುದಕ್ಕೆ ಸಾಧ್ಯವಾಗಲಿದೆ.

ಇದರ ಕಾರ್ಯನಿರ್ವಹಣೆ ಹೇಗೆ?

ಇದರ ಕಾರ್ಯನಿರ್ವಹಣೆ ಹೇಗೆ?

ಗೂಗಲ್‌ ಫೈಲ್ಸ್‌ ನಿಮ್ಮ ಫೋನ್‌ನಲ್ಲಿರುವ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ಕಸ್ಟಮ್ AI ಮಾದರಿಯನ್ನು ಬಳಸಲಿದೆ. ಅಲ್ಲದೆ ಟೆಕ್ಸ್ಟ್‌ ಅನ್ನು ಗುರುತಿಸಲು ಗೂಗಲ್‌ನ OCR ತಂತ್ರಜ್ಞಾನವನ್ನು ಬಳಸಲಿದೆ. ಇದರಿಂದ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಇದಲ್ಲದೆ ಗೂಗಲ್‌ ಫೈಲ್ಸ್‌ ಮೆಷಿನ್‌ ಲರ್ನಿಂಗ್‌ ಅಲ್ಗಾರಿದಮ್ ಗೌಪ್ಯತೆಗಾಗಿ ಸ್ಥಳೀಯವಾಗಿ ಸ್ಮಾರ್ಟ್‌ಫೋನ್‌ನಲ್ಲಿ ರನ್ ಆಗುತ್ತದೆ. ಸದ್ಯ ಈ ಫೀಚರ್ಸ್‌ ಇದೀಗ ಘೋಷಣೆಯಾಗಿದೆ, ಮುಂದಿನ ದಿನಗಳಲ್ಲಿ ಇದು ನಿಮ್ಮ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

Best Mobiles in India

English summary
Google Files is getting some important new features:Here’s how it will work

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X