10,000 ವರ್ಷಗಳಲ್ಲಿ ಇತರರು ಮಾಡಲಾಗದದನ್ನು 3 ನಿಮಿಷಗಳಲ್ಲಿ ಮಾಡುತ್ತೇವೆ: ಗೂಗಲ್!

|

ತಂತ್ರಜ್ಞಾನ ಎಂಬುದು ನಿಂತ ನೀರಲ್ಲ. ಊಹೆಗಳನ್ನು ಸಹ ನಿಜ ಮಾಡಬಹುದಾದ ಶಕ್ತಿ ಅದಕ್ಕಿದೆ. ಇದೀಗ ಅಂತಹದೊಂದು ಸಾಧನೆಯನ್ನು ಗೂಗಲ್ ಮಾಡಿದೆ. ಹೌದು, ಸಾಮಾನ್ಯ ಕಂಪ್ಯೂಟರುಗಳು 10 ಸಾವಿರ ವರ್ಷಗಳನ್ನು ತೆಗೆದುಕೊಳ್ಳುವ ಒಂದು ಪ್ರಮೇಯವನ್ನು ಕೇವಲ 200 ಸೆಕೆಂಡುಗಳಲ್ಲಿ ಮುಗಿಸುವ ಕ್ವಾಂಟಮ್‌ ಸುಪ್ರಿಮಸಿ ಎಂಬ ಸೂಪರ್‌ ಕಂಪ್ಯೂಟರ್‌ ಅನ್ನು ಗೂಗಲ್‌ ರೂಪಿಸಿದೆ. ಇದೇ ಬುಧವಾರ 'ಕ್ವಾಂಟಮ್ ಪ್ರಾಬಲ್ಯ' ಎಂಬ ದೀರ್ಘಕಾಲೀನ ಪ್ರಗತಿಯನ್ನು ಗೂಗಲ್ ಸಾಧಿಸಿದ್ದು, ಇದು ಹೊಸ ರೀತಿಯ ಕಂಪ್ಯೂಟರ್‌ಗಳಿಗೆ ಇಂದಿನ ತಂತ್ರಜ್ಞಾನದೊಂದಿಗೆ ಅಚಿಂತ್ಯವಾದ ವೇಗದಲ್ಲಿ ಲೆಕ್ಕಾಚಾರಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

ಕ್ವಾಂಟಮ್ ಮೆಕ್ಯಾನಿಕ್ಸ್‌

ಹೌದು, ಮೊದಲ ಬಾರಿಗೆ ಕ್ವಾಂಟಮ್ ಮೆಕ್ಯಾನಿಕ್ಸ್‌ನ ಭೌತಶಾಸ್ತ್ರದ ಮೇಲೆ ಚಲಿಸುವ ಯಂತ್ರವು ವಿಶ್ವದ ಉನ್ನತ ಸೂಪರ್‌ಕಂಪ್ಯೂಟರ್‌ಗಳನ್ನು ಸ್ಟಂಪ್ ಮಾಡುವಂತಹ ಸಮಸ್ಯೆಯನ್ನು ಪರಿಹರಿಸಿದೆ ಎಂದು ಇದೀಗಷ್ಟೇ ವರದಿಯಾಗಿದೆ. ಸಾಮಾನ್ಯ ಕಂಪ್ಯೂಟರುಗಳು 1 ಅಥವಾ 0 ಹೊಂದಿರುವ ಬಿಟ್‌ಗಳ ಮೂಲಕ ಕೆಲಸ ಮಾಡುತ್ತವೆ. ಆದರೆ ಕ್ವಾಂಟಮ್‌ ಕಂಪ್ಯೂಟರುಗಳು 1 ಮತ್ತು 0 ಎರಡನ್ನೂ ಒಂದೇ ಬಾರಿಗೆ ನಿರ್ವಹಿಸುತ್ತವೆ. ಇದರಿಂದ ಅತ್ಯಂತ ವೇಗದಲ್ಲಿ ಕಂಪ್ಯೂಟರ್‌ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ, ಈ ಕ್ವಾಂಟಮ್‌ ಸುಪ್ರಿಮಸಿ ಕಂಪ್ಯೂಟರ್‌ ಕೇವಲ 2000ನೇ ಇಸ್ವಿಯಲ್ಲಿ ಚಾಲ್ತಿಯಲ್ಲಿದ್ದ ಫ್ಲಿಪ್ ಫೋನ್‌ ರೀತಿ ಕಾಣಿಸುತ್ತಿರುವುದು ಆಶ್ಚರ್ಯವಾಗಿದೆ.

ಸೂಪರ್‌ ಕಂಪ್ಯೂಟರ್‌

ಈ ಸೂಪರ್‌ ಕಂಪ್ಯೂಟರ್‌ಗಾಗಿ ಸೈಕಾಮೋರ್ ಎಂಬ 54 ಕ್ಯೂಬಿಟ್ ಪ್ರೊಸೆಸರ್ ಅನ್ನು ಗೂಗಲ್‌ ಕಂಪೆನಿಯ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದೆ. ಸೂಪರ್‌ ಕಂಪ್ಯೂಟರ್‌ ವಲಯದಲ್ಲಿ ಇದೊಂದು ಮಹತ್ವದ ಸಾಧನೆ ಎಂದು ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್‌ ಸಂಶೋಧಕ ವಿಲಿಯಮ್‌ ಒಲಿವರ್ ಹೇಳಿದ್ದು, ಈ ಕ್ವಾಂಟಮ್‌ ಸುಪ್ರಿಮಸಿಯನ್ನು ಮಶಿನ್ ಲರ್ನಿಂಗ್, ಕ್ವಾಂಟಮ್‌ ಕೆಮಿಸ್ಟ್ರಿ ಹಾಗೂ ಇತರ ತಂತ್ರಜ್ಞಾನಗಳಿಗೆ ಬಳಸಿಕೊಳ್ಳಲು ಗೂಗಲ್‌ ಸಂಶೋಧಕರು ಯತ್ನಿಸಿದ್ದಾರೆ. ಸೂಪರ್‌ ಕಂಪ್ಯೂಟರ್‌ ವಲಯದಲ್ಲಿ ಮಹತ್ವದ ಸಾದನೆಯನ್ನು ಮಾಡಿದ ತಂಡಕ್ಕೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಕೂಡ ಟ್ವೀಟ್ ಮಾಡಿ ಭರಪೂರ ಮೆಚ್ಚುಗೆ ಸೂಚಿಸಿದ್ದಾರೆ.

ಕ್ವಾಂಟಮ್‌ ಪ್ರೊಸೆಸರ್‌

ಮುಂದಿನ ದಿನಗಳಲ್ಲಿ ಈ ಕ್ವಾಂಟಮ್‌ ಪ್ರೊಸೆಸರ್‌ಗಳನ್ನು ಇತರ ಸಂಶೋಧಕರು ಹಾಗೂ ಸಂಸ್ಥೆಗಳಿಗೆ ಒದಗಿಸಲಿದ್ದು, ಅವರು ಈ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಎನ್‌ಕ್ರಿಪ್ಷನ್ ಸಾಫ್ಟ್ವೇರ್ ಮತ್ತು ಕೃತಕ ಬುದ್ಧಿಮತ್ತೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ. ಕ್ವಾಂಟಾ ನಿಯತಕಾಲಿಕದಲ್ಲಿ ಈ ಬಗ್ಗೆ ಬರೆಯುತ್ತಾ, ಕ್ಯಾಲ್ಟೆಕ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಜಾನ್ ಪ್ರೆಸ್ಕಿಲ್ ಅವರು ಈ ಫಲಿತಾಂಶವನ್ನು "ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ಗಮನಾರ್ಹ ಸಾಧನೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಯಂತ್ರಾಂಶದಲ್ಲಿನ ಪ್ರಗತಿಯ ಚುರುಕಾದ ವೇಗಕ್ಕೆ ಸಾಕ್ಷಿಯಾಗಿದೆ" ಎಂದು ಕರೆದಿದ್ದಾರೆ.

ಸುಧಾರಿತ ತಾಂತ್ರಿಕತೆ

ಈ ಮಧ್ಯೆಯೇ ಉತ್ತಮ ಹಾರ್ಡ್‌ವೇರ್‌ ಮತ್ತು ಸುಧಾರಿತ ತಾಂತ್ರಿಕತೆ ಬಳಸಿಕೊಂಡರೆ ಈ ಕ್ವಾಂಟಮ್‌ ಸುಪ್ರಿಮಸಿಯು ಇನ್ನಷ್ಟು ವೇಗವಾಗಿರಲಿದೆ ಎಂದು ಗೂಗಲ್‌ ವಿಜ್ಞಾನಿಗಳೇ ಹೇಳಿದ್ದಾರೆ.ಆದರೆ ಈ ಹಕ್ಕು ಪ್ರತಿಸ್ಪರ್ಧಿಗಳಿಂದ ಸಂದೇಹವನ್ನು ಉಂಟುಮಾಡಿದೆ. ತನ್ನದೇ ಆದ ಕ್ವಾಂಟಮ್ ಯಂತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಬಿಎಂ ಸಂಶೋಧಕರು, ಈ ವಾರ ಶಾಸ್ತ್ರೀಯ ಕಂಪ್ಯೂಟರ್ ವ್ಯವಸ್ಥೆಯು ಗೂಗಲ್‌ನ ವರದಿಯಲ್ಲಿ ಲೆಕ್ಕಾಚಾರವನ್ನು ನಿರ್ವಹಿಸಲು ಎರಡೂವರೆ ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ವರದಿ ಮಾಡಿದೆ. ಕಳೆದ ತಿಂಗಳು ಈ ಕುರಿತ ವರದಿ ಸೋರಿಕೆಯಾದಾಗ ಸಾಫ್ಟ್ವೇರ್‌ ಕಂಪೆನಿ ಐಬಿಎಂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

Best Mobiles in India

English summary
Google says it has reached a major breakthrough in quantum computing research. to know more visit to kannada.gizbot.com | ಸಾಮಾನ್ಯ ಕಂಪ್ಯೂಟರುಗಳು 10 ಸಾವಿರ ವರ್ಷಗಳನ್ನು ತೆಗೆದುಕೊಳ್ಳುವ ಒಂದು ಪ್ರಮೇಯವನ್ನು ಕೇವಲ 200 ಸೆಕೆಂಡುಗಳಲ್ಲಿ ಮುಗಿಸಲಿದೆ ಈ ಕ್ವಾಂಟಮ್‌ ಸುಪ್ರಿಮಸಿ ಎಂಬ ಸೂಪರ್‌ ಕಂಪ್ಯೂಟರ್‌.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X