Subscribe to Gizbot

ಭಾರತದಲ್ಲಿ ಗೂಗಲ್‌ಗೆ ಬಿತ್ತು 135.86 ಕೋಟಿ ರೂ.ದಂಡ!!..ಏಕೆ ಗೊತ್ತಾ?

Written By:

ಇಂಟರ್ನೆಟ್ ದೈತ್ಯ ಸರ್ಚ್ ಎಂಜಿನ್ ಕಂಪೆನಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಭಾರತದಲ್ಲಿ ಗೂಗಲ್‌ಗೆ 135.86 ಕೋಟಿ ರೂ. ದಂಡವನ್ನು ವಿಧಿಸಲಾಗಿದೆ.! ವಿಶ್ವದ ಅತಿ ದೊಡ್ಡ ವೆಬ್ ಸರ್ಚ್ ಎಂಜಿನ್ ಭಾರತೀಯ ಪಾಲುದಾರರನ್ನು ತಡೆಗಟ್ಟಿದೆ ಎಂಬುದಕ್ಕಾಗಿ ದೊಡ್ಡ ಪ್ರಮಾಣದ ಶಿಕ್ಷೆಗೆ ಗುರಿಯಾಗಿದೆ.!!

ಗೂಗಲ್ ಕಂಪೆನಿ ಭಾರತದಲ್ಲಿ ಕಾರ್ಯಾಚರಣೆಗಳನ್ನು ರೂಪಿಸುವ ವಿಭಿನ್ನ ವ್ಯವಹಾರ ವಿಭಾಗಗಳಿಂದ 2013, 2014 ಮತ್ತು 2015 ನೇ ವರ್ಷಗಳಲ್ಲಿ ಪಡೆದಿರುವ ಸರಾಸರಿ ಒಟ್ಟು ಆದಾಯದ ಶೇಕಡ 5ರ ದರದಲ್ಲಿ ದಂಡವನ್ನು ಲೆಕ್ಕಹಾಕಲಾಗಿದ್ದು, ಸ್ಪರ್ಧಾತ್ಮಕ ಆಯೋಗದ ತೀರ್ಪಿನಿಂದ ಗೂಗಲ್‌ ಇದೀಗ 135.86 ಕೋಟಿ ರೂ. ದಂಡವನ್ನು ಪಾವತಿಸಬೇಕಿದೆ.!!

ಸೆಲ್ಫಿ ಕ್ಲಿಕಿಸುವವರಿಗೆ ಹೇಳಿ ಮಾಡಿದ ಸ್ಮಾರ್ಟ್‌ಫೋನ್...! ಸುಂದರವಾಗಲಿದೆ ಪೋಟೋಗಳು..!

ಭಾರತದಲ್ಲಿ ಗೂಗಲ್‌ಗೆ ಬಿತ್ತು 135.86 ಕೋಟಿ ರೂ.ದಂಡ!!..ಏಕೆ ಗೊತ್ತಾ?

ಇನ್ನು ಗೂಗಲ್ ಒಪ್ಪಂದಗಳಲ್ಲಿ ತಕ್ಷಣದ ಪರಿಣಾಮದೊಂದಿಗೆ ನಿರ್ಬಂಧಿತ ಷರತ್ತುಗಳನ್ನು ವಿಧಿಸಬಾರದು ಎಂದು ಆಯೋಗವು ಗೂಗಲ್‌ಗೆ ಆದೇಶಿಸಿದೆ. ಹಾಗಾದರೆ, ಭಾರತದಲ್ಲಿ ಗೂಗಲ್ ಮಾಡಿರುವ ತಪ್ಪೇನು? ಗೂಗಲ್ ಮೋಸ ಮಾಡಿದೆಯೇ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಪಾಲುದಾರರಿಗೆ ಮೋಸ?

ಭಾರತದ ಪಾಲುದಾರರಿಗೆ ಮೋಸ?

ಇಂಟರ್ನೆಟ್ ದೈತ್ಯ ಸರ್ಚ ಇಂಜಿನ್ ಗೂಗಲ್ ಕಂಪೆನಿ ಸ್ಪರ್ಧಾತ್ಮಕ ಸರ್ಚ್ ಇಂಜಿನ್ ಸೇವೆಯನ್ನು ನೀಡುವ ವಿಷಯದಲ್ಲಿ ಭಾರತೀಯ ಪಾಲುದಾರರನ್ನು ತಡೆಗಟ್ಟುವ ಕಾರ್ಯ ಮಾಡಿದೆ ಎಂದು ಸ್ಪರ್ಧಾತ್ಮಕ ಆಯೋಗ ತಿಳಿಸಿದೆ. ಸರ್ಚ್ ಎಂಜಿನ್ ಹುಡುಕಾಟದ ಫಲಿತಾಂಶಗಳನ್ನು ಅಕ್ರಮ ಪ್ರಯೋಜನಕ್ಕೆ ಬಳಸಿದೆ ಎಂದು ಹೇಳಿದೆ.!!

2012 ರಲ್ಲಿ ಪ್ರಕರಣ ದಾಖಲು!!

2012 ರಲ್ಲಿ ಪ್ರಕರಣ ದಾಖಲು!!

ಕಾನ್ಸಿಮ್ ಇನ್ಫೋ ಪ್ರೈವೇಟ್ ಲಿಮಿಟೆಡ್ (ಈಗ ಮ್ಯಾಟ್ರಿಮನಿ.ಕಾಂ ಲಿಮಿಟೆಡ್ ಎಂದು ಕರೆಯಲಾಗುತ್ತದೆ) ಮತ್ತು ಎನ್ಜಿಒ ಕನ್ಸ್ಯೂಮರ್ ಯುನಿಟಿ ಮತ್ತು ಟ್ರಸ್ಟ್ ಸೊಸೈಟಿಗಳು 2012 ರಲ್ಲಿ ಸಲ್ಲಿಸಿದ ಎರಡು ಪ್ರಕರಣಗಳಿಂದ ಗೂಗಲ್ ಕಂಪೆನಿಗೆ ದಂಡ ವಿಧಿಸಲಾಗಿದೆ.! ಗೂಗಲ್ ಕಂಪೆನಿ ಸ್ಪರ್ಧಾತ್ಮಕವಲ್ಲದೇ ಸೇವಾದಾರರನ್ನು ತಡೆಯುತ್ತಿದೆ ಎಂದು ಈ ಕಂಪೆನಿಗಳು ಆರೋಪಿಸಿದ್ದವು.!!

ಗೂಗಲ್ ಮೇಲಿದ್ದ ಆರೋಪಗಳೇನು?

ಗೂಗಲ್ ಮೇಲಿದ್ದ ಆರೋಪಗಳೇನು?

"ಸರ್ಚ್ ಎಂಜಿನಿನಲ್ಲಿ ಹುಡುಕಾಟ ಪಕ್ಷಪಾತ, ಹುಡುಕಾಟದ ಕುಶಲ ಬಳಕೆ, ಸ್ಪರ್ಧಾತ್ಮಕ ಸರ್ಚ್ ಇಂಜಿನ್‌ಗಳ ಪ್ರವೇಶ ನಿರಾಕರಣೆ, ಸ್ಪರ್ಧಾತ್ಮಕ ಸರ್ಚ್ ಇಂಜಿನ್‌ಗಳಿಗೆ ಪ್ರವೇಶಿಸಲು ನಿರಾಕರಣೆ ಮತ್ತು ಇತರ ಸೈಟ್‌ಗಳ ನಿಂದನೀಯ ಪದ್ಧತಿಗಳಲ್ಲಿ ತೊಡಗಿಸಿಕೊಂಡಿದೆ ಎಂದು ಗೂಗಲ್ ಮೇಲೆ ಆರೋಪಿಸಲಾಗಿತ್ತು.!!

ಗೂಗಲ್‌ನಿಂದ ಆಕ್ರಮ ನಡೆದಿರುವುದು ಹೇಗೆ?

ಗೂಗಲ್‌ನಿಂದ ಆಕ್ರಮ ನಡೆದಿರುವುದು ಹೇಗೆ?

ವೀಡಿಯೋ (ಯೂಟ್ಯೂಬ್), ಸುದ್ದಿ (ಗೂಗಲ್ ನ್ಯೂಸ್) ಮತ್ತು ನಕ್ಷೆಗಳು (ಗೂಗಲ್ ನಕ್ಷೆಗಳು) ಸೇರಿದಂತೆ ಗೂಗಲ್‌ನ ಸ್ವಂತ ತಾಣಗಳು ಹುಡುಕಾಟ ಫಲಿತಾಂಶ ಪುಟಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮತ್ತು ಹೆಚ್ಚು ಜನಪ್ರಿಯವಾದ ಸೈಟ್‌ಗಳಷ್ಟೆ ಸರ್ಚ್ ಎಂಜಿನ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಇತರ ಪಾಲುದಾರರಿಗೆ ಇದು ಲಾಭವನ್ನು ಕಡಿಮೆ ಮಾಡಲು ಕಾರಣವಾಗಿದೆ.!!

135.86 ಕೋಟಿ ದಂಡ ಏಕೆ?

135.86 ಕೋಟಿ ದಂಡ ಏಕೆ?

2013, 2014 ಮತ್ತು 2015 ನೇ ವರ್ಷಗಳಲ್ಲಿ ಗೂಗಲ್ ಕಂಪೆನಿ ಭಾರತದಲ್ಲಿ ಗಳಿಸಿರುವ ಒಟ್ಟು ಆದಾಯದ ಸಾರಾಸರಿ ಆದಾಯವನ್ನು ಸ್ಪರ್ಧಾತ್ಮಕ ಆಯೋಗ ಪರಿಗಣಿಸಿದೆ.! ಒಟ್ಟು 2717.27 ಕೋಟಿ ಸರಾಸರಿ ಆದಾಯವನ್ನು ಗೂಗಲ್ ಗಳಿಸಿಸಿದ್ದು, ಅದರಲ್ಲಿ 5 ಪರ್ಸೆಂಟ್ ದಂಡವಾಗಿ 135.86 ಕೋಟಿ ದಂಡವನ್ನಾಗಿ ವಿಧಿಸಿದೆ.!!

Do you know what all u can do by Downloading Hike Messenger app.?
ಯೂರೋಪ್‌ನಲ್ಲಿಯೂ ದಂಡ ತೆತ್ತಿತ್ತು.!!

ಯೂರೋಪ್‌ನಲ್ಲಿಯೂ ದಂಡ ತೆತ್ತಿತ್ತು.!!

ಗೂಗಲ್ ಇದೇ ವಿಚಾರವಾಗಿ ಕಳೆದ ವರ್ಷ ಯೂರೋಪ್‌ನಲ್ಲಿಯೂ ದಂಡವನ್ನು ತೆತ್ತಿತ್ತು. ಕಳೆದ ವರ್ಷ ಜುಲೈನಲ್ಲಿ, ಯುರೋಪ್ ಒಕ್ಕೂಟವು ಗೂಗಲ್‌ಗೆ 2.7 ಶತಕೋಟಿ ಡಾಲರ್ ನಷ್ಟು ದಾಖಲೆಯ ದಂಡ ವಿಧಿಸಿತು.! ಈ ಪ್ರಕರಣ ಕೂಡ ಹುಡುಕಾಟ ಫಲಿತಾಂಶಗಳನ್ನು ಅಕ್ರಮ ಪ್ರಯೋಜನಕ್ಕೆ ಗೂಗಲ್ ಬಳಸಿಕೊಂಡಿತ್ತು ಎಂಬುದಾಗಿತ್ತು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Competition Commission of India has slapped a fine of Rs 135.86 crore on Google. to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot