ಗೂಗಲ್‌ ಮೇಲೆ ಬಹುದೊಡ್ಡ ಆರೋಪ..ಕೆಲಸದಿಂದ ಎಂಜಿನಿಯರ್‌ ವಜಾ!!.ಏನು ಗೊತ್ತಾ?

ಗೂಗಲ್ ಸಹ ವೈವಿಧ್ಯತೆ ಕಾರ್ಯನೀತಿ ವ್ಯವಸ್ಥೆಯನ್ನು ಹೊಂದಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.!

|

ಪ್ರಪಂಚದಲ್ಲಿಯೇ ಉದ್ಯೋಗ ಮಾಡಲು ಅತ್ಯುತ್ತಮ ಕಂಪೆನಿ ಎಂದು ಹೆಸರಾಗಿದ್ದ ಸರ್ಚ್ ಎಂಜಿನ್ ದೈತ್ಯ ಗೂಗಲ್ ಸಹ ವೈವಿಧ್ಯತೆ ಕಾರ್ಯನೀತಿ ವ್ಯವಸ್ಥೆಯನ್ನು ಹೊಂದಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.! ವೈವಿಧ್ಯತೆ ಕಾರ್ಯನೀತಿ ವ್ಯವಸ್ಥೆಯನ್ನು ಟೀಕಿಸಿದ ಎಂಜಿನಿಯರ್‌ನನ್ನು ಗೂಗಲ್ ಕೆಲಸದಿಂದ ವಜಾಮಾಡಿದ್ದು, ಈ ರಿಪೋರ್ಟ್ ಹೊರಬಿದ್ದಿದೆ.!!

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಜೇಮ್ಸ್‌ ಡ್ಯಾಮೊರ್ ಎಂಬುವವರನ್ನು ಗೂಗಲ್ ಕೆಲಸದಿಂದ ವಜಾಮಾಡಿದ್ದು, ಡ್ಯಾಮೊರ್ ಗೂಗಲ್ ಸಂಸ್ಥೆಯ ವೈವಿಧ್ಯತೆ ಕಾರ್ಯನೀತಿಯನ್ನು ಟೀಕಿಸಿ ಹತ್ತು ಪುಟಗಳ ಪತ್ರ ಬರೆದಿದ್ದರು ಎನ್ನಲಾಗಿದೆ.!! ಹಾಗಾದರೆ, ಗೂಗಲ್‌ನಲ್ಲಿಯೂ ತಾರತಮ್ಯ ನೀತಿ ಇದೆಯೇ? ಪತ್ರದಲ್ಲಿ ಏನೇನಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಗೂಗಲ್‌ಗೆ ಇದು ದೊಡ್ಡ ಹೊಡೆತ!!

ಗೂಗಲ್‌ಗೆ ಇದು ದೊಡ್ಡ ಹೊಡೆತ!!

ಯಾವವುದೇ ತಾರತಮ್ಯವಿಲ್ಲದೆ ಇರುವ ಕಂಪೆನಿಗಳಲ್ಲಿ ಗೂಗಲ್ ಎಂದಿಗೂ ಅಗ್ರಸ್ಥಾನವನ್ನೇ ಪಡೆದುಕೊಂಡು ಬಂದಿದೆ.! ಹಾಗಾಗಿ, ಜೇಮ್ಸ್‌ ಡ್ಯಾಮೊರ್ ಬರೆದಿರುವ ಪತ್ರದಿಂದ ಇದೇ ಮೊದಲ ಭಾರಿಗೆ ಗೂಗಲ್‌ಗೆ ಇಂತಹ ಮುಖಭಂಗ ಎದುರಾಗಿದ್ದು, ಗೂಗಲ್ ಕಂಪೆನಿಗೆ ಇದು ದೊಡ್ಡ ಹೊಡೆತವಾಗಿದೆ ಎಂದು ವಿಶ್ಲೇಷಿಸಬಹುದಾಗಿದೆ.!!

ಲಿಂಗ ತಾರತಮ್ಯಕ್ಕೆ ದೈಹಿಕ ಕಾರಣ?

ಲಿಂಗ ತಾರತಮ್ಯಕ್ಕೆ ದೈಹಿಕ ಕಾರಣ?

ತಂತ್ರಜ್ಞಾನ ಕ್ಷೇತ್ರ ಹಾಗೂ ನಾಯಕತ್ವದ ಸ್ಥಾನಗಳಲ್ಲಿ ಪುರುಷರಷ್ಟೇ ಒಂದೇ ಪ್ರಮಾಣದಲ್ಲಿ ಮಹಿಳೆಯರು ಕಾಣುವುದಿಲ್ಲ. ದೈಹಿಕ ಕಾರಣಗಳಿಂದಾಗಿ ಪುರುಷ ಮತ್ತು ಮಹಿಳೆಯರಿಗೆ ನೀಡುವ ಆದ್ಯತೆ ಮತ್ತು ಸಾಮರ್ಥ್ಯದಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಜೇಮ್ಸ್‌ ಪತ್ರದಲ್ಲಿ ಪ್ರಸ್ತಾಪಿಸಿದ್ದರು ಎಂದು ತಿಳಿದುಬಂದಿದೆ.!!

ಕೆಲಸದಿಂದ ಜೇಮ್ಸ್‌ ಡ್ಯಾಮೊರ್ ವಜಾ!!

ಕೆಲಸದಿಂದ ಜೇಮ್ಸ್‌ ಡ್ಯಾಮೊರ್ ವಜಾ!!

ಗೂಗಲ್ ಸಂಸ್ಥೆಯ ವೈವಿಧ್ಯತೆ ಕಾರ್ಯನೀತಿಯನ್ನು ಟೀಕಿಸಿ ಜೇಮ್ಸ್‌ ಡ್ಯಾಮೊರ್ ಹತ್ತು ಪುಟಗಳ ಪತ್ರ ಬರೆದ ನಂತರ ಗೂಗಲ್‌ ಸಿಇಒ ಸುಂದರ್‌ ಪಿಚೈ ತನ್ನ ಸಿಬ್ಬಂದಿಗೆ ಪತ್ರ ರವಾನಿಸಿದ್ದು, ಡ್ಯಾಮೊರ್ ಬರೆದಿರುವ ಪತ್ರದ ಮೂಲಕ ಸಂಸ್ಥೆಯ ನಿಯಮಾವಳಿ ಉಲ್ಲಂಘನೆಯಾಗಿದೆ ಎಂದು ಡ್ಯಾಮೊರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.!!

ಕಾನೂನಾತ್ಮಕ ಹೋರಾಟ!!

ಕಾನೂನಾತ್ಮಕ ಹೋರಾಟ!!

ಹತ್ತು ಪುಟಗಳ ಪತ್ರ ಬರೆದ ನಂತರ ನಂತರ ಜೇಮ್ಸ್‌ ಡ್ಯಾಮೊರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಡ್ಯಾಮೊರ್ ಅವರು ಗೂಗಲ್ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸಲು ಮುಂದಾಗಿದ್ದಾರೆ.!! ಈಗಾಗಲೇ ಅಮೆರಿಕದ ರಾಷ್ಟ್ರೀಯ ಕಾರ್ಮಿಕ ಸಂಪರ್ಕ ಮಂಡಳಿಗೆ ಗೂಗಲ್‌ನ ನಿರ್ವಹಣಾ ಮಂಡಳಿ ವಿರುದ್ಧ ಆರೋಪ ದಾಖಲಿಸಿದ್ದಾರೆ.!!

ಗೂಗಲ್‌ನಲ್ಲಿ ತಾರತಮ್ಯವಿದೆಯೇ?

ಗೂಗಲ್‌ನಲ್ಲಿ ತಾರತಮ್ಯವಿದೆಯೇ?

ಇಲ್ಲಿಯವರೆಗೂ ಗೂಗಲ್‌ನಲ್ಲಿ ತಾರತಮ್ಯದ ವಿಷಯ ಪ್ರಸ್ತಾಪವಾಗಿಲ್ಲ.!! ಆದರೆ, ತಂತ್ರಜ್ಞಾನ ಮತ್ತು ಮುಖ್ಯಸ್ಥರ ಸ್ಥಾನದಲ್ಲಿನ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಕಡಿಮೆ ಇದೆ. ಶೇ 50ರಷ್ಟು ಬಿಳಿಯ ಸಿಬ್ಬಂದಿಯನ್ನು ಗೂಗಲ್ ಹೊಂದಿದ್ದು, ಶೇ2ರಷ್ಟು ಮಾತ್ರ ಕಪ್ಪು ವರ್ಣಿಯರು ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.!! ಇನ್ನು ಶೇ35 ಸಿಬ್ಬಂದಿ ಏಷ್ಯಾ ಮೂಲದವರಾಗಿದ್ದಾರೆ.!!

ತಾರತಮ್ಯವಿಲ್ಲಾ ಎನ್ನಲು ಉದಾಹರಣೆ!!

ತಾರತಮ್ಯವಿಲ್ಲಾ ಎನ್ನಲು ಉದಾಹರಣೆ!!

ಗೂಗಲ್ ಎಂದೂ ಯಾವ ವಿಯಗಳಲ್ಲಿಯೂ ತಾರತಮ್ಯವನ್ನು ಮಾಡಿಲ್ಲ ಎನ್ನಲು ಪ್ರಸ್ತುತ ಗೂಗಲ್ ಮುಖ್ಯಸ್ಥರೆ ಉದಾಹರಣೆಯಾಗಿದ್ದಾರೆ.!! ಅಮೆರಿಕಾ ಕಂಪೆನಿಯಾದರೂ, ಶೇ 50ರಷ್ಟು ಬಿಳಿಯ ಸಿಬ್ಬಂದಿಯನ್ನು ಹೊಂದಿದ್ದರೂ ಸಹ ನಮ್ಮ ಭಾರತೀಯ ಸುಂದರ್‌ ಪಿಚೈ ಅವರು ಗೂಗಲ್ ಸಿಇಒ ಆಗಿ ಆಯ್ಕೆಯಾಗಿದ್ದಾರೆ.!!

Best Mobiles in India

English summary
Reportedly for ‘perpetuating gender stereotypes’.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X