ಫೋಕಸ್‌ ಮೂಡ್‌ ಆಯ್ಕೆ ಪರಿಚಯಿಸಿದ ಗೂಗಲ್‌!

|

ಇವತ್ತಿನ ದಿನಗಳಲ್ಲಿ ಏನೇ ಬೇಕಾದ್ರೂ ಗೂಗಲ್‌ ನಲ್ಲಿ ಸರ್ಚ್ ಮಾಡೋದು ಎಲ್ಲರಿಗೂ ಪರಿಪಾಠವಾಗಿ ಬಿಟ್ಟಿದೆ. ಗೂಗಲ್‌ ಇಲ್ಲದ ಸ್ಮಾರ್ಟ್‌ಫೋನ್‌ ಅನ್ನ ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಅರಿವಿಗೆ ಬಾರದ ವಿಷಯವನ್ನು ಸಹ ಕ್ಷಣಾರ್ಧದಲ್ಲಿ ಹುಡುಕುವ ಪ್ರಯತ್ನವನ್ನ ಗೂಗಲ್‌ನಲ್ಲಿ ಮಾಡಬಹುದು. ಗೂಗಲ್‌ ಕೂಡ ತನ್ನ ಬಳಕೆದಾರರಿಗೆ ತಕ್ಕಂತೆ ಫೀಚರ್ಸ್‌ಗಳನ್ನ ಪರಿಚಯಿಸುತ್ತ ಬಳಕೆದಾರರ ಸ್ನೇಹಿಯಾಗಿದೆ. ಸದ್ಯ ಗೂಗಲ್ ಸ್ಮಾರ್ಟ್‌ಫೋನ್‌ ಬಳಕೆದಾರರು ಆಂಡ್ರಾಯ್ಡ್‌ನಿಂದ ವಿಚಲಿತರಾಗದಂತೆ ಇರೋದಕ್ಕೆ ಹೊಸದೊಂದು ಫೀಚರ್ಸ್ ಅನ್ನು ಪರಿಚಯಿಸಿದೆ.

ಗೂಗಲ್‌

ಹೌದು ಟೆಕ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ ಸಾಧನಗಳಿಗಾಗಿ ‘ಫೋಕಸ್ ಮೋಡ್' ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ ಬಳಕೆದಾರ ಬೇರೆ ಕಾರ್ಯದಲ್ಲಿ ನಿರತನಾಗಿರುವಾಗ ಸೋಶಿಯಲ್‌ ಮೀಡಿಯಾ, ಇಮೇಲ್, ಇತರೆ ಎಲ್ಲಾ ನೋಟಿಫಿಕೇಷನ್‌ಗಳು ಪ್ಲೇ ಆಗದಂತೆ ತಡೆಯಲು ಈ ವೈಶಿಷ್ಟ್ಯವು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಸಾಕಷ್ಟು ಆಪ್‌ಗಳನ್ನ ಹೊಂದಿರುತ್ತಾರೆ. ಅದರಲ್ಲಿ ಕೆಲ ಆಪ್‌ಗಳು ಕೆಲ ನೋಟಿಫಿಕೆಶನ್‌ಗಳನ್ನ ಡಿಸ್‌ಪ್ಲೇ ಮಾಡುತ್ತಲೇ ಇರುತ್ತವೆ. ಅದರಲ್ಲೂ ಸೋಶಿಯಲ್‌ ಮೀಡಿಯಾಗಳಾದ ಫೇಸ್‌ಬುಕ್‌, ಟಿಕ್‌ಟಾಕ್, ಟ್ವಿಟ್ಟರ್‌,ಹಾಗೇ ಗೇಮಿಂಗ್‌ ಆಪ್ಲೀಕೇಶನ್‌ಗಳಿಂದ ಅಧಿಸೂಚನೆ ಬರುತ್ತಲೇ ಇರುತ್ತೆ. ಕೆಲವೊಮ್ಮೆ ಸ್ಮಾರ್ಟ್‌ಫೋನ್‌ ಬಳಕೆ ದಾರರಿಗೆ ಇದು ಕಿರಿಕಿರಿ ಅಂತಾ ಕೂಡ ಅನಿಸುತ್ತೆ.

ನೋಟಿಪಿಕೇಶನ್‌

ಅಷ್ಟೇ ಅಲ್ಲ ಬಹುಮುಖ್ಯವಾದ ಕೆಲಸದಲ್ಲೊ ಅಥವಾ ಯಾರಿಗಾದ್ರೂ ಮುಖ್ಯ ಸಂದೇಶವ್ನನ ಟೈಪ್‌ ಮಾಡುವ ವೇಳೆಗೆ ಇಂತಹ ನೋಟಿಪಿಕೇಶನ್‌ ಹಾವಳಿಯನ್ನ ಸಹಿಸೋದಕ್ಕೆ ಆಗೋದಿಲ್ಲ. ಇದೇ ಕಾರಣಕ್ಕೆ ಗೂಗಲ್‌ ಫೋಕಸ್‌ ಮೋಡ್‌ ಫೀಚರ್ಸ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ಕಿರಿಕಿರಿಗೆ ಪರಿಹಾರ ನಿಡುತ್ತದೆ. ಈ ಫೀಚರ್ಸ್ ನ ಮುಖ್ಯ ಉದ್ದೇಶ ಏನು ಅಂದರೆ ಬಳಕೆದಾರ ಇತರೆ ಆಪ್‌ನ ಕೆಲಸದಲ್ಲಿ ಸಕ್ರಿಯನಾಗಿದ್ದಾಗ ಇನ್ನಿತರ ಆಪ್‌ಗಳ ಅಧಿಸೂಚನೆಗನ್ನ ಪಾಸ್‌ ಮೂಡ್‌ನಲ್ಲಿ ಇರುವಂತೆ ಮಾಡುತ್ತದೆ.ಇದರಿಂದ ಬಳಕೆದಾರರು ಯಾವುದೇ ಅಡೆತಡೆಯಿಲ್ಲದೆ ಕೆಲಸಗಳನ್ನು ಮಾಡಬಹುದು.

ಆಂಡ್ರಾಯ್ಡ್

ಗೂಗಲ್‌ನ‌ ಈ ಹೊಸ ಫೀಚರ್ಸ್‌ ಆಂಡ್ರಾಯ್ಡ್ ಕ್ಯೂ / 10 ನಲ್ಲಿ ಸಿಗಲಿದೆ. ಹೊಸ ಫೀಚರ್ಸ್‌ ಆದ ಫೋಕಸ್ ಮೋಡ್ ಆಂಡ್ರಾಯ್ಡ್‌ನಲ್ಲಿ ಡಿಜಿಟಲ್ ಯೋಗಕ್ಷೇಮ ಕಾಪಾಡಬಲ್ಲ ಸಾಧನವಾಗಿದೆ, ಸಧ್ಯ ಇದು ಈಗ ಬೀಟಾದಿಂದ ಹೊರಗಿದೆ, ಆದರೆ ಈ ಪೀಚರ್ಸ್‌ ನೀವು ಕಾರ್ಯ ಮಾಡುವ ಆಪ್ಲಿಕೇಶನ್‌ ಹೊರತು ಪಡಿಸಿ ಇನ್ನುಳಿದ ಆಪ್ಲಿಕೇಶನ್‌ಗಳನ್ನ ತಾತ್ಕಾಲಿಕವಾಗಿ ಆಪ್‌ ಮಾಡುತ್ತದೆ. ಇದರಿಂದ ಕೆಲಸದ ಮಧ್ಯದಲ್ಲಿ ಯಾವುದೇ ನೋಟಿಫಿಕೇಶನ್‌ಗಳ ಕಾಟವಿರುವುದಿಲ್ಲ.

ಫೋಕಸ್‌

ಇನ್ನು ಸ್ಮಾರ್ಟ್‌ಫೋನ್‌ ಬಳಕೆದಾರ ಫೋಕಸ್‌ ಮೂಡ್‌ನಿಂದ ಹೊರಹೋಗುವ ಮುನ್ನ ನೀವೇನಾದರೂ ಇತರೆ ಅಪ್ಲಿಕೇಶನ್ ತೆರೆಯಲು ಪ್ರಯತ್ನಿಸಿದರೆ ಈ ಫೀಚರ್ಸ್‌ ಪೋಕಸ್‌ ಮೂಡ್‌ನಲ್ಲಿದೆ ಎಂದು ನಿಮಗೆ ನೆನಪಿಸುತ್ತದೆ. ನೀವು ಮೋಡ್‌ನಿಂದ ಹೊರಹೋಗಲು ಸಿದ್ಧವಾಗುವ ತನಕ ಫೋಕಸ್ ಮೋಡ್ ಆ ಅಪ್ಲಿಕೇಶನ್‌ಗಳ ಅಧಿಸೂಚನೆಗಳನ್ನು ಮೌನಗೊಳಿಸುತ್ತದೆ ಎಂದು ಗೂಗಲ್‌ ಸಂಸ್ಥೆ ಹೇಳಿದೆ.

Best Mobiles in India

Read more about:
English summary
Google has introduced a new feature ‘Focus Mode’ for Android devices designed to prevent its users from being consistently distracted by their smartphone.A Digital Wellbeing tool, this feature allows users to turn off distractions - like social media updates or email notifications - for a period of time, so a user can get things done without interruption.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X