ಪೋಲಿಗಳಿಗೆ ವರದಾನವಾಗಲಿರುವ "ಗೂಗಲ್ ಗ್ಲಾಸ್"

Posted By: Varun
ಪೋಲಿಗಳಿಗೆ ವರದಾನವಾಗಲಿರುವ

ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಶೋಕಿ ಮಾಡುವವರಿಗೆ ಗೂಗಲ್ ನ ಹೈ-ಟೆಕ್ ಗ್ಲಾಸ್ ಮಾರುಕಟ್ಟೆಗೆ ಬಂದು ಬಿಟ್ಟರೆ ಹೇಗೆ ಎಂದುಕೊಳ್ಳುತ್ತ ಇರುವಾಗ, ಲಂಡನ್ ನಿಂದ ಮತ್ತೊಂದು ಮಜಬೂತಾದ ಸುದ್ದಿಯೊಂದು ಬಂದಿದೆ.

ಇಂಟರ್ನೆಟ್, ಸಿರಿ ನಂತಹ ವಾಯ್ಸ್ ರೆಕಗ್ನಿಶನ್ ತಂತ್ರಾಂಶವಿರುವ, ನಿಮ್ಮ ಸ್ಮಾರ್ಟ್ ಫೋನಿಗೆ ಬರುವ ಎಲ್ಲಾ ನೋಟಿಫಿಕೇಶನ್ ಗಳನ್ನು ಒಂದು ಇಂಚ್ ಪರದೆಯ ಮೇಲೆ ಕಣ್ಣು ಮುಂದೆಯೇ ತೋರಿಸುವ ಹಾಗು ವಿಶೇಷವಾಗಿ ಈ ಗ್ಲಾಸ್ ಅನ್ನು ಹಾಕಿಕೊಂಡೇ, ನಿಮ್ಮ ಕಣ್ಣು ಏನು ನೋಡುತ್ತೋ ಅದನ್ನು ರೆಕಾರ್ಡ್ ಮಾಡಬಹುದಾದ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದ್ದು ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದು, 2014 ರ ವೇಳೆಗೆ ಮಾರುಕಟ್ಟೆಗೆ ಬರುವ ಸಾದ್ಯತೆ ಇದೆ.

ಈ ರೀತಿಯ ವೀಡಿಯೋ ರೆಕಾರ್ಡಿಂಗ್ ಇರುವ ಗೂಗಲ್ ಗ್ಲಾಸ್ ಅನ್ನು ಉಪಯೋಗಿಸಿಕೊಂಡು ಪೋಲಿ ಚಿತ್ರಗಳನ್ನು ಶೂಟ್ ಮಾಡಲು ಪಿಂಕ್ ವಿಷುಯಲ್ ಎಂಬ ಕಂಪನಿ ಯೋಚಿಸಿದೆಯಂತೆ. ಇತ್ತೀಚೆಗೆ ಪಾಯಿಂಟ್ ಆಫ್ ವ್ಯೂ (ನಿಮ್ಮ ಕಣ್ಣಿನಿಂದ ನೀವೇನು ನೋಡುತ್ತೀರೋ ಹಾಗೆ ತೋರಿಸುವುದು) ರೀತಿಯ ಪೋಲಿ ಚಿತ್ರಗಳು ಜನಪ್ರಿಯವಾಗುತ್ತಿರುವುದರಿಂದ ಈ ಗೂಗಲ್ ಗ್ಲಾಸ್ ಬಳಸಿಕೊಂಡರೆ ಬಹಳ ಸುಲಭವಾಗಿ ಹೈ ಕ್ವಾಲಿಟಿ ಫಿಲಂ ಅನ್ನು ತೆಗೆಯಬಹುದಲ್ಲದೆ, ಕೈ ಅಲ್ಲಿ ಹಿಡಿದು ಶೂಟ್ ಮಾಡುವ ಕ್ಯಾಮರಾಗಳಿಗಿಂತ ಸುಲಭವಾಗಿರುವುದರಿಂದ ಗೂಗಲ್ ಗ್ಲಾಸ್ ಕೆಲಸವನ್ನು ಮತ್ತಷ್ಟು ಮಜವಾಗಿಸುತ್ತದೆ ಎಂಬುದು ಅವರ ಅಭಿಪ್ರಾಯ.

ಬರಿ ಮೊಬೈಲ್ ಇಟ್ಟುಕೊಂಡು ಎಂಎಂಎಸ್ ವೀಡಿಯೋಗಳನ್ನು ಹಾಕಿಯೇ ದುಡ್ಡು ಮಾಡಿಕೊಳ್ಳುತ್ತಿರುವ ಕೆಲವರಿಗೆ ಈ ಗ್ಲಾಸ್ ಏನಾದರೂ ಸಿಕ್ಕಿಬಿಟ್ಟರೆ ಏನೇನು ಸೆರೆ ಹಿಡಿಯುತ್ತಾರೋ !

ಗೂಗಲ್ ಗ್ಲಾಸ್ ಹಾಕಿಕೊಂಡಿರುವ ಸೆಲೆಬ್ರಿಟಿಗಳ ಫೋಟೋ

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot