ಆಂಡ್ರಾಯ್ಡ್‌ ಫೋನ್‌ ಬಳಕೆದಾರರೇ ಎಚ್ಚರ! ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್‌ ಮಾಡಿ!

|

ಗೂಗಲ್‌ ಪ್ಲೇ ಸ್ಟೊರ್‌ನಲ್ಲಿ ಎಲ್ಲಾ ಬಗೆ ಅಪ್ಲಿಕೇಶನ್‌ಗಳು ಲಭ್ಯವಿದೆ. ಈ ಅಪ್ಲಿಕೇಶನ್‌ಗಳು ಇಂದಿನ ದಿನಗಳಲ್ಲಿ ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾಗಿವೆ. ಇದರಲ್ಲಿ ಕೆಲವು ಅಪ್ಲಿಕೇಶನ್‌ಗಳು ಬಳಕೆದಾರರ ಪ್ರೈವೆಸಿಗೆ ದಕ್ಕೆ ತರುವ ಕೆಲಸವನ್ನು ಕೂಡ ಮಾಡುತ್ತಿವೆ. ಇಂತಹ ಅಪ್ಲಿಕೇಶನ್‌ಗಳಿಗೆ ಗೂಗಲ್‌ ಗೇಟ್‌ ಪಾಸ್‌ ನೀಡುತ್ತಾ ಬಂದಿದೆ. ಇದೀಗ ಅದೇ ಮಾದರಿಯ ನಾಲ್ಕು ಸ್ಕ್ಯಾಮ್‌ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ. ಅಲ್ಲದೆ ಈ ಆ್ಯಪ್‌ಗಳನ್ನು ಕೂಡಲೇ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಡಿಲೀಟ್‌ ಮಾಡಿ ಎಂದು ಹೇಳಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ನಾಲ್ಕು ಸ್ಕ್ಯಾಮ್‌ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ. ಈ ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಗೆ ಕನ್ನಹಾಕುತ್ತಿವೆ ಎನ್ನಲಾಗ್ತಿದೆ. ಅಲ್ಲದೆ ನಿಮ್ಮ ಡೇಟಾವನ್ನು ಬೇರೆಡೆ ಸಾಗಿಸುತ್ತಿರುವ ಗುಮಾನಿ ಕೂಡ ಇದೆ. ಇನ್ನು ಈ ಸ್ಕ್ಯಾಮ್‌ ಆ್ಯಪ್‌ಗಳನ್ನು ಮಾಲ್‌ವೇರ್‌ಬೈಟ್ಸ್‌ನಲ್ಲಿನ ಸೆಕ್ಯುರಿಟಿ ತಜ್ಞರು ಪತ್ತೆಹಚ್ಚಿದ್ದಾರೆ. ನಂತರ ಇದನ್ನು ಗೂಗಲ್‌ ಕೂಡ ಹೈಲೈಟ್‌ ಮಾಡಿದೆ. ಹಾಗಾದ್ರೆ ಗೂಗಲ್‌ ಬ್ಯಾನ್‌ ಮಾಡಿರುವ ನಾಲ್ಕು ಸ್ಕ್ಯಾಮ್‌ ಆ್ಯಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಬ್ಯಾನ್‌ ಮಾಡಿದ ಪ್ರಮುಖ ಆ್ಯಪ್‌ಗಳಲ್ಲಿ ಬ್ಲೂಟೂತ್‌ ಆಟೋ ಕನೆಕ್ಟ್‌ ಆ್ಯಪ್‌ ಕೂಡ ಸೇರಿದೆ. ಇದನ್ನು ಮೊಬೈಲ್ ಅಪ್ಲಿಕೇಶನ್‌ಗಳ ಗುಂಪು ಪರಿಚಯಿಸಿತ್ತು. ಇದು ಲಕ್ಷಾಂತರ ಡೌನ್‌ಲೋಡ್‌ಗಳನ್ನುಕೂಡ ಪಡೆದುಕೊಂಡಿದೆ. ಇನ್ನು ಮೊಬೈಲ್‌ ಅಪ್ಲಿಕೇಶನ್‌ ಗ್ರೂಪ್‌ ಬ್ಲೂಟೂತ್‌ ಆ್ಯಪ್‌ ಸೆಂಡರ್‌, ಮೊಬೈಲ್‌ ಟ್ರಾನ್ಸಫರ್‌:ಸ್ಮಾರ್ಟ್ ಸ್ವಿಚ್ ಮತ್ತು ಡ್ರೈವರ್: ಬ್ಲೂಟೂತ್, ವೈ-ಫೈ, ಯುಎಸ್‌ಬಿ ಆ್ಯಪ್‌ಗಳನ್ನು ಕೂಡ ಪರಿಚಯಿಸಿದೆ. ಈ ಆ್ಯಪ್‌ ಗ್ರೂಪ್‌ನಲ್ಲಿರುವ ದುರುದ್ದೇಶಪೂರಿತ ಸಾಫ್ಟ್‌ವೇರ್ ನಿಂದಾಗಿ ಬಳಕೆದಾರರ ಮಾಹಿತಿಗೆ ದಕ್ಕೆ ಆಗುತ್ತಿದೆ ಎಂದು ವರದಿಯಾಗಿದೆ.

ಆ್ಯಪ್‌ಗಳು

ಇನ್ನು ಈ ಆ್ಯಪ್‌ಗಳು ಆರಂಭಿಕ ಹಂತದಲ್ಲಿ ಬಳಕೆದಾರರಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ. ಆದರೆ ನೀವು ಇದನ್ನು ಬಳಕೆ ಮಾಡುವ ಪ್ರಮಾಣ ಹೆಚ್ಚಾದಂತೆ ಫಿಶಿಂಗ್ ಸೈಟ್‌ಗಳಿಗೆ ಗುರಿಯಾಗುವುದು ಪಕ್ಕಾ. ಈ ಸ್ಕ್ಯಾಮ್ ಪೋರ್ಟಲ್‌ಗಳು ಪ್ರಾರಂಭದಲ್ಲಿ ತೊಂದರೆ ನೀಡದೆ ಹೋದರು ಮುಂದುವರೆದಂತೆ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಕೂಡ ಇದೆ.ಇದೇ ಕಾರಣಕ್ಕೆ ಮಾಲ್‌ವೇರ್‌ಬೈಟ್ಸ್‌ನ ತಜ್ಞರು ಈ ಅಪ್ಲಿಕೇಶನ್‌ಗಳು ಮೂಲತಃ ಗೂಗಲ್‌ನಲ್ಲಿ ಅಪಾಯಕಾರಿ ಪೋರ್ಟಲ್‌ಗಳೊಂದಿಗೆ ತೆರೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ.

ಅಪ್ಲಿಕೇಶನ್‌ಗಳ

ಈ ಸ್ಕ್ಯಾಮ್‌ ಅಪ್ಲಿಕೇಶನ್‌ಗಳ ಮೂಲಕ ತೆರೆದುಕೊಳ್ಳುವ ಪೋರ್ಟಲ್‌ಗಳಲ್ಲಿ ಕೆಲವು ಪೋರ್ಟಲ್‌ಗಳು ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ, ಆದರೆ ಇತರ ಅಸುರಕ್ಷಿತ ಪೋರ್ಟಲ್‌ಗಳು ಬಳಕೆದಾರರನ್ನು ಮೋಸಗೊಳಿಸುತ್ತವೆ. ಬಳಕೆದಾರರಿಗೆ ಏನನ್ನಾದರೂ ಡೌನ್‌ಲೋಡ್ ಮಾಡಲು ಹೇಳುವ ಮೂಲಕ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿವೆ. ಇದಲ್ಲದೆ ಈ ಆ್ಯಪ್‌ಗಳನ್ನು ಬಳಕೆ ಮಾಡುವ ಬಳಕೆದಾರರ ಮೊಬೈಲ್‌ ಡಿವೈಸ್‌ ಲಾ್‌ ಆಗಿದ್ದಾಗಲೂ ಕ್ರೋಮ್‌ ಟ್ಯಾಬ್‌ ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುತ್ತಿರುತ್ತದೆ ಎಂದಿದ್ದಾರೆ. ಹೀಗೆ ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುವ ಸೈಟ್‌ಗಳಿಂದ ನಿಮ್ಮ ವೈಯುಕ್ತಿಕ ಡೇಟಾ ಕದಿಯಲಾಗುತ್ತದೆ. ಅಲ್ಲದೆ ನಿಮ್ಮ ಗೌಪ್ಯತೆಗೆ ದಕ್ಕೆ ತರುವ ಕೆಲಸ ಕೂಡ ನಡೆಯಲಿದೆ ಎಂದಿದ್ದಾರೆ.

ಗೂಗಲ್‌ ಬ್ಯಾನ್‌ ಮಾಡಿರುವ ಆ್ಯಪ್‌ಗಳು ಯಾವುವು?

ಗೂಗಲ್‌ ಬ್ಯಾನ್‌ ಮಾಡಿರುವ ಆ್ಯಪ್‌ಗಳು ಯಾವುವು?

ಗೂಗಲ್‌ ಸದ್ಯ ಬ್ಯಾನ್‌ ಮಾಡಿರುವ ಆ್ಯಪ್‌ಗಳನ್ನು ನೋಡುವುದಾದರೆ ಹ್ಯಾಂಡಿ ಟ್ರಾನ್ಸ್ಲೇಟರ್ ಪ್ರೊ, ಲಾಕರ್ ಟೂಲ್, ಫಿಂಗರ್‌ಪ್ರಿಂಟ್ ಚೇಂಜರ್, ಕಾಲ್ ರೆಕಾರ್ಡರ್ ಪ್ರೊ ಎಂದು ಹೆಸರಿಸಲಾಗಿದೆ. ಇದಲ್ಲದೆ ವೇಗದ PDF ಸ್ಕ್ಯಾನರ್, ಡಾಕ್ಯುಮೆಂಟ್ ಮ್ಯಾನೇಜರ್, PSD Auth ಪ್ರೊಟೆಕ್ಟರ್, ಕ್ಯಾಮೆರಾ ಟ್ರಾನ್ಸ್ಲೇಟರ್ ಪ್ರೊ, ಕೂಲ್ ಕಾಲರ್ ಸ್ಕ್ರೀನ್, ಮತ್ತು RGB ಎಮೋಜಿ ಕೀಬೋರ್ಡ್ ಅಪ್ಲಿಕೇಶನ್‌ಗಳು ನಿಮ್ಮ ಡಿವೈಸ್‌ನಲ್ಲಿದ್ದರೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ.

Best Mobiles in India

Read more about:
English summary
Google has banned four scam apps that are imbued with malware

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X