ಆಫರ್‌ನಲ್ಲಿ 'ಗೂಗಲ್ ನೆಸ್ಟ್‌ ಹಬ್' ಡಿವೈಸ್‌ ಖರೀದಿಗೆ ಇದುವೇ ರೈಟ್‌ ಟೈಮ್!

|

ಸ್ಮಾರ್ಟ್‌ ಹೋಮ್ ಪರಿಕಲ್ಪನೆಯನ್ನು ಇಷ್ಟಪಡುವವರಿಗೆ ಇದೀಗ ಸಿಹಿಸುದ್ದಿ. ಅದೇನೆಂದರೇ ಜನಪ್ರಿಯ ಗೂಗಲ್ ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ 'ಗೂಗಲ್ ನೆಸ್ಟ್‌ ಹಬ್' ಸ್ಮಾರ್ಟ್ ಡಿವೈಸ್‌ ಅನ್ನು ಲಾಂಚ್ ಮಾಡಿತ್ತು. ಆದ್ರೀಗ 'ಗೂಗಲ್ ನೆಸ್ಟ್‌ ಹಬ್' ಮತ್ತು 'ಗೂಗಲ್ ಹೋಮ್' ಡಿವೈಸ್‌ಗಳು ಫ್ಲಿಪ್‌ಕಾರ್ಟ್‌ನ 'ಬಿಗ್ ದೀಪಾವಳಿ ಸೇಲ್‌' ಮೇಳದಲ್ಲಿ ಡಿಸ್ಕೌಂಟ್‌ ಬೆಲೆಯಲ್ಲಿ ಸಿಗಲಿವೆ. ಗೂಗಲ್ ಅಸಿಸ್ಟಂಟ್ ಮೂಲಕ ಕಾರ್ಯನಿರ್ವಹಿಸುವ ಈ ಡಿವೈಸ್‌ಗಳು ಸಖತ್ ಸ್ಮಾರ್ಟ್‌ ಆಗಿವೆ.

ಬಿಗ್ ದೀಪಾವಳಿ ಸೇಲ್

ಹೌದು, ಸದ್ಯ, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್ ಮೇಳವು ನಡೆಯುತ್ತಿದ್ದು, ಈ ಸೇಲ್‌ ಮೇಳವು ಇದೇ ಅಕ್ಟೋಬರ್ 25ರಂದು (ನಾಳೆ) ಮುಕ್ತಾಯವಾಗಲಿದೆ. ಮೇಳದಲ್ಲಿ ಸಾಕಷ್ಟು ಗ್ಯಾಡ್ಜೆಟ್‌ಗಳಿಗೆ ರಿಯಾಯಿತಿ ನೀಡಲಾಗಿದ್ದು, 'ಗೂಗಲ್ ನೆಸ್ಟ್‌ ಹಬ್' ಮತ್ತು 'ಗೂಗಲ್ ಹೋಮ್' ಡಿವೈಸ್‌ಗಳು ಸಹ ಡಿಸ್ಕೌಂಟ್‌ ಪಡೆದಿವೆ. ಸೇಲ್‌ ಮೇಳದಲ್ಲಿ 'ಗೂಗಲ್ ನೆಸ್ಟ್‌ ಹಬ್' ಡಿವೈಸ್‌ 8,999ರೂ.ಗಳಿಗೆ ಮತ್ತು 'ಗೂಗಲ್ ಹೋಮ್' ಡಿವೈಸ್‌ 6,999ರೂ.ಗಳಿಗೆ ಲಭ್ಯವಾಗಲಿವೆ.

ಎಸ್‌ಬಿಐ ಬ್ಯಾಂಕ್‌

ಹಾಗೆಯೇ ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್‌ ಅಥವಾ ಡೆಬಿಟ್ ಕಾರ್ಡ್‌ ಬಳಸಿ ಖರೀದಿಸಿದರೇ ಗ್ರಾಹಕರಿಗೆ ಶೇ.10 ಪರ್ಸೆಂಟ್ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸಹ ದೊರೆಯಲಿದೆ. ಹೀಗಾಗಿ ಗೂಗಲ್ ನೆಸ್ಟ್‌ ಹಬ್' ಡಿವೈಸ್‌ 8,100 ರೂ.ಗಳಿಗೆ ಮತ್ತು 'ಗೂಗಲ್ ಹೋಮ್' ಡಿವೈಸ್‌ 6,300 ರೂ.ಗಳಿಗೆ ದೊರೆಯಲಿವೆ. ಹಾಗಾದರೇ ಗೂಗಲ್ ನೆಸ್ಟ್‌ ಹಬ್ ಮತ್ತು ಗೂಗಲ್ ಹೋಮ್ ಸ್ಮಾರ್ಟ್‌ ಡಿವೈಸ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗೂಗಲ್ ನೆಸ್ಟ್‌ ಹಬ್- ಡಿವೈಸ್

ಗೂಗಲ್ ನೆಸ್ಟ್‌ ಹಬ್- ಡಿವೈಸ್

7 ಇಂಚಿನ ಟಚ್‌ಸ್ಕ್ರೀನ್ ಪ್ಯಾನಲ್ ಹೊಂದಿರುವ ಈ ಡಿವೈಸ್ ಎರಡು ಫಾರ್‌ಫೀಲ್ಡ್‌ ಮೈಕ್ರೋಫೋನ್‌ಗಳನ್ನು ಮತ್ತು ಫುಲ್ ರೇಂಜ್ ಸ್ಪೀಕರ್‌ ಪಡೆದಿದೆ. ಜೊತೆಗೆ ಆಂಬಿಯಂಟ್ EQ ಲೈಟ್‌ ಸೆನ್ಸಾರ್ ಆಯ್ಕೆ ಇದ್ದು, ಡಿವೈಸ್‌ ವೈಫೈ 802.11ac ಆಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯ ಒಳಗೊಂಡಿದ್ದು, 118x178.5x67.3mm ಸುತ್ತಳತೆಯ ಆಕಾರದಲ್ಲಿದೆ. ತೂಕವು 480 ಗ್ರಾಂ ಆಗಿದೆ.

ಗೂಗಲ್ ನೆಸ್ಟ್‌ ಹಬ್- ಫೀಚರ್ಸ್‌ಗಳು

ಗೂಗಲ್ ನೆಸ್ಟ್‌ ಹಬ್- ಫೀಚರ್ಸ್‌ಗಳು

ಗೂಗಲ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿರುವ ಈ ಡಿವೈಸ್ ಗೂಗಲ್ ಸರ್ಚ್, ಯೂಟ್ಯೂಬ್ ವಿಡಿಯೊ ಮತ್ತು ಗೂಗಲ್ ಫೋಟೊ ಸೇರಿದಂತೆ ಗೂಗಲ್ ಕಂಪನಿಯ ಇತರೆ ಸೇವೆಗಳ ಆಯ್ಕೆಯನ್ನು ಹೊಂದಿದೆ. ಬಳಕೆದಾರರು ಸ್ಥಳ(ಗೂಗಲ್ ಮ್ಯಾಪ್), ಫೇವರೇಟ್ ವಿಡಿಯೊ, ಹಾಗೂ ನೆಸ್ಟ್‌ ಹಬ್‌ನಲ್ಲಿ ಸ್ಟೋರ್‌ ಆಗಿರುವ ಫ್ಯಾಮಿಲಿ ಮತ್ತು ಫ್ರೆಂಡ್ಸ್‌ ಫೋಟೊಗಳನ್ನು ಸಹ ವೀಕ್ಷಿಸಬಹುದಾಗಿದೆ.

ಗೂಗಲ್ ನೆಸ್ಟ್‌ ಹಬ್- ವಾಯಿಸ್‌ ಅಸಿಸ್ಟಂಟ್

ಗೂಗಲ್ ನೆಸ್ಟ್‌ ಹಬ್- ವಾಯಿಸ್‌ ಅಸಿಸ್ಟಂಟ್

ಗೂಗಲ್‌ನ ಹೋಮ್‌ ಸ್ಪೀಕರ್‌ನಂತೆಯೇ ಈ ಡಿವೈಸ್‌ ಸಹ ಬಹು ವಾಯಿಸ್‌ಗಳನ್ನು ಮ್ಯಾಚ್ ಮಾಡುವ ಸೌಲಭ್ಯಗಳನ್ನು ಒಳಗೊಂಡಿದೆ. ಹೇ ಗೂಗಲ್, ಗುಡ್‌ನೈಟ್‌ ಎಂದು ಹೇಳಿದರೇ ಅಲಾರಂ ಸೆಟ್‌ ಮಾಡುತ್ತದೆ, ಕನೆಕ್ಟ್ ಇರುವ ಲೈಟ್‌ಗಳು, ಸ್ಮಾರ್ಟ್‌ಟಿವಿಯನ್ನು ಆಫ್ ಮಾಡುತ್ತದೆ. ಹಾಗೆಯೇ ಹಲವು ಅಗತ್ಯ ಕೆಲಸಗಳನ್ನು ಬಳಕೆದಾರರು ವಾಯಿಸ್‌ ಕಂಟ್ರೋಲ್ ಮೂಲಕವೇ ನಿಯಂತ್ರಿಸಬಹುದು.

ಗೂಗಲ್ ಹೋಮ್ ಡಿವೈಸ್‌

ಗೂಗಲ್ ಹೋಮ್ ಡಿವೈಸ್‌

ಗೂಗಲ್‌ ಹೋಮ್ ಸಹ ಒಂದು ಅತ್ಯುತ್ತಮ ಸ್ಮಾರ್ಟ್‌ ಡಿವೈಸ್‌ ಆಗಿದ್ದು, ಈ ಡಿವೈಸ್‌ AI ಬೆಂಬಲಿತ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯವನ್ನು ಪಡೆದಿದೆ. ಗೂಗಲ್ ಹೋಮ್ Bixby, Cortana, ಗೂಗಲ್ ಅಸಿಸ್ಟಂಟ್‌ ಮತ್ತು ಆಪಲ್-ಸಿರಿ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯಗಳನ್ನು ಸಹ ಸಪೋರ್ಟ್‌ ಮಾಡಲಿದೆ. ಈ ಡಿವೈಸ್‌ ಮ್ಯೂಸಿಕ್/ಆಡಿಯೊ ಕೇಳಬಹುದು, ವಿಡಿಯೊಗಳನ್ನು ವೀಕ್ಷಿಸಬಹುದು ಹಾಗೆಯೇ lOT ಡಿವೈಸ್‌ಗಳನ್ನು ನಿಯಂತ್ರಿಸಬಹುದು. ಈ ಡಿವೈಸ್‌ RGB ಎಲ್‌ಇಡಿ ಲೈಟಿಂಗ್ ಆಯ್ಕೆ ಹೊಂದಿದೆ.

Most Read Articles
Best Mobiles in India

English summary
During Flipkart is hosting Big Diwali Sale Google Nest Hub, Google Home will be available at a starting price of Rs 6,999 in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X